Home Crime ದೇವಿ ಮೂರ್ತಿಯ ಹಿಂದೆಯೇ ಇತ್ತಂತೆ ಕಾಮಿ ಬಾಬಾನ ಗೌಪ್ಯ ರೇಪ್ ರೂಂ!? ಅತ್ಯಾಚಾರಿ ದೇವಮಾನವ..600 ಯುವತಿಯರು..ಆಶ್ರಮದಿಂದ...

ದೇವಿ ಮೂರ್ತಿಯ ಹಿಂದೆಯೇ ಇತ್ತಂತೆ ಕಾಮಿ ಬಾಬಾನ ಗೌಪ್ಯ ರೇಪ್ ರೂಂ!? ಅತ್ಯಾಚಾರಿ ದೇವಮಾನವ..600 ಯುವತಿಯರು..ಆಶ್ರಮದಿಂದ ಎಸ್ಕೇಪ್..!?

696
0
SHARE

ಕಾಮುಕ ಬಾಬಾ ದಾತಿ ಮಹಾರಾಜ್ ದೆಹಲಿಯ ಫತೇಹಪುರ್ ಶನಿ ಆಶ್ರಮದ ಸಂಸ್ಥಾಪಕ.. ಅಷ್ಠೇ ಅಲ್ಲ.., ಶನಿದೇವನ ಆರಾಧಕ.. ಲೀಟರ್ ಗಟ್ಟಲೇ ಹಾಲು.. ಲೀಟರ್ ಗಟ್ಟಲೆ ಎಣ್ಣೆಯಿಂದ ಸ್ನಾನ ಮಾಡುವ ಮಹಾನ್ ಬಾಬಾ ಅಂತಾ ಫೇಮಸ್ ಆಗಿದ್ದವನು.. ಭಕ್ತರಿಗೆ ತಂತ್ರ ಮಂತ್ರಗಳ ಹಾಕಿ ಅವರ ಬಾಳಲ್ಲಿದ್ದ ಸಮಸ್ಯೆಯನ್ನ ನಿವಾರಿಸುತ್ತಿದ್ದನಂತೆ..ರಂಗೀನ್ ಬಾಬಾ ರಾಮ್ ರಹೀಂ ಬಲತ್ಕಾರಿ ಬಾಬಾ ಅನ್ನೋ ಪಟ್ಟ ಹೊತ್ತು ರೀಸೆಂಟ್ ಆಗಿ ಜೈಲಿಗೆ ಸೇರಿದ್ದಾನೆ. ಈಗ ಅವನನ್ನು ಮೀರಿಸೋ ಮತ್ತೊಬ್ಬ ಬಾಬಾನ ಬಲತ್ಕಾರದ ಸ್ಟೋರಿಯೊಂದು ಹೊರ ಬಿದ್ದಿದೆ. ಕಳೆದ 2 ವರ್ಷದ ಹಿಂದೆ ನಡೆದ ಆ ಸಿಕ್ರೇಟ್ ರೂಂನ ಕರಾಳ ಘಟನೆ ಇದೀಗ ಆಚೆಗೆ ಬಂದಿದೆ. ಇವನೇ ರಾಮ್ ರಹೀಂ ಬಾಬಾರನ್ನು ಮೀರಿಸಿದ ಕಾಮುಕ ಸ್ವಂ ಘೋಷಿತ ದೇವಮಾನವ..ನೋಡೋದಕ್ಕೆ ಮಾತ್ರ ಈತ ಬಾಬಾ.. ಆದರೆ ಈತ ನಿಜಕ್ಕೂ ಕಾವಿ ಧರಿಸಿರೋ ಲಂಪಟ. ಯಸ್.., ಜಡೆ ಬಿಟ್ಟು ಬೂದಿ ಬಳಿದು ಕೊಂಡು ದೈವಾರಾಧಕನಂತೆ ಪೋಸ್ ಕೊಡ್ತಿರೋ ಈತ ಮಾಡೋದು ಅನಾಚಾರ..