Home Crime ದೈಹಿಕ ಚಪಲವನ್ನ ತೀರಿಸಿಕೊಳ್ಳೋದಕ್ಕಾಗಿ ಮದುವೆ ನಾಟಕನಾ..? ಹಾಸಿಗೆಯಲ್ಲಿನ ಹೇಸಿಗೆ ಕೆಲಸ ಮುಗಿದ ಮೇಲೆ ಮಕ್ಕಳು ಅಷ್ಟೇನಾ..?...

ದೈಹಿಕ ಚಪಲವನ್ನ ತೀರಿಸಿಕೊಳ್ಳೋದಕ್ಕಾಗಿ ಮದುವೆ ನಾಟಕನಾ..? ಹಾಸಿಗೆಯಲ್ಲಿನ ಹೇಸಿಗೆ ಕೆಲಸ ಮುಗಿದ ಮೇಲೆ ಮಕ್ಕಳು ಅಷ್ಟೇನಾ..? ಅಪ್ಪ ನನ್ನನ್ಯಾಕೆ ಕೊಂದೆ..?

3251
0
SHARE

ತುಮಕೂರಿನ ಕೊರಟಗೆರೆಯ ತಣ್ಣೇನಳ್ಳಿ ಗ್ರಾಮದ ಹೊಲದಲ್ಲಿ ವ್ಯಕ್ತಿಯೊಬ್ಬ ದನ ಮೇಯಿ ಸೋದಕ್ಕಾಗಿ ಹೋಗಿದ್ದ. ಒಂದು ಕಡೆ ದನ ಮೇಯ್ತಾ ಇದ್ರು ಇವನು ಆ ಹೊಲದಲ್ಲಿ ಇದ್ದ ಬಾವಿಯ ಕಡೆಗೆ ಹೋಗಿದ್ದ. ಸುಮ್ಮನೆ ಕುತೂಹಲಕ್ಕೆ ಬಾವಿಯಲ್ಲಿ ನೀರು ಎಷ್ಟಿದೆ ಅಂತ ನೋಡೋದಕ್ಕೆ ಬಾವಿಯೊಳಗೆ ತಲೆ ಹಾಕಿದ್ದಾನೆ. ಬಾವಿಯೊಳಗೆ ಬಗ್ಗಿ ನೋಡ್ತಿದ್ದ ಹಾಗೆ ಅವನಿಗೆ ಮೂರ್ಛೆ ಹೋದ ಹಾಗೆ ಆಗಿತ್ತು. ಅಲ್ಲಿ ಅವನ ಅಂತಹದ್ದೊಂದು ಭೀಭತ್ಸ ದೃಶ್ಯವೊಂದನ್ನ ನೋಡಿದ್ದ.ಹಾಗೆ ಆ ಬಾವಿಯಲ್ಲಿ ಇಣುಕಿ ನೋಡಿದವರಿಗೆ ಕಂಡಿದ್ದು ಒಂದು ಮಗುವಿನ ಡೆಡ್ ಬಾಡಿ. ಅದು ಎರಡೋ ಮೂರೋ ವರ್ಷದ ಮಗುವಿನ ಹೆಣ.

