Home Cinema “ನಟಸಾರ್ವಭೌಮ”.. ಇವತ್ತು ರಾತ್ರಿನೇ ಬಿಡುಗಡೆಯಾಗ್ತಿದೆ ಚಿತ್ರ ಆ ಜಾಗದಲ್ಲಿ..! 24 ಘಂಟೆ ಪ್ರದರ್ಶನ, ಇವ್ನೇ ಕಿಂಗ್...

“ನಟಸಾರ್ವಭೌಮ”.. ಇವತ್ತು ರಾತ್ರಿನೇ ಬಿಡುಗಡೆಯಾಗ್ತಿದೆ ಚಿತ್ರ ಆ ಜಾಗದಲ್ಲಿ..! 24 ಘಂಟೆ ಪ್ರದರ್ಶನ, ಇವ್ನೇ ಕಿಂಗ್ ಆಫ್ ಸಿನಿಮಾ..! ಬರ‍್ತಿದ್ದಾನೆ ಮಧ್ಯರಾತ್ರಿ ನಿಮ್ಮೆದುರು ನಟಸಾರ್ವಭೌಮ..!

561
0
SHARE

ನಟಸಾರ್ವಭೌಮ.. ಪುನೀತ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯ್ತಿರುವ ಸಿನಿಮಾ
ಟ್ರೇಲರ್ ನೋಡಿ.. ಕಾಲರ್ ಏರಿಸಿಕೊಂಡಿದ್ದ ಅಭಿಮಾನಿಗಳಲ್ಲಿ ನಟಸಾರ್ವಭೌಮ ನೋಡುವ ಕಾತುರತೆ ಅಷ್ಟಿಷ್ಟಿಲ್ಲ.

ಇದಕ್ಕೆ ಸಾಕ್ಷಿ ಅನ್ನುವಂತೆ ನಟಸಾರ್ವಭೌಮನ ಪ್ರದರ್ಶನ ಭರ್ತಿ ೨೪ ಘಂಟೆ ನಿರಂತರವಾಗಿ ನಡೆಯುತ್ತಿದೆ. ಇದು.. ಕೂಡಾ, ಇತ್ತೀಚಿನ ದಿನಗಳಲ್ಲಿ ಆದ ನಯಾ ದಾಖಲೆ.ಹೌದು, ನಟಸಾರ್ವಭೌಮನ ಆಟ ಇಪ್ಪತ್ತನಾಲ್ಕು ಘಂಟೆ ನಡೆಯಲಿದೆ. ಬೆಂಗಳೂರಿನ ಅನೇಕ ಕಡೆ ನಡುರಾತ್ರಿನೇ ಪ್ರದರ್ಶನ ಆರಂಭವಾಗಲಿದೆ. ಊವರ್ಶಿ ಚಿತ್ರಮಂದಿರದಲ್ಲಿ ಏಳು ಆಟ ಫಿಕ್ಸ್ ಆಗಿದೆ. ಯಸ್ ಊವರ್ಶಿಯಲ್ಲಿ ಬುಧವಾರ ಮಧ್ಯರಾತ್ರಿ ಹನ್ನೆರಡು ಘಂಟೆನಿಂದ ಹಿಡ್ದು ಗುರುವಾರ ರಾತ್ರಿ ಹನ್ನೆರಡು ಘಂಟೆವರೆಗೂ ನಡೆಯಲಿದೆ.

ಬರೀ ಊವರ್ಶಿಯಷ್ಟೇ ಅಲ್ಲ ಇನ್ನುಳಿದ ಚಿತ್ರಮಂದಿರಗಳ ಸ್ಥಿತಿನೂ ಸೇಮ್ ಟು ಸೇಮ್.ಇನ್ನು ನಟಸಾರ್ವಭೌಮನ ರುದ್ರ ನರ್ತನಕ್ಕೆ ಸೌಥ್ ಸಿನಿದುನಿಯಾವೇ ಬೆಚ್ಚಿ ಬಿದ್ದಿದೆ. ಇದಕ್ಕೆ ಕಾರಣ ಇದೇ ೨೪ ಘಂಟೆ ನಾನ್ ಸ್ಟಾಫ್ ಪ್ರದರ್ಶನ. ಹೌದು, ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಇಂಥಹದ್ದೊಂದು ಪ್ರದರ್ಶನ ನಡೆದಿಲ್ಲ. ಇದು, ಮೊದಲು. ಹಾಗಾಗಿ, ನಟಸಾರ್ವಭೌಮನ ಜ್ವರ ಸಹಜವಾಗಿಯೇ ಇನ್ನುಳಿದ ಚಿತ್ರರಂಗದವರನ್ನೂ ಬೆರಗುಗೊಳಿಸಿದೆ.

