Home Cinema ನಟ ಚೇತನ ಮೇಲೆ ಪ್ರಿಯಾಂಕ ಉಪೇಂದ್ರ ಕೆಂಡಾಮಂಡಲ..!? “ಬೆಂಕಿ”ಯಾದ ಪ್ರಿಯಾಂಕ ಚೇತನ್ ಬಗ್ಗೆ ಹೇಳಿದ್ದೇನು..!?

ನಟ ಚೇತನ ಮೇಲೆ ಪ್ರಿಯಾಂಕ ಉಪೇಂದ್ರ ಕೆಂಡಾಮಂಡಲ..!? “ಬೆಂಕಿ”ಯಾದ ಪ್ರಿಯಾಂಕ ಚೇತನ್ ಬಗ್ಗೆ ಹೇಳಿದ್ದೇನು..!?

1393
0
SHARE

ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಪ್ರಕರಣ ಭುಗಿಲೇದ್ದ ಬೆನ್ನಲ್ಲೇ, ಪ್ರಿಯಾಂಕ ಉಪೇಂದ್ರ ಅಸಮಾಧಾನ ಸ್ಫೋಟಗೊಂಡಿದೆ. ಚೇತನ್ ಜೊತೆ ತಮ್ಮ ಭಿನ್ನಾಭಿಪ್ರಾಯ, ಹಾಗೂ ಶ್ರುತಿ ಹರಿಹರನ್ ಮೀ ಟೂ ಬಗ್ಗೆ ತಮ್ಮ ಅಭಿಪ್ರಾಯವನ್ನ ಪ್ರಿಯಾಂಕ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಫೈರ್‌ಗೆ ನೀರು ಸುರಿದಿದ್ದು ಯಾರು, ಹೇಗೆ..

ಅರ್ಜುನ್ ಸರ್ಜಾಗೆ ಶ್ರುತಿ ಹರಿಹರನ್ ಮೀ ಟೂ ಅಂದ ಬೆನ್ನೇಟಿಗೆ, ಚಂದನವನದಲ್ಲಿ ಹೊತ್ತಿಕೊಂಡಿದ್ದು ಫೈರ್ ವಿವಾದ. ಯಸ್, ಫೈರ್ ಫಿಲ್ಮ್ ಇಂಡಸ್ಟ್ರೀ ಫಾರ್ ರೈಟ್ & ಈಕ್ವಲಿಟಿ. ಕಳೆದೊಂದುವರೆ ವರ್ಷದ ಹಿಂದೆ ಆರಂಭವಾದ ಸಂಸ್ಥೆ ಇದು. ಹೆಣ್ಣು ಮಕ್ಕಳ ಮೇಲಾಗುವ ಶೋಷಣೆಗಳನ್ನ ತಡೆಯಲು, ಹೆಣ್ಣಿನ ನೋವಿಗೆ ದನಿಯಾಗಲು ಹುಟ್ಟಿಕೊಂಡ ಫೈರ್ ಉದ್ದೇಶ, ಎಲ್ಲವನ್ನೂ ಗುಟ್ಟಾಗಿ ಬಗೆಹರಿಸಬೇಕೆನ್ನೋದಾಗಿತ್ತು.

ಇದು ನಿಯಮ ಕೂಡಾ ಹೌದು. ಆದ್ರೆ ಶ್ರುತಿ ವಿಚಾರದಲ್ಲಿ ಆಗಿದ್ದು ಎಲ್ಲಾ ಉಲ್ಟಾ ಪಲ್ಟಾ
ಹೌದು, ಪ್ರಚಾರವನ್ನ ಯಾವದೇ ಕಾರಣಕ್ಕೂ ತೆಗೆದುಕೊಳ್ಳಬಾರದು ಅನ್ನುವ ನಿಯಮವನ್ನೂ ಗಾಳಿಗೆ ತೂರಿ, ಶ್ರುತಿ ಹರಿಹರನ್ ತಮ್ಮ ಫೈರ್ ಸಂಸ್ಥೆಯ ಮೂಲಕ ತಮ್ಮ ಕಹಿ ಅನುಭವವನ್ನ ಹಂಚಿಕೊಂಡರು. ಇಷ್ಟೇ ಅಲ್ಲ ಶ್ರುತಿ ಸರ್ಜಾ ವಿರುದ್ಧ ಬಾಂಬ್ ಸಿಡಿಸುವ ಮೊದಲೇ, ಫೈರ್ ಪತ್ರಿಕಾ ಗೋಷ್ಠಿಯ ಆಯೋಜನೆ ಮಾಡಲಾಗಿತ್ತು.