ಬಾವಿಯಲ್ಲಿ ಮಗುವಿನ ಮುಖ ಕೆಳಗಾಗಿ ಹೆಣ ತೇಲ್ತಿತ್ತು. ಕೆಲವು ಕ್ಷಣ ಅಲ್ಲಿದ್ದವರಿಗೆ ತಮ್ಮನ್ನ ತಾವು ಸಮಾಧಾನ ಮಾಡಿಕೊಳ್ಳೋದಕ್ಕೆ ಸಾಕಷ್ಟು ಸಮಯ ಬೇಕಾಗಿತ್ತು. ನಂತ್ರ ಎಚ್ಚೆತ್ತುಕೊಂಡು ಜನ ತಕ್ಷಣವೇ ಪೊಲೀಸ್ರಿಗೆ ಫೋನ್ ಮಾಡಿದ್ರು. ಕೊಳಲ ಪೊಲೀಸ್ರಿಗೆ ವಿಷಯ ತಿಳಿಸ್ತಿದ್ದ ಹಾಗೆ ಪಿಎಸ್ ಐ ಸಂತೋಷ್ ಅವ್ರು ತಮ್ಮ ಟೀಂ ಜೊತೆ ಅಲ್ಲಿಗೆ ಓಡೋಡಿ ಬಂದಿದ್ರು. ಅಲ್ಲದೆ ತಮ್ಮ ಎಸ್ಪಿ ಮೇಡಂಗೆ ಕೂಡಾ ವಿಷಯ ತಿಳಿಸಿ ಪೊಲೀಸ್ರು ಜೀಪ್ ಹತ್ತಿದ್ರು.ಪಿಎಸ್ ಐ ಸಂತೋಷ್ ಎಸ್ಪಿ ಡಾ. ದಿವ್ಯಾಗೋಪಿನಾಥ್ ಅವರಿಗೆ ಬಾವಿಯಲ್ಲಿ ಮಗು ಬಾಡಿ ಸಿಕ್ಕಿರೋದನ್ನ ವಿವರವಾಗಿ ಹೇಳಿದ್ರು. ಇಷ್ಟು ವಿಷಯ ಗೊತ್ತಾಗ್ತಿದ್ದ ಹಾಗೆ ಮೇಡಂ ಅವ್ರು ಕೂಡಾ ಅಲ್ಲಿಗೆ ಬಂದಿದ್ರು.

ಅವತ್ತು ಆ ಬಾಡಿಯನ್ನ ನೋಡ್ತಿದ್ದ ಹಾಗೆ ಪೊಲೀಸ್ರು ಕೂಡಾ ತಾವು ಖಾಕಿ ಹಾಕಿದ್ದೀವಿ ಅನ್ನೋದನ್ನ ಮರೆತು ಕಣ್ಣಲ್ಲಿ ನೀರು ತುಂಬಿಕೊಂಡಿದ್ರು. ಯಾಕಂದ್ರೆ ಅಲ್ಲಿ ಸಿಕ್ಕಿದ್ದು ರಾಗ ದ್ವೇಷಗಳ ಬಗ್ಗೆ ಕಿಂಚಿತ್ತು ಗೊತ್ತಿಲ್ಲದ ಹೆಣ್ಣು ಮಗುವೊಂದರ ಶವ. ಆ ಮಗುವನ್ನ ಅದ್ಯಾರು ಕೊಂದ್ರು ಅಂತ ಇಡೀ ಪೊಲೀಸರಾದಿಯಾಗಿ ಎಲ್ಲರು ಶಾಪ ಹಾಕೋದಕ್ಕೆ ಶುರುಮಾಡಿದ್ರು.ಅವತ್ತು ಪೊಲೀಸ್ರು ಆ ಮಗುವಿನ ಸಾವಿನ ಬಗ್ಗೆ ತನಿಖೆಯ ಶುರುಮಾಡಿದ್ರು. ಹೀಗೆ ಪೊಲೀಸ್ರು ಮತ್ತೆ ತಣ್ಣೇನಹಳ್ಳಿಗೆ ಬಂದಿದ್ರು. ತಣ್ಣೇನಹಳ್ಳಿ ಸುಮಾರು 200 ಮನಗಳಿರೋ ಸಣ್ಣ ಊರು. ಆ ಹಳ್ಳಿಯ ಪ್ರತಿ ಮನೆಗೂ ಪೊಲೀಸ್ರು ಹೋಗಿದ್ರು. ಅಲ್ಲಿ ಈ ಮಗು ಯಾರದ್ದು ಅಂತ ವಿಚಾರಿಸಿದ್ರು. ಆದ್ರೆ ಆ ಊರಲ್ಲಿ ಯಾರು ಈ ಮಗುವನ್ನ ಗುರುತು ಹಿಡಿಯಲಿಲ್ಲ. ಅಲ್ಲದೆ ನಮಗೆ ಗೊತ್ತಿರೋ ಮಗುವು ಇದಲ್ಲ ಅಂತ ಹೇಳೋದಕ್ಕೆ ಶುರುಮಾಡಿದ್ರು.

