Home Crime ನಡು ರಸ್ತೆಯಲ್ಲೇ ಮಹಿಳಾ ಟೆಕ್ಕಿಗೆ ಲೈಂಗಿಕ ದೌರ್ಜನ್ಯ..!! ನೆರವಿಗೆ ಬಾರದ ಪೊಲೀಸರ ವಿರುದ್ಧ ಟೆಕ್ಕಿಗಳ ಆಕ್ರೋಶ…

ನಡು ರಸ್ತೆಯಲ್ಲೇ ಮಹಿಳಾ ಟೆಕ್ಕಿಗೆ ಲೈಂಗಿಕ ದೌರ್ಜನ್ಯ..!! ನೆರವಿಗೆ ಬಾರದ ಪೊಲೀಸರ ವಿರುದ್ಧ ಟೆಕ್ಕಿಗಳ ಆಕ್ರೋಶ…

2692
0
SHARE

ಸಿಲಿಕಾನ್ ಸಿಟಿಯಲ್ಲಿ ಬೀದಿ ಕಾಮಣ್ಣರ ಹಾವಳಿ ಮೀತಿ ಮೀರಿದೆ..ಹಾಡಹಗಲೇ ನಡುರಸ್ತೆಯಲ್ಲೇ ಕಾಮುಕರು ಮಹಿಳಾ ಟೆಕ್ಕಿಯ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಾಮುಕರನ್ನು ಕುಚೆಷ್ಟೆಗೆ ಗಾಬರಿಯಾದ ಟೆಕ್ಕಿ ವಾಗ್ವಾದಕ್ಕೆ ಇಳಿದು ಕಾಮುಕರಿಗೆ ಬುದ್ಧಿ ಕಲಿಸಿದ್ದಾಳೆ. ಸಹಾಯಕ್ಕೆ ಬರಬೇಕಾಗಿದ್ದ ಪೊಲೀಸರ ಕೈ ಚೆಲ್ಲಿ ಕುಳಿತಿರೋದು ಟೆಕ್ಕಿಯ ಆಕ್ರೋಶಕ್ಕೆ ಕಾರಣವಾಗಿದೆ.ನಡು ರಸ್ತೆಯಲ್ಲೇ ಮಹಿಳಾ ಟೆಕ್ಕಿಗೆ ಲೈಂಗಿಕ ದೌರ್ಜನ್ಯ..!

 

ನೆರವಿಗೆ ಬಾರದ ಪೊಲೀಸರ ವಿರುದ್ಧ ಟೆಕ್ಕಿಗಳ ಆಕ್ರೋಶ. ಸಿಲಿಕಾನ್ ಸಿಟಿಯಲ್ಲಿ ಬೀದಿ ಕಾಮಣ್ಣರ ಹಾವಳಿ ಮೀತಿ ಮೀರಿದೆ..ಹಾಡಹಗಲೇ ನಡುರಸ್ತೆಯಲ್ಲೇ ಕೀಚಕರು ಮಹಿಳಾ ಟೆಕ್ಕಿಗೆ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ. ಈ ಘಟನೆ ನಡೆದಿದ್ದು ,ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲೇ ಡೈಮಂಡ್ ಡಿಸ್ಟೇಕ್ಟ್ ಐಟಿ ಕಚೇರಿ ಮುಂಭಾಗದಲ್ಲೇ…

 

ಅಂದಹಾಗೆ ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರೋ ಖಾಸಗಿ ಐಟಿ ಕಂಪನಿ ಸಾಫ್ಟ್ ವೇರ್ ಉದ್ಯೋಗಿಗಳು ಜ್ಯೂಸ್ ಕುಡಿಯಲು ತೆರಳಿದ್ರು.. ಜ್ಯೂಸ್ ಕುಡಿದು ಕಚೇರಿಗೆ ವಾಪಸ್ ಆಗ್ತಿದ್ರು..ಈ ವೇಳೆ ಅದೇ ರಸ್ತೆಯ ಬಾರ್ ಮುಂದೆ ನಿಂತಿದ್ದ ನಾಲ್ಕು ಮಂದಿ ಕಾಮುಕರ ಪೈಕಿ ಒಬ್ಬ ಮಹಿಳಾ ಟೆಕ್ಕಿಯ ಕೈ ಹಿಡಿದು ಎಳೆದಾಡಿದ್ದ..

 

ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸಿದ್ದಾರೆ..ಇದರಿಂದ ಆಕ್ರೋಶಗೊಂಡ ಆಕೆ ಕಾಮುಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಗೂಂಡಾ ವರ್ತನೆ ತೋರಿದ ಕಾಮುಕರು ಯುವತಿ ಸಹದ್ಯೋಗಿ ಮೇಲೆ ಹಲ್ಲೆ ನಡೆಸಲು ಮುಂದಾದರು.

 

 

ಬೆಂಗಳೂರು ಯುವತಿಯರಿಗೆ ಡೇ ಟೈಂನಲ್ಲೂ ಸೇಫ್ ಅಲ್ಲಾ ಅಂತ ನೊಂದ ಯುವತಿಯರು ಹೇಳ್ತಿದ್ದಾರೆ…ಇನ್ನು, ಕಾಮುಕರನ್ನು ಹಿಡಿದು ಕಂಟ್ರೋಲ್ ರೂಮ್ ಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ..ಆದ್ರೆ ಕೂಡಲೇ ಸ್ಥಳಕ್ಕೆ ಬಾರದೇ ಜೀವನ ಭೀಮಾನಗರ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

 

ಕಂಟ್ರೋಲ್ ರೂಮ್ ಹಾಗೂ ಜೀವನ ಭೀಮಾನಗರ ಪೊಲೀಸರ ವರ್ತನೆಯಿಂದ ಬೇಸತ್ತಿರೋ ಟೆಕ್ಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ಪೊಲೀಸ್ ಯುಸ್ ಲೆಸ್ ಎಂದು ಕಿಡಿಕಾರಿದ್ದಾರೆ…
.

LEAVE A REPLY

Please enter your comment!
Please enter your name here