Home District ದೋಸ್ತಿಗಳು ಬಲಕೊಟ್ಟರೂ “PM” ಆಗಲು ಸಾಧ್ಯವಿಲ್ಲ ರಾಹುಲ್.! MODI ಅಲೆ ತಡೆಯಲು ಹೋಗಿ ತಾನೇ ಹಳ್ಳಕ್ಕೆ...

ದೋಸ್ತಿಗಳು ಬಲಕೊಟ್ಟರೂ “PM” ಆಗಲು ಸಾಧ್ಯವಿಲ್ಲ ರಾಹುಲ್.! MODI ಅಲೆ ತಡೆಯಲು ಹೋಗಿ ತಾನೇ ಹಳ್ಳಕ್ಕೆ ಬೀಳುತ್ತಿದ್ಯಾ ಕಾಂಗ್ರೆಸ್.! ರಾಹುಲ್ ಪ್ರಧಾನಿ ಆಸೆಗೆ ತಣ್ಣೀರು ಎರಚಿದ್ಯಾ ಕೈ ಪಡೆಯ ಎಲೆಕ್ಷನ್ ಸ್ಟ್ಯಾಟಜಿ.!

1948
0
SHARE

ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅಂತಾ ಬಿಜೆಪಿ ಗುಟುರು ಹಾಕ್ತಾ ಇದ್ರೆ, ಮೋದಿಯನ್ನ ಸೋಲಿಸಿಯೇ ಸಿದ್ಧ ಅಂತಾ ಶತಮಾನದ ಪಕ್ಷ ಕಾಂಗ್ರೆಸ್ ಅಳಿದುಳಿದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ, ಏನಾದ್ರು ಸರಿಯೇ ಮೋದಿಯನ್ನ ಸೋಲಿಸಲೇ ಬೇಕಾದ ಒತ್ತಡದಲ್ಲಿ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದೆ, ಉತ್ತರದಿಂದ ದಕ್ಷಿಣದವರೆಗೂ ಪೂರ್ವದಿಂದ ಪಶ್ಚಿಮದವರೆಗೂ ಅಯಾ ರಾಜ್ಯದ ಪ್ರಾದೇಶಿಕ ನಾಯಕರು ರಾಹುಲ್ ಜತೆಗೆ ಕೈ ಜೋಡಿಸಲು ಸಿದ್ಧ ಅಂತಾ ಘಂಟಾ ಘೋಷವಾಗಿ ಘೋಷಣೆ ಮಾಡಿ ಬಿಟ್ಟಿದ್ದಾರೆ,

ಉತ್ತರ ಪ್ರದೇಶದಲ್ಲಿ ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಅಂಡ್ ಸನ್,  ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅಂಡ್ ಫ್ಯಾಮಿಲಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾರ್ಜಿ ಮತ್ತು ಅವರ ಅಳಿಯ, ಆಂದ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮತ್ತು ಅವರ ಪರಿವಾರ, ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷ, ಕರ್ನಾಟಕದಲ್ಲಿ ದೇವೇಗೌಡ್ರು ಮತ್ತು ಮಕ್ಕಳು, ಕೇರಳದಲ್ಲಿ ಪಿಣರಾಯಿ ವಿಜಿಯನ್ ಹಾಗು ಅವರ ಕೆಂಪು ಸೈನ್ಯ… ಹೀಗೆ ಎಲ್ಲಾ ನಾಯಕರು ಸ್ವ ಕುಟುಂಬ ಪರಿವಾರ ಸಮೇತ ಮೋದಿ ವಿರುದ್ಧ ಗೆಲುವಿಗಾಗಿ ಹೋರಾಡಲು ಸಿದ್ಧ ಅಂತಾ ಪಣ ತೊಟ್ಟಿದ್ದಾರೆ,

