Home Cinema ದೇವಾಲಯಕ್ಕೆ ಬರುವ ಆದಾಯದ ಮೇಲೆ ಅಧಿಕಾರಿಗಳ ಕೆಂಗಣ್ಣು..! ಕೋಟಿ ಹಣ ದುರ್ಬಳಕೆ ಮಾಡಿಕೊಂಡ ಮುಜರಾಯಿ ಇಲಾಖೆ...

ದೇವಾಲಯಕ್ಕೆ ಬರುವ ಆದಾಯದ ಮೇಲೆ ಅಧಿಕಾರಿಗಳ ಕೆಂಗಣ್ಣು..! ಕೋಟಿ ಹಣ ದುರ್ಬಳಕೆ ಮಾಡಿಕೊಂಡ ಮುಜರಾಯಿ ಇಲಾಖೆ ಅಧಿಕಾರಿಗಳು..!

1476
0
SHARE

ಹಾಸನದ ಪ್ರಸಿದ್ಧ ಪುರದಮ್ಮ ದೇವಾಲಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳಿಂದಲೇ ಹಣ ದುರ್ಬಳಕೆಯ ಗಂಭೀರ ಆರೋಪ ಕೇಳಿ ಬಂದಿದೆ. ದೇಗುಲದ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಯೊಬ್ಬ ಹುಂಡಿಯಲ್ಲಿದ್ದ 47 ಸಾವಿರ ರೂ. ಹಣ ಕೊಂಡೊಯ್ಯುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಇದು ಹಾಸನ ತಾಲೂಕು ಬೀಕನಹಳ್ಳಿಯಲ್ಲಿರುವ ಪುರದಮ್ಮ ದೇವಾಲಯ, ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು.

ಆರಂಭದಿಂದಲೂ ಚೌಡೇಶ್ವರಿ ಆಡಳಿತವನ್ನು ಖಾಸಗಿ ಟ್ರಸ್ಟ್ ನೋಡಿಕೊಳ್ಳುತ್ತಿತ್ತು. ದೇವಾಲಯದ ಹುಂಡಿಗೆ ಕಾಣಿಕೆ ರೂಪದಲ್ಲಿ ಬರುವ ಕೋಟಿ ಕೋಟಿ ಹಣವನ್ನು ಟ್ರಸ್ಟ್ ನವರು ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಈಗ್ಗೆ 5 ವರ್ಷಗಳ ಹಿಂದೆ ಮುಜರಾಯಿ ವಶಕ್ಕೆ ಪಡೆಯಲಾಯಿತು. ವಿಪರ್ಯಾಸ ಎಂದ್ರೆ ಅಂದು ಖಾಸಗಿಯವರು ಹುಂಡಿ ಹಣವನ್ನು ಗುಳುಂ ಮಾಡುತ್ತಿದ್ದರೆ, ಈಗ ಅಧಿಕಾರಿಗಳು ಸ್ವಾಹ ಮಾಡುತ್ತಿದ್ದಾರೆ.

ಹೀಗೆ ಹುಂಡಿಯಲ್ಲಿದ್ದ ಸುಮಾರು 47 ಸಾವಿರ ಹಣವನ್ನು ಕದ್ದುಮುಚ್ಚಿ ಬ್ಯಾಗ್ ನಲ್ಲಿ ಕೊಂಡೊಯ್ಯುತ್ತಿದ್ದ ರಾಜಸ್ವ ನಿರೀಕ್ಷಿಕ ವೆಂಕಟೇಶ್ ಎಂಬ ಅಧಿಕಾರಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ದೇವಾಲಯ ಮೇಲುಸ್ತುವಾರಿಯನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದ ಮೇಲೆ ಹಗರಣ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಪ್ರಾಣಿ ಬಲಿ ನಿಷೇಧವಿದ್ದರೂ, ಅಧಿಕಾರಿಗಳೇ ಹರಕೆ ರೂಪದಲ್ಲಿ ಪ್ರಾಣಿ ಬಲಿ ಕೊಡಲು ಪೀಠ ನಿರ್ಮಾಣ ಮಾಡಿ 9 ಲಕ್ಷ ರೂ.ಗೆ ಹರಾಜು ಮಾಡಿದ್ದಾರೆ.

ಅಲ್ಲಿ ಕೋಳಿಗೆ 10 ರೂ. ಹಂದಿ ಅಥವಾ ಮೇಕೆ ಹರಕೆ ತೀರಿಸಲು 50 ರೂ. ನಿಗದಿ ಪಡಿಸಿ, ಬರುವ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ನಮ್ಮನ್ನೇ ಸುಳ್ಳುದಾರರನ್ನಾಗಿ ಮಾಡಲಾಗುತ್ತಿದೆ. ಇಷ್ಟೇ ಅಲ್ಲ, ದೇವಾಲಯಕ್ಕೆ ಬರುವ ಭಕ್ತರಿಂದ ಪಾರ್ಕಿಂಗ್ ರೂಪದಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಇಲ್ಲಿ ಇಲ್ಲಿ ಕೋಟಿ ಕೋಟಿ ಲೂಟಿ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.ಒಟ್ಟಿನಲ್ಲಿ ಖಡಕ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪ್ರಾಮಾಣಿಕ ಎಸಿ ಡಾ.ಹೆಚ್.ಎಲ್.ನಾಗರಾಜ್ ಅವರ ಕೈ ಕೆಳಗೇ ದೇವರ ಹಣ ಸ್ವಾಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿರುವುದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here