ಆದ್ರೆ ಎಲ್ಲಿಯೂ ಮಗು ಮಿಸ್ಸಿಂಗ್ ಬಗ್ಗೆ ಮಾಹಿತಿ ಸಿಗಲಿಲ್ಲ. ನಂತ್ರ ಯಾವುದಕ್ಕೂ ಇರಲಿ ಅಂತ ಪೊಲೀಸ್ರು ಬೆಂಗಳೂರಿನಲ್ಲಿ ಮಿಸ್ಸಿಂಗ್ ಆಗಿರೋ ಬಗ್ಗೆ ಮಾಹಿತಿ ಕಲೆಹಾಕಿದ್ರು. ಅಲ್ಲಿ ಸುಮಾರು 15 ಜನ ಮಕ್ಕಳು ಕಾಣೆಯಾಗಿರೋದು ಪತ್ತೆಯಾಗಿತ್ತು. ಆದ್ರೆ ಅದ್ರಿಂದ ಪೊಲೀಸ್ರಿಗೆ ಅದ್ರಿಂದ ಯಾವುದೇ ಉಪಯೋಗವಾಗಲಿಲ್ಲ. ಯಾಕಂದ್ರೆ ನಾಪತ್ತೆಯಾಗಿದ್ದ 15 ಮಕ್ಕಳು ಕೂಡಾ ಪತ್ತೆಯಾಗಿದ್ರು. ಹೀಗಾಗಿ ಪೊಲೀಸ್ರಿಗೆ ಈ ಮಗು ಶವ ಎಲ್ಲಿಂದ ಬಂತು ಊರಲ್ಲೂ ಯಾವ ಮಗು ಮಿಸ್ ಆಗಿಲ್ಲ. ಅಕ್ಕಪಕ್ಕ ಜಿಲ್ಲೆಯಲ್ಲೂ ಆಗಿಲ್ಲ. ಇನ್ನು ಬೆಂಗಳೂರಿನಲ್ಲೂ ಈ ಬಗ್ಗೆ ಮಾಹಿತಿ ಸಿಕ್ತಿಲ್ಲ ಅಂದ ಮೇಲೆ ಈ ಶವ ಇಲ್ಲಿಗೆ ಹ್ಯಾಗೆ ಬಂತು ಅನ್ನೋ ಅನುಮಾನಗಳು ಶುರುವಾಯ್ತು.ಈ ಟೈಂನಲ್ಲಿ ಪೊಲೀಸ್ರಿಗೆ ಇನ್ನೊಂದು ಐಡಿಯಾ ಬಂದಿತ್ತು. ಯಾಕಂದ್ರೆ ಇದು ಆಂಧ್ರಪ್ರದೇಶದ ಗಡಿಪ್ರದೇಶವಾಗಿರೋದ್ರಿಂದ ಅಲ್ಲಿನವರ ಮಗು ಯಾವುದಾದ್ರು ಆಗಿರಬಹುದಾ ಅಂತ ಅವರ ಅನುಮಾನವಾಗಿತ್ತು. ಹೀಗಾಗಿ ಅಲ್ಲಿ ಮಿಸ್ ಆಗಿರೋ ಮಕ್ಕಳ ಮಾಹಿತಿಯನ್ನ ತರಿಸಿಕೊಂಡಿದ್ರು. ಅಲ್ಲದೆ ಈ ಮಗುವಿನ ಫೋಟೋಗಳನ್ನ ಅಲ್ಲಿನ ಪೊಲೀಸ್ರ ಜೊತೆ ಶೇರ್ ಮಾಡ್ಕೊಂಡಿದ್ರು. ಆಗಲೂ ಪೊಲೀಸ್ರಿಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಷ್ಟು ಹೊತ್ತಿಗೆ ಮಗು ಬಾಡಿ ಸಿಕ್ಕಿ ಐದು ದಿನಗಳು ಕಳೆದು ಹೋಗಿತ್ತು.

ಆ ಮಗುವಿನ ಪೋಷಕರು ಪತ್ತೆಯಾಗದ ಕಾರಣ ಅಂತ ಇನ್ನು ಆ ಬಾಡಿಯನ್ನ ಇಟ್ಕೊಂಡಿರೋದು ಯಾಕೆ ಅಂತ ಅದರ ಅಂತ್ಯಸಂಸ್ಕಾರದ ಬಗ್ಗೆ ಯೋಚನೆ ಮಾಡಿದ್ರು. ನಂತ್ರ ಪೊಲೀಸ್ರೇ ಮುಂದೆ  ಆ ಮಗುವಿನ ಅಂತ್ಯ ಸಂಸ್ಕಾರ ನಡೆಸಿದ್ರು.ಪೊಲೀಸ್ರು ಹಳ್ಳಿ, ಪಟ್ಟಣ, ತಾಲೂಕು ಅಂತ ಈ ಮಗುವಿನ ಪೋಷಕರಿಗಾಗಿ ಎಲ್ಲಾ ಕಡೆ ಹುಡುಕಿದ್ರು. ಆದ್ರೆ ಎಲ್ಲೂ ಮಗುವಿನ ಬಗ್ಗೆಯಾಗ್ಲಿ ಅದರ ಪೋಷಕರ ಬಗ್ಗೆಯಾಗಲಿ ಮಾಹಿತಿ ಸಿಗಲೇ ಇಲ್ಲ. ಇನ್ನು ಈ ಕೇಸ್ ಅನ್ನ ಇಲ್ಲಿಯೇ ಬಿಟ್ಟ ಬಿಡೋಣ ಅಂತ ಅವ್ರು ಅಂದುಕೊಂಡಿದ್ರು. ಆದ್ರೆ ಯಾವುದಕ್ಕೂ ಈ ಕೇಸ್ ನಲ್ಲಿ ನಾವು ಸೋಲಬಾರದು ಅಂತ ಅವ್ರು ಒಂದು ತೀರ್ಮಾನಕ್ಕೆ ಬಂದಿದ್ರು. ಏನಾದ್ರೂ ಆಗಲಿ ಈ ಕೇಸ್ ನಲ್ಲಿ ಇನ್ನೊಂದು ರೌಂಡ್ ಹೊಸದಾಗಿ ಅದೇ ಊರಿಂದ ತನಿಖೆ ಶುರುಮಾಡೋಣ ಅಂತ ಸಂತೋಷ್ ತೀರ್ಮಾನಿಸಿದ್ರು. ಅದಕ್ಕೆ ಮತ್ತೆ ತಣ್ಣೇನಹಳ್ಳಿಗೆ ಹೋಗಿದ್ರು.ಮಗುವಿನ ತಾಯಿ ಸಿಕ್ಕ ಮೇಲೆ ಪೊಲೀಸ್ರಿಗೆ ಆರೋಪಿಯನ್ನ ಹಿಡಿಯೋದು ಜಾಸ್ತಿ ಕಷ್ಟವೇ ಆಗಲಿಲ್ಲ. ಯಾಕಂದ್ರೆ ಆಕೆ ಎಲ್ಲವನ್ನ ಪೊಲೀಸ್ರ ಮುಂದೆ ಹೇಳಿದ್ಲು. ಅಲ್ಲದೆ ಈ ಕೊಲೆಯನ್ನ ತನ್ನ ಗಂಡ ನರಸಿಂಹ ಮೂರ್ತಿಯೇ ಮಾಡಿರೋದು ಅಂತ ಹೇಳಿದ್ಲು. ಅವತ್ತು ಬಾವಿಯಲ್ಲಿ ಸಿಕ್ಕಿದ್ದ ಆ ಮಗು ಸಿಂಧು ಅಂತ.

ಇನ್ನು ಮೂರು ವರ್ಷದ ಕಂದಮ್ಮ. ಆಕೆಯನ್ನ ಇದೇ ನರಸಿಂಹ ಮೂರ್ತಿ ನಿರ್ದಯವಾಗಿ ಕೊಲೆ ಮಾಡಿಬಿಟ್ಟಿದ್ದ. ಈ ನರಸಿಂಹ ಮೂರ್ತಿ ಇದೇ ತಣ್ಣೇನಹಳ್ಳಿಯವನು. ಚಿಕ್ಕವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯನ್ನ ಕಳ್ಕೊಂಡು ಚಿಕ್ಕಬಳ್ಳಾಪುರಕ್ಕೆ ಹೋಗಿ ಸೇರಿದ್ದ. ಅಲ್ಲಿ ಚೌಟ್ರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನಾಲ್ಕು ವರ್ಷಗಳ ಹಿಂದೆ ಬಟ್ಟೆಯಂಗಡಿಯಲ್ಲಿ ಕೆಲಸ ಮಾಡ್ತಿದ್ದ ಅನಿತಾ ಅನ್ನೋಳ ಪರಿಚಯವಾಗಿತ್ತು ಇತನಿಗೆ. ಹಾಗೆ ಇಬ್ಬರು ಲವ್ ಕೂಡಾ ಮಾಡಿದ್ರು. ನಂತ್ರ ಇಬ್ಬರು ಮದುವೆಯನ್ನ ಕೂಡಾ ಮಾಡ್ಕೊಂಡಿದ್ರು. ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯೇ ಆ ಸಿಂಧು. ಒಂದು ಮಗುವಾಗ್ತಿದ್ದ ಹಾಗೆ ನರಸಿಂಹ ತನ್ನ ವರಸೆ ಶುರುಮಾಡಿದ್ದ. ತನ್ನ ಹೆಂಡತಿಯ ಮೇಲೆ ಅವನು ಅನುಮಾನ ವ್ಯಕ್ತಪಡಿಸಿದ್ದ. ಪ್ರತಿದಿನ ಇದೇ ಕಾರಣಕ್ಕೆ ಅವಳೊಂದಿಗೆ ಜಗಳ ಮಾಡೋದಕ್ಕೂ ಶುರುಮಾಡಿದ್ದ.

