Home KARNATAKA ದೇಶ ಬಿಟ್ಟು ಹೋಗು ಅಂದಿದ್ದೇಕೆ ಅಭಿಮಾನಿಗೆ ಕ್ಯಾಪ್ಟನ್ ಕೊಹ್ಲಿ..!? ಮುಯ್ಯಿಗೆ ಮುಯ್ಯಿ, ಏಟಿಗೆ-ಎದುರೇಟು ಅನ್ನೋದೇ ಕೊಹ್ಲಿ...

ದೇಶ ಬಿಟ್ಟು ಹೋಗು ಅಂದಿದ್ದೇಕೆ ಅಭಿಮಾನಿಗೆ ಕ್ಯಾಪ್ಟನ್ ಕೊಹ್ಲಿ..!? ಮುಯ್ಯಿಗೆ ಮುಯ್ಯಿ, ಏಟಿಗೆ-ಎದುರೇಟು ಅನ್ನೋದೇ ಕೊಹ್ಲಿ ಜಾಯಮಾನ..! ಮೈದಾನದ ಹೊರಗೂ-ಒಳಗೂ ಇದ್ದೇ ಇರುತ್ತೆ ಆಕ್ರಮಣಕಾರಿ ಸ್ವಭಾವ..!

6158
0
SHARE

ಕ್ರಿಕೆಟ್ ಜಗತ್ತಿನ ಸೆನ್ಸೇಶನ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ. ದಾಖಲೆಗಳ ಮೂಲಕವೇ ಹವಾ ಕ್ರಿಯೇಟ್ ಮಾಡ್ತಿರೋ ಕೊಹ್ಲಿ ಸರದಾರನ್ನಾಗಿ ಮೆರೆಯುತ್ತಿದ್ದಾರೆ.ಅಲ್ಲದೇ ಅಭಿಮಾನಿಗಳಿಗೂ ಕೂಡ ಕೊಹ್ಲಿ ಅಂದ್ರೆ ಅಚ್ಚು ಮೆಚ್ಚು. ಆನ್ ದಿ ಫೀಲ್ಡ್ ನಲ್ಲಿ ಹೆಚ್ಚು ಅಗ್ರೆಸ್ಸಿವ್ ಆಗಿರೋ ಕೊಹ್ಲಿ, ಆಪ್ ದಿ ಫೀಲ್ಡ್ ನಲ್ಲೂ ಹಾಗೇ ಇರ್ತಾರೆ. ಆದ್ರೀಗ ಕೊಹ್ಲಿ ಆಕ್ರಮಣಕಾರಿ ಸ್ವಭಾವ ಎಡವಟ್ಟಿಗೆ ಕಾರಣವಾಗಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ದೀಪಾವಳಿ ಹಬ್ಬದಂತೆ ಆನೆಪಟಾಕಿಯಂತೆ ಸಿಡಿಯಿತ್ತಲ್ಲ ವಿರಾಟ್ ಕೋಪ…ದೇಶ ಬಿಟ್ಟು ಹೋಗು ಅಂತಾ ಅಭಿಮಾನಿ ಮೇಲೆ ತೋರಿದ್ರಲ್ಲ ರೌದ್ರರೂಪ…ವಿರಾಟ್ ಕೊಹ್ಲಿ ಟೀಂ ಇಂಡಿಯಾ ಸಕ್ಸಸ್ ಫುಲ್ ಕ್ಯಾಪ್ಟನ್… ಕ್ರಿಕೆಟ್ ಜಗತ್ತಿನಲ್ಲಿ ಸಾಲು ಸಾಲು ದಾಖಲೆಗಳನ್ನ ಮಾಡ್ತಿರೋ ವಿರಾಟ್, ಸೆನ್ಸೇಶನ್ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅಲ್ಲದೇ ಕಾಲಿಟ್ಟ ಕಡೆಯೆಲ್ಲಾ ಒಂದೊಂದು ದಾಖಲೆಗಳನ್ನ ಮಾಡೋದನ್ನ ಕೊಹ್ಲಿ ಮೈಗೂಡಿಸಿಕೊಂಡಿದ್ದಾರೆ. ಕ್ರಿಕೆಟ್ ನ ಮೂರು ಫಾರ್ಮೆಟ್ ಗಳಲ್ಲಿ ಯಂಗ್ ಟೈಗರ್ ಕೊಹ್ಲಿಯ ಬ್ಯಾಟಿಂಗ್ ವೈಭವಕ್ಕೆ ಕ್ರಿಕೆಟ್ ದುನಿಯಾ ಕೂಡ ಸಲಾಂ ಹೊಡೀತ್ತಿದೆ. ಅಷ್ಟೇ ಅಲ್ದೇ ಅಖ್ಯಾಂತ ಅಭಿಮಾನಿಗಳು ಕೂಡ ದಾಖಲೆ ವೀರನನ್ನ ಆರಾಧ್ಯದೈವರಂತೆ ಪ್ರೀತಿಸುತ್ತಿದ್ದಾರೆ.

