Home Cinema ನನ್ನಿಂದ ‘ಮರೆಯಲು’ ಸಾಧ್ಯವಿಲ್ಲ ಅಂದ್ರೇಕೆ ‘ಸುದೀಪ’…! ಹೆಬ್ಬುಲಿಗೆ ಹೆಂಗೆಲ್ಲಾ ‘ಕಾಟ’ ಕೊಟ್ಟಿದ್ದಾರೆ ಗೊತ್ತಾ ಕಿಟ್ಟಪ್ಪ…?

ನನ್ನಿಂದ ‘ಮರೆಯಲು’ ಸಾಧ್ಯವಿಲ್ಲ ಅಂದ್ರೇಕೆ ‘ಸುದೀಪ’…! ಹೆಬ್ಬುಲಿಗೆ ಹೆಂಗೆಲ್ಲಾ ‘ಕಾಟ’ ಕೊಟ್ಟಿದ್ದಾರೆ ಗೊತ್ತಾ ಕಿಟ್ಟಪ್ಪ…?

2137
0
SHARE

ಪೈಲ್ವಾನ್… ಸ್ಯಾಂಡಲ್‌ವುಡ್‌ನ ಮೋಸ್ಟ್ ಅವೇಟೆಡ್ ಸಿನಿಮಾ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ಲೇವರ್ ಇರುವ, ಪವರ್ ಪ್ಯಾಕ್ಡ್ ಸಿನಿಮಾ. ಇತ್ತೀಚೆಗೆಷ್ಟೇ ಮೇಕಿಂಗ್ ಸ್ಟಿಲ್ ಮೂಲಕ ಹವಾ ಎಬ್ಬಿಸಿದ ಪೈಲ್ವಾನ್ ಪರಾಕ್ರಮದ ಬಗ್ಗೆ ಕಿಚ್ಚ ಮೌನ ಮುರಿದಿದ್ದು, ತಮ್ಮ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.ಪೈಲ್ವಾನ್ ಕಿಚ್ಚ& ಕಿಟ್ಟಪ್ಪ ಕಾಂಬಿನೇಷನ್ ಇರುವ ಸಿನಿಮಾ. ಹೆಬ್ಬುಲಿ ಕಾಂಬಿನೇಷನ್ ಇರುವ ಸಿನಿಮಾ ಪೈಲ್ವಾನ್ ಅಖಾಡ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದು. ಕಿಟ್ಟಪ್ಪ ಕೊಟ್ಟ ಕಾಟದ ಬಗ್ಗೆ ಸುದೀಪ್ ಟ್ವೀಟ್ ಮಾಡುವ ಮೂಲಕ ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ.

ಹೊಸತನ ಚೆನ್ನಾಗಿದೆ:ನಾನು ಸಿನಿಮಾ ಜೀವನಕ್ಕೆ ಬಂದು ೨೩ ವರ್ಷಗಳು ಕಳೆದಿವೆ. ಈ ನನ್ನ ಜರ್ನಿಯಲ್ಲಿ ಹೊಸಪ್ರಯೋಗಗಳನ್ನು ಮಾಡಲು ಖುಷಿಯಾಗುತ್ತದೆ. ಈ ಹಿಂದೆ ಪ್ರಯತ್ನ ಮಾಡಿರದ ಎಕ್ಸ್‌ಪರಿಮೆಂಟ್ಸ್‌ಗಳನ್ನು ಮಾಡಲು ನನ್ನನ್ನು ಪರಿಕ್ಷೆಗೊಳಪಡಿಸುವಂತ ಪ್ರಯೋಗಗಳಿಗೆ ಒಡ್ಡುಕೊಳ್ಳುವುದು ಖುಷಿಯ ಅನುಭವ. ಆ ಒಂದು ವಿನೂತನ ಅನುಭವವನ್ನು ಕಿಟ್ಟಪ್ಪ & ಪೈಲ್ವಾನ್ ಟೀಂನಲ್ಲಿ ಗಳಿಸಿಕೊಂಡಿದೇನೆ. ಪೈಲ್ವಾನ್ ಚಿತ್ರ ನೀಡಿದ ವಂಡರ್‌ಫುಲ್ ಎಕ್ಸ್ ಫೀರಿಯನ್ಸ್ ನನ್ನ ಜೀವನದಲ್ಲಿ ಹೊಸ ಸ್ಫೂರ್ತಿ ತಂದಿದೆ.ಚಿತ್ರರಂಗದಲ್ಲಿ ಈಗಾಗಲ್ಲೇ ಬಾಕ್ಸಿಂಗ್ ಮತ್ತು ಕುಸ್ತಿಗೆ ಸಂಬಂಧಿಸಿದ ಸಾಕಷ್ಟು ಸಿನಿಮಾಗಳು ಬಂದಿದೆ.

