ಆಪರೇಷನ್ ಕಮಲ ಆಡಿಯೋ ವಿಧಾನಸಭೆಯಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿ ಮಾಡಿತು. ವಿಧಾನಸಭೆ ಕಲಾಪದಲ್ಲಿ ತಮ್ಮ ಮೇಲೆ ಬಂದಿರುವ ಆರೋಪವನ್ನು ಉದ್ದೇಶಿಸಿ ಮಾತನಾಡುತ್ತಾ ಭಾವುಕರಾದರು. ನಾನು ಅವಕಾಶವಾದಿವಲ್ಲ.
ಅಷ್ಟು ದೊಡ್ಡ ಮೊತ್ತದ ಹಣವನ್ನು ಎಲ್ಲಿ ಇಟ್ಟುಕೊಳ್ಳಲಿ. ವಿಷಯ ತಿಳಿದ ಎರಡು ದಿನಗಳಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆಂದು ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಗದ್ಗಿತರಾಗಿ ಕಣ್ಣೀರಿಟ್ಟರು.ಆಪರೇಷನ್ ಕಮಲ ಆಡಿಯೋ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು… ಪ್ರಮುಖವಾಗಿ ಸ್ಪೀಕರ್ ಅವರಿಗೆ 50 ಕೋಟಿ ಅಡ್ಜಸ್ಟ್ ಮಾಡಿದ್ದೇವೆ ಎಂಬ ಮಾತು ಪ್ರಮುಖವಾಗಿ ಪ್ರಸ್ತಾಪವಾಯ್ತು..
ವಿಧಾನಸಭೆಯ ಕಲಾಪ ಪ್ರಾರಂಭಗೊಂಡ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸದನವನ್ನುದ್ದೇಶಿಸಿ ಮಾತನಾಡುತ್ತ ತಮ್ಮ ಮೇಲೆ ಕೇಳಿಬಂದಿರುವ ಹಣ ಪಡೆದುಕೊಂಡಿರುವ ಆರೋಪಗಳಿಂದ ತಾನು ಎರಡು ದಿನಗಳಿಂದ ತೀವ್ರ ಮಾನಸಿಕ ಗೊಂದಲಕ್ಕೆ ಒಳಗಾಗಿದ್ದೆ ಎಂದು ಹೇಳಿದರು.ನಾನು ಅವಕಾಶವಾದಿಯಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ, ಸರ್ಕಾರಿ ಬಂಗಲೆಯಲ್ಲಿಲ್ಲ.
ಅಷ್ಟು ದೊಡ್ಡ ಹಣ ನೀಡಿದರೆ ಎಲ್ಲಿ ಇಟ್ಟುಕೊಳ್ಳಲಿ? ನನಗೆ ಹಣವನ್ನು ಎಲ್ಲಿ ಕೊಟ್ಟರು? ಹೇಗೆ ಕೊಟ್ಟರು? ನನಗೆ ಏಕೆ ಈ ಅನ್ಯಾಯ. ನಾವೀಗ ಎಲ್ಲಿಗೆ ಬಂದು ತಲುಪಿದ್ದೇವೆ?.. ನನ್ನ ಚಾರಿತ್ರ್ಯವಧೆ ಮಾಡಿದ್ರೆ ಸಾವಿಗಿಂಥಾ ಹೆಚ್ಚು ಕ್ರೌರ್ಯ ಆಗುತ್ತೆ. ಈ ರೀತಿ ಆಪಾದನೆ ಬರುವಂತೆ ನಾನು ಎಂದು ನಡೆದುಕೊಂಡಿಲ್ಲ ಎಂದು ಸದನದಲ್ಲಿ ಸ್ಪೀಕರ್ ಭಾವುಕರಾದರು.
ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ರಮೇಶ್ ಕುಮಾರ್ ಗದ್ಗದಿತರಾದರು… ತಮ್ಮ ತಾಯಿಯ ವಿಚಾರಧಾರೆಗಳನ್ನ ಸ್ಮರಿಸಿದ ರಮೇಶ್ ಕುಮಾರ್, ಉಳ್ಳವರ ಮನೆ ಹೋಗಿ ಹಿಂತಿರುಗುವಾಗ ಆ ಮನೆಯ ಧೂಳು ಕೂಡ ತಮ್ಮ ಕಾಲಿಗೆ ಅಂಟಿಕೊಳ್ಳಬಾರದು ಎಂದು ತಾಯಿ ತಮಗೆ ಭೋದನೆ ಮಾಡುತ್ತಿದ್ದರು..
ಅಂದಿನಿಂದ ಇಂದಿನವರೆಗೂ ಪ್ರಮಾಣಿಕವಾಗಿ ಬದುಕು ನಡೆಸುತ್ತಿದ್ದೇನೆ ಎಂದು ರಮೇಶ್ ಕುಮಾರ್ ಸದನದಲ್ಲಿ ಹೇಳಿದ್ರು.ಜೀವನದಲ್ಲಿ ಇಂತಹ ಗುರುತರ ಆರೋಪ ಹೊತ್ತು ಜೀವನ ಮಾಡೋದು ಕಷ್ಟ.. ಮನೆಯವರಿಗೆ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಸಹೋದರನಿಗೆ ಮುಖ ತೋರಿಸಲಾರದಷ್ಟು ಹಿಂಸೆಯಾಗುತ್ತಿದೆ ಎಂದು ರಮೇಶ್ ಕುಮಾರ್ ನೊಂದು ನುಡಿದ್ರು.