ಈ ಎಲ್ಲಾ ಸೋತವರ ತಂಡಕ್ಕೆ ಕ್ಯಾಪ್ಟನ್ ಆಗಿ ರಾಹುಲ್ ಮಿಂಚುತ್ತಿದ್ದಾರೆ.ಈ ಎಲ್ಲಾ ನಾಯಕರು ಒಂದಾಗಿರೋದು ಮೋದಿಯನ್ನ ಸೋಲಿಸೋದಕ್ಕೆ, ಒಂದು ವೇಳೆ ಮೋದಿ ಏನಾದ್ರು ಸೋತ್ರೆ ದೆಹಲಿ ಗದ್ದುಗೆ ಮೇಲೆ ಏರೋದು ಯಾರು, ಕಾಂಗ್ರೆಸ್ ಪಾಲಿಗೆ ಆ ಲಕ್ಕಿ ಚಾನ್ಸ್ ಒಲಿಯಲಿದ್ಯಾ, ಅಥವಾ ಥರ್ಡ್ ಫ್ರಂಟ್ ನ ನಾಯಕರಿಗೆ ಪ್ರಧಾನಿ ಸೌಭಾಗ್ಯ ಒಲಿಯಲಿದ್ಯಾ, ಯಾರಾಗಲಿದ್ದಾರೆ ಮುಂದಿನ ಪ್ರದಾನಿ?ಕೌನ್ ಬನೇಗಾ ಕರೋಡ್ ಪತಿಯ ಹಾಟ್ ಕ್ವಶ್ಚನ್ ಮಾರ್ಕ್ ನಂತಾಗಿರೋ ಈ ಪ್ರಶ್ನೆಗೆ, ಬಹಳೊಷ್ಟು ಆಪ್ಷನ್ ಗಳಿವೆ, ಆ ಆಪ್ಷನ್ ನಲ್ಲಿ ಮಮತಾ ಬ್ಯಾನರ್ಜಿ, ಮಯಾವತಿ, ರಾಹುಲ್ ಗಾಂಧಿ, ದೇವೇಗೌಡ್ರು ಹೀಗೆ ಹಲವಾರು ಆಯ್ಕೆಗಳಿವೆ, ಈ ಆಯ್ಕೆಯಲ್ಲಿ ಮೊದಲು ಕೇಳಿ ಬರುತ್ತಿರೋ ಹೆಸರು ಅಂದ್ರೆ ಅದು ರಾಹುಲ್ ಗಾಂಧಿಯದ್ದು,..

ಒಂದು ವೇಳೆ ಬಿಜೆಪಿ ಮತ್ತು ಅವರ ಮಿತ್ರ ಪಕ್ಷಕ್ಕೆ ಬಹುಮತ ಬಾರದೇ ಹೋದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗ್ತಾರ,?  ಸಧ್ಯದ ಸ್ಥಿತಿಗತಿಗಳು, ಕಾಂಗ್ರೆಸ್ ಇಡುತ್ತಿರೋ ಹೆಜ್ಜೆ, ಕೈ ಪಾಳೆಯದ ಲೆಕ್ಕಾಚಾರ ನೋಡುತ್ತಾ ಇದ್ರೆ, ರಾಹುಲ್ ಪ್ರಧಾನಿ ಆಗೋ ಚಾನ್ಸೆ ಇಲ್ಲಾ… ಇದಕ್ಕೆ ನರೇಂದ್ರ ಮೋದಿಯೂ ಒಂದು ಕಾರಣ ಆದ್ರೆ, ಮತ್ತೊಂದು ಕಾರಣವೂ ಇದೆ, ಅದು ಕಾಂಗ್ರೆಸ್ ನ ಲೆಕ್ಕಾಚಾರ, ಸ್ವತಃ ಕಾಂಗ್ರೆಸ್ ಪಕ್ಷವೇ ಮಾಡಿಕೊಂಡಿರೋ ಲೆಕ್ಕಚಾರದಂತೆ ಹೋದ್ರು ಸಹ ರಾಹುಲ್ ಗಾಂಧಿ ಪ್ರಧಾನಿ ಆಗೋದಕ್ಕೆ ಸಾಧ್ಯವಿಲ್ಲ, ಇದೊಂದಂತರ ಕಾಂಗ್ರೆಸ್ ನ ಸೆಲ್ಫ್ ಸೂಸೈಡ್, ಮೋದಿಯನ್ನ ಸೋಲಿಸಲು ಹೋಗಿ, ತನ್ನ ಹಳ್ಳವನ್ನ ತಾನೇ ತೋಡಿಕೊಳ್ಳುತ್ತಿದೆ,

