Home District ದೋಸ್ತಿ ಟೀಂಗೆ ದಿಢೀರ್ ಶಾಕ್; ಫಸ್ಟ್ ವಿಕೆಟ್ ಮಹೇಶ್ ಔಟ್.! ಇನ್ನೆರಡು ತಿಂಗಳಲ್ಲಿ ರಚನೆಯಾಗುತ್ತಂತೆ...

ದೋಸ್ತಿ ಟೀಂಗೆ ದಿಢೀರ್ ಶಾಕ್; ಫಸ್ಟ್ ವಿಕೆಟ್ ಮಹೇಶ್ ಔಟ್.! ಇನ್ನೆರಡು ತಿಂಗಳಲ್ಲಿ ರಚನೆಯಾಗುತ್ತಂತೆ ಬಿಜೆಪಿ ಗೌವರ್ನಮೆಂಟ್.! ಹಳೆಕೋಟೆಯನ್ನ ವಶಪಡಿಸಿಕೊಳ್ಳುಲು ಡಿಕೆ ಶಿವಕುಮಾರ್ ಸಿದ್ಧ.!

635
0
SHARE

ಸಧ್ಯ ರಾಜ್ಯ ರಾಜಕಾರಣದಲ್ಲಿ ಮೇಜರ್ ಡೆವಲಪ್ ಮೆಂಟ್ ಗಳಾಗುತ್ತಿದೆ. ಚುನಾವಣೆ ಘೋಷಣೆಯಾದಿಗಿನಂದ ಮೈತ್ರಿ ಮಾಡಿಕೊಂಡಿದ್ದ ಬಿಎಸ್ ಬಿ ಜೆಡಿಎಸ್ ಗೆ ಕೈ ಕೊಟ್ಟಿದೆ. ಒಬ್ಬರೇ ಒಬ್ಬರು ಶಾಸಕರು ರಾಜಿನಾಮೆ ಕೊಟ್ಟಿರೋದು ಮೈತ್ರಿ ಸರ್ಕಾರಕ್ಕೆ ಅಂತಹ ತಲೆನೋವು ಏನು ಆಗೋದಿಲ್ಲ, ಆದ್ರೀ ಈ ಬೆಳವಣೆಗೆ ಮುಂದೇ ದೊಡ್ಡ ಎಡವಟ್ಟಿಗೆ ಕಾರಣವಾಗಲಿದೆ ಅಂತಾ ಹೇಳಲಾಗುತ್ತಿದೆ. ಅಷ್ಟಕ್ಕೂ ಬಿಎಸ್ ಪಿಯ ಮಹೇಶ್ ರಾಜೀನಾಮೆ ಕೊಟ್ಟಿದ್ದೇಕೆ. ಈ ರಾಜಕೀಯ ಪ್ರವಹನ ಮುಂದೆ ಯಾವ ಬೆಳವಣಿಗೆಗೆ ಸಹಕಾರಿಯಾಗಲಿದೆ..

ಈ ಸಮ್ಮಿಶ್ರ ಸರ್ಕಾರ ಅದ್ಯಾ ಘಳಿಗೆಯಲ್ಲಿ ರಚನೆ ಆಯ್ತೋ ಗೊತ್ತಿಲ್ಲ, ದಿನಕ್ಕೊಂದರಂತೆ, ಕ್ಷಣಕ್ಕೊಂದರಂತೆ ಮೇಲಿಂದ ಮೇಲೆ ಪೆಟ್ಟು ತಿನ್ನುತ್ತಲೇ ಇದೆ, ಅಂತ ಕಾಂಗ್ರೆಸ್ ಪಕ್ಷದ್ದು ಒಂದು ನಡೆಯಾದ್ರೆ, ಇತ್ತ ಜೆಡಿಎಸ್ ಪಕ್ಷದ್ದು ಮತ್ತೊಂದು ನಡೆ. ಇದೊಂತರ ಎತ್ತು ಏರಿಗೆಳಿದ್ರೆ ಕೋಣ ನೀರಿಗೆ ಎಳೀತು ಅನ್ನೋ ಪರಿಸ್ಥಿತಿ, ಇದ್ರ ನಡುವೆ ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಗೆದ್ದು ಸಚಿವ ಸ್ಥಾನ ಅಲಂಕರಿಸಿದ್ದ ಬಿಎಸ್ ಪಿಯ ಶಾಸಕ ಮಹೇಶ್ ರಾಜೀನಾಮೆ. ಈ ಎಲ್ಲಾ ಬೆಳವಣಿಗೆಗಳು ರಾಜಕೀಯವಾಗಿ ಬೇರೆಯದ್ದೇ ಮುನ್ಸೂಚನೆಯನ್ನ ನೀಡುತ್ತಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಬಿಎಸ್‌ಪಿಯ ಎನ್‌.ಮಹೇಶ್‌ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೂಂದು ಧ್ರುವೀಕರಣವಾಗುತ್ತಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.  ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌-ಬಿಎಸ್‌ಪಿ  ಮೈತ್ರಿಕೂಟದಡಿ ಸ್ಪರ್ಧೆ ಮಾಡಿ 20  ಸ್ಥಾನ ಗೆಲ್ಲುವ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್‌ಗೆ ಬಿಎಸ್‌ಪಿಯ ನಿಲುವು ಶಾಕ್‌ ನೀಡಿದೆ. ಉಪ ಚುನಾವಣೆಯಲ್ಲೂ ಪರಿಣಾಮ ಬೀರುವ ಆತಂಕವೂ ಕಾಡುತ್ತಿದೆ.

