Home Cinema “ನಟಸಾರ್ವಭೌಮನ” ಉತ್ಸವ ನೋಡಲು ಸಾಲದು 2 ಕಣ್ಣು..! ಪುನೀತ್ ಪವರ್,ಯುವರಾಜ್ ಖದರ್,ಹೇಗಿತ್ತು ಬಲ್ಲಿರೇನು..!

“ನಟಸಾರ್ವಭೌಮನ” ಉತ್ಸವ ನೋಡಲು ಸಾಲದು 2 ಕಣ್ಣು..! ಪುನೀತ್ ಪವರ್,ಯುವರಾಜ್ ಖದರ್,ಹೇಗಿತ್ತು ಬಲ್ಲಿರೇನು..!

458
0
SHARE

ಪವರ್ ಸ್ಟಾರ್ ಪುನೀತ್ ಅಂದ್ರೆನೇ ಒಂದು ಎನರ್ಜಿ. ಈ ವಿಷಯವನ್ನ ಆಗಾಗ ಖುದ್ದು ಅಪ್ಪುನೇ ಪ್ರೂವ್ ಮಾಡ್ತಿರ‍್ತಾರೆ. ಯಾವುದೇ ಕಂಡಿಶನ್‌ನಲ್ಲೂ ಕಾಮ್ ಆಂಡ್ ಕೂಲ್ ಆಗಿರುವ ಪುನಿತ್ ಮತ್ತೊಮ್ಮೆ ತಮ್ಮ ಬಿಂದಾಸ್ ಆಟಿಟ್ಯೂಡ್‌ನಿಂದ ತಮ್ಮ ಫ್ಯಾನ್ಸ್‌ಗಳನ್ನ ಖುಷಿಪಡಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ಐಟಿ ಅಧಿಕಾರಿಗಳು ಕೊಟ್ಟ ಶಾಕ್‌ನಲ್ಲೂ ಪುನೀತ್ ತಮ್ಮ ಕರ್ತವ್ಯ ಪ್ರಜ್ಙೆ ಮೆರೆದಿದ್ದಾರೆ.ಆದಾಯ ತೆರಿಗೆ ಇಲಾಖೆಯವರು ಸದಾಶಿವನಗರದ ಪುನೀತ್ ಮನೆಗೆ ಶಾಕಿಂಗ್ ಎಂಟ್ರಿ ಕೊಟ್ಟ ಹಿನ್ನೆಲೆಯಲ್ಲಿ ಪುನೀತ್ ಅಕ್ಷರಶಃ ಗೃಹ ಬಂಧನದಲ್ಲಿದ್ರು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮೊದಲೇ ಪ್ಲಾನ್ ಮಾಡಿದ್ದ ನಟಸಾರ್ವಭೌಮ ಆಡಿಯೋ ಲಾಂಚ್ ಕಾನ್ಸಲ್ ಆಗುವ ಚಾನ್ಸ್‌ಗಳು ಕ್ರಿಯೆಟ್ ಆಗಿಹೋಯಿತು. ಇದರಿಂದ ಪುನೀತ್ ದರ್ಶನವಾಗುವ ಖುಷಿಯಲ್ಲಿದ್ದ ಅಪ್ಪು ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದಂತೂ ಸುಳ್ಳಲ್ಲ.ಆದರೆ ಈ ಬೆಳವಣಿಗೆಗಳ ಮಧ್ಯೆ ನಡೆದಿದ್ದೇ ಬೇರೆ. ಐಟಿ ರೈಡ್ ಕಂಪ್ಲಿಂಟ್ ಆಗ್ತಿದ್ದಹಾಗೇ ಪುನೀತ್ ಸೀದಾ ಹುಬ್ಬಳ್ಳಿಗೆ ಕಾರ್ ಓಡಿಸಿಬಿಟ್ರು. ನಟಸಾರ್ವಭೌಮ ಆಡಿಯೋ ಲಾಂಚ್ ನಡೆಯುತ್ತಾ ಇಲ್ವಾ ಎಂಬ ಫ್ಯಾನ್ಸ್ ಗೊಂದಲಕ್ಕೆ ಒಂದು ಫುಲ್‌ಸ್ಟಾಪ್ ಇಟ್ಟುಬಿಟ್ರು.

ಸ್ವತಃ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ವಿಡಿಯೋ ಮಾಡಿ ’ ಐ ಎಮ್ ಕಮಿಂಗ್ ಟು ಹುಬ್ಬಳ್ಳಿ. ಡೊಂಟ್‌ವರಿ’ ಎಂದು ಸ್ಮೈಲ್ ಬೀರಿದ್ರು.ಇನ್ನು ಹುಬ್ಬಳ್ಳಿಯಲ್ಲಿ ನಡೆದ ಈ ಅದ್ಧೂರಿ ಆಡಿಯೋ ಲಾಂಚ್‌ಗೆ ರಾಘವೆಂದ್ರ ರಾಜ್‌ಕುಮಾರ್ ಕೂಡ ಸ್ಪೆಷಲ್ ಸಾಥ್ ಕೊಟ್ರು. ಹುಬ್ಬಳ್ಳಿಯ ಜನರಿಂದ ಅಪ್ಪುಗೆ ಪ್ರೀತಿಯ ಅಪ್ಪುಗೆ ಸಿಕ್ತು. ಇನ್ನು ಪುನೀತ್ ಡಾನ್ಸ್ ನೋಡಿ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ವೈಟ್ ಮಾಡಿದ ಅಪ್ಪು ಫ್ಯಾನ್ಸ್‌ಗೆ ಹಬ್ಬದೂಟವೇ ಕಾದಿತ್ತು. ನೆಹರೂ ಮೈದಾನದ ಸ್ಟೇಜ್‌ಗೆ ರೋಪ್ ಹಾಕೊಂಡು ಜಂಪ್ ಮಾಡಿದ ಪುನೀತ್ ಗ್ರಾಂಡ್ ಎಂಟ್ರಿ ನೋಡಿ ಹುಬ್ಬಳ್ಳಿಯ ಜನತೆ ನಿಬ್ಬೆರಗಾಗಿಹೋದ್ರು.