ಸದ್ಯ ಕ್ರಿಕೆಟ್ ನಲ್ಲಿ ಕಿಂಗ್ ಕೊಹ್ಲಿಯ ಹವಾ ಜೋರಾಗಿದೆ. ಮೈದಾನದಲ್ಲಿ ತಂಡದ ಯಶಸ್ಸಿಗಾಗಿ ಹೋರಾಡುವ ವಿರಾಟ್ ರ ಅಗ್ರೆಸ್ಸಿವ್ ಕ್ಯಾಪ್ಟನ್ಸಿ ಹಾಗೂ ಬ್ಯಾಟಿಂಗ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಹೀಗಾಗಿಯೇ ಸಹಸ್ರರು ಮಂದಿ ಫ್ಯಾನ್ಸ್ ಕೊಹ್ಲಿಯನ್ನ ಫಾಲೋ ಮಾಡ್ತಿದ್ದಾರೆ. ವಿರಾಟ್ ಕೂಡ ಅಭಿಮಾನಿಗಳಿಗೆ ಪ್ರೀತಿಗೆ ಫಿದಾ ಆಗಿ, ಗೌರವ ಕೂಡ ಕೊಡುತ್ತ ಬಂದಿದ್ರು. ಆದ್ರೀಗ ಒಬ್ಬ ಅಭಿಮಾನಿ ವಿಷ್ಯದಲ್ಲಿ ಕಿಂಗ್ ಕೊಹ್ಲಿ ದೊಡ್ಡ ಎಡವಟ್ಟೊಂದನ್ನ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದ್ದು, ವಿದಾಯದಕ್ಕೆ ಹೆಡೆಮಾಡಿಕೊಟ್ಟಿದೆ.ಯೆಸ್. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಸ್ವಭಾವವನ್ನ ಮೈಗೂಡಿಸಿಕೊಂಡಿದ್ದಾರೆ.

ಮೈದಾನದ ಹೊರಗು-ಒಳಗೂ ಆಕ್ರಮಣಕಾರಿಯಾಗಿರೋದು ಕೊಹ್ಲಿ ಜಾಯಮಾನ. ಅಲ್ಲದೇ ಸಣ್ಣಪುಟ್ಟ ವಿಚಾರಗಳಿಗೂ ವಿರಾಟ್ ಕೋಪದಿಂದಲೇ ವರ್ತಿಸುತ್ತಿದ್ದಾರೆ. ಇದೀಗ ತಮ್ಮನ್ನ ಹುಚ್ಚರಂತೆ ಪ್ರೀತಿಸೋ ಅಭಿಮಾನಿಗಳ ವಿಚಾರದಲ್ಲೂ ಕೊಹ್ಲಿಯ ವರಸೆ ಶುರುವಾಗಿದ್ದು. ಒಂದೇ ಒಂದು ಮಾತಿನಿಂದ ಅಭಿಮಾನಿಗಳ ಮನಸ್ಸನ್ನ ಹೊಡೆದು ಹಾಕಿದ್ದಾರೆ.ಫಾರಿನ್ ಪ್ಲೇಯರ್ಸ್ ಬೆಸ್ಟ್ ಅಂದಿದ್ದಕ್ಕೆ ಕೆರಳಿ ಕೆಂಡವಾದ್ರು ವಿರಾಟ್:ಕ್ರಿಕೆಟ್ ಜಗತ್ತಿನ ಅಧಿಪತಿ ಕೊಹ್ಲಿಯ ಯಶಸ್ಸಿಗೆ ಅವರ ಪರಿಶ್ರಮ ಹಾಗೂ ಶ್ರದ್ದೆ ಕಾರಣವಾಗಿದೆ. ಆದ್ರೆ ಅದಕ್ಕಿಂತ ಮುಖ್ಯವಾಗಿರೋದು ಅಭಿಮಾನಿಗಳು. ಪ್ರತಿಬಾರಿ ಅಭಿಮಾನಿಗಳು ಕೊಹ್ಲಿ ಬೆನ್ನಿಗೆ ನಿಂತು ಸಹಕಾರಿಸುತ್ತಿದ್ದಾರೆ. ಅವರ ಅಪಾರ ಪ್ರೀತಿ ವಿರಾಟ್ ರನ್ನ ಶ್ರೇಷ್ಠ ಕ್ರಿಕೆಟಿಗನ್ನಾಗಿ ಮಾಡಿದೆ.