ದೇಶವ್ಯಾಪಿ ಬಿಜೆಪಿ ಹಾಗೂ ನರೇಂದ್ರ ಮೋದಿ ಎದುರಿಸಲು “ಮಹಾಘಟಬಂಧನ್‌’ ರಚನೆಯ ಮುಂಚೂಣಿಯಲ್ಲಿದ್ದ ಬಿಎಸ್‌ಪಿಯ ಮಾಯಾವತಿ ಕಳೆದ ವಾರ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ ಎಂದು ಘೋಷಿಸಿದಾಗಲೇ ಇಂತದ್ದೊಂದು ಸುಳಿವು ಸಿಕ್ಕಿತ್ತು.  ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಬಿಎಸ್‌ಪಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಅಥವಾ ಮಾಹಾಘಟ್‌ ಬಂಧನ್‌ ಭಾಗವಾಗದಿದ್ದರೆ ದಲಿತ ಮತಬ್ಯಾಂಕ್‌ ಚದುರಿ ಕರ್ನಾಟಕದಲ್ಲೂ  ಕಾಂಗ್ರೆಸ್‌ಗೆ ಹಿನ್ನೆಡೆಯುಂಟಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಎಸ್‌ಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ಐದರಿಂದ ಆರು ಕ್ಷೇತ್ರಗಳಲ್ಲಿ ಹಿನ್ನೆಡೆಯುಂಟಾಗಲಿದೆ. ಪ್ರಮುಖವಾಗಿ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಕಲಬುರಗಿ, ವಿಜಯಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತಬ್ಯಾಂಕ್‌ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.ಸಮ್ಮಿಶ್ರ ಸರ್ಕಾರದಿಂದ ಬಿಎಸ್‌ಪಿ ಸಚಿವನ ನಿರ್ಗಮನ ರಾಜ್ಯ ರಾಜಕೀಯ ಅದರಲ್ಲೂ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರುವುದು ಮೇಲ್ನೋಟಕ್ಕೆ ಸ್ಪಷ್ಟ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಹಾಗೂ ಜೆಡಿಎಸ್‌ ಜತೆ ಮೈತ್ರಿ ಬಗ್ಗೆ  ಕೆಲವು ನಾಯಕರ ವಿರೋಧದಿಂದ.ಕುಮಾರಸ್ವಾಮಿ ಸಹ ತೀವ್ರ ಅಸಮಾಧಾನಗೊಂಡಿದ್ದು, ಲೋಕಸಭೆ ಚುನಾವಣೆ ವೇಳೆಗೆ ಬೇರೆ ರೀತಿಯ ಬೆಳವಣಿಗೆ ನಡೆದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.ಬಿಎಸ್‌ಪಿ ಜೆಡಿಎಸ್‌ ಜತೆಗಿನ ಮೈತ್ರಿ ಮುಂದುವರಿಸುವ ಜಾಣತನ ತೋರಿರುವುದು ರಾಜ್ಯದ ಮಟ್ಟಿಗೆ ಕೆಲವು ಅನುಮಾನ ಹುಟ್ಟುಹಾಕಿದೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೂಂದು ಸುತ್ತಿನ ರಾಜಕೀಯ ಪಲ್ಲಟ ನಡೆಯಲಿದ್ದು ಅದರ ಸೂತ್ರದಾರಿ ಬಿಎಸ್‌ಪಿಯ ಮಾಯಾವತಿ ಆಗಲಿದ್ದಾರೆ.

ಆಗಿನ ಸಂದರ್ಭದಲ್ಲಿ ಜೆಡಿಎಸ್‌ ನೆರವಿಗೆ ಮಾಯಾವತಿ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ  ಐದು ಕ್ಷೇತ್ರಗಳ ಉಪ ಚುನಾವಣೆ ಹಾಗೂ ಮುಂದಿನ 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯುಂಟು ಮಾಡುವುದೇ ಬಿಎಸ್‌ಪಿ ಸಚಿವ ಸಮ್ಮಿಶ್ರ ಸರ್ಕಾರದಿಂದ  ನಿರ್ಗಮಿಸಿರುವ ಹಿಂದಿನ ಕಾರ್ಯತಂತ್ರ ಎಂದೂ ಹೇಳಲಾಗಿದೆ.ಮಾಯಾವತಿ ನಿರ್ಧಾರದಿಂದ ಕಾಂಗ್ರೆಸ್‌ನ ಹಿರಿಯ ನಾಯಕರು ಆಕ್ರೋಶಗೊಂಡಿದ್ದಾರೆ.