ಇನ್ನು ಇವಳ ಜೊತೆ ಸಂಸಾರ ನಡೆಸೋದಕ್ಕೆ ಸಾಧ್ಯವಿಲ್ಲ ಅಂತ ಗೊತ್ತಾಗ್ತಿದ್ದ ಹಾಗೆ ನ್ಯಾಯಾಲಯದಲ್ಲಿ ಡಿವೋರ್ಸ್ ಗೆ ಅರ್ಜಿ ಹಾಕಿದ್ದ. ಇನ್ನು ಡಿವೋರ್ಸ್ ಸಿಕ್ಕಿರಲಿಲ್ಲ. ಆಗ ಈ ಮಗುವನ್ನ ನೀನೇ ನೋಡ್ಕೊ ಅಂತ ಅವಳೊಂದಿಗೆ ಮತ್ತೆ ಗಲಾಟೆ ಶುರುಮಾಡಿದ್ದ. ಆದ್ರೆ ಅವಳು ಕೂಡಾ ಈ ಮಗು ನಿಂದು ಬೇಕಾದ್ರೆ ನೋಡ್ಕೋ ಇಲ್ಲಾ ಅಂದ್ರೆ ಬಿಡು ಅಂತ ಬಿಟ್ಟು ಹೋಗಿದ್ಲು. ಅದಾದ ನಂತ್ರ ನಡೆದಿದ್ದೆಲ್ಲಾ ದುರಂತವೇ ಸರಿ, ಅದಾದ ಒಂದೇ ವಾರಕ್ಕೆ ಮತ್ತೆ ಚಿಕ್ಕಬಳ್ಳಾಪುರಕ್ಕೆ ಹೋಗಿ ಅಲ್ಲಿ ಚೆನ್ನಾಗಿ ಕುಡಿದಿದ್ದಾನೆ. ನಂತ್ರ ತನ್ನ ಹೆಂಡತಿಯ ಮನೆಗೆ ಹೋಗಿ ನನ್ನ ಕೈಯ್ಯಾರೆ ನನ್ನ ಮಗುವನ್ನ ಕೊಲ್ಲಿಸಿ ಬಿಟ್ಯಲ್ಲೆ ಅಂತ ಗಲಾಟೆ ಮಾಡಿದ್ದಾನೆ. ಅಲ್ಲದೆ ಆಕೆಗೆ ಮನಸೋ ಇಚ್ಛೆ ಹೊಡೆದು ಬಂದಿದ್ದ. ಇಷ್ಟು ಕಥೆಯನ್ನ ಆಕೆ ಪೊಲೀಸರ ಮುಂದೆ ಹೇಳಿದ್ಲು. ಆಗ ಪೊಲೀಸ್ರು ಅವನನ್ನ ಹುಡ್ಕೊಂಡು ಚಿಕ್ಕಬಳ್ಳಾಪುರಕ್ಕೆ ಹೋಗಿದ್ರು.

