Home Crime ದೇವಾಲಯ ಆವರಣದಲ್ಲೇ ಸೆಕ್ಸ್..?! ರಾಸಲೀಲೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿಯನ್ನ ಅಟ್ಟಾಡಿಸಿ ಹೊಡೆದ...

ದೇವಾಲಯ ಆವರಣದಲ್ಲೇ ಸೆಕ್ಸ್..?! ರಾಸಲೀಲೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿಯನ್ನ ಅಟ್ಟಾಡಿಸಿ ಹೊಡೆದ ಸ್ಥಳೀಯರು..?!

2035
0
SHARE

ದೇವಸ್ಥಾನವನ್ನ ಪವಿತ್ರ ಸ್ಥಳ ಎಂದು ಕರೆಯಲಾಗುತ್ತದೆ.ಆದ್ರೆ, ಅದೇ ದೇವಸ್ಥಾನ ಆವರಣವನ್ನೇ ಅನೈತಿಕ ಚಟುವಟಿಕೆ ತಾಣ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಇಲ್ಲಿನ ಕೃಷ್ಣಾಪುರದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ರಾಸಲೀಲೆಯಲ್ಲಿ ತೊಡಗಿದ್ದ ಯುವಕ,ಯುವತಿ ಗ್ರಾಮಸ್ಥರ ಕೈಗೆ ಸಿಕ್ಕು ಗೂಸಾ ತಿಂದಿದ್ದಾರೆ. ಮಧ್ಯಾಹ್ನ ದೇವಸ್ಥಾನಕ್ಕೆ ಬಾಗಿಲು ಹಾಕಿದ ಬಳಿಕ ಈ ಜೋಡಿ ಬರುತ್ತಿತ್ತು.

ಇದ್ರಿಂದ ಅನುಮಾನಗೊಂಡ ಗ್ರಾಮಸ್ಥರು ಪರಿಶೀಲಿಸಿದಾಗ ಯುವಕ,ಯುವತಿ ರಾಸಲೀಲೆಯಲ್ಲಿ ತೊಡಗಿರೋದು ಬಟಾಬಯಲಾಗಿದೆ. ಸಿಕ್ಕಿಬಿದ್ದ ಈ ಜೋಡಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಏಟು ಬೀಳುತ್ತಿದ್ದಂತೆ ಇಬ್ಬರು ಕಾಲ್ಕಿತ್ತಿದ್ದಾರೆ.

ಈ ಯುವಕ,ಯುವತಿ ಕಳಲೆ ಗ್ರಾಮದವರು ಎನ್ನಲಾಗಿದೆ. ಲೈಂಗಿಕ ತೃಷೆ ತೀರಿಸಿಕೊಳ್ಳಲು ಚಂದ್ರಮೌಳೇಶ್ವರ ದೇವಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ದರು.

LEAVE A REPLY

Please enter your comment!
Please enter your name here