Home Crime ನಟೋರಿಯಸ್ ನ ಅಂತ್ಯಕ್ಕಾಗಿ ಕಾಯ್ತಿತ್ತು ಹಣ, ಹೆಣ್ಣು, ಹೆಣ..!? ಟಾರ್ಗೆಟ್ ಹೊಡೆಯಲು ಕಟ್ಟಿದ್ರು ಸೀರೆ...

ನಟೋರಿಯಸ್ ನ ಅಂತ್ಯಕ್ಕಾಗಿ ಕಾಯ್ತಿತ್ತು ಹಣ, ಹೆಣ್ಣು, ಹೆಣ..!? ಟಾರ್ಗೆಟ್ ಹೊಡೆಯಲು ಕಟ್ಟಿದ್ರು ಸೀರೆ ಸೆರಗಿನ ಗಂಟು..! ಕೋಟಿ ಕೋಟಿ ಆಸ್ತಿ ಯಾರ್ಯಾರಿಗೋ ಬಿಟ್ಟೋದ ಲಕ್ಷ್ಮಣ..!

5483
0
SHARE

ಲಕ್ಷ್ಮಣ ಯಾವತ್ತು ಸಿಂಗಲ್ ಆಗಿ ಓಡಾಡುವ ಆಸಾಮಿಯಲ್ಲ. ಅವನ ಹತ್ತಿರ ಸುಮಾರು 600ಕೋಟಿಗೂ ಮಿಗಿಲಾದ ಆಸ್ತಿಯಿತ್ತು. ಅಷ್ಟೊಂದು ಆಸ್ತಿಯಿದೆ ಅಂದ ಮೇಲೆ ಅದ್ಯಾವುದು ಬೆವರು ಸುರಿಸಿ ದುಡಿದದ್ದಲ್ಲ ಅನ್ನೋದು ಅವನಿಗೂ ಗೊತ್ತಿತ್ತು. ಅದನ್ನ ಸಂಪಾದನೆ ಮಾಡೋದಕ್ಕೆ ಯಾರ್ಯಾರನ್ನ ಎದುರು ಹಾಕ್ಕೊಂಡಿದ್ದ ಅನ್ನೋದು ಅವನ ಬಳಿಯಲ್ಲಿಯೇ ಲೆಕ್ಕವಿತ್ತು. ಹೀಗಾಗಿ ಆತ ಯಾವಾಗ್ಲು ತನ್ನ ಗ್ಯಾಂಗ್ ಜೊತೆಯಲ್ಲಿಯೇ ಓಡಾಡ್ತಿದ್ದ.

ಯಾಕಂದ್ರೆ ಈ ಫಿಲ್ಡ್ ನಲ್ಲಿ ಹೆಸರು ಮಾಡಬೇಕು ಅಂತ ಒಂದಲ್ಲ ಎರಡು ತಲೆಯನ್ನ ತೆಗೆಯಲೇ ಬೇಕು. ನಾವು ಮೊದಲೇ ಹೇಳಿದ ಹಾಗೆ ಈ ಫಿಲ್ಡ್ ನಲ್ಲಿ ಹೆಣ್ಣೆ ದೊಡ್ಡ ಶತೃ. ಇವನಿಗೆ ಸೀರೆ ಶೋಕಿಯಿದೆ ಅನ್ನೋದು ಗೊತ್ತಾದ ಮೇಲೆಯ ಭೇಟೆಯಾಡೋದಕ್ಕೆ ಒಬ್ಬಳು ಸುಂದರಿಯನ್ನ ಅವನ ಹಿಂದೆ ಛೂ ಬಿಟ್ಟಿದ್ರು. ಅದು ಒಂದೆರಡು ದಿನದ ಕಥೆಯಲ್ಲ. ಸಾಕಷ್ಟು ದಿನ ಆಕೆಯನ್ನ ಇವನ ಹಿಂದೆ ಬಿಟ್ಟು ಅವನನ್ನ ಟ್ರ್ಯಾಪ್ ಮಾಡಿಸಿದ್ರು. ಅವನು ಕೂಡಾ ಫಿಗರ್ ಯಾವುದೋ ಚೆನ್ನಾಗಿದೆ ಒಳ್ಳೆ ಟೈಂ ಪಾಸ್ ಮಾಡಬಹುದು ಅಂತ ಅವಳ ತೆಕ್ಕೆ ಬಿದ್ದಿದ್ದ. ಅವಳ ತೆಕ್ಕೆಗೆ ಬಿದ್ದು ಆತ ಸಾವನ್ನ ಅಪ್ಪಿಕೊಂಡ ಹಾಗೆ ಆಗಿತ್ತು. ಅವತ್ತು ಆ ಹುಡುಗಿಯ ಜೊತೆ ಅದೇ ಲಾಡ್ಜ್ ನಲ್ಲಿ ಎರಡು ದಿನ ಇರೋದಕ್ಕೆ ಪ್ಲಾನ್ ಮಾಡಿದ್ದ. ಒಂದು ಹುಡುಗಿಯನ್ನ ಯಾರ ಹಿಂದಾದ್ರು ಬಿಟ್ಟು ಬಿಟ್ರೆ ಆ ಕೆಲಸ ಆಗೋದು ಪಕ್ಕಾ.  ಹೀಗೆ ಲಕ್ಷ್ಮಣನ ವಿಚಾರದಲ್ಲೂ ಆಗಿತ್ತು.

ಆತ ಅವಳೊಂದಿಗೆ ಮ0ದೆ ನಡೆಯಬಹುದಾದ ಮಧುರ ಕ್ಷಣಗಳನ್ನ ನೆನಸಿಕೊಂಡು ಕಲರ್ ಕಲರ್ ಕನಸು ಕಾಣುತ್ತ ಲಾಡ್ದ್ ಕಡೆ ಬರ್ತಿದ್ದ. ಅದೇ ಹೊತ್ತಿಗೆ ನೋಡಿ ಅವನ ಕಾರಿನ ಮುಂದೆ ಸಾವು ಬಂದು ಭರತನಾಟ್ಯ ಮಾಡೋದಕ್ಕೆ ಶುರುಮಾಡಿತ್ತು.ಲಕ್ಷ್ಮಣ ಮೊನ್ನೆ ಬೀದಿಯಲ್ಲಿ ಹೊಗೆ ಹಾಕಿಸಿಕೊಂಡ ಸುದ್ದಿ ಇಡೀ ಅಂಡರ್ ವರ್ಲ್ಡ್ ಅನ್ನ ತಲ್ಲಣಗೊಳಿಸಿತ್ತು. ಅಲ್ಲಿ ಮರ್ಡರ್ ಮಾಡಿದ್ದ ಟೀಂ ಯಾವುದು ಅನ್ನೋದೆ ಬಿಸಿ ಬಿಸಿ ಚರ್ಚೆಯಾಗಿ ಹೋಗಿತ್ತು. ಯಾಕಂದ್ರೆ ಇಲ್ಲಿ ಒಬ್ಬ ಹೆಸರು ಮಾಡಿರೋ ರೌಡಿಯನ್ನ ಅಥವಾ ಹಣ ಮಾಡಿರೋ ರೌಡಿಯನ್ನ ಮುಟ್ಟೋದಕ್ಕೆ ಎಂಟೆದೆಯೆ ಬೇಕು. ಹೀಗಾಗಿ ಫಿಲ್ಡ್ ನಲ್ಲಿ ಖದರು ಮತ್ತು ಹಣ ಎರಡು ಇಟ್ಕೊಂಡಿದ್ದ  ಲಕ್ಷ್ಮಣನನ್ನ ಅವನದ್ದೇ ಏರಿಯಾದಲ್ಲಿ ಮುಗಿಸ್ತಾರೆ ಅಂದ್ರೆ ಫಿಲ್ಡ್ ನಲ್ಲಿ ಟಾಕ್ಸ್ ಶುರುವಾಗದೇ ಇರುತ್ತಾ ಹೇಳಿ. ಲಕ್ಷ್ಮಣ್ ಸತ್ತು ಸುದ್ದಿ ಸಿಗ್ತಿದ್ದ ಹಾಗೆ ಒಂದಷ್ಟು ಜನ ಸಂಭ್ರಮಿಸಿದ್ರು.

