Home District ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಬೇಕು ಎಂದ H.D.ರೇವಣ್ಣ..! ದೇವೇಗೌಡರು ಹಾಸನದಿಂದಲೇ‌‌‌ ಸ್ಪರ್ಧಿಸಿ ಎಂದು ನಾನು, ಪ್ರಜ್ವಲ್ ಎಲ್ಲರೂ...

ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಬೇಕು ಎಂದ H.D.ರೇವಣ್ಣ..! ದೇವೇಗೌಡರು ಹಾಸನದಿಂದಲೇ‌‌‌ ಸ್ಪರ್ಧಿಸಿ ಎಂದು ನಾನು, ಪ್ರಜ್ವಲ್ ಎಲ್ಲರೂ ಹೇಳುತ್ತಿದ್ದೇವೆ..

426
0
SHARE

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸಬೇಕೆಂದು ಸಚಿವ ಹೆಚ್.ಡಿ.ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಹಾಸನದಿಂದಲೇ ನಿಲ್ಲಬೇಕೆಂದು ನಾವು ಹೇಳುತ್ತಿದ್ದೇವೆ. ಹಾಸನದಿಂದಲೇ‌‌‌ ಸ್ಪರ್ಧಿಸಿ ಎಂದು ನಾನು, ಪ್ರಜ್ವಲ್ ಎಲ್ಲರೂ ಹೇಳುತ್ತಿದ್ದೇವೆ.

ಅರವತ್ತು ವರ್ಷ ರಾಜಕೀಯ ಇಲ್ಲೇ ಪೂರೈಸಬೇಕೆಂದು ಹೇಳಿದ್ದೇವೆ. ಆದ್ರೆ ದೇವೇಗೌಡರು ಎಲ್ಲಿ ನಿಲ್ತಾರೆ ಎನ್ನೋದನ್ನ ಪಕ್ಷದಲ್ಲಿ ಕೂತು ತೀರ್ಮಾನ ಮಾಡುತ್ತೇವೆ ಎನ್ನುವ ಮೂಲಕ ತಂದೆಯನ್ನ ಹಾಸನದಿಂದಲೇ ಸ್ಪರ್ಧೆ ಮಾಡುವಂತೆ ಸಚಿವ ರೇವಣ್ಣ ಆಹ್ವಾನಿಸಿದ್ದಾರೆ. ಬೆಂಗಳೂರು ಉತ್ತರ, ತುಮಕೂರಿನಲ್ಲಿ ಸ್ಪರ್ಧೆಗೆ ಕಾಂಗ್ರೆಸ್ ನಾಯಕರ ಅಡ್ಡಗಾಲು ಬಗ್ಗೆ ಪರೋಕ್ಷವಾಗಿ ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ

ದೇವೇಗೌಡರು ಎಲ್ಲಿ ನಿಂತರೂ ಗೆದ್ದು ಬರೋ ಶಕ್ತಿ ಅವರಿಗಿದೆ. ಜನತೆಯ ಆಶೀರ್ವಾದ ಇರೋವರೆಗೆ ಅವರು ಗೆದ್ದು ಬರ್ತಾರೆ. ಈ‌ ರಾಜ್ಯಕ್ಕೆ ‌60 ವರ್ಷದಿಂದ ಅವರದೇ ಆದ ಕೊಡುಗೆ ಕೊಟ್ಟಿದ್ದಾರೆ. ನೀರಾವರಿ ಯೋಜನೆಗಳು‌ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಈ ರಾಜ್ಯಕ್ಕೆ ಬಿಜೆಪಿ ನಾಯಕರ ಕೊಡುಗೆ ಏನು ಎಂದು ಸಚಿವ ರೇವಣ್ಣ ಕಿಡಿಕಾರಿದರು.

ಬಿಜೆಪಿಯವರು ಮೊದಲು ರಾಮನ ಜಪ ಮಾಡುತ್ತಿದ್ದರು, ಈಗ ಗೌಡರ ಜಪ ಮಾಡುತ್ತಿದ್ದಾರೆ. ನಿತ್ಯ ಗೌಡರ ಹೆಸರು ಹೇಳದೇ ಹೋದ್ರೆ ಅವರಿಗೆ ನಿದ್ರೆ ಬರಲ್ಲ ಅಂತ ಲೇವಡಿ ಮಾಡಿದರು.

LEAVE A REPLY

Please enter your comment!
Please enter your name here