ಅದು ತೃತೀಯ ಮೈತ್ರಿಕೂಟದ ಮೂಲಕ.ಮೋದಿಯನ್ನ ಸೋಲಿಸಿ ತಾನು ದೆಹಲಿ ಗದ್ದುಗೆ ಏರಬೇಕು ಅನ್ನೋದು ರಾಹುಲ್ ಗಾಂಧಿಯ ಕನಸು, ಆ ಕನಸನ್ನ ನನಸು ಮಾಡಿಕೊಳ್ಳಲು ರಾಹುಲ್ ಯಾವ ರಾಜಿ ಒಪ್ಪಂದಕ್ಕಾದ್ರು ಸಿದ್ಧವಿದ್ದಾರೆ, ಅದೇ ಕಾರಣಕ್ಕೆ ದೇಶದಾದ್ಯಂತ ವಿರುದ್ಧ ದ್ರುವಗಳಂತಿದ್ದ ಪಕ್ಷಗಳನ್ನ ಒಂದು ಗೂಡಿಸುತ್ತಿದ್ದಾರೆ, ಲೋಕಸಭಾ ಸ್ಥಾನಗಳ ಹಂಚಿಕೆಯ ಮೇಲೆ ಪ್ರಾದೇಶಿಕ ಪಕ್ಷಗಳು ಒಂದುಗೂಡುವ ಭರವಸೆಯನ್ನ ನೀಡಿದ್ದಾರೆ, ಕಾಂಗ್ರೆಸ್ ಗೆ ಟ್ರಬಲ್ ಆಗಿರೋದು ಇಲ್ಲೇ ನೋಡಿ, ದೋಸ್ತಿಪಕ್ಷಗಳ ಯಾವ ಕರಾರುಗಳನ್ನ ನಿಸ್ಸಂದೇಹವಾಗಿ ಒಪ್ಪಿತ್ತೋ, ಆ ಕರಾರುಗಳೇ ರಾಹುಲ್ ಪ್ರಧಾನಿ ಖುರ್ಚಿಯನ್ನ ದೂರ ತಳ್ಳುವಂತೆ ಮಾಡುತ್ತಿದೆ,2019ರ ಚುನಾವಣೆಗೆ ಕಾಂಗ್ರೆಸ್ ಎರಡು ತಂತ್ರಗಳನ್ನ ಹಾಕಿಕೊಂಡಿದೆ,

ಒಂದು ನೇರವಾಗಿ ಬಿಜೆಪಿಯನ್ನ ಸೋಲಿಸುವುದು ಮತ್ತೊಂದು ಕಾಂಗ್ರೆಸ್ ದುರ್ಬಲವಾಗಿರೋ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯನ್ನ ಸೋಲಿಸುವುದು. ಅದರಂತೆ ನೋಡಿದ್ರೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ತಮಿಳು ನಾಡು ಈ ಪ್ರದೇಶದಲ್ಲಿ ಕಾಂಗ್ರೆಸ್ ತುಂಬಾನೇ ದುರ್ಬಲವಾಗಿದೆ, ಈ ನಾಲ್ಕು ರಾಜ್ಯಗಳಲ್ಲೇ ಸರಿ ಸುಮಾರು 200 ಲೋಕಸಭಾ ಕ್ಷೇತ್ರಗಳಿವೆ, 200 ಕ್ಷೇತ್ರಗಳಲ್ಲಿ ಮೈತ್ರಿಯ ಪರಿಣಾಮ 35 ರಿಂದ 40 ಸ್ಥಾನಗಳಲ್ಲಿ ಅಷ್ಟೆ ಕಾಂಗ್ರೆಸ್ ಸ್ಪರ್ಧೆ ಮಾಡುವ ಅವಕಾಶವನ್ನ ಪಡೆದುಕೊಳ್ಳಲಿದೆ, ಏಕೆಂದ್ರೆ ಪಶ್ಚಿಮ ಬಂಗಾಳದಲ್ಲಿ ದೀದಿಯದ್ದೇ ಹವಾ,