ನನ್ನ ಸಿನಿಮಾ ಕೆರಿಯರ್‌ನಲ್ಲಿ ಈ ಎರಡು ಕ್ರೀಡೆ ಆಧಾರಿತ ಸಿನಿಮಾ ಮಾಡಬಲ್ಲೆ ಎಂದುಕೊಂಡಿರಲಿಲ್ಲ. ಲಕ್ಕೀಲೀ ಒಂದೇ ಸಿನಿಮಾದಲ್ಲಿ ಎರಡು ಕ್ರೀಡೆ ಒಳಗೊಂಡಿರುವ ಚಿತ್ರದಲ್ಲಿ ನಟಿಸಿದ್ದೇನೆ. ಆ ಒಂದು ಸಮಯ ನನ್ನ ಪಾಲಿಗೆ ಬಂದಿದ್ದು ಸಂತಸ ತಂದಿದೆ.ಸತತ ಆರುವಾರಗಳ ಕಾಲ ಕುಸ್ತಿ ಮತ್ತು ಬಾಕ್ಸಿಂಗ್ ಅಖಾಡಲ್ಲಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಎನರ್ಜಿಯನ್ನು ಹಾಕಿ ಚಿತ್ರೀಕರಿಸಲಾಗಿದೆ. ನಾನು ಪ್ರತಿಯೊಂದು ಗಳಿಗೆಯ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಇದರಿಂದ ನನ್ನ ಶಕ್ತಿ ಮತ್ತು ಸಾಮಥ್ಯ ಇನ್ನಷ್ಟು ಹೆಚ್ಚಾಗಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಪೈಲ್ವಾನ್ ಮತ್ತು ಬಾಕ್ಸಿಂಗ್ ಭಾಗದ ಚಿತ್ರೀಕರಣ ಮುಗಿದಿದೆ.

ಆದ್ರು ಕೆಲವೊಂದು ಶಾಟ್‌ಗಳು ಬಾಕಿ ಉಳಿದಿದೆ. ಆದ್ರು ಬಾಕ್ಸಿಂಗ್ ಮತ್ತು ಪೈಲ್ವಾನ್ ಚಿತ್ರೀಕರಣದ ಭಾಗವನ್ನು ನಾನು ಖಂಡಿತ ಮಿಸ್ ಮಾಡಿಕೊಳ್ಳುತ್ತಿದ್ದೇನೆ.ಇನ್ನು ಹಾಲಿವುಡ್ ಸ್ಟಂಟ್ ನಿರ್ದೇಶಕ ಲರ್ನೆಲ್ ಸ್ಟೋವಾಲ್ ನೀಡಿದ ತರಬೇತಿ, ಪ್ರತಿಯೊಂದು ಫ್ರೇಮ್‌ನಲ್ಲಿ ಅಚ್ಚುಕಟ್ಟಾಗಿ ಮೂಡಿಬರುವಂತೆ ಮಾಡಿದೆ. ಎನರ್ಜಿಯ ಕೇಂದ್ರ ಬಿಂದುವಾಗಿದ್ರು. ಇನ್ನು ಕೃಷ್ಣ ನಿರ್ಮಾಣ ಸಂಸ್ಥೆಯ ಅಮೇಜಿಂಗ್. ಲರ್ನೆಲ್ ಸ್ಟೋವಾಲ್ ಏನ್ ಕೇಳಿದ್ರು ಆ ತಕ್ಷಣದಲ್ಲಿ ಒದಗಿಸಿಕೊಟ್ಟಿದ್ದಾರೆ. ಸ್ಟೋವಾಲ್‌ಗೆ ಧನ್ಯವಾಗಳು ತಿಳಿಸಲೇ ಬೇಕು..ನಿಮ್ಮ…ಕಿಚ್ಚ…ಹೀಗೆ ಸುಧೀರ್ಘ ಟ್ವೀಟ್ ಮಾಡಿರುವ ಕಿಚ್ಚಾ. ಫೈಲ್ವಾನ್ ಅಖಾಡದಲ್ಲಿ ಬೆವರು ಹರಿಸಿರುವ ಪ್ರತಿಯೊಬ್ಬರನ್ನು ನೆನಪಿಸಿಕೊಂಡಿದ್ದಾರೆ.

