Home District  ದೇವೇಗೌಡ್ರು, HDK ನಡೆಗೆ ವಿಶ್ವನಾಥ್ ಬೇಸರ..!?  JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..!?

 ದೇವೇಗೌಡ್ರು, HDK ನಡೆಗೆ ವಿಶ್ವನಾಥ್ ಬೇಸರ..!?  JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..!?

796
0
SHARE

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನಾರೋಗ್ಯ ಕಾರಣ ನೀಡಿ ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ರಾಜೀನಾಮೆ ನೀಡ್ತಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿತ್ತು. ಸ್ವತಃ ವಿಶ್ವನಾಥ್ ಅವರೇ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಇದೆಲ್ಲಾ ಕೇವಲ ಊಹಾಪೋಹ. ನನ್ನ ವಿರುದ್ಧ ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ರಾಜೀನಾಮೆ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಶತಾಯಗತಾಯ ಕಸರತ್ತು ನಡೆಸುತ್ತಿದ್ದಾರೆ… ಅಲ್ಲದೇ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನೇ ಮೂಲೆ ಗುಂಪು ಮಾಡುತ್ತಿದ್ದಾರೆ ಎಂಬ ಮಾತು ರಾಜಕೀಯ ಪಡಶಾಲೆಯಲ್ಲಿ ಕೇಳಿ ಬರುತ್ತಿದೆ.

ಸಿದ್ದರಾಮಯ್ಯಗೆ ಟಾಂಗ್ ಕೊಡುವ ಸಲುವಾಗಿಯೇ ಕುರುಬ ಸಮುದಾಯದ ಪ್ರಭಾವಿ ನಾಯಕ ಹೆಚ್.ವಿಶ್ವನಾಥ್ ರನ್ನು ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ… ಆದರೆ, ಕಾಲಕ್ರಮೇಣ ಈಗ ವಿಶ್ವನಾಥ್ ಪಕ್ಷದಲ್ಲಿ ಕಡೆಗಣನೆಗೆ ಒಳಗಾಗಿದ್ದಾರೆ. ಎಲ್ಲಾ ನಿರ್ಧಾರವನ್ನು ದೇವೇಗೌಡರೇ ತೆಗೆದುಕೊಳ್ಳುತ್ತಿದ್ದಾರೆ.

ಹಾಗಾಗಿ ಅಸಮದಾನಗೊಂಡಿರುವ ವಿಶ್ವನಾಥ್, ಹುದ್ದೆ ತೊರೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದ್ರೆ, ಈ ಸುದ್ದಿಯನ್ನು ವಿಶ್ವನಾಥ್ ತಳ್ಳಿಹಾಕಿದ್ದಾರೆ.ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದಾಗ ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಮಿಸಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬರಲಿಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವಾಗ ನನ್ನ ಅಭಿಪ್ರಾಯ ಕೇಳಲಿಲ್ಲ. ಎಲ್ಲಾ ವಿಚಾರದಲ್ಲಿ ಗೌಡರೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಮಾತನ್ನು ವಿಶ್ವನಾಥ್ ತಳ್ಳಿಹಾಕಿದ್ದಾರೆ.

ಜೆಡಿಎಸ್ ನಲ್ಲಿ ನಾನು ಕಂಫರ್ಟ್ ಆಗಿ ಇದ್ದೀನಿ. ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ವಿಶ್ವನಾತ್ ಹೇಳಿದ್ದಾರೆ.ಸಧ್ಯದ ರಾಜಕೀಯ ಬೆಳವಣಿಗೆ ನೋಡಿದ್ರೆ, ವಿಶ್ವನಾಥ್ ಏನೇ ಹೇಳಿದ್ರೂ ಅವರು ಕಡೆಗಣಿಸಲ್ಪಟ್ಟಿದ್ದಾರೆ.. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ವಿಶ್ವನಾಥ್ ಗೆ ನೆಪ ಮಾತ್ರ ಎಂಬುದಂತೂ ಸುಳ್ಳಲ್ಲ… ಎದೆ ಒಳಗಿನ ಅಸಮದಾನದ ಬೇಗುದಿಯನ್ನು ವಿಶ್ವನಾಥ್ ಮುಂದೊಂದು ದಿನ ಹೊರಹಾಕುತ್ತಾರಾ… ಇಲ್ಲವೇ ರಾಜಕೀಯ ಸಂದ್ಯಾ ಕಾಲದಲ್ಲಿ ರಿಸ್ಕ್ ಯಾಕೆ ಬೇಕು ಅಂತ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಾರಾ ಅನ್ನೋದು ಕುತೂಹಲ.

LEAVE A REPLY

Please enter your comment!
Please enter your name here