Home Cinema ನಟಿ ಸಂಜನಾ #METOO ಪ್ರಕರಣಕ್ಕೆ ಬ್ರೇಕ್ ಹಾಕಿದ ನಿರ್ದೇಶಕರ ಸಂಘ..!? ಒಲ್ಲದ ಮನಸ್ಸಿನಿಂದ ಬಹಿರಂಗ ಕ್ಷಮೆ...

ನಟಿ ಸಂಜನಾ #METOO ಪ್ರಕರಣಕ್ಕೆ ಬ್ರೇಕ್ ಹಾಕಿದ ನಿರ್ದೇಶಕರ ಸಂಘ..!? ಒಲ್ಲದ ಮನಸ್ಸಿನಿಂದ ಬಹಿರಂಗ ಕ್ಷಮೆ ಕೇಳಿದ ಸಂಜನಾ ಗಲ್ರಾನಿ..!?

730
0
SHARE

ಸ್ಯಾಂಡಲ್‌ವುಡ್‌ನಲ್ಲಿ ಮೀಟೂ ಬಿರುಗಾಳಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ ಬೆನ್ನೆಲ್ಲೆ ಗಂಡ ಹೆಂಡತಿ ಖ್ಯಾತಿಯ ಸಂಜನಾ ನನಗೂ ಕೆಟ್ಟ ಅನುಭವ ಆಗಿತ್ತು ಎಂದಿದ್ರು. ಮೀಟೂ ಅಭಿಯಾನದಡಿ ಸಂಜನಾ ಹೊಸ ಸುನಾಮಿಯನ್ನೇ ಗಾಂಧಿನಗರದಲ್ಲಿ ಎಬ್ಬಿಸಿದ್ರು. ಡೆಡ್ಲಿ ನಿರ್ದೇಶಕ ರವಿ ಶ್ರೀವತ್ಸ ಸಂಜನಾ ಕ್ಷಮೆಯಾಚಿಸಬೇಕೆಂದು ಗುಡಿಗಿದ್ರು. ಇದೀಗ ಮೀ ಟೂ ಕೇಸ್ ತಿರುವನ್ನು ಪಡೆದಿದ್ದು ಸ್ವತಃ ಸಂಜನಾ ಕ್ಷಮೆ ಯಾಚಿಸಿದ್ದಾರೆ.

ಸಂಜನಾ ಗಲ್ರಾನಿ ದಶಕ ಕಳೆದ್ರು.. ಇವತ್ತಿಗೂ ಗಂಡ ಹೆಂಡ್ತಿ ಸಿನಿಮಾ ನಾಯಕಿ ಅಂಥನೇ ಗುರುತಿಸಿಕೊಂಡಿರುವ ನಟಿ. ಕಳೆದ 20 ದಿನಗಳ ಹಿಂದೆ. ರವಿ ಶ್ರೀವತ್ಸಗೆ ಮೀ.. ಟೂ ಅಂದಿದ್ರು. ನನಗೂ ರವಿ ಶ್ರೀವತ್ಸ ಚಿತ್ರೀಕರಣದಲ್ಲಿ ಕಾಟ ಕೊಟ್ಟಿದ್ರು ಎಂದು, ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಶ್ರೀವತ್ಸ ಒಬ್ಬ ಸ್ಯಾಡಿಸ್ಟ್ ಎನ್ನುವ ಮಾತುಗಳನ್ನಾಡಿದ್ರು. ಇಷ್ಟೆಲ್ಲಾ ಆರೋಪದ ಬಳಿಕ ರವಿ ಶ್ರೀವತ್ಸ ನಿರ್ದೇಶಕ ಸಂಘಕ್ಕೆ ದೂರು ನೀಡಿದ್ರು.

ನಾನು ತಪ್ಪು ಮಾಡಿಲ್ಲ. ಸಂಜನಾ ಸುಮ್ಮನೆ ಆರೋಪ ಮಾಡ್ತಿದ್ದಾರೆಂದು ಗುಡುಗಿದ್ರು. ಸಂಜನಾ ಕ್ಷಮೆ ಕೇಳುವಂತೆ ನಿರ್ದೇಶಕ ಸಂಘದಲ್ಲಿ ಪಟ್ಟನ್ನು ಹಿಡಿದಿದ್ರು.ಅಂದು ನಿರ್ದೇಶಕ ಸಂಘದ ಅಧ್ಯಕ್ಷ ಡಾ. ವಿ ನಾಗೇಂದ್ರ ಪ್ರಸಾದ್ ಸಂಜನಾಗೆ ನವೆಂಬರ್ 8ರವರೆಗೆ ಡೆಡ್ ಲೈನ್ ಕೊಟ್ಟಿದ್ರು. ಅದನ್ನು ಬ್ರೇಕ್ ಮಾಡಿ ಸಂಜನಾ ಇಂದು ನಿರ್ದೇಶಕ ಸಂಘದ ಮುಂದೆ ಹಾಜರಾಗಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಅಂಬರೀಷ್, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ಡಾ. ವಿ ನಾಗೇಂದ್ರ ಪ್ರಸಾದ್ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಐ ಆಮ್ ಸಾರಿ ಅನ್ನುವ ಮೂಲಕ ಮೀಟೂ ಆರೋಪಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.ಇನ್ನು ಸಂಜನಾ ಸಾರಿ ಕೇಳಿದ್ದು ಖುಷಿಯಾಗಿದೆ ಎಂದಿರುವ ನಿರ್ದೇಶಕ ರವಿ ಶ್ರೀವತ್ಸ. ಸಂಜನಾ ಕ್ಷಮೆ ಕೇಳಿರುವುದು ಚಿತ್ರತಂಡಕ್ಕೆ ಸಂತಸವಾಗಿದೆ. ಇನ್ಮುಂದೆ ಮೀಟೂ ಅಭಿಯಾನ ಸರಿಯಾಗಿ ಬಳಕೆಯಾಗ್ಲಿ ಅಂದ್ರು.

ಅದೇನೇ ಇದ್ರು, ಮೀಟೂ ಆರೋಪ ಪ್ರಕರಣಕ್ಕೆ ಮೊದಲ ಹಂತದಲ್ಲೇ ಹಿನ್ನಡೆಯಾಗಿದೆ. ಸಂಜನಾ ಗಲ್ರಾನಿ ತಾವು ಮಾಡಿದ್ದ ಆರೋಪಕ್ಕೆ ಕ್ಷಮೆಯನ್ನು ಕೋರಿದ್ದಾರೆ. ಸಂಜನಾ ಪ್ರಕರಣದಿಂದ ಮುಂದಿನ ದಿನಗಳಲ್ಲಿ ಸುಖಾಸುಮ್ಮನೆ ಮೀಟೂ ಆರೋಪ ಮಾಡುವವರ ಬಾಯಿಗೆ ಬೀಗಬಿದ್ದಂತಾಗಿರುವುದು ಸುಳ್ಳಲ್ಲ.

LEAVE A REPLY

Please enter your comment!
Please enter your name here