ಅಲ್ಲಿ ಕಾಂಗ್ರೆಸ್ ಗೆ ದೀದಿ ಹೆಚ್ಚು ಸ್ಥಾನ ಬಿಟ್ಟುಕೊಡಲ್ಲ, ತಮಿಳು ನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳ ಆಟ ನಡೆಯಲ್ಲ, ಇನ್ನು ಉತ್ತರ ಪ್ರದೇಶದಲ್ಲಿ ಎಸ್ಪಿ, ಮತ್ತು ಬಿಎಸ್ಪಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರೋದ್ರಿಂದ ಸಹಜವಾಗಿಯೇ ಎರಡು ಪಕ್ಷಗಳು ತೆಗೆದುಕೊಂಡು ಬಿಟ್ಟ ಸ್ಥಾನಗಳನ್ನ ಕಾಂಗ್ರೆಸ್ ಪಡೆದುಕೊಳ್ಳ ಬೇಕು, ಆ ಕಾರಣಕ್ಕೆ ಕಾಂಗ್ರೆಸ್ ಗೆ ಇಲ್ಲಿ ಹೆಚ್ಚಿನ ಸ್ಥಾನ ಲಭ್ಯವಿಲ್ಲ., ಸೋ 200 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸಿಗೋದು ಜೆಸ್ಟ್ 40 ಸ್ಥಾನಗಳು ಮಾತ್ರ.ರಾಹುಲ್ ಗಾಂಧಿ ಗೆಲುವಿಗೆ ಮೊದಲು ಅಡ್ಡಗಾಲು ಹಾಕಿರೋದೇ ಇಲ್ಲಿ ನೋಡಿ,

ಅಂದ ಹಾಗೆ ಕಾಂಗ್ರೆಸ್ ಹಲವಾರು ರಾಜ್ಯಗಳಲ್ಲಿ ಮೈತ್ರಿಗೆ ಅಸ್ತು ಅಂದಿದೆ, ಅದ್ರಂತೆ ಕರ್ನಾಟಕದಲ್ಲಿ ಜೆಡಿಎಸ್ ನೊಂದಿಗೆ ಕೈ ಜೋಡಿಸಿದೆ, ಇಲ್ಲಿರೋ 28 ಸ್ಥಾನಗಳಲ್ಲಿ ಹೊಂದಾಣಿಕೆಯಿಂದ ಕಾಂಗ್ರೆಸ್ ಸ್ಪರ್ಧಿಸೋದು 20 ರಿಂದ 22 ಸ್ಥಾನಕ್ಕೆ, ಬಿಹಾರದಲ್ಲಿ ಆರೆಜೆಡಿ ಮತ್ತು ಎಚ್, ಎ, ಎಮ್ ನೊಂದಿಗೆ ಮೈತ್ರಿ ಮಾಡಿಕೊಳ್ಳೋದ್ರಿಂದ ಅಲ್ಲಿ ಕೈಗೆ ದಕ್ಕೋದು 8 ರಿಂದ 10 ಸ್ಥಾನ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಸಿಗೋದು 8 ರಿಂದ 10 ಸ್ಥಾನ, 80 ಸ್ಥಾನಗಳಿದ್ರು ಅಲ್ಲಿ ಎಸ್ಪಿ ಮತ್ತು ಬಿಎಸ್ಪಿಯದ್ದೇ ರಾಜ್ಯಭಾರ, ಪಶ್ಚಿಮ ಬಂಗಾಳದಲ್ಲೂ ದೀದಿ ಕೃಪೆಯಿಂದ ಕಾಂಗ್ರೆಸ್ ಗೆ ಸಿಗೋದು 8 ರಿಂದ 10 ಸ್ಥಾನಗಳು ಮಾತ್ರ,