ಇನ್ನೊಂದಿಷ್ಟು ಜನ ಕನಿಕರ ವ್ಯಕ್ತಪಡಿಸಿದ್ರು. ಇನ್ನೊಂದಿಷ್ಟು ಜನ ಮಾಡಿದ ಪಾಪ ಸುಮ್ಮನೆ ಬಿಡುತ್ತಾ ಅಂತ ಹಿಡಿಶಾಪ ಹಾಕಿದ್ರು. ಆದ್ರೆ ಅದ್ಯಾವಾಗ ಅವನ ರಕ್ತ ಹೀರಿದ್ದೆಲ್ಲ ಸಣ್ಣಪುಟ್ಟ ಹುಡುಗರು ಅನ್ನೋದು ಗೊತ್ತಾಯ್ತೋ ಆಗ ಬ್ಯಾಕ್ ತಟ್ಟಿಕೊಂಡು ನಕ್ಕಿದ್ರು. ಲಕ್ಷ್ಮಣನಿಗೆ ಸಾಕಷ್ಟು ವೈರಿಗಳಿದ್ರು ಮಚ್ಚಾ ಮಂಜನ ಶಿಷ್ಯರು, ಕೊರಂಗು ಗ್ಯಾಂಗ್ ನ ಹುಡುಗರು, ಕುರಿ ಕೃಷ್ಣ ಬಂಟರು. ಕೋತಿ ರಾಮನ ಗ್ಯಾಂಗ್, ಆಟೋ ರಾಮನ ಗ್ಯಾಂಗ್ ನವರ ವಿರೋಧವನ್ನ ಆತ ಕಟ್ಟಿಕೊಂಡಿದ್ದ. ಎಲ್ಲರಿಗೂ ಲಕ್ಷ್ಮಣನನ್ನ ಮುಗಿಸಬೇಕು ಅನ್ನೋ ಜಿದ್ದು ಇತ್ತು. ಆದ್ರೆ ಅವನ ವಿಕೆಟ್ ಹೊಡೆದ ಮೇಲೆ ಅದನ್ನ ಹ್ಯಾಗೆ ದಕ್ಕಿಸಿಕೊಳ್ಳೋದು ಅನ್ನೋದು ಗೊತ್ತಾಗಿರಿಲ್ಲ. ಒಂದು ದೊಡ್ಡ ವಿಕೆಟ್ ಹೊಡಿಬೇಕು ಅಂದ್ರೆ ಒಂದೇ ಕೈಯಲ್ಲಿ ಸಾಧ್ಯವಾಗೋದಿಲ್ಲ.

ಇಲ್ಲಿ ಕೈ ಕೈ ಮಿಲಾಯಿಸಿದ್ರೆ ಮಾತ್ರ ಸಕ್ಸಸ್ ಕಾಣೋದಕ್ಕೆ ಸಾಧ್ಯ. ಅದ್ರಲ್ಲು ಶತೃವಿನ ಶತೃ ಮಿತ್ರ ಅನ್ನೋ ಹಾಗೆ ಅವನ ಎಲ್ಲಾ ಶತೃಗಳು ಒಗ್ಗಟ್ಟಾಗಿದ್ರು. ರಾಮ ಮತ್ತು ಲಕ್ಷ್ಮಣರಲ್ಲಿ ಇವನೇ ನಟೋರಿಯಸ್. ಹೀಗಾಗಿ ಇವನ ವಿಕೆಟ್ ಅನ್ನೆ ಹೊಡೆಯಬೇಕು ಅನ್ನೋ ಸ್ಕೆಚ್ ರೆಡಿಯಾಗಿತ್ತು. ಅದ್ರಲ್ಲು ಹಿಂದೆ ಇವನ ಕೈಯಂದಲೇ ಬಾಯಿಗೆ ನೀರು ಬಿಡಿಸಿಕೊಂಡಿದ್ದ ಮಚ್ಚ ಮಂಜನಿಗಾಗ್ಲಿ. ಕುರಿ ಕೃಷ್ಣನಿಗಾಗ್ಲಿ ಅವನ ಶಿಷ್ಯಂದಿರು ಸರಿಯಾಗಿ ಮುಕ್ತಿ ಕೊಡಿಸೋ ಕೆಲಸ ಮಾಡಿರಲಿಲ್ಲ. ಹೀಗಾಗಿ ಈಗ ಅದಕ್ಕಾಗಿ ಅವ್ರೆಲ್ಲಾ ಕಾಯ್ತಿದ್ರು.ಅದ್ರಲ್ಲೂ ದೊಡ್ಡ ದೊಡ್ಡ ವಿಕೆಟ್ ಗಳನ್ನ ಹೊಡೆದ್ರು ತನ್ನನ್ನ ಯಾರು ಇನ್ನು ಮುಟ್ಟಿಲ್ಲ ಅನ್ನೋ ಅಹಂಕಾರ ಕೂಡಾ ಲಕ್ಷ್ಮಣನಿಗೆ ಇತ್ತು.  ಅಲ್ಲದೆ ಇಷ್ಟು ವರ್ಷ ಯಾರು ನಂದು ಏನು ಕಿತ್ತುಕೊಳ್ಳೋದಕ್ಕೆ ಆಗಲಿಲ್ಲ ಅಂತ ಫಿಲ್ಡ್ ನಲ್ಲಿ ಹೇಳಿಕೊಂಡು ಓಡಾಡ್ತಿದ್ದ. ಇದೇ ಕಾರಣಕ್ಕೆ ಈಗ ಎಲ್ಲರೂ ಒಗ್ಗಟ್ಟಾಗಿದ್ರು.