ಆತ ಅದೇ ಚೌಟ್ರಿಯಲ್ಲಿ ಫುಲ್ ಪೋಟ್ಕೊಂಡು ಬಿದ್ಕೊಂಡಿದ್ದ. ನಂತ್ರ ಪೊಲೀಸ್ರ ಬೂಟ್ಸ್ ಕಾಲಲ್ಲಿ ಒದ್ದು ಜೀಪಲ್ಲಿ ಅವನನ್ನ ತುಂಬ್ಕೊಂಡು ಬಂದಿದ್ರು.ಫುಲ್ ಟೈಟ್ ಆಗಿದ್ದ ನರಸಿಂಹ ಪೊಲೀಸ್ರ ಸಿಟ್ಟಿಗೆ ಜೀಪಲ್ಲೇ ಬಾಯಿ ಬಿಟ್ಟಿದ್ದ. ಅವತ್ತು ಹೆಂಡತಿಯ ಜೊತೆ ಜಗಳ ಮಾಡ್ಕೊಂಡು ಮಗುವನ್ನ ಆತ ನೇರವಾಗಿ ತಣ್ಣೇನಹಳ್ಳಿಗೆ ಕರ್ಕೊಂಡು ಬಂದಿದ್ದ. ಹಾಗೆ ಕರ್ಕೊಂಡು ಬಂದು ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸ ಇಟ್ಟಿದ್ದ. ಆ ಮಗುವಿಗೆ ಕುಡಿಯೋದಕ್ಕೆ ಒಂದು ಹನಿ ನೀರು ಕೊಟ್ಟಿರಲಿಲ್ಲ. ಸಂಜೆಯ ಹೊತ್ತಿಗೆ ಆ ಮಗುವನ್ನ ಆ ಹೊಲದ ಬಾವಿಯ ಹತ್ತಿರ ಕರೆತಂದಿದ್ದ. ಆ ಮಗು ಅಷ್ಟೊತ್ತಿಗಾಗ್ಲೇ ಅನ್ನ ನೀರು ಕಾಣದೆ ನಿತ್ರಾಣಗೊಂಡಿತ್ತು. ಆ ಕಂದಮ್ಮನಿಗೆ ಇನ್ನೇನು ಕೆಲವೇ ನಿಮಿಷಗಳಲ್ಲಿ ನಾನು ಸತ್ತು ಹೋಗ್ತೀನಿ ಅನ್ನೋದು ಗೊತ್ತೇ ಇರಲಿಲ್ಲ. ಅಪ್ಪ ಭುಜದ ಮೇಲೆ ಆ ಮಗು ನಿತ್ರಾಣವಾಗಿ ಬಿದ್ದಿತ್ತು. ಆಗ ಮಗುವಿನ ತಲೆಯ ಮೇಲೆ ಆತ ಬಲವಾಗಿ ಹೊಡೆದಿದ್ದ. ಅಪ್ಪನ ಆ ಒಂದು ಏಟಿಗೆ ಸಿಂಧು ಪ್ರಜ್ಞೆ ತಪ್ಪಿ ಹೋಗಿದ್ಲು.

ಮಗು ಪ್ರಜ್ಞೆ ತಪ್ಪುತ್ತಿದ್ದ ಹಾಗೆ ಟವೆಲ್ ನಲ್ಲಿ ಒಂದಿಷ್ಟು ಇಟ್ಟಗೆಗಳನ್ನ ಕಟ್ಟಿ ಅದನ್ನ ಆ ಮಗುವಿಗೆ ಕಟ್ಟಿದ್ದಾನೆ. ನಂತ್ರ ಇಟ್ಟಿಗೆ ಸಮೇತ ಮಗುವನ್ನ ಬಾವಿಗೆ ನಿರ್ದಯವಾಗಿ ಎಸೆದಿದ್ದ.ಅವನು ತೊದಲುತ್ತ ಹೀಗೆ ಸತ್ಯವನ್ನ ಹೇಳ್ತಿದ್ದ ಹಾಗೆ ಪೊಲೀಸ್ರಿಗೆ ಅವನನ್ನ ಅಲ್ಲೇ ಗುಂಡಿಟ್ಟು ಕೊಂದು ಬಿಡೋಣ ಅನ್ನೋ ಸಿಟ್ಟು ಬಂದಿತ್ತು. ಯಾಕಂದ್ರೆ ಆತ ಅಂತಹ ಅಮಾನುಷವಾದ ಕೆಲಸವನ್ನ ಮಾಡಿದ್ದ. ಆದ್ರೆ ಕಾನೂನು ಅನ್ನೋದು ಒಂದಿದೆಯಲ್ಲ ಅದಕ್ಕಾಗಿ ಅವನನ್ನ ಆ ಕಾನೂನಿನ ಮುಂದೆ ಒಪ್ಪಿಸಿದ್ದಾರೆ. ಯಾರೇ ಆಗಲಿ ಅವನು ಮಾಡಿರೋ ಕೆಲಸವನ್ನ ಕೇಳಿಬಿಟ್ರೆ ಅವನನ್ನ ಸುಮ್ಮನೆ ಬಿಡೋದಿಲ್ಲ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಇಲ್ಲಿ ಇವರಿಬ್ಬರ ಜಗಳದಲ್ಲಿ ಆ ಮಗು ಸತ್ತು ಹೋಗಿತ್ತು.ಕೆಲವರು ಹೀಗೆ ದಾಂಪತ್ಯ ಜೀವನ ನಡೆಸೋದಕ್ಕಾಗಿ ಮದುವೆಯಾಗಿರೋದಿಲ್ಲ.