ಇದಾದ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಸಚಿವ ಮುಂದುವರಿಯುವುದು ಬೇಡ ಎಂಬ ನಿಲುವಿಗೆ ಮಾಯಾವತಿ ಬಂದಿದ್ದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ  ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುವಾಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಾಲುದಾರಿಕೆಯ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇರುವುದು ಸರಿಯಲ್ಲ ಎಂದು ಮಹೇಶ್‌ ರಾಜೀನಾಮೆ ಕೊಡಿಸುವ ನಿರ್ಧಾರ ಮಾಡಿದ್ದರು. ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಸಹ ಬಿಎಸ್‌ಪಿ ನಿಲುವು ವಿಚಾರದಲ್ಲಿ ಬೇಸರಗೊಂಡಿತ್ತು. ಈ ವಿಚಾರ ಮಾಯಾವತಿವರೆಗೂ  ಹೋಗಿತ್ತು. ಇದಾದ ನಂತರ ಮಾಯಾವತಿ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಭಾಗವಾಗಿರುವುದು ಬೇಡ ಎಂದು ಫ‌ರ್ಮಾನ ಹೊರಡಿಸಿದರು.

ಮೂರು ದಿನಗಳ ಹಿಂದೆಯೇ ರಾಜೀನಾಮೆ ಕೊಡುವಂತೆ ಎನ್‌.ಮಹೇಶ್‌ ಗೆ ಸೂಚನೆ ನೀಡಲಾಗಿತ್ತು. ಅದಕ್ಕಾಗಿಯೇ ಪಕ್ಷದ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ್ ಕರ್ನಾಟಕಕ್ಕೆ ಕಳುಹಿಸಲಾಗಿತ್ತು  ಎಂದು ಹೇಳಲಾಗುತ್ತಿದೆ.ಸಧ್ಯಕ್ಕೆ ಸಮ್ಮೀಶ್ರ ಸರ್ಕಾರದ ಒಂದು ವಿಕೆಟ್ ಬಿದ್ದಿದೆ. ಮುಂದಿನ ದಿನದಲ್ಲಿ ಮಹತ್ತರವಾದ ಬದಲಾವಣೆಯ ಸೂಚನೆ ಸಿಕ್ಕಿದೆ. ಈ ಎಲ್ಲಾ ಬೆಳವಣಿಗೆಯನ್ನ ನೋಡುತ್ತಿರೋ ಬಿಜೆಪಿ ಇನ್ನೇನು ಎರಜೇ ತಿಂಗಳಲ್ಲಿ ಸರ್ಕಾರ ರಚಿಸಿವುದಾಗಿ ಹೇಳಿ ಕೊಳ್ಳುತ್ತಿದೆ. ಆದಕ್ಕೆ ತಕ್ಕಂತ ತಯಾರಿಯನ್ನು ಮಾಡಿಕೊಳ್ತಾ ಇದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಯುದ್ಧ ನಡೆಯುದು ಪಕ್ಕ, ಅಲ್ಲಿ ಜೆಡಿಎಸ್ ಕಾಂಗ್ರೆಸ್ ಸಮಸ್ಯೆ ಇಲ್ಲ, ಯಾಕೆಂದ್ರೆ ಅಲ್ಲಿ ಜೆಡಿಎಸ್ ಅಸ್ತಿತ್ವದಲ್ಲೇ ಇಲ್ಲ, ಇನ್ನುಳಿದಂತೆ ಶಿವಮೊಗ್ಗ, ರಾಮನಗರ, ಮಂಡ್ಯದಲ್ಲಿ ದೋಸ್ತಿಗಳ ಒಳ ಜಗಳ ಬುಸುಗುಡುತ್ತಲೇ ಇದೆ. ಈ ಒಳಜಗಳ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ಅನ್ನೋದು ಸಧ್ಯಕ್ಕಿರೋ ಯಕ್ಷ ಪ್ರಶ್ನೆ. ಒಟ್ಟಾರೆ ಯಾರಿಗೂ ಬೇಡವಾಗಿದ್ದ  ಬೈ ಎಲೆಕ್ಷನ್ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಈ ಬೈ ಎಲೆಕ್ಷನ್ ನಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ, ಆ ಎಲ್ಲಾ ಪ್ರಶ್ನೆಗೂ ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ ಅಲ್ಲಿವರೆಗೂ ವೇಯ್ಟ್ ಅಂಡ್ ವಾಚ್.

LEAVE A REPLY

Please enter your comment!
Please enter your name here