ಇಷ್ಟಕ್ಕೂ ಬಾಬಾನಿಂದ ಷೋಷಿತಗೊಂಡ ಆ ಯುವತಿ ಯಾರು ಅಂತೀರಾ? ಆಕೆ ಲಂಪಟ ದಾತಿ ಮಹಾರಾಜ್ ನ ಶಿಷ್ಯೆ.. ಸುಮಾರು 10 ವರ್ಷದಿಂದ ದಾತಿ ಮಹಾರಾಜ್ ರ ಶನಿಧಾಮದಲ್ಲಿದ್ದವಳು. ಆ ಹತ್ತು ವರ್ಷಗಳ ಕಾಲ ಬಾಬಾನ ಶೃಂಗಾರ ವೃತ್ತಾಂತದಲ್ಲಿದ್ದ ಆಕೆಗೆ ಕಳೆದ 2 ವರ್ಷದ ಹಿಂದೆ ಕೆಟ್ಟ ಕಾಲ ಹುಡುಕಿ ಬಂದಿತ್ತು. ಆ ಕೆಟ್ಟ ಕಾಲದಿಂದ ಆಕೆಯನ್ನ ಕಂಗಾಲಾಗುವಂತೆ ಮಾಡಿದ್ದು ಮತ್ತಾರು ಅಲ್ಲ.. ಇದೇ ಕಾಮಿ ಬಾಬಾ ದಾತಿ ಮಹಾರಾಜ್.ಷೋಷಿತ ಮಹಿಳೆ ಹೇಳಿದ್ದೇನು!?ನಾನು ಸ್ವಾಮೀಜಿಯ ಶಿಷ್ಯೆಯಾಗಿದ್ದೆ. ಬಾಬಾ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿದ ಆತನ ಶಿಷ್ಯಂದಿರು ಸ್ವಾಮೀಜಿ ಇದ್ದ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಸ್ವಾಮೀಜಿ ಜತೆ ಬಹಳಷ್ಟು ಮಹಿಳೆಯರಿದ್ದರು. ಆಗ ನನ್ನನ್ನು ಬಲವಂತವಾಗಿ ತಳ್ಳಿದರು. ಮೊದಲಿಗೆ ನನ್ನ ಮೈ ಸ್ಪರ್ಶಿಸಿ ಕಾಮ ಪ್ರಚೋದನೆಗೆ ಸ್ವಾಮೀಜಿ ಮುಂದಾದ್ರು. ಆಗ ನಾನು ವಿರೋಧಿಸಿದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ರು…ಸ್ವಾಮೀಜಿ ಅತ್ಯಾಚಾರಗೈದ ನಂತರ ಆತನ ಇಬ್ಬರು ಶಿಷ್ಯಂದಿರೂ ಕೂಡ ರೇಪ್ ಮಾಡಿದರು.ಇದಿಷ್ಟೇ ಅಲ್ಲ.., ಆ ಮಹಿಳೆ ಕೊಟ್ಟ ಆ ಪತ್ರದಲ್ಲಿ ಡೋಂಗಿ ಬಾಬಾ ತನ್ನ ಜೀವ ತೆಗೆಯಲು ಹೇಸುವುದಿಲ್ಲ. ಧೈರ್ಯ ಮಾಡಿ ಜನರ ಮುಂದೆ ಬಂದಿದ್ದೇನೆ. ನನ್ನಂತೆ ಉಳಿದ ಮಹಿಳೆಯರಿಗೆ ಶಿಕ್ಷೆಯಾಗದಿರಲಿ ಎನ್ನುವುದು ನನ್ನ ಉದ್ದೇಶ ಅಂತಲೂ ಶೋಷಿತ ಮಹಿಳೆ ಹೇಳಿಕೊಂಡಿದ್ಧಾಳೆ.