Home District “ದೇವೇಗೌಡ್ರ ಕುಟುಂಬಕ್ಕೆ ನನ್ನ ಬೆಂಬಲ ಇರುವುದಿಲ್ಲ”-A.ಮಂಜು || A.ಮಂಜು ಆರೋಪಕ್ಕೆ H.D.ರೇವಣ್ಣ ಟಾಂಗ್..?!

“ದೇವೇಗೌಡ್ರ ಕುಟುಂಬಕ್ಕೆ ನನ್ನ ಬೆಂಬಲ ಇರುವುದಿಲ್ಲ”-A.ಮಂಜು || A.ಮಂಜು ಆರೋಪಕ್ಕೆ H.D.ರೇವಣ್ಣ ಟಾಂಗ್..?!

726
0
SHARE

ಒಂದು ಕಾಲದ ಆಪ್ತ ಗುರು ಶಿಷ್ಯರಾಗಿ, ನಂತರ ದೂರವಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ 12 ವರ್ಷಗಳ ಬಳಿಕ ಮತ್ತೆ ಒಟ್ಟಾಗಿ ಕುಳಿತು ಸುದ್ದಿಗೋಷ್ಟಿ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ. ಆದ್ರೆ ಗೌಡರ ತವರು ಜಿಲ್ಲೆ ಹಾಸನದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಬಿರುಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದಕ್ಕೆ ಪುಷ್ಟಿ ಎಂಬಂತೆ ದಳಪತಿಗಳ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ನ ಎ.ಮಂಜು ತೀವ್ರವಾಗ್ದಾಳಿ ನಡೆಸಿದ್ದರೆ, ಟೀಕೆ ಮಾಡಲು ನಮಗೆ ಪುರುಷೊತ್ತಿಲ್ಲ. ಅವರು ದೊಡ್ಡವರು, ಅವರ ಮಾತು ನಮಗೆ ಆಶೀರ್ವಾದ ಅಂತ ಸಚಿವ ಹೆಚ್.ಡಿ.ರೇವಣ್ಣ ನಯವಾಗಿಯೇ ಟಾಂಗ್ ನೀಡಿದ್ದಾರೆ.ಸಮ್ಮಿಶ್ರ ಸರಕಾರದಲ್ಲಿ ಭಾಗಿಯಾಗಿರುವ ಕಾಂಗ್ರೆಸ್-ಜೆಡಿಎಸ್ ನ ಅಗ್ರಪಂಕ್ತೀಯ ನಾಯಕರು ಅನೇಕ ಸಂದರ್ಭ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೊನ್ನೆಯಷ್ಟೇ ಮಾಜಿ ಗುರು-ಶಿಷ್ಯರಾದ ಜೆಡಿಎಸ್ ವರಿಷ್ಠ ಹೆಚ್ಡಿಡಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅಕ್ಕ-ಪಕ್ಕ ಕುಳಿತು ಸುದ್ದಿಗೋಷ್ಟಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು.ಆದ್ರೆ ದೇವೇಗೌಡರ ತವರು ಜಿಲ್ಲೆಯಲ್ಲಿ ಉಭಯ ಪಕ್ಷಗಳ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ದೋಸ್ತಿ ಸರಕಾರ ರಚನೆಯಾದ ದಿನದಿಂದಲೂ ಜೆಡಿಎಸ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಲೇ ಬಂದಿರುವ ಮಾಜಿ ಸಚಿವ ಕಾಂಗ್ರೆಸ್ ನ ಎ.ಮಂಜು, ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ನಾನು ಸಾಂಪ್ರದಾಯಿಕವಾಗಿ ದೇವೇಗೌಡರ ವಿರೋಧಿ, ಹಿಂದಿನಿಂದಲೂ ಅವರನ್ನು ಎಲ್ಲಾ ರೀತಿಯಲ್ಲೂ ಟೀಕಿಸುತ್ತಾ ಬಂದಿದ್ದೇನೆ. ಮುಂದೆಯೇ ಹಾಗೇ ಇರುತ್ತೇನೆ. ನಾನು ಪಕ್ಷ ಮತ್ತು ಕಾರ್ಯಕರ್ತರ ಹಿತ ಬಲಿ ಕೊಡುವುದಿಲ್ಲ. ಇಷ್ಟೂ ವರ್ಷ ಅವರನ್ನು ವಿರೋಧಿಸುತ್ತಾ ಬಂದಿರುವ ನಾನು, ಮೈತ್ರಿ ಕಾರಣಕ್ಕೆ ಅವರಿಗೆ ಓಟು ಹಾಕಿ ಎಂದು ಕೇಳುವುದಿಲ್ಲ ಎಂದಿದ್ದಾರೆ.ಮಂಜು ಆರೋಪಕ್ಕೆ ನಯವಾಗಿಯೇ ಟಾಂಗ್ ಕೊಟ್ಟಿರುವ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಅವರು ದೊಡ್ಡವರು, ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ.

ಜಿಲ್ಲೆಯ ಜನರ ಸಮಸ್ಯೆ, ನೋವು ಏನಿದೆ ಅದನ್ನು ಬಗೆಹರಿಸುವುದು ನನ್ನ ಮೊದಲ ಆದ್ಯತೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ. ಮಂಜು ಅವರ ಮಾತು ನಮಗೆ ಆಶೀರ್ವಾದ ಇದ್ದಂತೆ. ಜನರ ಕೆಲಸ ಬಿಟ್ಟು ಟೀಕೆ-ಟಿಪ್ಪಣಿ ಮಾಡಲು ನನಗೆ ಟೈಮಿಲ್ಲ. ಹಿಂದಿನಿಂದಲೂ ಜಿಲ್ಲೆಯ ಜನರು ದೇವೇಗೌಡರನ್ನು ಕಷ್ಟ ಕಾಲದಲ್ಲಿ ಕೈ ಬಿಟ್ಟಿಲ್ಲ.

ಜನರ ಬೆಂಬಲ ಎಲ್ಲೀವರೆಗೂ ನಮಗೆ ಇರುತ್ತೋ ಅಲ್ಲೀವರೆಗೂ ಒಳ್ಳೇ ಕೆಲಸ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ..ಒಟ್ಟಿನಲ್ಲಿ ಎರಡೂ ಪಕ್ಷಗಳ ನಾಯಕರ ವಿಭಿನ್ನ ಹೇಳಿಕೆ, ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ರಾಜ್ಯ ನಾಯಕರು ಯಾವ ರೀತಿ ಶಮನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here