ಇದಕ್ಕಾಗಿ ವಿರಾಟ್ ತಮ್ಮ 30ನೇ ಹುಟ್ಟಿದ ಹಬ್ಬದಂತೆ ”ವಿರಾಟ್ ಕೊಹ್ಲಿ” ಆ್ಯಪ್ ವೊಂದನ್ನ ಬಿಡುಗಡೆ ಮಾಡಿದ್ದರು. ಈ ವೇಳೆ ಇನ್​ಸ್ಟಾಗ್ರಾಂ, ಫೇಸ್​ಬುಕ್​​, ಟ್ವಿಟರ್​​ನಂತಹ ಸೋಷಿಯಲ್ ಮಿಡಿಯಾದಲ್ಲಿ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೇ ತಮ್ಮ Virat Kohli Official App ಗೂ ಒಂದಿಷ್ಟು ಸಂದೇಶಗಳು ಬಂದಿದ್ವು. ಇದನ್ನ ಓದಿ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನ ಹೇಳುತ್ತಿದ್ದರು. ಆದ್ರೆ ಇದೇ ಸಂದರ್ಭದಲ್ಲಿ  ಒಬ್ಬ ಅಭಿಮಾನಿ ಕಳುಹಿಸಿದ್ದ ಮೆಸೇಜ್ ಕೊಹ್ಲಿ ಮುಖವನ್ನ ಕೆಂಪೇರುವಂತೆ ಮಾಡಿತ್ತು. ನಗುಮುಖದಲ್ಲಿದ್ದ ವಿರಾಟ್, ರೌದ್ರರೂಪ ತಾಳುವಂತೆ  ಮಾಡಿತ್ತು.ಹೌದು. ಹುಟ್ಟಿದ ಹಬ್ಬದ ಜೊತೆಗೆ ದೀಪಾವಳಿ ಸಂಭ್ರಮದಲ್ಲಿ ಕೊಹ್ಲಿ, ಅಭಿಮಾನಿಗಳ ಜೊತೆ ಸಂತಸದ ಕ್ಷಣಗಳನ್ನ ಹಂಚಿಕೊಳ್ಳುತ್ತಿದ್ದರು.

ಇದೇ ವೇಳೆ ಅಭಿಮಾನಿಯೊಬ್ಬ ಯಂಗ್ ಟೈಗರ್ ಗೆ ಮೆಸೇಜ್ ಮಾಡಿ, ರತೀಯ ಬ್ಯಾಟ್ಸ್ ಮನ್‌ಗಳಿಗೆ ಸುಮ್ಮನೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಅಂತಹ ವಿಶೇಷತೆ ಏನೂ ಇರಲ್ಲ. ಇಂಗ್ಲೀಷ್ ಅಥವಾ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್‌ಗಳ ಪ್ರದರ್ಶನ ನನಗೆ ಹೆಚ್ಚು ಖುಷಿ ನೀಡುತ್ತೆ ಎಂದು ಕಮೆಂಟ್ ಮಾಡಿದ್ದ.  ಇದನ್ನ ಓದಿ ಗರಂ ಆದ ಕೊಹ್ಲಿ , ನೀವು ನಮ್ಮದೇಶದಲ್ಲಿ ಯಾಕೀದ್ದೀರಿ,ದೇಶ ಬಿಟ್ಟು ತೊಲಗಿ ಅಂತಾ ವಿರಾಟ ರೂಪ ತೋರಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಅತಿಯಾಗಿ ಬಿಂಬಿಸಲ್ಪಡುತ್ತಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಅವರ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂಥ ವಿಶೇಷತೆಯೇನೂ ಇಲ್ಲ.