ಪುನೀತ್ ಡ್ಯಾನ್ಸ್ ನೋಡಿ ಹುಬ್ಬಳ್ಳಿಯ ಮಂದಿ ಫೀದಾ ಆಗಿಹೋದ್ರು. ’ಡ್ಯಾನ್ಸ್ ವಿತ್ ಅಪ್ಪು’ ಅಂತ ಎಲ್ಲರೂ ನಟಸಾರ್ವಭೌಮನ ಹಾಡುಗಳಿಗೆ ಡಕಂಣಕ ಸ್ಟೆಪ್ ಹಾಕಿದ್ರು. ಪುನೀತ್ ಸ್ಟೇಜ್ ಮೇಲೆ ಹಚ್ಚಿದ ಬೆಂಕಿ ಅಭಿಮಾನಿಗಳ ಮನಸ್ಸುಗಳನ್ನ ಕದ್ದುಬಿಡ್ತು. ನಟಸಾರ್ವಭೌಮನ ನಾಯಕಿ ಡಿಂಪಲ್ ಕ್ವೀನ್ ರಚಿತಾರಾಮ್ ಕೂಡ ’ಶರಣ್ರೀಯಪ್ಪಾ’ ಎನ್ನುವ ಮೂಲಕ ಹುಬ್ಬಳ್ಳಿಯ ಹೃದಯಗಳಿಗೆ ಕನ್ನ ಹಾಕಿಬಿಟ್ರು. ಇನ್ನು ಗಾಯಕ ವಿಜಯ್ ಪ್ರಕಾಶ್ ಗೋಲ್ಡನ್ ವಾಯ್ಸ್‌ಗೆ ಮರುಳಾಗಾದವರೇ ಇಲ್ಲ ಎನ್ನುಬಹುದು ಬಿಡಿ.

ಇದೆಲ್ಲದ್ರ ನಡುವೆ, ದೊಡ್ಮನೆ ಕುಡಿ ಯುವರಾಜಕುಮಾರ್ ಕೂಡಾ ವೇದಿಕೆಗೆ ಕಿಚ್ಚು ಹಚ್ಚಿದ್ರು. ತಮ್ಮ ಡ್ಯಾನ್ಸ್‌ನಿಂದ ಎಲ್ಲರೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಖುದ್ದು ಪವರ್ ಸ್ಟಾರ್ ಪುನೀತ್ ಯುವರಾಜಕುಮಾರ್ ಡ್ಯಾನ್ಸ್ ನೋಡಿ ನಿಬ್ಬೇರಗಾಗಿದ್ದರು.ನಟಸಾರ್ವಭೌಮನ ಹಾಡುಗಳು ಸ್ಯಾಂಡಲ್‌ವುಡ್‌ನ ಸಂಗೀತಪ್ರಿಯರಿಗೆ ಸಿಕ್ಕಪಟ್ಟೆ ಮುದ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗೀರೊ ’ಓಪನ್ ದಿ ಬಾಟಲ್’ ಈಗ ಪಡ್ಡೆ ಹುಡುಗರ ಆತಾಂಮ್ ಆಗಿಬಿಟ್ಟಿದೆ.

ಫೆಬ್ರವರಿ ೭ ರಂದು ರಿಲೀಸ್ ಆಗಲಿರುವ ’ನಟಸಾರ್ವಭೌಮ’ ಈಗಾಗಲೇ ತನ್ನ ಎರ್ನಜಿಟಿಕ್ ಸಾಂಗ್‌ಗಳಿಂದ ಹೈಪ್ ಸೃಷ್ಟಿಸಿದ್ದಾನೆ. ಒಟ್ಟಾರೆಯಾಗಿ ತಮ್ಮ ಪರ್ಸನಲ್ ತಲೆನೋವುಗಳ ಮಧ್ಯೆಯೂ ತಮ್ಮ ಫ್ಯಾನ್‌ಗಳ ಆಸೆ ಈಡೇರಿಸಿದ ಪುನೀತ್ ನಿಜಕ್ಕೂ ಎಲ್ಲರ ಕಣ್ಣುಗಳಲ್ಲಿ ’ಕಿಂಗ್ ಆಫ್ ದಿ ಸಿನಿಮಾ’ ಎನಿಸಿಕೊಂಡು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here