Home Elections 2018 ದೇವೇಗೌಡರಿಂದ ಮತ್ತೊಂದು ರಾಜಕೀಯ ದಾಳ..!? ಬೆಂಗಳೂರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಚಂದ್ರಶೇಖರನಾಥ್ ಸ್ವಾಮೀಜಿಯವರನ್ನು ಕಣಕ್ಕಿಳಿಸಲು ದೇವೇಗೌಡರು ಚಿಂತನೆ..!?

ದೇವೇಗೌಡರಿಂದ ಮತ್ತೊಂದು ರಾಜಕೀಯ ದಾಳ..!? ಬೆಂಗಳೂರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಚಂದ್ರಶೇಖರನಾಥ್ ಸ್ವಾಮೀಜಿಯವರನ್ನು ಕಣಕ್ಕಿಳಿಸಲು ದೇವೇಗೌಡರು ಚಿಂತನೆ..!?

1844
0
SHARE

ಚುನಾವಣೆ ಗೆಲ್ಲುವ ಭರದಲ್ಲಿ ಜೆಡಿಎಸ್ ಇಲ್ಲದ ಕಸರತ್ತು ಮಾಡುತ್ತಿದೆ..ಈಗ ಪ್ರಮುಖ ಮಠಾಧೀಶರನ್ನೊಬ್ಬರನ್ನು ಪಕ್ಷಕ್ಕೆ ಕರೆತಂದು ಬೆಂಗಳೂರಿನಲ್ಲಿ ಅಭ್ಯರ್ಥಿಯನ್ನಾಗಿಸಲು ಹೊರಟಿದೆ..ಬೆಂಗಳೂರು ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮಿಜಿಯವನರನ್ನು ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿಲ್ಲುವಂತೆ ಜೆಡಿಎಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ…

ನಿನ್ನೆ ಪಕ್ಷದ ರಾಯಭಾರಿಗಳಾಗಿ ಶ್ರೀಗಳನ್ನು ಭೇಟಿ ಮಾಡಿದ್ದ ಶರವಣ ಮತ್ತು ಪ್ರಕಾಶ್ , ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ..ಸ್ವಾಮೀಜಿಯವರು ಕೂಡ ಒಪ್ಪಿಗೆ ಸೂಚಿಸಿದ್ದು, ಇವತ್ತು ಜೆಡಿಎಸ್ ವರಷ್ಠ ದೇವೇಗೌಡರ ಜೊತೆಗಿನ ಮಾತುಕತೆ ಬಳಿಕ ಸ್ಪರ್ಧೆ ಫೈನಲ್ ಆಗಲಿದೆ..ಈ ಬಾರಿ ಬೆಂಗಳೂರಿನಲ್ಲೂ ಹೆಚ್ಚು ಸೀಟು ಗಳಿಸಬೇಕೆಂಬ ಬಯಕೆ ಹೊಂದಿರುವ ಜೆಡಿಎಸ್, ಈಗ ಒಕ್ಕಲಿಗ ಸಮೂದಾಯದ ಮಠಾಧೀಶರನ್ನೇ ಚುನಾವಣಾ ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವುದು ಸಮೂದಾಯದ ವಲಯದಲ್ಲಿ ಟೀಕೆಗೆ ಗುರಿಯಾಗುತ್ತಿದೆ..

ಹಿಂದೆ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯರ ಜೊತೆ ಭಿನ್ನಾಭಿಪ್ರಾಯ ಬಂದ ಸಂದರ್ಭದಲ್ಲಿ ದೇವೇಗೌಡರು ಪ್ರತ್ಯೇಕ ಮಠವನ್ನೇ ಸ್ಥಾಪಿಸಿ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿಯವರನ್ನು ಪೀಠದ ಮೇಲೆ ಕೂರಿಸಿದ್ದರು..ಆಗಲೂ ಒಕ್ಕಲಿಗರಲ್ಲಿ ದೇವೇಗೌಡರ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು..

ಹಿಂದೆ ಪ್ರತ್ಯೇಕ ಮಠ ಸ್ಥಾಪಿಸಿದ್ದಲ್ಲದೆ ಈಗ ಸ್ವಾಮೀಜಿಯವರನ್ನೇ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ಜೆಡಿಎಸ್ ವರಿಷ್ಠರ ನಡೆ ಸಮೂದಾಯದ ಅನೇಕ ಗಣ್ಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ..ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಅನಗತ್ಯವಾಗಿ ಸಮೂದಾಯದ ಬಗ್ಗೆ ಚುನಾವಣೆ ವೇಳೆಯಲ್ಲಿ ನಕಾರಾತ್ಮಕ ಚರ್ಚೆ ಶುರುವಾಗುತ್ತದೆ ಎಂಬ ಕಾರಣಕ್ಕೆ ಅನೇಕರು ಸುಮ್ಮನಿದ್ದಾರೆ..ಆದ್ರೆ ದೇವೇಗೌಡರ ರಾಜಕೀಯ ದಾಳಕ್ಕೆ ಸ್ವಾಮೀಜಿಯವರನ್ನು ಬಳಸಿಕೊಳ್ಳುತ್ತಿರುವುದು ಬೆಳಗಿನಿಂದಲೇ ಗುಸು ಗುಸು ಚರ್ಚೆಗೆ ಕಾರಣವಾಗಿದೆ..

LEAVE A REPLY

Please enter your comment!
Please enter your name here