ಅಲ್ಲದೆ ಇಲ್ಲೊಂದು ಟೀಂ ಯಾರಿಗೂ ಗೊತ್ತಿಲ್ಲದೆ ಕೈ ಕೈ ಮಿಲಾಯಿಸಿತ್ತು. ಅದು ಮತ್ಯಾರು ಅಲ್ಲ ಬ್ಯಾಡರಹಳ್ಳಿಯ ಹೇಮಂತ್ ಅಲಿಯಾಸ್ ಹೇಮಿ, ರಾಜು ಅಲಿಯಾಸ್ ಕ್ಯಾಟ್ ರಾಜು, ಜಗ್ಗಿ ಅಲಿಯಾಸ್ ಕಳ್ಳ ಜಗ್ಗಿ, ಜೊತೆಗೆ ಮಚ್ಚ ಮಂಜನ ಸಹಚರನಾದ ಶ್ರೀಕಂಠ ಈ ಕೇಸ್ ನಲ್ಲಿ ತಾನೇ ಮುಂದೆ ನಿಂತು ಎಲ್ಲರನ್ನ ಒಂದುಗೂಡಿಸಿದ್ದ. ಆದ್ರೆ ಇವರೆಲ್ಲಾ ಒಟ್ಟಿಗೆ ಸೇರಬೇಕು ಅಂದ್ರೆ ಒಂದು ಕಾರಣವು ಇರಬೇಕಲ್ಲ ಅದನೇಂದ್ರೆ ಲಕ್ಷ್ಮಣನ ಮೇಲೆ ಹೇಮಿ ಬುಸುಗುಡೋದಕ್ಕೆ ಶುರುಮಾಡಿದ್ದ.ಹೇಮಿ ಇದ್ದಕ್ಕಿದ್ದ ಹಾಗೆ ಬನ್ರ್ರೋ ಆ ನನ್ ಮಗನನ್ನ ಎತ್ತಿಬಿಡೋಣ ಅಂತ ಹೇಳೋದಕ್ಕೆ ಒಂದು ಕಾರಣವಿತ್ತು. ಯಾಕಂದ್ರೆ  ಹೇಮಿಯ ಯುವತಿಯೊಬ್ಬಳನ್ನ ಪ್ರೀತಿಸ್ತಿದ್ದ. ಆ ಯುವತಿಯ ಇತ್ತೀಚೆಗೆ ಲಕ್ಷ್ಮಣನ ಜೊತೆ ಕಾಣಿಸಿಕೊಳ್ಳೋದಕ್ಕೆ ಶುರುಮಾಡಿದ್ಲು. ಇಲ್ಲಿ ಟಾಟ ಹೇಳಿ ಇಲ್ಲಿ ಹಾಯ್ ಹಾಯ್ ಅಂತ ಅವನ ಮಗ್ಗುಲಲ್ಲಿ ಕಾಣಿಸಿಕೊಂಡಿದ್ಲು.

ಇದು ಹೇಮಿಗೆ ಇನ್ನಿಲ್ಲದಂತೆ ಕಾಡಿತ್ತು. ಅಲ್ಲದೆ ತಾನು ಪ್ರೀತಿಸಿದ ಹುಡುಗಿಯನ್ನ ಇನ್ಯಾರಿಗೋ ಬಿಟ್ಟುಕೊಟ್ಟು ಬಿಟ್ರೆ ಫಿಲ್ಡ್ ನಲ್ಲಿ ಅಜೀಬ್ ಆಗಿ ಹೋಗ್ತೀನಿ ಅಂತ ಅವನಿಗೆ ಅನಿಸಿತ್ತು. ಇದೇ ಕಾರಣಕ್ಕೆ ಆತ ತರೆಮರೆಯಲ್ಲಿ ಲಕ್ಷ್ಮಣನ ವಿರುದ್ಧ ಕತ್ತಿ ಮಸೆಯೋದಕ್ಕೆ ಶುರುಮಾಡಿದ್ದ. ಇದೇ ಟೈಂನಲ್ಲಿ ಶ್ರೀಕಂಠ, ಕಳ್ಳಜಗ್ಗಿ ಮತ್ತು ಕ್ಯಾಟ್ ನನ್ನ ಹೇಮಿ ಹತ್ತಿರ ಕರ್ಕೊಂಡು ಹೋಗಿದ್ರು. ಹೇಮಿ ಬ್ರದರ್ ನನಗೆ ಇದೊಂದು ಕೆಲಸ ಮಾಡ್ಕೊಡಿ ಉಳಿದದ್ದು ನಾನು ನೋಡಿಕೊಳ್ತೀನಿ ಅನ್ನೋ ಭರವಸೆ ಕೊಟ್ಟಿದ್ದ.ಆಗಲೇ ಇವರಿಗೆ ಒಂದು ಇನ್ಫರ್ಮೇಷನ್ ಸಿಕ್ಕಿತ್ತು. ಲಕ್ಷ್ಮಣ ಜೊತೆಗಿದ್ದವರೆ ಆತ ಇವತ್ತು ಎಲ್ಲಿಗೆ ಹೋಗ್ತಾನೆ ಅನ್ನೋದನ್ನ ಹೇಳಿದ್ರು. ಇನ್ನೊಂದು ಮಾಹಿತಿ ಪ್ರಕಾರ ಇದೇ ಹೇಮಂತ್ ಮತ್ತು ಅವನ ಟೀಂ ಲಕ್ಷ್ಮಣನ ಹಿಂದೆ ಹುಡುಗಿಯೊಬ್ಬಳನ್ನ ಬಿಟ್ಟು ಆತನ ನಿರಾಯುಧನಾಗಿ ಅಲ್ಲಿಗೆ ಬರೋ ಹಾಗೆ ಮಾಡಿದ್ರು.

ಲಕ್ಷ್ಮಣನಿಗೆ ಯಾರು ನನ್ನನ್ನ ಮುಟ್ಟೋದಿಲ್ಲ ಅನ್ನೋ ಧೈರ್ಯವಿತ್ತು. ಯಾಕಂದ್ರೆ ಮರ್ಡರ್ ಆದ ಹೀಟ್ ನಲ್ಲೇ ಯಾರಾದ್ರು ರಿವೇಂಜ್ ಹೊಡೆದು ಬಿಡ್ತಾರೆ. ಆದ್ರೆ ಇಲ್ಲಿ ಒಂದು ಮರ್ಡರ್ ನಡೆದು 14 ವರ್ಷವಾಗಿದೆ. ಇನ್ನೊಂದು ಮರ್ಡರ್ ನಡೆದು 8ವರ್ಷವಾಗಿದೆ ಹೀಗಾಗಿ ಆತನಿಗೆ ರಿವೇಂಜ್ ಗಾಗಿ ತನ್ನ ಮೇಲೆ ಯಾರು ಮುಗಿಬೀಳೋದಿಲ್ಲ ಅಂತ ಅಂದುಕೊಂಡಿದ್ದ. ಅಲ್ಲದೆ ತನ್ನದೇ ಏರಿಯಾ ಆದ್ರಿಂದ ಇಲ್ಲಿ ಒಬ್ಬನೆ ಓಡಾಡಿದ್ರೆ ತೊಂದರೆಯಿಲ್ಲ ಅಂತ ಅವನು ಅಂದುಕೊಂಡಿದ್ದ. ಇದೇ ಕಾರಣಕ್ಕೆ ಆತ ಲಾಡ್ಜ್ ಗೆ ತಾನೇ ಕಾರ್ ಅನ್ನ ಡ್ರೈವ್ ಮಾಡಿಕೊಂಡು ಬಂದಿದ್ದ.ಲಕ್ಷ್ಮಣ ಅವತ್ತು ವಾಡ್ಜ್ ಗೆ ಬರ್ತಾನೆ ಅನ್ನೋ ಮಾಹಿತಿ ಸಿಗ್ತಿದ್ದ ಹಾಗೆ ಬೆಳಗ್ಗೆಯಿಂದಲೇ ಅವನ ಮನೆಯ ಮಂದೆ ಹುಡುಗರು ಕಾಯ್ತಿದ್ರು. ಅವನು ಹೊರಡ್ತಿದ್ದ ಹಾಗೆ ಅವನ ಹಿಂದೆ ಒಂದು ಟೀಂ ಫಾಲೋ ಮಾಡ್ಕೊಂಡು ಬಂದ್ರೆ, ಇನ್ನೊಂದು ಟೀಂ ಅವನ ಎದುರಿನಿಂದ ಅಟ್ಯಾಕ್ ಮಾಡಿತ್ತು.

ಆದ್ರೆ ಲಕ್ಷ್ಮಣನಿಗಾಗ್ಲಿ ಅಥವಾ ಅವನ ಹುಡುಗರಿಗಾಗ್ಲಿ ಇದರ ಬಗ್ಗೆಯೇ ಸ್ವಲ್ಪವು ಅನುಮಾನವಿರಲಿಲ್ಲ. ಹೀಗಾಗಿ ಲಕ್ಷ್ಮಣ ಈಸಿಯಾಗಿ ಇವರ ಕೈಗೆ ಸಿಕ್ಕಿ ಕೊಲೆಯಾಗಿ ಹೋಗಿದ್ದ. ಹೆಣ್ಣಿನ ಜೊತೆ ಸುಖ ಅನುಭವಿಸೋದಕ್ಕೆ ಅಂತ ಹೊರಟವನು ರಸ್ತೆಯಲ್ಲಿ ಹೆಣವಾಗಿ ಹೋಗಿದ್ದ.ಲಕ್ಷ್ಮಣನ ಕೊಲೆ ಕೇಸ್ ಇನ್ನು ಫೈನಲ್ ಹಂತಕ್ಕೆ ತಲುಪಿಲ್ಲ. ಈಗ ಪೊಲೀಸ್ರು ಅರೆಸ್ಟ್ ಆದವರು ಮುಂದೆ ಕೇಸ್ ನಿಂದ ನುಣುಚಿಕೊಂಡ್ರು ನುಣಿಚಿಕೊಳ್ಳಬಹುದು. ಯಾಕಂದ್ರೆ ಈ ಕೇಸ್ ನಲ್ಲಿ ಲಾಕ್ ಆಗೋರೆ ಬೇರೆ ಅದಕ್ಕಾಗಿ ಕೂಡಾ ಒಂದಷ್ಟು ಜನ ರೆಡಿಯಾಗಿದ್ದಾರೆ. ಲಕ್ಷ್ಮಣನ ಕೊಲೆಯಾದ ನಂತ್ರ ಕೇಳಿಬಂದಿದ್ದು ಪ್ರಮುಖವಾಗಿ ರಾಜು ಅಲಿಯಾಸ್ ಕ್ಯಾಟ್ ರಾಜು ಹೆಸರು. ಕ್ಯಾಟ್ ರಾಜು ಮೂಲತಃ ಹೆಬ್ಬಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್.

ಅವನು ಆ ಏರಿಯವನ್ನ ಬಿಟ್ಟು ಬಹಳ ವರ್ಷನೇ ಆಗಿದೆ. ಆತ ಹೊರಗಡೆ ಇರೋದಕ್ಕಿಂತ ಹೆಚ್ಚಾಗಿ ಜೈಲಲ್ಲೇ ಇರ್ತಾನೆ. ಇಸ್ಪೀಟ್ ರೇಡ್. ಹಫ್ತಾ ವಸೂಲಿಗಷ್ಟೇ ಸೀಮಿತವಾಗಿದ್ದ ಇವನನ್ನ ಈ ಕೇಸ್ ನಲ್ಲಿ ಫ್ರಂಟ್ ಲೈನ್ ನಲ್ಲಿ ಬಳಸಿಕೊಳ್ಳಲಾಯ್ತು.  ಯಾಕಂದ್ರೆ ಅವನ ಡೇರ್ ಅಂಡ್ ಡೆವಿಲ್ ಕ್ಯಾರೆಕ್ಟರ್.ಹೇಮಿ ಅಲಿಯಾಸ್ ಹೇಮಂತ್ ಮತ್ತು ಕ್ಯಾಟ್ ರಾಜು ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ರು. ಇದೇ ಕಾರಣಕ್ಕೆ ಜೈಲಿನಿಂದ ಬಂದಾಗಲೆಲ್ಲಾ ರಾಜು ಅವನ ಜೊತೆ ಇರ್ತಿದ್ದ. ಈ ಬಾರಿ ಹೇಮಿ ಲಕ್ಷ್ಮಣನನ್ನ ಮುಗಿಸಬೇಕು ಅಂದಾಗ ಆತನ ಸಹಾಯ ಕೇಳಿದ್ದ. ಫ್ರೆಂಡ್ ಶಿಪ್ ಗಾಗಿ ರಾಜು ಕೂಡಾ ಈ ಕೇಸ್ ನಲ್ಲಿ ಭಾಗಿಯಾಗಿದ್ದ. ಕೇಸ್ ಆಗ್ತಿದ್ದ ಹಾಗೆ ಆರೋಪಿಗಳು ಸೆರೆಂಡರ್ ಆಗೋದಕ್ಕೆ ರೆಡಿಯಾಗಿದ್ರು. ಆದ್ರೆ ಅದ್ಯಾಕೋ ಕೊಲೆಯಾದ ಮೇಲೆ ಅವರು ಮೊದಲು ಮಾಡಿಕೊಂಡಿದ್ದ ಪ್ಲಾನ್ ಗಳೆಲ್ಲಾ ಉಲ್ಟಾ ಹೊಡೆದಿತ್ತು.