ಪೊಲೀಸರು ಬಾಬಾರ ಆಶ್ರಮಕ್ಕೆ ಸರ್ಚ್ ವಾರೆಂಟ್ ಹಿಡಿದು ಬಂದಾಗ ದೆಹಲಿಯ ಶನಿಧಾಮದಲ್ಲಿ ದಾತಿ ಮಹಾರಾಜ್ ಇರಲಿಲ್ಲ. ಸೋ.. ರಾಜಸ್ತಾನದಲ್ಲಿರೋ ಬಾಬಾರ ಶನಿ ಆಶ್ರಮಕ್ಕೆ ಪೊಲೀಸರು ಬರಬೇಕಾಯ್ತು. ಅಲ್ಲಿಗೆ ಬಂದು ಮಹಾರಾಜ್ ಗೆ ನೋಟಿಸ್ ಕೊಟ್ಟ ಪೊಲೀಸರು ವಿಚಾರಣೆಗೆ ಮುಂದಾದ್ರು.ರೇಪಿಸ್ಟ್ ಬಾಬಾನ ಈ ಮಾತನ್ನ ಕೇಳಿದ ಕೂಡಲೇ ಪೊಲೀಸರು ದಂಗಾದ್ರು. ಆ ವೇಳೆಯಲ್ಲಿ ಪೊಲೀಸರು ಆಶ್ರಮವನ್ನ ಸರ್ಚ್ ಮಾಡದೇ ತೆರಳಿದ್ರಂತೆ. ಬಳಿಕ ವಿಚಾರಣೆಯನ್ನ ಮುಂದುವರೆಸಬೇಕಿದೆ ಅಂತಾ ಸ್ವಾಮೀಜಿಯನ್ನ ಕರೆಸಿಕೊಂಡಿದ್ರಂತೆ. ಪೊಲೀಸರು ಕೇಳಿದ ಅದೆಷ್ಟೋ ಪ್ರಶ್ನೆಗಳಿಗೆ ದಾತಿ ಉತ್ತರಿಸಲೇ ಇಲ್ವಂತೆ…ಆದರೆ ಏನೇ ಕೇಳಿದ್ರು ಇದು ಜಮೀನು ವಿವಾದದ ಹಿಂದಿರೋ ಸಂಚು.. ಈ ಸಂಚು ರೂಪಿಸಿರೋದು ಸಚಿನ್ ಎಂಬ ವ್ಯಕ್ತಿ.. ಅವನೇ ಆಕೆಯನ್ನ ತನ್ನ ವಿರುದ್ಧ ಎತ್ತಿಕಟ್ಟಿದ್ದಾನೆ ಅಂತಾ ಮರುದಿನ ಹೇಳಿಕೆಯಲ್ಲಿ ಜಾರಿಕೊಳ್ಳೋದಕ್ಕೆ ಯತ್ನಿಸಿದ್ರು.ನೀವೇ ಗಮನಿಸಿ ಮೊದ ಮೊದಲು ಬಾಬಾ ಪೊಲೀಸರ ವಿಚಾರಣೆಗೆ ಸಹಕರಿಸ್ತೀನಿ ಅಂತೇಳಿ ಬಳಿಕ.. ಹೇಗೆ ಜಾರಿಕೊಂಡ್ರು ಅನ್ನೋದನ್ನ. ಇನ್ನು ಮೊದಲನೇ ದಿನ ರೇಪಿಸ್ಟ್ ಬಾಬಾನ ಮೇಲೆ ಓರ್ವ ಯುವತಿಯಷ್ಟೇ ಅತ್ಯಾಚಾರದ ಕೇಸ್ ಹಾಕಿದ್ರು. ಆದರೆ ಮರು ದಿನದ ವಿಚಾರಣೆಗೆ ಬಾಬಾ ತೆರಳಿದಾಗ ಮೂರು ಯುವತಿಯರಿಂದ ಕೇಸ್ ದಾಖಲಾಗಿದೆ ಅನ್ನೋದು ಗೊತ್ತಾಯ್ತು. ಆಗ ಪೊಲೀಸರ ವಿಚಾರಣೆಗೆ ಸಹಕರಿಸ್ತೀನಿ ಎಂದಿದ್ದ ಬಾಬಾ ಇದ್ದಕ್ಕಿದ್ದ ಹಾಗೇ ಆಶ್ರಮಕ್ಕೆ ತೆರಳಿ ಆಶ್ರಮದಲ್ಲಿ ಕಾರು ನಿಲ್ಲಿಸಿ.. ಸಹಚರರೊಂದಿಗೆ ಅಂಡರ್ ಗ್ರೌಂಡ್ ನಿಂದ ಎಸ್ಕೇಪ್ ಆದ್ರಂತೆ.9ನೇ ತಾರೀಖು ಜನವರಿ ತಿಂಗಳು 2016ರಂದು ದಾತಿ ಬಾಬಾ ಶನಿ ಅಮಾವಾಸ್ಯೆ ಕುರಿತಂತೆ ಪ್ರವಚನ ಮಾಡಿದ್ರು.. ಶನಿ ಭಕ್ತರಿಗೆ ಶನಿಧಾಮದಲ್ಲಿ ನಡೆಯೋ ಪೂಜೆಯ ಬಗ್ಗೆ ವಿವರಿಸಿದ್ರು. ಆ ವೇಳೆ ನಾಗ ಸಾಧುವಿನಂತೆ ಬಾಬಾ ಕಂಡಿದ್ರಂತೆ. ಇದು ಪ್ರತಿ ವರ್ಷದ ಶನಿ ಅಮಾವಾಸ್ಯೆಯ ಉತ್ಸವದ ವಿಧಿ ವಿಧಾನವಂತೆ…ಆ ರಾತ್ರಿ ದಾತಿ ಮಹಾರಾಜ್ ಶ್ರದ್ಧಾ ಉರ್ಫ್ ನೀತು ಅನ್ನೋ ಯುವತಿಯನ್ನ ರೇಪ್ ಮಾಡಿದ್ರಂತೆ.ಅಶೋಕ್, ಅರ್ಜುನ್ ಅನ್ನೋ ಇಬ್ಬರು ಶಿಷ್ಯರೊಂದಿಗೆ ಅಂದು ದೆಹಲಿಯ ಆಶ್ರಮಕ್ಕೆ ಗುರುಗಳ ಚರಣ ಸೇವೆಗೆಂದು ಆ ಯುವತಿಯನ್ನ ಕರೆದೋಗಲಾಗಿತ್ತಂತೆ. ಆಗ ನೀತು ಅನ್ನೋ ಯುವತಿ ರಾತ್ರಿ ಇಡೀ ಚೀರಾಡುತ್ತಿದ್ದ ಸದ್ದು ಭಯದಿಂದ ಅಳುತ್ತಳೇ ಇದ್ದಳಂತೆ. ಈ ಘಟನೆಯನ್ನು ಸಹ ಪತ್ರದಲ್ಲಿ ನಮೂದಿಸಲಾಗಿದೆಯಂತೆ.ಪಾಲಿ ಜಿಲ್ಲೆಯಲ್ಲಿದ್ದ ಶನಿಧಾಮದ ಗುರುಕುಲವೇನಿದೆ ಅಲ್ಲಿಗೆ ಯುವತಿಯನ್ನ ಚರಣ ಸೇವೆಗೆಂದು ದಾತಿ ಶಿಷ್ಯರು ಆಕೆಯನ್ನ ಕರೆದುಕೊಂಡು ಹೋದ್ರಂತೆ. ಮೊದಲೇ ನೀತುಗಾಗಿದ್ದ ಅನ್ಯಾಯದ ಬಗ್ಗೆ ತಿಳಿದಿದ್ದ ಆಕೆಗೆ ಭಯವಾಗಿತ್ತಂತೆ. ಶಿಷ್ಯರ ಜತೆ ಹೋಗಲು ನಿರಾಕರಿಸಿದ್ಳಂತೆ. ಬಲವಂತವಾಗಿ ಆಕೆಯನ್ನ ದಾತಿ ಮಹಾರಾಜ್ ಇದ್ದ ಆ ರೇಪ್ ಕೋಣೆಗೆ ಕರೆದೋದ್ರಂತೆ…ದೇವಿ ಮೂರ್ತಿ ಇರುವ ಈ ಹಾಲ್ ನಲ್ಲಿ,  ಮೂರ್ತಿ ಹಿಂದೆ ಒಂದು ಕಪ್ಪು ಬಣ್ಣದ ಸ್ಕ್ರೀನ್ ಇದೆ. ಈ ಸ್ಕ್ರೀನ್ ನೋಡಿದ್ರೆ ಹಿಂದೆ ಏನು ಇಲ್ಲ ಅನ್ನಿಸೋದಂತು ಪಕ್ಕಾ. ಆದರೆ ಈ ಕಪ್ಪು ಬಣ್ಣದ ಪರದೆ ಹಿಂದೆಯೇ ಬಾಬಾನ ಕರಾಳ ಮುಖವಾಡ ಓಪನ್ ಆಗ್ತಿದ್ದದ್ದು. ಅಂದ್ರೆ 2 ವರ್ಷಗಳ ಹಿಂದೆ ಈ ಕಪ್ಪು ಪರದೆ ಹಿಂದಿರೋ ಈ ಕೊಠಡಿಯಲ್ಲೇ ಬಾಬಾ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದು.ಈ ಕೊಠಡಿಯನ್ನ ಸಂಪೂರ್ಣವಾಗಿ ಪರಿಶೀಲಿಸಿದ ಪೊಲೀಸರ ತಂಡ.. ಆಶ್ರಮದಲ್ಲಿ ಮೂರು ಗಂಟೆಗಳ ಕಾಲ ಕೊಠಡಿಯಲ್ಲಿದ್ದ ಸ್ಯಾಂಪಲ್ ಗಳನ್ನೆಲ್ಲಾ ಕಲೆಹಾಕಿ ತೆಗೆದುಕೊಳ್ತು. ಬಳಿಕ ಮೂರು ಗಂಟೆಯ ಸರ್ಚ್ ಮುಗಿಸಿ ಪೊಲೀಸರ ತಂಡ ಸಂತ್ರಸ್ತೆಯರನ್ನ ಜತೆಗೆ ಕರೆಕೊಂಡು ಮತ್ತೆ ಹಿಂದಿರುಗಿದ್ರು.ಇಷ್ಟಕ್ಕೂ ಆಶ್ರಮದೊಳಗೆ ಏನ್ ನಡೆಯಿತು ಗೊತ್ತಾ..? ಪೊಲೀಸರು ಹುಡುಕಿ ಹೊರಟ್ಟಿದ್ದ ಆ ಕಾಮುಕ ಬಾಬಾ ಅಲ್ಲಿರಲಿಲ್ಲ. ಪೊಲೀಸರು ಬರ್ತಾರೆ ಅನ್ನೋದು ತಿಳಿದ ತಕ್ಷಣವೇ ಪೊಲೀಸರು ಬರುವ ಹಿಂದಿನ ದಿನವೇ ಬಾಬಾ ನಾಪತ್ತೆ ಯಾಗಿದ್ದ.