ಇವರ ಜೊತೆಗೆ ವಿಜಯ್ ಮಾಸ್ಟರ್‌ಗೂ ಸಹ ಕಿಚ್ಚ ಧನ್ಯವಾದ ತಿಳಿಸಿದ್ದಾರೆ. ರವಿ ವರ್ಮ ಸಾಹಸ ನಿರ್ದೇಶನ ಕೂಡ ಚೆನ್ನಾಗಿ ಮೂಡಿಬಂದಿದ್ದು. ಅವರ ಜೊತೆಗೆ ಕೆಲಸ ಮಾಡುವುದು ಖುಷಿ ಎಂದಿದ್ದು. ಯಾವುದೇ ಇಂಜ್ಯೂರಿಗಳು ಆಗದಂತೆ ಮುತುವರ್ಜಿ ವಹಿಸಿದ್ದಾರೆ. ನನ್ನ ಟೀಂನಲಿದ್ದ ಎಲ್ಲರೂ ನನ್ನನ್ನು ತುಂಬಾನೇ ಕಾಳಜಿಯಿಂದ ನೋಡಿಕೊಂಡಿರುವುದು ತು ಂಬಾನೇ ಸ್ಪೆಷಲ್ ಫೀಲ್ ಕೊಟ್ಟಿದೆ ಎಂದಿದ್ದಾರೆ.ಇಷ್ಟೆಲ್ಲಾ ತಮ್ಮ ಮನದಲ್ಲಿದ್ದ ಮಾತನ್ನು ಹಂಚಿಕೊಂಡಿರುವ ಸುದೀಪ್. ಬಾಕ್ಸಿಂಗ್ ರಿಂಗ್ ಯಾಕೆ ಚೌಕಾಕಾರವಾಗಿದೆ ಎಂದು ತಿಳಿದು ಕೊಳ್ಳುವುದರಲ್ಲಿ ಸೋತ್ತಿದ್ದೇನೆ ಎಂದಿದ್ದಾರೆ.

ಈ ಮೂಲಕ ತಾವು ಬಾಕ್ಸಿಂಗ್ ಮತ್ತು ಕುಸ್ತಿಯನ್ನು ಎಷ್ಟು ಮೆಚ್ಚಿಕೊಂಡಿದ್ರು- ಹಚ್ಚಿಕೊಂಡಿದ್ರು ಎಂಬುದನ್ನು ಈ ಮೂಲಕ ಅಭಿಮಾನಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ಇನ್ನು ಹೆಬ್ಬುಲಿ ಕೃಷ್ಣ ಆಕ್ಷನ್ ಕಟ್ ಚಿತ್ರಕ್ಕೆ ಕಿಚ್ಚನಿಗೆ ಆಕಾಂಕ್ಷ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪೈಲ್ವಾನ್ ಅಖಾಡದಲ್ಲಿ ಸುನೀಲ್ ಶೆಟ್ಟಿ, ಕಬೀರ್ ಸಿಂಗ್, ಸುಶಾಂತ್ ಹಾಗೂ ಇತರರು ನಟಿಸಿದ್ದಾರೆ. ಸದ್ಯ ಮೇಕಿಂಗ್ ಮತ್ತು ಚಿತ್ರೀಕರಣ ಮೂಲಕ ಪೈಲ್ವಾನ್ ಟೆಂಪರ್ ಹೆಚ್ಚಾಗಿಸಿದೆ.

ಈಗಾಗಲ್ಲೇ ಎಡಿಟಿಂಗ್ ವರ್ಕ್, ಗ್ರಾಫಿಕ್ಸ್ ವರ್ಕ್ ಗಳು ಆಲ್ ಮೋಸ್ಟ್ ಕಂಪ್ಲೀಟ್ ಆಗುತ್ತಿದ್ದು. ಚಿತ್ರ ೮ ಭಾಷೆಯಲ್ಲಿ ಅದ್ದೂರಿಯಾಗಿ ಜನವರಿ ಮೊದಲವಾರ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.ಅದೇ ಇದ್ರು.. ಪೈಲ್ವಾನ್ ಪರಾಕ್ರಮಕ್ಕೆ ಖುದ್ದು ಕಿಚ್ಚ ಬೆರಗಾಗಿದ್ದು. ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಹಾಗಾಗಿನೇ ಮುಂದಿನ ದಿನಗಳಲ್ಲಿ ಪೈಲ್ವಾನ್ ಪವರ್ ಇನ್ಯಾವ ರೀತಿ ಇರಲಿದೆ ಎಂದು ಕಿಚ್ಚನ ಬಳಗ ಕಾಯುವಂತೆ ಮಾಡ್ತಿದೆ.

LEAVE A REPLY

Please enter your comment!
Please enter your name here