ಕೊಲೆಗೆ ಪ್ಲಾನ್ ಮಾಡಿದವರ್ಯಾರು ಕೊಲೆಯಾದ ನಂತ್ರ ಏನು ಮಾಡಬೇಕು ಅನ್ನೋದನ್ನ ಸರಿಯಾಗಿ ಯೋಚನೆ ಮಾಡಿದ ಹಾಗೆ ಕಾಣಲಿಲ್ಲ. ಅಥವಾ ನಾವ್ಯಾರಾದ್ರು ಲಾಕ್ ಆದ್ರೆ ಪೊಲೀಸ್ರು ಎರಡು ದಿನ ಹೊಡಿತಾರೆ. ಆದ್ರೆ ಜೈಲಿನಿಂದ ಹೊರಗೆ ಬಂದ ಮೇಲೆ ಲಕ್ಷ್ಮಣ ಕಡೆಯವರು ನಮ್ಮನ್ನ ಸುಮ್ಮನೆ ಬಿಡೋದಿಲ್ಲ ಅಂತ ಪ್ರೀ ಪ್ಲಾನ್ ಅನ್ನ ಉಲ್ಟಾ ಮಾಡಿದ್ರು.ಈ ಕೇಸ್ ನಲ್ಲಿ ಮಾಸ್ಟರ್ ಮೈಂಡ್ ಗಳೆಲ್ಲಾ ಖಾಕಿಗಳ ಕೈಗೆ ಸಿಕ್ಕಿಹಾಕಿಕೊಳ್ಳದೆ ತಲೆ ತಪ್ಪಿಸಿಕೊಂಡಿದ್ರು. ಆದ್ರೆ ರಾಜು ಮಾತ್ರ ನಿನ್ನೆ ರಾತ್ರಿ ಗುಡಿಬಂಡೆಯಲ್ಲಿ ತಗಲಾಕ್ಕೊಂಡಿದ್ದ. ಪೊಲೀಸ್ರು ಆತನನ್ನ ನಿನ್ನೆ ರಾತ್ರಿ ಬಂಧಿಸಿ ಕರ್ಕೊಂಡು ಬಂದಿದ್ರು. ನಂತ್ರ ಇವತ್ತು ಬೆಳಗ್ಗೆಯಿಂದ ಆತನನ್ನ ಸ್ಪಾಟ್ ಮಹಜರ್ ಮಾಡೋದಕ್ಕೆ ಅಂತ ಕರ್ಕೊಂಡು ಹೋಗಿದ್ರು.

ನಂತ್ರ ಕೃತ್ಯಕ್ಕೆ ಬಳಸಿದ್ದ ವೆಪನ್ ಸೀಜ್ ಮಾಡೋದಕ್ಕೆ ಅಂತ ಕರ್ಕೊಂಡು ಹೋದಾಗ ಕ್ಯಾಟ್ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದ. ಮಹಾಲಕ್ಷ್ಮಿ ಲೇಔಟ್ ನ ಕಿರ್ಲೋಸ್ಕರ್ ಫ್ಯಾಕ್ಟರಿ ಹತ್ತಿರ ಕರ್ಕೊಂಡು ಹೋಗಿದ್ದಾಗ ಅಲ್ಲಿಂದ ಪರಾರಿಯಾಗೋದಕ್ಕೆ ಮುಂದಾಗಿದ್ದ. ಅಲ್ಲದೆ  ಪೊಲೀಸ್ ಪೇದೆ ಚೌಡೇಗೌಡರ ಮೇಲೆ ಹಲ್ಲೆ ನಡೆಸಿ ಓಡುವ ಯತ್ನ ಮಾಡಿದ್ದ. ಈ ವೇಳೆ ಇನ್ಸ್ ಪೆಕ್ಟರ್ ಪ್ರಶಾಂತ್  ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಆತ ಅದನ್ನ ಕೇಳದೆ ಹೋದಾಗ ಎರಡು ಕಾಲಿಗೆ ಗುಂಡು ಹಾರಿಸಿದ್ದಾರೆ.ನಂತ್ರ ರಾಜುನನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಫ್ರೆಂಡ್ ಶಿಪ್ ಗಾಗಿ ಮರ್ಡರ್ ಕೇಸ್ ನಲ್ಲಿ ಭಾಗಿಯಾಗಿದ್ದಕ್ಕೆ ರಾಜು ಲೈಫ್ ಟೈಂ ಹ್ಯಾಂಡಿಕ್ಯಾಪ್ಟ್ ಆಗಿದ್ದಾನೆ.

