Home District “ನನಗೆ ನನ್ನ ಲವರ್ ಬೇಕು, ನನ್ನ ಬಿಟ್ಬಿಡಿ ಪ್ಲೀಸ್…” ಹೆತ್ತರವರನ್ನ ಅಂಗಲಾಸಿದ ಯುವತಿ, ಸಾಮಾಜಿಕ ಜಾಲತಾಣಗಳಲ್ಲಿ...

“ನನಗೆ ನನ್ನ ಲವರ್ ಬೇಕು, ನನ್ನ ಬಿಟ್ಬಿಡಿ ಪ್ಲೀಸ್…” ಹೆತ್ತರವರನ್ನ ಅಂಗಲಾಸಿದ ಯುವತಿ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್…

344
0
SHARE

ನನಗೆ ಲವರ್ ಬೇಕು, ನನ್ನನ್ನು ಬಿಟ್ಟು ಬಿಡಿ ಅಂತ ತಂದೆ ಹಾಗೂ ಆಕೆಯ ಸಂಬಂಧಿಕರೊಂದಿಗೆ ಯುವತಿ ರಂಪಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ವಿದುರಾಶ್ವತ್ಥ ಗ್ರಾಮದಲ್ಲಿ ನಡೆದಿದೆ. ಈ ಯುವತಿ ರಂಪಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ…

ಇದೇ ಗ್ರಾಮದ ಆಟೋ ಚಾಲಕನಾಗಿದ್ದ ಯುವಕನೊಂದಿಗೆ ಯುವತಿ ಪರಾರಿಯಾಗಿ ಆತನ ಮನೆ ಸೇರಿದ್ಲು. ಆಕೆಯ ತಂದೆ ನಮ್ಮ ಮನೆಗೆ ವಾಪಸ್ ಬಾಮ್ಮಾ ಎಂದು ಮಗಳನ್ನ ಪರಿಪರಿಯಾಗಿ ಬೇಡಿಕೊಂಡ್ರು ನನಗೆ ಅವನೇ ಬೇಕು ಎಂದು ಹಠಹಿಡಿದಿದ್ದಾಳೆ. ಇತ್ತ ಪ್ರಿಯಕರ ಬಾಬು ತನ್ನ ಪ್ರಿಯತಮೆ ಇಲ್ಲ ಎಂದು ಪರಿತಪಿಸುತ್ತಿದ್ದಾನೆ…

ಗೌರೀಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಬಾರ್ಗವಿ ಆಗ ಮದುವೆ ವಯಸ್ಸು ಆಗಿರಲಿಲ್ವಂತೆ, ಹಾಗಾಗಿ ಮದುವೆ ವಯಸ್ಸಿಗೆ ಬಂದ ಮೇಲೆ ಮದುವೆಯಾಗೋಣ ಅಂದುಕೊಂಡಿದ್ರಂತೆ.. ಇಂದು ಬೆಳಿಗ್ಗೆ ಪುಣ್ಯಕ್ಷೇತ್ರ ವಿಧುರಾಶ್ವಥದಲ್ಲಿ ಮದುವೆಯಾಗಲು ನಿರ್ಧರಿಸಿದ್ರಂತೆ…

ಇತ್ತ ಬಾರ್ಗವಿ ಪೋಷಕರು ಮದುವೆ ಮಾಡಿಸುವುದಾಗಿ ನಾಟಕ ಮಾಡಿ ಪ್ರಿಯಕರ ಬಾಬು ಮನೆಗೆ ಬಂದು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.. ಇದ್ರಿಂದ ಭಾರ್ಗವಿ ಆಕೆಯ ಪೋಷಕರ ಜೊತೆಗೆ ಹೋಗಲು ಒಪ್ಪದೆ ರಂಪಾಟ ನಡೆಸಿದ್ದಾಳೆ…

LEAVE A REPLY

Please enter your comment!
Please enter your name here