Home District ದೇಶದಲ್ಲಿ 2 ಬಾರಿ ರೈತರ ಸಾಲ ಮನ್ನಾ ಮಾಡಿರುವ ಸಿ ಎಂ HDK,ಮೈತ್ರಿ ಸರ್ಕಾರಕ್ಕೆ ಪ್ರಜ್ವಲ್...

ದೇಶದಲ್ಲಿ 2 ಬಾರಿ ರೈತರ ಸಾಲ ಮನ್ನಾ ಮಾಡಿರುವ ಸಿ ಎಂ HDK,ಮೈತ್ರಿ ಸರ್ಕಾರಕ್ಕೆ ಪ್ರಜ್ವಲ್ ರೇವಣ್ಣ ಫುಲ್ ಮಾರ್ಕ್ಸ್

3001
0
SHARE

ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇಂದು 28 ನೇ ಹುಟ್ಟು ಆಚರಿಸಿಕೊಳ್ಳುತ್ತಿರುವ ಅವರು, ರಾಜ್ಯದ ಸಮ್ಮಿಶ್ರ ಸರಕಾರ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಆದರೂ ಕೆಲವರು ಸರಕಾರದ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ಇಡೀ ದೇಶದಲ್ಲಿ 2 ಬಾರಿ ರೈತರ ಸಾಲ ಮನ್ನಾಡಿರುವ ಸಿಎಂ ಯಾರಾದ್ರೂ ಇದ್ರೆ ಅದು ಕುಮಾರಸ್ವಾಮಿ ಮಾತ್ರ. ಇದರಿಂದ ನಾಡಿನ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಕೃಷಿ ಸೇರಿದಂತೆ ಎಲ್ಲಾ ವಿಭಾಗಗಳಿಗೂ ಶಕ್ತಿ ತುಂಬುವ ಉತ್ತಮ ಬಜೆಟ್ ನ್ನು ಕುಮಾರಣ್ಣ ಮಂಡಿಸಲಿದ್ದಾರೆ.

ಅದಕ್ಕಾಗಿ ನಾವೆಲ್ಲಾ ಅವರ ಜೊತೆ ಇರುತ್ತೇವೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಜ್ವಲ್ ಹೇಳಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಕೆಲವು ಬದಲಾವಣೆಗಳೂ ಆಗಬೇಕಿದೆ. ಯುವಕರು, ಕಾರ್ಯಕರ್ತರಿಗೆ ಬಲ ನೀಡಬೇಕಿದೆ. ಈಬಗ್ಗೆ ಪಕ್ಷದ ಹಿರಿಯರ ಜೊತೆಗೆ ಮಾತನಾಡುವೆ ಎಂದಿರುವ ಪ್ರಜ್ವಲ್, ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ನಮ್ಮ ಮನೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಚುನಾವಣಾ ರಾಜಕೀಯಕ್ಕೆ ಧುಮಕಬೇಕು ಎಂಬುದು ದೂರದ ಮಾತು, ಮೊದಲು ಪಕ್ಷ ಸಂಘಟನೆ ಮಾಡುವುದು ನನ್ನ ಪ್ರಾಥಮಿಕ ಆದ್ಯತೆ ಅದಕ್ಕಾಗಿ ಶೀಘ್ರವೇ ನಮ್ಮ ನಾಯಕರನ್ನು ಭೇಟಿ ಮಾಡಿ ಮಾತನಾಡುವೆ ಎಂದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೇ? ಬೇಡವೇ? ಎಂಬುದನ್ನು ದೇವೇಗೌಡರು ನಿರ್ಧಾರ ಮಾಡುತ್ತಾರೆ. ಪಕ್ಷದಲ್ಲಾಗಲೀ, ಕುಟುಂಬದಲ್ಲಾಗಲೀ, ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ನನ್ನನ್ನು ಅವರು ಯಾವ ರೀತಿ ಬಳಸಿಕೊಳ್ಳುತ್ತಾರೋ, ಹಾಗೆ ದುಡಿಯುವ ಎಂದಿದ್ದಾರೆ.

LEAVE A REPLY

Please enter your comment!
Please enter your name here