Home Crime ಧರ್ಮಸ್ಥಳದ ವಸತಿ ಗೃಹದಲ್ಲಿ ‘ದಂಪತಿ ನಿಗೂಢ ಆತ್ಮಹತ್ಯೆ’..!!! “ರಾಜಕೀಯ ಕಾರಣಕ್ಕೆ ಸಾವಿಗೆ ಶರಣು.??!”

ಧರ್ಮಸ್ಥಳದ ವಸತಿ ಗೃಹದಲ್ಲಿ ‘ದಂಪತಿ ನಿಗೂಢ ಆತ್ಮಹತ್ಯೆ’..!!! “ರಾಜಕೀಯ ಕಾರಣಕ್ಕೆ ಸಾವಿಗೆ ಶರಣು.??!”

1098
0
SHARE

ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಉದ್ಯಮಿ ಮತ್ತು ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಮೃತ್ಯುಂಜಯ ಪಾಟೀಲ್ ಮತ್ತು ಪತ್ನಿ ನೇತ್ರಾವತಿ ಮೃತಪಟ್ಟವರು…

ಹಾವೇರಿ ಜಿಲ್ಲೆ ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಸೋದರ ಸಂಬಂಧಿಯಾಗಿರುವ ಮೃತ್ಯುಂಜಯ ಪಾಟೀಲ್, ಈ ಸಲದ ಚುನಾವಣೆಯಲ್ಲಿ ಹಣದ ವ್ಯವಹಾರ ನೋಡಿಕೊಳ್ತಿದ್ದರು ಎನ್ನಲಾಗಿದೆ.ಮಂಗಳವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸಿದ್ದ ದಂಪತಿ, ಸಂಜೆ ಹೊತ್ತಿಗೆ ವೈಶಾಲಿ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

 ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ರಾಜಕೀಯದಲ್ಲಿ ಹಣ, ಹೆಂಡದಿಂದ ಕೀಳುಮಟ್ಟಕ್ಕೆ ಇಳಿದಿದೆ.ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಇದ್ರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಉಲ್ಲೇಖಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here