ತಮಿಳು ನಾಡಿನಲ್ಲಿ ಹೆಚ್ಚೆಂದ್ರೆ 7 ರಿಂದ 9 ಸ್ಥಾನಗಳು ಸಿಗಬಹುದು, ಆಂಧ್ರ ಪ್ರದೇಶದಲ್ಲಿ 8 ರಿಂದ 10 ಸಿಕ್ರೆ, ತೆಲಂಗಾಣದಲ್ಲಿ 10 ರಿಂದ 12 ಸ್ಥಾನ ಸಿಗಬಹುದು.  ಮಹಾರಾಷ್ಟ್ರದಲ್ಲಿ 24 ರಿಂದ 26 ಸ್ಥಾನ ಸಿಕ್ರೆ, ಜಮ್ಮು ಕಾಶ್ಮೀರದಲ್ಲಿ 3 ಸ್ಥಾನ ಸಿಗಲಿದೆ, ಇನ್ನುಳಿದಂತೆ ಝಾರ್ಖಂಡ್ ನಲ್ಲಿ 10 ರಿಂದ 12 ಸ್ಥಾನ ಸಿಗಲಿದೆ, ಒಟ್ಟಾರೆ 339 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡೋದು 106 ರಿಂದ 124 ಸ್ಥಾನಗಳಲ್ಲಿ ಮಾತ್ರ.ಇದೇ ಕಾರಣಕ್ಕಾಗಿಯೇ ನಾವು ಹೇಳಿದ್ದು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸೆಲ್ಫ್ ಸೂಸೈಡ್ ಮಾಡಿಕೊಂಡಿದೆ ಅಂತಾ, ಪ್ರಮುಖ ರಾಜ್ಯದಲ್ಲಿನ 339 ಸ್ಥಾನಗಳ ಪೈಕಿ ಸ್ಪರ್ಧೆ ಮಾಡೋದೆ 106 ರಿಂದ 124 ಸ್ಥಾನಗಳು ಅಂದ ಮೇಲೆ ಅದ್ರಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೋ ಗೊತ್ತಿಲ್ಲ,

ಕಡಿಮೆ ಸ್ಥಾನದಲ್ಲಿ ಗೆದ್ದು ಪ್ರಧಾನಿ ಪಟ್ಟಕ್ಕೆ ಆಸೆ ಪಟ್ರೆ ತೃತೀಯ ರಂಗದ ನಾಯಕರು ದಂಗೆ ಏಳುತ್ತಾರೆ, ಆ ಕಾರಣಕ್ಕೆ ರಾಹುಲ್ ಪ್ರದಾನಿ ಆಗೋದಕ್ಕೆ ಚಾನ್ಸೆ ಇಲ್ಲಾ ಅನ್ನೋ ರಾಜಕೀಯ ಲೆಕ್ಕಾಚಾರಗಳು ಹೇಳುತ್ತಿವೆ.2014ರ ಚುನಾವಣೆಯಲ್ಲಿ ಕಾಂಗ್ರೆಸ್ 464 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು, ಉಳಿದಂತೆ 79 ಸ್ಥಾನಗಳನ್ನ ತನ್ನ ಮೈತ್ರಿಕೂಟಕ್ಕೆ ಬಿಟ್ಟುಕೊಟ್ಟಿತ್ತು, ಶೇಕಡಾವಾರು 85 ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ರೆ, ಮೈತ್ರಿ ಕೂಟ ಪ್ರತಿಶತ 15 ರಲ್ಲಿ ಸ್ಪರ್ಧೆಗೆ ಅವಕಾಶ ಪಡೆದುಕೊಂಡಿತ್ತು, ಹಾಗಿದ್ರು ಸಹ ಮೋದಿ ಅಲೆಯಲ್ಲಿ ಯುಪಿಎ ಒಕ್ಕೂಟ ಕೊಚ್ಚಿ ಹೋಗಿತ್ತು, ಮುಂದೆ ಬರಲಿರೋ 2019 ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಸಂಪೂರ್ಣವಾಗಿ ಬದಲಾಗಿದೆ. 2019ರಲ್ಲಿ ಕಾಂಗ್ರೆಸ್ 319 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಮಿತ್ರ ಪಕ್ಷಗಳು 224 ಸ್ಥಾನಗಳನ್ನ ಗಳಿಸಿಕೊಂಡಿವೆ,

ಶೇಕಡಾವಾರು 59 ಸ್ಥಾನಗಳು ಕಾಂಗ್ರೆಸ್ ಗೆ ಹೋದ್ರೆ, ಮೈತ್ರಿಕೂಟಕ್ಕೆ ಶೇಕಡಾ 41 ಸ್ಥಾನಗಳು ಹೋಗಿವೆ. 2014 ರಲ್ಲಿ ಇದ್ದ ಸ್ಥಾನಗಳಿಗಿಂತ ಈ ಬಾರಿ ಕಾಂಗ್ರೆಸ್ 150 ಸ್ಥಾನಗಳನ್ನ ಕಡಿಮೆ ಮಾಡಿಕೊಂಡಿದೆ.ಸೋ ಪರಿಸ್ಥಿತಿ ಹೀಗಿದ್ದ ಮೇಲೆ ಕಾಂಗ್ರೆಸ್ 319 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ ಗೆಲ್ಲುವುದು ಎಷ್ಟು ಸ್ಥಾನಗಳು ಅನ್ನೋದು ಇಲ್ಲಿ ನಿರ್ಧರಿತವಾಗುತ್ತೆ, ಅಲ್ಲದೆ ಇತರೆ ರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿರೋದ್ರಿಂದ ಪ್ರಾದೇಶಿಕ ಪಕ್ಷಗಳು ಪ್ರಧಾನಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದು ಕುಳಿತುಕೊಳ್ಳೋದ್ರಲ್ಲಿ ಅನುಮಾನವಿಲ್ಲ,

ಯಾಕೆಂದ್ರೆ ತೃತೀಯ ರಂಗದಲ್ಲಿ ಇರೋ ಎಲ್ಲಾ ನಾಯಕರಿಗೂ ರಾಹುಲ್ ಗೆ ವಯಸ್ಸಾದಷ್ಟು ರಾಜಕೀಯ ಅನುಭವವಿದೆ, ಆದ್ದರಿಂದ ರಾಹುಲ್ ಗೆ ಈ ಭಾರಿ ಪ್ರಧಾನಿ ಪಟ್ಟ ಸಿಗೋದು ಆಲ್ ಮೋಸ್ಟ್ ಡೌಟೇ..ಒಟ್ಟಾರೆ ಅತ್ತ ಬಿಜೆಪಿ ಮೋದಿ ಮತ್ತೊಮ್ಮೆ ಎನ್ನುತ್ತಿದೆ, ಇತ್ತ ರಾಹುಲ್ ಗಾಂಧಿ ನಾನೇ ಮುಂದಿನ ಪ್ರಧಾನಿ ಎನ್ನುತ್ತಿದ್ದಾರೆ, ತೃತೀಯ ರಂಗದಲ್ಲೂ ಪ್ರಧಾನಿ ಪಟ್ಟಕ್ಕಾಗಿ ಕಣ್ಣಿಟ್ಟಿದ್ದಾರೆ, ಯಾರೆಲ್ಲಾ ಪ್ರಧಾನಿ ಪಟ್ಟಕ್ಕಾಗಿ ಹೋರಾಡಿ ಕೊನೆಗೆ ಯಾರು ಗೆಲ್ಲುತ್ತಾರೆ ಅನ್ನೋದಕ್ಕೆ 2019ಕ್ಕೆ ಉತ್ತರ ಸಿಗಲಿದೆ, ಆ ಉತ್ತರ ರಾಷ್ಟ್ರವಾಸಿಗಳ ಕೈಯಲ್ಲಿದೆ, 2019 ಪ್ರದಾನಿ ಯಾರ್ ಆಗ್ತಾರೆ ಕಾಂಗ್ರೆಸ್ ಆಸೆ ಫಲಿಸುತ್ತಾ, ಮೋದಿ ಮತ್ತೆ ರಾಜನಾಗ್ತಾರ, ಇಬ್ಬರನ್ನು ಹೊರತು ಪಡಿಸಿ ಬೇರೆ ಯಾರಿಗಾದ್ರು ಲಕ್ ಹೊಡೆಯುತ್ತಾ ಕಾದು ನೋಡಬೇಕು ಅಷ್ಟೆ.

LEAVE A REPLY

Please enter your comment!
Please enter your name here