Home District ದೋಸ್ತಿಗಳಿಗೆ ತೋಡಿದ ಖೆಡ್ಡಾದಲ್ಲಿ ತಾವೇ ಬಿದ್ದ ಯಡಿಯೂರಪ್ಪ! ಆಪರೇಷನ್ ಕಮಲ ಅಡಿಯೋದಲ್ಲಿ ಹೋಯ್ತಲ್ಲ ರಾಜಹುಲಿ ಮರ್ಯಾದೆ!...

ದೋಸ್ತಿಗಳಿಗೆ ತೋಡಿದ ಖೆಡ್ಡಾದಲ್ಲಿ ತಾವೇ ಬಿದ್ದ ಯಡಿಯೂರಪ್ಪ! ಆಪರೇಷನ್ ಕಮಲ ಅಡಿಯೋದಲ್ಲಿ ಹೋಯ್ತಲ್ಲ ರಾಜಹುಲಿ ಮರ್ಯಾದೆ! BSY ಏಕಾಂಗಿ!

2299
0
SHARE

2008ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಆಪರೇಷನ್ ಕಮಲ ಮಾಡಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದು ಇದೀಗ ಇತಿಹಾಸ… ಆದ್ರೆ EVERY DAY IS SUNDAY ಅಂತಾ ಯಡಿಯೂರಪ್ಪ ಅಂದುಕೊಂಡು ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಿ ತಮ್ಮ ಮರ್ಯಾದೆಯನ್ನ ತಾವೇ ಹರಾಜು ಹಾಕಿಕೊಂಡಿದ್ದಾರೆ.

ಹೋರಾಟದ ಹಿನ್ನೆಲೆಯಿಂದ ಮೇಲಿರಿದ್ದ ಯಡಿಯೂರಪ್ಪ ಇಂದು ಜಾರಿಬಿದಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹುಚ್ಚು ಆಸೆಗೆ ನೀರೆರೆದು ಹಪಹಪಿಸಿದ್ದಕ್ಕೆ ಇಂದು ರಾಜಕೀಯವಾಗಿ ದೊಡ್ಡ ಬೆಲೆ ತೆತ್ತಿದ್ದಾರೆ. 104 ಸ್ಥಾನ ಗೆದ್ದರೂ ಅಧಿಕಾರ ಸಿಗಲಿಲ್ಲವಲ್ಲ ಅನ್ನೋ ಹತಾಶೆ ಅವರನ್ನ ಇಂದು ಏಕಾಂಗಿಯನ್ನಾಗಿ ಮಾಡಿದೆ..

ದೋಸ್ತಿ ಸರ್ಕಾರವನ್ನ ಪತನಗೊಳಿಸಿ ಬಿಜೆಪಿ ಸರ್ಕಾರವನ್ನ ಸ್ಫಾಪಿಸಲು ಯಡಿಯೂರಪ್ಪ ಮಾಡಿದ ಎಲ್ಲಾ ಪ್ಲಾನ್ ಗಳು ಫೇಲ್ ಆಗ್ತೀವೆ.. ಜೊತೆಗೆ ದೋಸ್ತಿಗಳಿಗೆ ತೋಡಿದ್ದ ಖೆಡ್ಡಾದಲ್ಲಿ ಯಡಿಯೂರಪ್ಪನವರೇ ಬಿದ್ದು ಇದೀಗ ವಿಲವಿಲ ಅಂತಾ ಒದ್ದಾಡುತ್ತಿದ್ದಾರೆ.. ಗುರುಮಿಟ್ಕಲ್ ಶಾಸಕ ನಾಗನಗೌಡ್ರನ್ನ ಸೆಳೆಯಲು ಅವರ ಪುತ್ರ ಶರಣಗೌಡನನ್ನ ದೇವದುರ್ಗ ಐಬಿಗೆ ಕರೆಸಿಕೊಂಡು ಯಡಿಯೂರಪ್ಪ ಮಾತನಾಡಿದ್ದೇ ಎಲ್ಲಾ ರದ್ಧಾಂತಗಳಿಗೆ ಕಾರಣವಾಗಿದೆ.ಆಡಿಯೋ ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ..