ಕೇವಲ ತಮ್ಮ ದೈಹಿಕ ಚಪಲವನ್ನ ತೀರಿಸಿಕೊಳ್ಳೋದಕ್ಕಾಗಿ ಮದುವೆ ಅನ್ನೋ ನಾಟಕವಾಡಿರ್ತಾರೆ. ಅವ್ರಿಗೆ ಹಾಸಿಗೆಯಲ್ಲಿನ ಹೇಸಿಗೆ ಕೆಲಸ ಮುಗಿದ ಮೇಲೆ ಮಕ್ಕಳು ಮನೆ ಅನ್ನೋದೆಲ್ಲಾ ನೆನಪಾಗೋದೇ ಇಲ್ಲ. ಇವರಿಬ್ಬರ ವಿಷಯದಲ್ಲೂ ಹಾಗೆ ಆಗಿತ್ತು. ತಾವೇ ಜನ್ಮಕೊಟ್ಟ ಮಗುವನ್ನ ನೋಡಿಕೊಳ್ಳೋದಕ್ಕೆ ಇಬ್ಬರಿಗೂ ಸಾಧ್ಯವಾಗಿರಲಿಲ್ಲ. ಅವ್ರಿಗೆ ತಮಗೆ ಬೇಕಾದ ಸುಖ ಸಿಕ್ಕಿಯಾಗಿತ್ತು. ಇನ್ನು ಮಗು ಅನ್ನೋ ಜವಾಬ್ದಾರಿ ಯಾಕೆ ಅಂತ ಅನಿಸಿತ್ತು. ಹೀಗಾಗಿ ಆ ಮಗುವನ್ನ ಬೀದಿ ಪಾಲು ಮಾಡೋದಕ್ಕೆ ಕಿತ್ತಾಡಿಕೊಂಡಿದ್ರು. ಅಷ್ಟೇ ಅಲ್ಲದೆ ಆ ಮಗು ಮುಂದೊಂದು ದಿನ ತನಗೆ ತೊಂದರೆ ಮಾಡಬಹುದು ಅನ್ನೋ ಕಾರಣಕ್ಕೆ ಆತ ಕೊಂದು ಮುಗಿಸಿದ್ದ. ಆ ಕಂದಮ್ಮನನ್ನ ಯಾವುದಾದ್ರು ಅನಾಥಾಶ್ರಮಕ್ಕೋ ಅಥವಾ ಮಕ್ಕಳಿಲ್ಲದವರಿಗೋ ಕೊಟ್ಟಿದ್ರೆ ಬದುಕಿಕೊಳ್ತಿತ್ತು. ಆದ್ರೆ ತನ್ನ ಕುಡಿತಕ್ಕೆ ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ಬೇಜವಾಬ್ದಾರಿ ಮನುಷ್ಯ  ಕಂದನನ್ನ ಕೊಂದು ಬಿಟ್ಟಿದ್ದ. ಇಂತಹವರು ಈ ಭೂಮಿ ಮೇಲೆ ಬದುಕೋದಕ್ಕೆ ಎಷ್ಟು ಅರ್ಹರು ಅಂತ ಕೆಲಮೊಮ್ಮೆ ಅನಿಸುತ್ತೆ.

LEAVE A REPLY

Please enter your comment!
Please enter your name here