ಇದು, ಪ್ರಿಯಾಂಕ ಉಪೇಂದ್ರ ಇನ್ನಿಲ್ಲದ ಅಸಮಾಧಾನಕ್ಕೂ ಕಾರಣವಾಗಿತ್ತು. ಇದೇ ಕಾರಣದಿಂದ ಫೈರ್ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೇ ಸಲ್ಲಿಸಿದ ಪ್ರಿಯಾಂಕ, ಇದೀಗ.. ಫೈರ್ ಉದ್ದೇಶವೇ ಬದಲಾಗಿದೆ ಅಂದಿದ್ದಾರೆ.ಯಸ್, ಫೈರ್, ಸಂಸ್ಥೆ ಶುರುವಾದಾಗ, ಮೂರು ವಿಂಗಡನೆಗಳನ್ನ ಮಾಡಲಾಗಿತ್ತು. ಮಹಿಳೆಯರು, ಬರಹಗಾರರು, ಹಾಗೂ ಕೆಲಸಗಾರರಿಗೆ ಅನ್ನುವ ಭಾಗ ಮಾಡಲಾಗಿತ್ತು. ಬರುವ ದೂರುಗಳನ್ನ ಅಂತರಿಕವಾಗಿಯೇ ಬಗೆಹರಿಸುವ ಉದ್ದೇಶನೂ ಇತ್ತು.

ಆದ್ರೆ ಇದೇ ಉದ್ದೇಶ ದಿನಗಳು ಉರುಳಿದಂತೆ ಬದಲಾಗತೊಡಗಿತು. ಚೇತನ್ ಹಾಗೂ ಪ್ರಿಯಾಂಕ ನಡುವೆ, ಭಿನ್ನಾಭಿಪ್ರಾಯ ಬರಲು ಶುರುವಾಗಿತ್ತು. ಹಾಗಾಗೇ, ಅವತ್ತೇ ಪ್ರಿಯಾಂಕ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವ ಮನಸು ಮಾಡಿದ್ದರು. ಫೈರ್‌ನಲ್ಲಿ ಸದಸ್ಯೆಯಾಗಿ ಇರುವ ತೀರ್ಮಾನಕ್ಕೆ ಬಂದಿದ್ದರು. ಬಟ್, ಫೈರ್ ಶುರುವಾಗುವ ಮುನ್ನವೇ ಅಧ್ಯಕ್ಷೆ ಸ್ಥಾನಕ್ಕೆ ರಾಜಿನಾಮೇ ಕೊಟ್ಟರೆ, ಸಂಸ್ಥೆಗೆ ಕೆಟ್ಟ ಹೆಸರು ಬರುತ್ತೆ ಅನ್ನುವ ಕಾರಣಕ್ಕೆ ಸುಮ್ಮನಾಗಿದ್ದರು ಪ್ರಿಯಾಂಕ.

