Home Crime ನಂದೆಲ್ಲಿಡ್ಳಿ ಅಂತಾ ಬಂದ ಸಂಬಂಧಿಕನು ಮಾಡಿದ ದೋಖಾದಿಂದ ಪ್ರೀತಿಸಿದವಳ ಕತ್ತು ಸೀಳಿ ತಾನು ಸೂಸೈಡ್..!!

ನಂದೆಲ್ಲಿಡ್ಳಿ ಅಂತಾ ಬಂದ ಸಂಬಂಧಿಕನು ಮಾಡಿದ ದೋಖಾದಿಂದ ಪ್ರೀತಿಸಿದವಳ ಕತ್ತು ಸೀಳಿ ತಾನು ಸೂಸೈಡ್..!!

1634
0
SHARE

ಅವ್ರು ಇಬ್ಬರು ಮದುವೆಯಾಗಿಲ್ಲ ಅದ್ರು ಇಬ್ಬರು ಲಿವಿಂಗ್ ಟು ಗೇದರ್ ರಿಲೇಶನ್ ಷಿಪ್ ನಲ್ಲಿ ಇದ್ರು. 15 ವರ್ಷಗಳಿಂದ ಅನ್ಯೋನ್ಯವಾಗಿದ್ದ ಆ ಇಬ್ಬರು ಇವತ್ತು ಶವವಾಗಿ ಪತ್ತೆಯಾಗಿದ್ದಾರೆ. ಇಷ್ಟಕ್ಕೂ ಆ ಜೋಡಿ ಸ್ಯೂಸೈಡ್ ಮಾಡಿಕೊಂಡಿರೋದಾ..ಒಬ್ಬರು ನೆಲದಲ್ಲಿ, ಮತ್ತೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರೋ ಇವ್ರ ಹೆಸ್ರು ರವೀಂದ್ರನ್ ಹಾಗೂ ಆತನ ಜೊತೆಗಾತಿ ಉಮಾ.

ಬೆಂಗಳೂರಿನ ವಿವೇಕನಗರ ನಿವಾಸಿಗಳು. ಸುಮಾರು 15 ವರ್ಷಗಳಿಂದ ಒಟ್ಟಿಗೆ ಜೊತೆಯಲ್ಲಿದ್ರು. ಇನ್ನು ಹೊಟ್ಟೆಪಾಡಿಗಾಗಿ ನವೀನ್ ಫ್ಯಾರಡೈಸ್ ಎಂಬ ಬಟ್ಟೆ ಅಂಗಡಿ ನಡೆಸ್ತಿದ್ದು, ಇಬ್ಬರು ಸಂತೋಷವಾಗಿದ್ರು. ಆದ್ರೆ, ಇವ್ರ ನೆಮ್ಮದಿ ಕೆಡಿಸೋದಕ್ಕೆ ಅಂತಲೆ ಇವ್ರ ಮಧ್ಯೆ ರವೀಂದ್ರನ್ ಸಂಬಂಧಿಯೊಬ್ಬರು ಎಂಟ್ರಿ ಕೊಟ್ಟಿದ್ರು.

ಹಾಗೆ ಎಂಟ್ರಿ ಕೊಟ್ಟವ್ರು ರವೀಂದ್ರನ್ ಮನೆಯ ಮೇಲೆ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡಿದ್ರಂತೆ. ಆದ್ರೆ, ಆ ಸಾಲ ತೀರಿಸದ ರವೀಂದ್ರನ್ ಸಂಬಂಧಿಕರು ವಿದೇಶಕ್ಕೆ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಸಾಲ ತೀರಿಸೋ ಜವಾಬ್ಧಾರಿಯೂ ರವೀಂದ್ರನ್ ಮೇಲೆ ಬಿದ್ದಿದ್ದು, ಸರಿಯಾಗಿ ಕಂತುಗಳನ್ನ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್ ನವ್ರು ಮನೆ ಹತ್ತಿರ ಬರೋದಲ್ದೇ, ಕೋರ್ಟ್ ನಿಂದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆರ್ಡರ್ ತಂದಿದ್ರಂತೆ.

ಇದ್ರಿಂದಾಗಿ ಹಣ ಕಟ್ಟಲಾಗದೇ, ಸುಮ್ನೆ ಇರಲಾರದೇ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರಕ್ಕೆ ಬಂದಿದ್ದಾರೆ.ಹಾಗೆ ಸೂಸೈಡ್ ಮಾಡಿಕೊಳ್ಳಲು ನಿರ್ಧಾರ ತೆಗೆದುಕೊಂಡ ರವೀಂದ್ರನ್ ಹಾಗೂ ಉಮಾ ಕೆಲ್ಸ ಮುಗಿಸದ ಬಳಿಕ ಬಟ್ಟೆ ಅಂಗಡಿಯಲ್ಲೆ ಉಳಿದುಕೊಂಡಿದ್ದು, ಇಬ್ಬರಲ್ಲಿ ಒಬ್ಬರು ಸತ್ರೂ, ಇನ್ನೋಬ್ಬರು ಒಂಟಿಯಾಗ್ತಾರೆ ಅಂತ ತೀರ್ಮಾನ ತೆಗೆದುಕೊಂಡು ಮೊದಲಿಗೆ ಉಮಾಳ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ರವೀಂದ್ರನ್ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇತ್ತ ನೆರೆ ಹೊರೆ ಅಂಗಡಿಯವ್ರು ಶುಕ್ರವಾರದಿಂದ ಅಂಗಡಿ ಕ್ಲೋಸ್ ಮಾಡಿಕೊಂಡ್ ಎಲ್ಲಿ ಹೋಗಿದ್ದಾರೆ ಅಂತ ಮಾತನಾಡಿಕೊಳ್ತೋದಕ್ಕೆ ಶುರು ಮಾಡಿದ್ರು. ಅದ್ರ ಬೆನ್ನೆಲೆ ಇಂದು ಬೆಳ್ಳಬೆಳಗ್ಗೆ ಅಂಗಡಿಯಿಂದ ಕೊಳೆದ ದುರ್ವಾಸನೆ ಹೊರ ಬರ್ತಿದ್ದು, ಅನುಮಾನಗೊಂಡು ಪೊಲೀಸ್ರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ವಿವೇಕನಗರ ಪೊಲೀಸ್ರು ಅಂಗಡಿ ಬಾಗಿಲು ಒಡೆದು ನೋಡಿದಾಗ ರವೀಂದ್ರನ್ ಹಾಗೂ ಉಮಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಶವಗಳನ್ನ ರವಾನೆ ಮಾಡಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here