ವಿಶೇಷ ತನಿಖಾ ತಂಡ ಇದೀಗ ಅಡಿಯೋದಲ್ಲಿ ಯಡಿಯೂರಪ್ಪ, ಶಿವನಾಂದ್ ನಾಯ್ಕ್ ಮತ್ತು ಶರಣಗೌಡನ ಧ್ವನಿ ಇರೋದ್ರಿಂದ ಈ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಬಹುದು.. ಒಂದು ವೇಳೆ ತನಿಖೆಯಲ್ಲಿ ಇವರದ್ದೇ ಧ್ವನಿ ಅಂತಾದ್ರೆ ಸಾರ್ವಜನಿಕವಾಗಿ ಮತ್ತಷ್ಟು ಮರ್ಯಾದೆ ಹೋಗುತ್ತದೆ.. ಆದ್ರೆ ಯಡಿಯೂರಪ್ಪನಂತ ನಾಯಕನಿಗೆ ಇದು ಬೇಕಿತ್ತಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.ಇಂದು ಸದನದಲ್ಲೂ ಯಡಿಯೂರಪ್ಪ ಏಕಾಂಗಿಯಾಗಿದ್ರು…

ಶಾಸಕ ಮಾಧುಸ್ವಾಮಿ ಬಿಟ್ರೆ ಆಡಿಯೋ ವಿಚಾರದಲ್ಲಿ ಸಮರ್ಥನೆ ಮಾಡಿಕೊಳ್ಳಲು ಬಿಜೆಪಿಯಲ್ಲಿ ಯಾರೂ ಮುಂದೆ ಬರಲಿಲ್ಲ ಅನ್ನೋದನ್ನ ಗಮನಿಸಬೇಕು… ಶಾಸಕರಾದ ಸುರೇಶ್ ಕುಮಾರ್, ಈಶ್ವರಪ್ಪ, ಆಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರು ಸದನದಲ್ಲಿದ್ದರೂ ಎದ್ದು ನಿಂತು ಸಮರ್ಥವಾಗಿ ವಾದ ಮಂಡಿಸಲಿಲ್ಲ… ಇನ್ನೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೊನೆಯಲ್ಲಿ ಬಂದು ಎರಡ್ ಮಾತಾಡಿ ಹೋದ್ರು…

ಯಡಿಯೂರಪ್ಪ ಮಾತ್ರ ಮೌನವಾಗಿ ಎಲ್ಲವನ್ನೂ ನೋಡುತ್ತಾ, ಕೇಳುತ್ತಾ ಘಾಸಿಗೊಳಗಾದವರಂತೆ ಕಂಡುಬಂದರು.ಎಲ್ಲೋ ಒಂದ್ಕಡೆ, ಯಡಿಯೂರಪ್ಪ, ತಮ್ಮ ಪಕ್ಷದವರನ್ನ ಪರಿಗಣನೆಗೆ ತೆಗೆದುಕೊಳ್ಳದೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ರಾ.. ಅಥವಾ ಯಡಿಯೂರಪ್ಪನವರನ್ನ ಮುಂದೆ ತಳ್ಳಿ ಉಳಿದ ನಾಯಕರು ತಮಾಷೆ ನೋಡ್ತಿದ್ದಾರಾ ಅನ್ನೋ ಯಕ್ಷ ಪ್ರಶ್ನೆ ಕಾಡುತ್ತಿದೆ.. ರಾಜಕಾರಣಿಗಳಿಗೆ ಅಧಿಕಾರನೇ ಉಸಿರು ನಿಜ…

ಆದ್ರೆ ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೋದ್ರೆ ಎಡವಿ ಬೀಳೋದ್ರಲ್ಲಿ ಸಂಶಯವೇ ಇಲ್ಲ.. ಇತಿಹಾಸದ ಪುಟಗಳನ್ನ ಒಮ್ಮೆ ತಿರುವಿ ಹಾಕಿದ್ರೆ ಈ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತದೆ ಎಂಬ ಮಾತಿತ್ತು ಒಂದು ಕಾಲದಲ್ಲಿ..

ಆದ್ರೆ ಕಾಲದ ಮಹಿಮೆ ನೋಡಿ ಇಂದು ಅದೇ ಯಡಿಯೂರಪ್ಪ ನಡುಗುತ್ತಿದ್ದಾರೆ.. ರಾಜ್ಯ ಕಂಡ ದುರಂತ ನಾಯಕರೆನ್ನಿಸಿಕೊಂಡು ಬಿಡ್ತಾರಾ ಯಡಿಯೂರಪ್ಪ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿದೆ… ರಾಜಹುಲಿ ಘರ್ಜಿಸುತ್ತಾ ರಾಜಮಾರ್ಗದಲ್ಲಿ ಗಾಂಭಿರ್ಯದಿಂದ ಹೆಜ್ಜೆ ಇಡಬೇಕು… ಇಲ್ಲ ಅಂದ್ರೆ ಯಡಿಯೂರಪ್ಪ ದುರಂತ ನಾಯಕರ ಸಾಲಿಗೆ ಸೇರೋದ್ರಲ್ಲಿ ಅನುಮಾನವೇ ಇಲ್ಲ..

LEAVE A REPLY

Please enter your comment!
Please enter your name here