ಇನ್ನೂ ನಿಮಗೆ ಗೊತ್ತಿರಲಿ, ಶ್ರುತಿ ಹರಿಹರನ್ ಇಲ್ಲಿ ಅರ್ಜುನ್ ಸರ್ಜಾ ವಿರುದ್ಧ ಬಾಂಬ್ ಸಿಡಿಸಿದಾಗ, ಪ್ರಿಯಾಂಕ ಶ್ರೀಲಂಕಾದಲ್ಲಿದ್ದರು. ಬಹುಶ, ಪ್ರಿಯಾಂಕ ಇಲ್ಲಿ ಇದ್ದಿದ್ದರೆ ಶ್ರುತಿ ಮಾಧ್ಯಮದ ಮುಂದೆ ಹೋಗುವದನ್ನ ತಡೆಯುತ್ತಿದ್ದರೇನೋ.. ಇದೇ ಕಾರಣಕ್ಕೋ ಏನೋ, ಪ್ರಿಯಾಂಕ ಇಲ್ಲದ ಸಮಯದಲ್ಲೇ ಚೇತನ್ ಹಾಗೂ ಶ್ರುತಿ ಫೈರ್ ಪತ್ರಿಕಾ ಗೋಷ್ಠಿಯ ಆಯೋಜನೆ ಮಾಡಿದ್ದರು ಮಾಡಿರಬಹುದು. ಇದು, ಪ್ರಿಯಾಂಕ ಇರಿಸು ಮುರಿಸಿಗೆ ಕಾರಣವಾಗಿದೆ. ಹಾಗಾಗೇ, ಫೈರ್‌ನಿಂದ ಆಚೆ ಬಂದಿದ್ದಾರೆ ಪ್ರಿಯಾಂಕ.

ಇನ್ನೂ ಇಲ್ಲಿ ಇನ್ನೊಂದು ವಿಚಾರ ಪ್ರಿಯಾಂಕ ಅವ್ರಿಗೆ ಹರ್ಟ್ ಆಗುವಂತೆ ಮಾಡಿದೆ. ಹೌದು, ಅಸಲಿಗೆ ಪ್ರಿಯಾಂಕ ಶ್ರೀಲಂಕಾದಲ್ಲಿದ್ದಾಗ, ಚೇತನ್ ಪ್ರಿಯಾಂಕಗೊಂದು ಸಂದೇಶ ಕಳುಹಿಸಿದ್ದರು. ಅದು, ನಿಮಗೆ ಅಧ್ಯಕ್ಷೆಯಾಗಿರಲು ಇಷ್ಟವಿಲ್ಲ ಅಂಥ ಹೇಳಿದ್ದೀರಿ, ರಾಜೀನಾಮೇ ನೀಡೋದು ಪಕ್ಕಾ ಅಲ್ವಾ ಅನ್ನುವ ಸಂದೇಶ. ಇದಕ್ಕೆ ರಿಯ್ಯಾಕ್ಟ್ ಮಾಡಿದ್ದ ಪ್ರಿಯಾಂಕ, ಭಾರತಕ್ಕೆ ಮರಳಿದ್ಮೇಲೆ ನಾನು ರಾಜಿನಾಮೇ ನೀಡುತ್ತೇನೆ ಅಂದಿದ್ದರು. ಹೀಗಿದ್ದೂ, ಪ್ರಿಯಾಂಕ ರಾಜಿನಾಮೇ ನೀಡುವ ಮುನ್ನವೇ.. ಭಾರತಕ್ಕೆ ಬರುವ ಮುನ್ನವೇ.. ಪ್ರಿಯಾಂಕ, ಸ್ಥಾನದಲ್ಲಿ ಕವಿತಾ ಲಂಕೇಶ್ ಅವ್ರನ್ನ ಕೂರಿಸಿ ಬಿಟ್ಟಿದ್ದರು ಚೇತನ್…