ತಾನು ಓಡಿ ಹೋಗೋನಲ್ಲ. ಓಡಿ ಹೋಗೋನೂ ತಾನಲ್ಲ ಎಂದಿದ್ದ ದಾತಿ ಮಹಾರಾಜ್ ಕ್ರೈಂ ಬ್ರ್ಯಾಂಚ್ ಕೋಣೆ ವಿಚಾರಕ್ಕೆ ಎಂಟ್ರಿ ಕೊಡ್ತಿದೇ ಅಂತಾ ತಿಳಿದಿದ್ದೇ ಎಸ್ಕೇಪ್ ಆಗಿದ್ದ…ಕೇವಲ ದಾತಿ ಮಹಾರಾಜ್ ಮಾತ್ರ ಎಸ್ಕೇಪ್ ಆಗಿಲ್ಲ. ಜತೆಗೆ ಆಶ್ರಮದಲ್ಲಿದ್ದ ಯುವತಿಯರನ್ನು ಎಸ್ಕೇಪ್ ಮಾಡಿಸಿದ್ದ. ಯಸ್.., ರಾಜಸ್ಥಾನದ ಶನಿಧಾಮದಲ್ಲಿ ಸುಮಾರು 700 ಯುವತಿಯರು ಇದ್ರು. ಆ 700 ಜನರ ಪೈಕಿ ಈಗ ಆಶ್ರಮದಲ್ಲಿರೋದು ಕೇವಲ 100 ಮಹಿಳೆಯರಷ್ಟೇ. ಸುಮಾರು 600 ಯುವತಿಯರನ್ನ ಬಾಬಾ ಎಸ್ಕೇಪ್ ಮಾಡಿಸಿದ್ದಾನೆಂದು ಊಹಿಸಲಾಗಿದೆ.ಇನ್ನು ದಾತಿ ಮಹಾರಾಜ್ ಮೇಲೆ ಕೇಳಿಬಂದಿರೋ ಅತ್ಯಾಚಾರದ ಆರೋಪಗಳ ಬಗ್ಗೆ ಭಕ್ತರ ಬಳಿ ಕೇಳಿದ್ರೆ ಕೇಳಿ ಬಂದ ಮಾತೇ ಬೇರೆ. ಆ ಯುವತಿಯೂ ಫೇಕು.. ಆಕೆ ಹೇಳ್ತಿರೋದೆಲ್ಲಾ ಕಟ್ಟು ಕಥೆ.. ಬಾಬಾ ಒಳ್ಳೆಯವರು.. ಇದೆಲ್ಲಾ ನಡೆದಿದ್ಯೋ ಇಲ್ವೋ ಅನ್ನೋದಕ್ಕೇ ಏನ್ ಸಾಕ್ಷಿ ಇದೆ ಅಂತಾ ಬಾಬಾ ಪರವಾಗೇ ಮಾತನಾಡ್ತಿದ್ದಾರೆ. ಯಾರು ಸಹ ಯುವತಿಗಾದ ಅನ್ಯಾಯದ ಬಗ್ಗೆ ಹೋರಾಡದೇ ಬಾಬಾ ನಿರ್ದೋಷಿ ಅನ್ನೋ ರೀತಿ ರಿಯಾಕ್ಟ್ ಮಾಡ್ತಿದ್ದಾರೆ.ಒಟ್ಟಾರೆ.., ರಾಮ್ ರಹೀಂ ಬಾಬಾ ಲೈಂಗಿಕ ಕಿರುಕುಳ ನೀಡಿದ್ದಕ್ಕೆ 20 ವರ್ಷಗಳ ಜೈಲುವಾಸ ಖಾಯಂ ಮಾಡಿಕೊಂಡು ದಿನಕ್ಕೆ 40 ರೂಪಾಯಿ ದುಡಿಯುತ್ತಿದ್ದಾರೆ. ಈಗ ರಾಮ್ ರಹೀಂಗಿಂತಲೂ ದೊಡ್ಡ ಬಾಬಾರಾದ ದಾತಿ ಮಹಾರಾಜ್ ರ ಕಾಮುಖ ದರ್ಶನವಾಗಿದ್ದು, ಇದೇನಾದ್ರೂ ಸಾಬೀತಾದ್ರೆ ದಾತಿ ಮಹಾರಾಜ್ ಗೆ ಜೈಲೇ ಗತಿ…

 

LEAVE A REPLY

Please enter your comment!
Please enter your name here