ನಿಜ ಹೇಳಬೇಕೆಂದರೆ, ಭಾರತದ ಬ್ಯಾಟ್ಸ್ ಮನ್‌ಗಳಿಗಿಂತಲೂ ಇಂಗ್ಲೆಂಡ್‌ ಮತ್ತು ಆಸ್ಪ್ರೇಲಿಯಾ ಬ್ಯಾಟ್ಸ್ ಮನ್‌ಗಳ ಬ್ಯಾಟಿಂಗ್‌ ನನಗಿಷ್ಟ.”  ಓಕೆ., ಹಾಗಾದರೆ, ನೀವು ಭಾರತದಲ್ಲಿರಬೇಕೆಂದು ನನಗನ್ನಿಸುವುದಿಲ್ಲ. ನೀವು ಭಾರತ ಬಿಟ್ಟು ಬೇರೆ ಎಲ್ಲಿಯಾದರೂ ಬದುಕಬೇಕಲ್ಲವೇ. ಅನ್ಯ ದೇಶಗಳನ್ನು ಪ್ರೀತಿಸುತ್ತಾ ನೀವ್ಯಾಕೆ ನಮ್ಮ ದೇಶದಲ್ಲಿ ವಾಸಿಸುತ್ತಿದ್ದೀರಿ? ನಿಮ್ಮ ಆದ್ಯತೆಗಳನ್ನು ಸರಿಪಡಿಸಿಕೊಳ್ಳಿ.ದೀಪಾವಳಿ ಖುಷಿಯಲ್ಲಿ ವಿರಾಟ್ ಗೆ ಅಭಿಮಾನಿಯೊಬ್ಬ ಮಾಡಿದ ಒಂದು ಸಂದೇಶ ಬಾಣದಂತೆ ಚುಚ್ಚಿದಂತಾಗಿದೆ. ಇದ್ರಿಂದ ಕೋಪಗೊಂಡಿದ್ದ ಕೊಹ್ಲಿ,  ದೇಶ ಬಿಟ್ಟು ತೊಲಗುವಂತೆ ಬೈದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿಯ ಹೇಳಿಕೆ ಕೆಲವರು ಪರವಾಗಿ ಮಾತನಾಡಿದ್ರೆ, ಇನ್ನೂ ಕೆಲವು ಅಭಿಮಾನಿಗಳು ಕಟು ಟೀಕೆ ಮಾಡಿ ತಿರುಗಿ ಬಿದ್ದಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ಅಭಿಮಾನಿಯೊಬ್ಬರ ವಿಷ್ಯದಲ್ಲಿ ಕಿಂಗ್ ಕೊಹ್ಲಿ ತೋರಿದ ಉದ್ದಟತನ , ಟ್ವಿಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ದೇಶ ಬಿಟ್ಟು ತೊಲಗು ಅನ್ನೋ ಒಂದು ಮಾತನ್ನೆ ಅಸ್ತ್ರವಾಗಿ ಬಳಸಿಕೊಂಡಿರೋ ಕೆಲವರು ಕೊಹ್ಲಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೇ ಸೋಷಿಯಲ್ ಮಿಡಿಯಾಗಳಲ್ಲಿ  ವಿರಾಟ್ ರನ್ನ ಲೆಫ್ಟ್ ರೈಟ್ ಅಂತಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇದು ಕ್ಯಾಪ್ಟನ್ ಕೊಹ್ಲಿಯ ತಲೆಬಿಸಿ ಯಾಗುವಂತ ಮಾಡಿದ್ದು, ದೀಪಾವಳಿ ಸಂಭ್ರಮದ ಮಧ್ಯೆ ಬೇಸರಕ್ಕೆ ಸಿಲುಕಿಸಿದೆ.ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಿಂದ ಹೊರಗುಳಿದಿರೋ ವಿರಾಟ್, ವಿಶ್ರಾಂತಿ ಮೂಡ್ ನಲ್ಲಿದ್ದಾರೆ.ಅಲ್ಲದೇ 30ನೇ ವರ್ಷದ ಹುಟ್ಟಿದ ಹಬ್ಬ ಕೊಹ್ಲಿಯ ಸಂತಸವನ್ನ ದ್ವಿಗುಣಗೊಳಿಸಿದೆ.