ಇನ್ನೂ ಫೈರ್ ವಾಟ್ಸಾಫ್ ಗ್ರೂಪ್ ಓಪನ್ ಮಾಡುವ ಐಡಿಯಾವನ್ನ ಪ್ರಿಯಾಂಕ ಚೇತನ್‌ಗೆ ಕೊಟ್ಟಿದ್ದರು. ಅದ್ರಂತೆ ಗ್ರೂಪ್ ಕೂಡಾ ಮಾಡಲಾಗಿತ್ತು. ಆದ್ರೆ ದಿನಗಳು ಉರುಳಿದಂತೆ ಚೇತನ್, ಯಾರ ಯಾರನ್ನೋ ಗ್ರೂಪಿಗೆ ಸೇರಿಸಿಕೊಳ್ಳಲು ಶುರುಮಾಡಿದ್ದರು. ಕಳೆದ ಎಂಟು ತಿಂಗಳ ಹಿಂದೆ ಇದೇ ಗ್ರೂಪಿಗೆ ಶ್ರುತಿ ಹರಿಹರನ್ ಬಂದ್ರು. ಗ್ರೂಪ್ ಅಡ್ಮಿನ್ ಕೂಡಾ ಆದರು. ಅಲ್ಲಿಂದ ಎಲ್ಲ ಬದಲಾಗಲು ಶುರುವಾಗಿತ್ತು, ಉದ್ದೇಶ ದಾರಿ ತಪ್ಪಲು ಶುರುವಾಗಿತ್ತು ಅನ್ನುತ್ತಾರೆ ಪ್ರಿಯಾಂಕ.

ಅಂದ ಹಾಗೇ ಫೈರ್‌ನಿಂದ ಬರೀ ಪ್ರಿಯಾಂಕ ಉಪೇಂದ್ರ ಅಷ್ಟೇ ಆಚೆ ಬಂದಿಲ್ಲ. ಸಂಸ್ಥೆಯ ಸದಸ್ಯರಾಗಿದ್ದ ರೇಖಾರಾಣಿ, ವೀಣಾಸುಂದರ್ ಸೇರಿ ಅನೇಕರು ಹೊರ ಬಂದಿದ್ದಾರೆ. ಕಾರಣ, ಸಂಸ್ಥೆಯಲ್ಲಿದ್ದು ಇವ್ರಿಗ್ಯಾರಿಗೂ ಶ್ರುತಿ ಸರ್ಜಾ ವಿರುದ್ಧ ಬಾಂಬ್ ಸಿಡಿಸುತ್ತಿರುವ ವಿಚಾರ ಗೊತ್ತೇ ಇರಲಿಲ್ಲ. ಇವ್ರ ಯಾರಿಗೂ ಹೇಳುವ ಗೋಜಿಗೆ ಚೇತನ್ ಹೋಗಿರಲಿಲ್ಲ. ಹಾಗಾಗಿ, ಹೊರಬರುವ ನಿರ್ಧಾರಕ್ಕೆ ಬಂದಿರುವ ಎಲ್ಲರು ಚೇತನ್ ಫೈರ್‌ಗೆ ಒಳ್ಳೇಯದಾಗಲಿ ಅನ್ನುತ್ತಾರೆ. ಉದ್ದೇಶವನ್ನ ಚೇತನ್ ಮರೆಯದಿರಲಿ ಅನ್ನುತ್ತಾರೆ.

ಅದೇನೆ ಇರ‍್ಲಿ, ಸದ್ಯ ಪ್ರಿಯಾಂಕ ಫೈರ್‌ನಿಂದ ಆಚೆ ಬಂದಿದ್ದಾರೆ. ಆಚೆ ಬಂದಿದ್ದಕ್ಕೆ ಕಾರಣಗಳನ್ನೂ ಕೊಟ್ಟಿದ್ದಾರೆ. ಅದು, ತುಂಬಾ ನೋವಿನಿಂದ. ಮುಂದಿನ ದಿನಗಳಲ್ಲಿ ಪ್ರಿಯಾಂಕ ಇಲ್ಲದ ಫೈರ್, ಹೇಗೆ ಕಾರ್ಯ ನಿರ್ವಹಿಸುತ್ತೆ.. ಫೈರ್‌ಗೆ ಹೋಗುವ ಪ್ರತಿಯೊಂದು ಮೀ ಟೂ ಕೇಸ್‌ನ್ನ ಶ್ರುತಿ ಕೇಸಿನಂತೆ ಪಬ್ಲಿಕ್ ಮಾಡಲಾಗುತ್ತಾ, ಕಾದು ನೋಡಬೇಕು….

LEAVE A REPLY

Please enter your comment!
Please enter your name here