ಮೈತ್ರಿ ಸರ್ಕಾರದಲ್ಲಿ ಕೊನೆಗು ಎರಡೂ ಪಕ್ಷಗಳು ಒಮ್ಮತಕ್ಕೆ ಬಂದು ಖಾತೆ ಹಂಚಿಕೆ ಮಾಡಿದ್ದಾರೆ, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮೈತ್ರಿ ಸರ್ಕಾರದ ಖಾತೆ ಹಂಚಿಕೆ ಬಗ್ಗೆ ತಿಳಿಸಿದ್ರು.ಇನ್ನೂ ಸಮನ್ವಯ ಸಮಿತಿ ರಚನೆಯಾಗಿದ್ದು ಸಮಿತಿಗೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸಿ ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ.
ಕಾಂಗ್ರೆಸ್ ಗೆ 22 ಖಾತೆ ಮತ್ತು ಜೆಡಿಎಸ್ 12 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್ 5 ವರ್ಷವೂ ಕುಮಾರಸ್ವಾಮಿಯೇ ಸಿಎಂ ಆಗಿರಲಿದ್ದಾರೆ ಅಂತಾ ಘೋಷಿಸಿದ್ರು.ಇನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮೈತ್ರಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ,
ಕಾಂಗ್ರೆಸ್ಗೆ ಗೃಹ, ಕೃಷಿ, ಬೆಂಗಳೂರು ನಗರಾಭಿವೃದ್ಧಿ, ಜಲ ಸಂಪನ್ಮೂಲ-ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಸತಿ, ವೈದ್ಯಕೀಯ ಶಿಕ್ಷಣ, ಕಾರ್ಮಿಕ, -ಕೈಗಾರಿಕೆ, ಸಕ್ಕರೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ, ಗಣಿ ಮತ್ತು ಭೂ ವಿಜ್ಞಾನ-ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅರಣ್ಯ ಮತ್ತು ಪರಿಸರ, ಆಹಾರ ಮತ್ತು ನಾಗರೀಕ ಸರಬರಾಜು,.
ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ-ಬಿಟಿ-ಹಜ್, ವಕ್ಫ್, ಬಂದರು ಮತ್ತು ಒಳನಾಡು ಸಾರಿಗೆ, ಮುಜರಾಯಿ ಖಾತೆ-ಕ್ರೀಡೆ ಮತ್ತು ಯುವಜನ ಸೇವೆ ಖಾತೆ, -ಕಾನೂನು ಮತ್ತು ಸಂಸದೀಯ ವ್ಯವಹಾರ ಸೇರಿ 22 ಖಾತೆ ಕಾಂಗ್ರೆಸ್ಗೆ.ಜೆಡಿಎಸ್ಗೆ ಹಣಕಾಸು, ಅಬಕಾರಿ ಖಾತೆ, ಇಂಧನ, ಸಾರಿಗೆ,-ಲೋಕೋಪಯೋಗಿ, ಶಿಕ್ಷಣ(ವೈದ್ಯಕೀಯ ಶಿಕ್ಷಣ ಹೊರತು ಪಡಿಸಿ).
ಪಶುಸಂಗೋಪನೆ ಮತ್ತು ಮೀನುಗಾರಿಗೆ, ತೋಟಗಾರಿಕೆ & ರೇಷ್ಮೆ, -ಪ್ರವಾಸೋದ್ಯಮ ಖಾತೆ, ಸಹಕಾರ ಖಾತೆ-ವಾರ್ತಾ ಮತ್ತು ಸಾಂಖ್ಯಿಕ ಖಾತೆ, ಗುಪ್ತಚರ ಜೆಡಿಎಸ್ಗೆ-ಸಣ್ಣನೀರಾವರಿ ಸೇರಿ ಒಟ್ಟು 12 ಖಾತೆಗಳು ಜೆಡಿಎಸ್ಗೆ.ಇನ್ನೂ ಎರಡು ಪಕ್ಷಗಳ ನಡುವೆ ಖಾತೆಗಳ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು ತಮ್ಮ ಮೈತ್ರಿ ಸರ್ಕಾರದ ಆಡಳಿತಕ್ಕೆ ಏಕಮೇವ ಅಜೆಂಡಾ ನೀತಿಯನ್ನು ಅನುಸರಿಸಲು ಒಪ್ಪಂದ ಮಾಡಿಕೊಂಡಿದ್ದಾರೆ.
ಇನ್ನೂ ಲೋಕಸಭಾ ಚುನಾವಣೆಗೂ ಜೆಡಿಎಸ್ – ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಗೆ ಒಪ್ಪಂದ ಮಾಡಿಕೊಂಡಿವೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ವೇಣುಗೋಪಾಲ್, ಡ್ಯಾನಿಶ್ ಅಲಿ, ಪರಮೇಶ್ವರ್ 5 ಜನರನ್ನು ಈ ಸಮನ್ವಯ ಸಮಿತಿ ಸಭೆ ಹೊಂದಿರುತ್ತದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ಸುಗಮವಾಗಿ ಸಾಗಲು 6 ಸೂತ್ರಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಕೆ.