Home District “ದೇಶಕ್ಕೆ ಇಂಥಾ ಪ್ರಧಾನಿ ಸಿಕ್ಕೋದೇ ಪುಣ್ಯ” ಶಬರಿಮಲೆಗೆ ಕಚಡಾ ತಿನ್ಕೊಂಡೋದೋರ‍್ಮೇಲೆ ಸ್ಟ್ರೈಕ್ ಮಾಡ್ರಿ’…ಅಂಗಡಿ ಮುಚ್ಚಿಸಲು ಬಂದ...

“ದೇಶಕ್ಕೆ ಇಂಥಾ ಪ್ರಧಾನಿ ಸಿಕ್ಕೋದೇ ಪುಣ್ಯ” ಶಬರಿಮಲೆಗೆ ಕಚಡಾ ತಿನ್ಕೊಂಡೋದೋರ‍್ಮೇಲೆ ಸ್ಟ್ರೈಕ್ ಮಾಡ್ರಿ’…ಅಂಗಡಿ ಮುಚ್ಚಿಸಲು ಬಂದ ಪ್ರತಿಭಟನಾಕಾರರಿಗೆ ಮಾಲಿಕ ಮಂಗಳಾರತಿ

522
0
SHARE

ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ಮಾತು ಇವತ್ತು ನಡೆದ ಬಂದ್‌ಗೆ ಹೇಳಿ ಮಾಡಿಸಿದಂತಿದೆ. ಬಂದ್ ವೇಳೆ ಆನೇಕ ತಮಾಷೆ ವಿಷಯಗಳು ನಡೆದಿವೆ. ಬಾಯಿ ಹರಿದುಕೊಂಡು ನಮ್ಮ ಬಂದ್‌ಗೆ ಬೆಂಬಲ ಕೊಡಿ ಎಂದು ಕಾರ್ಮಿಕ ಸಂಘಟನೆಗಳು ಬಾಯಿ ಬಡೆದುಕೊಂಡೆ ಲಾಭ. ಇತ್ತ ರಾಜ್ಯದಲ್ಲಿ ನಮ್ಮದೇ ನಮಗೆ ಅಂತ ಜನರು ತಮ್ಮ ಪಾಡಿಗೆ ಜಾಲಿ ಮಾಡಿದ್ದಾರೆ.

ವಿವಿಧ ಸಂಘಟನೆಗಳು ಕರೆ ಕೊಟ್ಟ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಂದು ಕಡೆ ಬಲವಂತವಾಗಿ ಬಂದ್ ಮಾಡಲು ಯತ್ನಿಸಿದ ಘಟನೆಗಳು ನಡೆದವು, ಇದಕ್ಕೆ ಸಾಕ್ಷಿಯಾಗಿ ಬಂದ್ ನಿರತರು ಅಂಗಡಿ ಬಂದ್ ಮಾಡಲು ಹೋಗಿ ಅಂಗಡಿ ಮಾಲಿಕ‌ನಿಂದ ಹಿಗ್ಗಾಮುಗ್ಗ ಉಗಿಸಿಕೊಂಡು ಬಾಯಿ ಬಂದ್ ಮಾಡಿಕೊಂಡು ಕಾಲ್ಕಿತ್ತ ವಿಡಿಯೋ ಸದ್ಯ‌ ಕರಾವಳಿಯಲ್ಲಿ ವೈರಲ್ ಆಗಿದೆ.

ಬೈಂದೂರು ತಾಲೂಕು ಗುಜ್ಜಾಡಿಯಲ್ಲಿನ ಮೋಹನ್ ಗುಜ್ಜಾಡಿ ಅವರ ಅಂಗಡಿಗೆ ಬಂದ್ ನಿರತರು ಬಂದು ಅಂಗಡಿ ಮುಚ್ಚುವಂತೆ ತಿಳಿಸಿದ್ದು ಅಂಗಡಿ ಮಾಲಿಕನ ಕೋಪಕ್ಕೆ ಕಾರಣವಾಗಿದೆ. ಮೋದಿ ಪ್ರಧಾನಿಯಾಗಿ ಬಂದ್ರು, ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ನಿಮ್ಮ ಬಂದ್ ಗೆ ನನ್ನ ಸಪೋರ್ಟ್ ಇಲ್ಲ ನೀವು ಒಳ್ಳೆಯ ವಿಚಾರ ಹಿಡಿದು ಬನ್ನಿ ಅದಕ್ಕೆ ಸಪೋರ್ಟ್ ಮಾಡ್ತೇನೆ. ಮಾಡುವುದಿದ್ದರೆ ಶಬರಿಮಲೆ ವಿಚಾರವಾಗಿ ಹೋರಾಟ ಮಾಡಿ. ಕೇರಳಕ್ಕೆ ಹೋಗಿ ಸ್ಟೈಕ್ ಮಾಡಿ ಎಂದು ಕೆಂಡಕಾರಿದ್ದಾರೆ.

ಅಂಗಡಿಯಾತನ ಕೋಪ ನೋಡಿ ಪ್ರತಿಭಟನಾಕಾರರು ಕಾಲ್ಕಿತ್ತಿದ್ದಾರೆ.ಇತ್ತ ಹಾವೇರಿಯ ಹಾನಗಲ್ ಬಸ್ ಡಿಪೋದಲ್ಲಿ ಚಾಲಕ-ನಿರ್ವಾಹಕರು ಬಸ್‌ನಲ್ಲಿ ಕಂಡ ಹಾವನ್ನು ಹಿಡಿದು ಆಟವಾಡಿಸಿದ್ದಾರೆ. ಡಿಪೋದ ಆವರಣದಲ್ಲಿ ಹೆಡಿ ಎತ್ತಿದ ನಾಗಪ್ಪ ಲೀಲಾಜಾಲವಾಗಿ ಅಡಿ ನಲಿದಾಡಿ ಮನರಂಜನೆ ನೀಡಿದ್ದಾನೆ.

ನಂತರ ಚಾಲಕ ಹಾಗೂ ಉರಗ ತಜ್ಞರಾದ ಕೃಷ್ಣ ರೆಡ್ಡಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಇನ್ನೂ ಜಾಲಿ ಮೂಡ್‌ನಲ್ಲಿದ್ದ ಯುವಕರು ಬಾಗಲಕೋಟೆ ಬಸ್ ಸ್ಟ್ಯಾಂಡ್ ಖಾಲಿ ಇದ್ದುದ್ದರಿಂದ ಮೈದಾನವನ್ನಾಗಿ ಮಾಡಿಕೊಂಡು ಕ್ರಿಕೆಟ್ ಆಡಿ ಮಜಾ ಮಾಡಿದ್ರು.ಕೋಲಾರ ನಗರದ ಶ್ರೀವಾಸಪುರದ ಸರ್ಕಲ್‌ನಲ್ಲಿ ಪ್ರತಿಭಟನಾಕಾರರು ಕತ್ತೆಗಳೊಂದಿಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

 

LEAVE A REPLY

Please enter your comment!
Please enter your name here