ಅಂದ ಹಾಗೇ, ನಟಸಾರ್ವಭೌಮ.. ನಡುರಾತ್ರಿಯ ಆಗಮನವಾಗ್ತಿದೆ. ಹೀಗಿದ್ದೂ ಇಂದು ರಾತ್ರಿ ನೋಡುವ ಸುವರ್ಣ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಇದು, ನೀವ್ ನಂಬಲೇಬೇಕು. ಹೌದು, ನಟಸಾರ್ವಭೌಮ ಮತ್ತೊಂದು ದಾಖಲೆ ಬರೆದಿದ್ದಾನೆ. ರಾಜ್ಯದಲ್ಲಿ ಅನೇಕ ಕಡೆ ನಟಸಾರ್ವಭೌಮನ ಅಬ್ಬರ ನಡುರಾತ್ರಿ ಶುರುವಾಗಲಿದೆ. ಆದ್ರೆ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾತ್ರ ಇಂದು ರಾತ್ರಿ ಹತ್ತು ಘಂಟೆನಿಂದನೇ ನಟಸಾರ್ವಭೌಮನ ಮೆರವಣಿಗೆ ನಡೆಯಲಿದೆ.ಯಸ್, ನಟಸಾರ್ವಭೌಮ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ರಾತ್ರಿ ಹತ್ತು ಘಂಟೆಗೆ ಬಿಡುಗಡೆಯಾಗ್ತಿದೆ.

ಇದಕ್ಕೆ ಕಾರಣ ಅಭಿಮಾನಿಗಳ ಅಭಿಮಾನ ಹಾಗೂ ಹಠ. ಹೌದು, ಹಾಗ್ ನೋಡಿದ್ರೆ ನಟಸಾರ್ವಭೌಮನ ಮೇಲೆ ಅಭಿಮಾನಿಗಳಿಗೆ ತುಂಬು ನಿರೀಕ್ಷೆ ಇವೆ. ಇದಕ್ಕೆ ತಕ್ಕಂತೆ ಚಿತ್ರದ ಟ್ರೇಲರ್‌ನಲ್ಲಿ ದೆವ್ವದ ಹಾವಳಿಯ ಸ್ಯಾಂಪಲ್ ಇದೆ. ಹಾಗಾಗಿ, ಎರಡು ಶೇಡ್‌ನಲ್ಲಿ ಕಾಣಸಿಗುವ ಪುನೀತ್ ದರ್ಶನಕ್ಕೆ ಕಾದು ಕುಂತಿರುವ ಭಕ್ತ ಗಣ, ಮಧ್ಯರಾತ್ರಿವರೆಗೂ ಕಾಯಲು ನಮ್ಮಿಂದ ಆಗಲ್ಲ ಅನ್ನುವ ಹಠ ಹಿಡಿದು ಕುಂತಿತ್ತು.

ಇಂದೇ ನಟಸಾರ್ವಭೌಮ ಪ್ರದರ್ಶನ ಬೇಕೆ ಬೇಕು ಅನ್ನುವ ಬೇಡಿಕೆ ಇಟ್ಟಿತ್ತು. ಅಭಿಮಾನಿಗಳು ತುಂಬು ಅಭಿಮಾನದಿಂದ ಮಾಡಿದ ಇದೇ ಬೇಡಿಕೆ ಮಣೆ ಹಾಕಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಪವನ್ ಒಡೆಯರ್ ನಟಸಾರ್ವಭೌಮನನ್ನ ಇಂದು ರಾತ್ರಿ ಹತ್ತು ಘಂಟೆಗೆನೇ ಅಭಿಮಾನಿಗಳ ಜೋಳಿಗೆಗೆ ಹಾಕಲು ಮುಂದಾಗಿದ್ದಾರೆ.ಇನ್ನೂ ನಟಸಾರ್ವಭೌಮ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಪಕ್ಕದ ಮನೆಗಳಲ್ಲೂ ಬಿಡುಗಡೆಯಾಗ್ತಿದೆ.

ಹೈದ್ರಾಬಾದ್, ಚೆನೈ, ಮುಂಬೈ ಹೀಗೆ ಅನೇಕ ಕಡೆ ನಟಸಾರ್ವಭೌಮ ಬಲಗಾಲಿಟ್ಟು ನಾಳೆ ಚಿತ್ರಮಂದಿರಕ್ಕೆ ಬರಲಿದ್ದಾನೆ. ಇನ್ನೂ ವಿದೇಶಿ ನೆಲದಲ್ಲೂ ನಟಸಾರ್ವಭೌಮನ ಉತ್ಸವ ನಡೆಯಲಿದೆ.ಅದೇನೆ ಇರ‍್ಲಿ, ಸದ್ಯ ನಟಸಾರ್ವಭೌಮ ಬಿಡುಗಡೆಯಾಗ್ತಿದೆ. ಅಭಿಮಾನಿಗಳ ಸಂಭ್ರಮ ಸಡಗರನೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದೇ ನಟಸಾರ್ವಭೌಮನ ರುದ್ರ ನರ್ತನಕ್ಕೆ ದಾಖಲೆಗಳೂ ಚಿಂದಿಯಾಗಿ, ಹೊಸದೊಂದು ರೆಕಾರ್ಡ್‌ನ ಜನನವಾದ್ರೆ ಅಚ್ಚರಿ ಇಲ್ಲ. ಕಾರಣ, ಬರ‍್ತಿರೋದು ಕಿಂಗ್ ಆಫ್ ಸಿನಿಮಾ ನಟಸಾರ್ವಭೌಮ…

LEAVE A REPLY

Please enter your comment!
Please enter your name here