ಇನ್ನೊಂದು ಕಡೆ ಪ್ರಕರಣ ಉಳಿದ ಆರೋಪಿಗಳು ಮಾತ್ರ ಪೊಲೀಸ್ರಿಂದ ತಪ್ಪಿಸಿಕೊಂಡು ತಿರುಗಾಡ್ತಾನೆ ಇದ್ದಾರೆ. ಈ ಕೇಸ್ ನಲ್ಲಿ ಹೇಮಂತ್, ಜಗ್ಗಿ,ಶ್ರೀಕಂಠರನ್ನ ಪೊಲೀಸ್ರು ಬಂಧಿಸಿದ ಮೇಲೆ ಲಕ್ಷ್ಮಣನ ಕೊಲೆಯ ಹಿಂದನ ಅಸಲಿ ಕಾರಣ ತಿಳಿಯುತ್ತೆ. ಲಕ್ಷ್ಮಣ ದೇವರ ಹೆಸರಿಟ್ಟುಕೊಂಡು ಸತ್ತಿದ್ದಾನೆ ಅಂದ್ರೆ ಅವನೇನು ಪುಣ್ಯಪುರುಷನಲ್ಲ. ಇವನಿಂದ ಅನ್ಯಾಯಕ್ಕೆ ಒಳಗಾದವರಿಗೆ ಅವನನ್ನ ಎದುರಿಸುವ ತಾಕತ್ತು ಇದ್ದಿದ್ರೆ, ಅವರ ಆಕ್ರೋಶದ ಹಿಂದೆ ಯಾರದ್ರು ಬೆನ್ನೆಲುಬಾಗಿ ನಿಂತಿದ್ರೆ ಲಕ್ಷ್ಮಣ ಯಾವತ್ತೋ ಸಾವಿನ ರೇಖೆ ದಾಟಿ ಹೋಗ್ತಿದ್ದ. ಆದ್ರೆ ಇವನ ಅಸ್ತ್ರ ಯಾವತ್ತು ಕೈಲಾಗದವರ ಮೇಲೆಯೇ ನಡೆಯುತ್ತಿತ್ತು. ಹೀಗಾಗಿ ಅವರೆಲ್ಲಾ ತಮ್ಮ ಆಸ್ತಿ. ಹಣ ಎಲ್ಲವನ್ನ ಕಳ್ಕೊಂಡು ಸುಮ್ಮನಾಗಿದ್ರು.

ಅದೆಷ್ಟು ಜನರ ಕಣ್ಣೋ ಏನೋ ಪಾಪ ಇವತ್ತು ಇವನ ಫ್ಯಾಮಿಲಿಯವರು ಕಣ್ಣೀರು ಹಾಕ್ತಿದ್ದಾರೆ. ಎಷ್ಟೇ ಕೋಟಿ ದುಡ್ಡಿದ್ರು ಇವತ್ತಿನ ಆ ನೋವನ್ನ ತುಂಬಿಕೊಡೋದಕ್ಕೆ ಅವರಿಗೆ ಸಾಧ್ಯವಾಗ್ತಿಲ್ಲ.ಇನ್ನೊಂದೆರಡು ದಿನದ ಹೊತ್ತಿಗೆ ಲಕ್ಷ್ಮಣನನ್ನ ಕೊಂದವರೆಲ್ಲಾ ಪೊಲೀಸ್ರ ಬಲೆಗೆ ಬೀಳಲಿದ್ದಾರೆ. ಅಷ್ಟು ಹೊತ್ತಿಗೆ ಮರ್ಡರ್ ಮಾಡಿದವರ ವಿರುದ್ಧ ಒಂದು ಟೀಂ ರೆಡಿಯಾಗಿರುತ್ತೆ. ಲಕ್ಷ್ಮಣನ ಟೀಂ ಇದಕ್ಕೆ ರಿವೇಂಜ್ ತೀರಿಸಿಕೊಳ್ಳದೆ ಸುಮ್ಮನಿರೋದಿಲ್ಲ. ಅಲ್ಲದೆ ರಿವೇಂಜ್ ತೀರಿಸಿಕೊಳ್ಳೋದಕ್ಕೆ ಅಣ್ಣ ರಾಮ ಇದ್ದಾನೆ. ಅಲ್ಲದೆ ಹನುಮಂತನು ಇದ್ದಾನೆ. ಇನ್ನೊಂದು ಕಡೆ ಎಲ್ಲವನ್ನ ನೀಟಾಗಿ ಡೀಲ್ ಮಾಡೋದಕ್ಕೆ ದೊಡ್ಡ ಬಾಸ್ ಕೂಡಾ ಇದ್ದಾರೆ. ಹೀಗಾಗಿ ಕೇಸ್ ನಲ್ಲಿ ಅರೆಸ್ಟ್ ಆದವರು ಜೈಲಲ್ಲಿ ಇದ್ದಷ್ಟು ದಿನ ಸೇಫಾಗಿರ್ತಾನೆ. ಜೈಲಿನಿಂದ ಹೊರಗೆ ಬಂದ ಮೇಲೆ ಯಾರ ವಿಕೆಟ್ ಯಾವಾಗ ಬೀಳುತ್ತೆ ಅನ್ನೋದನ್ನ ಹೇಳೋದಕ್ಕೆ ಆಗೋದಿಲ್ಲ.

LEAVE A REPLY

Please enter your comment!
Please enter your name here