ಆದ್ರೇ ಇಂತಹ ಸಂತೋಷದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರನ್ನ ನಿಂದಿಸಿದ್ದಾರೆ. ಭಾರತೀಯರಿಗಿಂತ ವಿದೇಶಿ ಆಟಗಾರರೇ ಶ್ರೇಷ್ಠ ಅನ್ನೋ ಮಾತಿಗೆ ದೇಶ ಬಿಟ್ಟು ಹೋಗುವಂತೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಸುಖಸುಮ್ಮನೇ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ.ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಅಭಿಮಾನಿಯೊಬ್ಬರ ವಿಚಾರದಲ್ಲಿ ತೋರಿದ ವರ್ತನೆ ಇತರೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ವಿರಾಟ್ ಮಾಡಿದ್ದು ಸರಿ ಅಂತಾ ಪರವಾಗಿ ವಾದಿಸಿದ್ರೆ,  ಇನ್ನು ಕೆಲವರು ತಪ್ಪು ಅವರು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನ ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ ಅಂತಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಕೊಹ್ಲಿ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಾ ವಸ್ತುವಾಗಿದೆ.  ಅಲ್ಲದೇ ಕೆಲವರು ಕೊಹ್ಲಿಯ ಜಾತಕವನ್ನೆ ಜಾಲಾಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಬೆಳೆದ ನೀವು, ಮದುವೆಯನ್ನ ಮಾತ್ರ ವಿದೇಶದಲ್ಲಿ ಆಗಿದ್ದೇಕೆ.? ನೀವು ಬಳಸುತ್ತಿರೋ ವಸ್ತುಗಳು ಮೆಡ್ ಇನ್ ಇಂಡಿಯಾನಾ. ಅವುಗಳನ್ನ ಭಾರತದಲ್ಲಿ ತಯಾರಿಸಲಾಗುತ್ತಿದೆಯಾ….. ಕ್ರಿಕೆಟ್ ನಲ್ಲಿ ಭಾರತವನ್ನ ಬೆಂಬಿಸೋ ವಿರಾಟ್ ಕೊಹ್ಲಿ, ಇತರೆ ಕ್ರೀಡೆಗಳಲ್ಲಿ ವಿದೇಶಗಳನ್ನ ಬೆಂಬಲಿಸುತ್ತೀರಿ. ಕಬಡ್ಡಿ ಆಡುವ ಬದಲು ಬೇರೆ ದೇಶದಲ್ಲಿ ಹುಟ್ಟಿದ ಕ್ರೀಡೆಯನ್ನು ಆಡುತ್ತಿದ್ದೀರಿ. ಹೆಚ್ಚಿನ ಸಂದರ್ಭದಲ್ಲಿ ವಿದೇಶ ಭಾಷೆಯಲ್ಲಿಯೇ ಮಾತನಾಡುತ್ತೀರಿ. ವಿದೇಶಿ ದಿರಿಸನ್ನು ತೊಡುತ್ತೀರಿ. ಈ ಮಾತುಗಳನ್ನು ಹೇಳಲು ಅವರ ಮನಸ್ಥಿತಿ ಸರಿಯಾಗಿದೆಯೇ ಎಂದು ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಗ್ರೆಸ್ಸಿವ್ ಸ್ವಭಾವದ ವಿರಾಟ್ ಕೊಹ್ಲಿ ಅಂದ್ರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ ಇದೆ. ಕೊಹ್ಲಿ ಕೂಡ ಅಭಿಮಾನಿಗಳನ್ನ ಇಷ್ಟಪಡ್ತಾರೆ. ಅಲ್ಲದೇ ಮೈದಾನಕ್ಕೆ ಬಂದು ಬೆಂಬಲಿಸಿದಕ್ಕೆ ಪ್ರತಿಬಾರಿ ಧನ್ಯವಾದ ತಿಳಿಸುತ್ತಾರೆ. ಆದ್ರೆ ಅವರ ಮಿತಿ ಮೀರಿದ ಕೋಪ ಕೆಲವೊಂದು ಪರಿಸ್ಥಿತಿಯಲ್ಲಿ ಅದ್ದುಮೀರಿ ವರ್ತಿಸಿದೆ. ಸದ್ಯಕ್ಕೀಗ ಅಭಿಮಾನಿಯೊಬ್ಬರ ವಿಚಾರದಲ್ಲಿ ವಿರಾಟ್ ನಾಲಿಗೆ ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿ ತಮ್ಮ ಸ್ವಭಾವವನ್ನ ಬದಲಾಯಿಸಿಕೊಂಡು ಗೌರವಿಸಬೇಕಿದೆ ಅಂತಾ ಕಿವಿಮಾತು ಹೇಳ್ತಿದ್ದಾರೆ.

LEAVE A REPLY

Please enter your comment!
Please enter your name here