Home Cinema “ನನ್ನ ಜೀವನ ಸಾರ್ಥಕವಾಯಿತು, ನನ್ನ ಕನಸು ಇಷ್ಟು ವರ್ಷಕ್ಕೆ ನನಸಾಯಿತು” ಎಂದು ನಿಂತ ಸ್ಥಳದಲ್ಲೇ ಕುಣಿದು...

“ನನ್ನ ಜೀವನ ಸಾರ್ಥಕವಾಯಿತು, ನನ್ನ ಕನಸು ಇಷ್ಟು ವರ್ಷಕ್ಕೆ ನನಸಾಯಿತು” ಎಂದು ನಿಂತ ಸ್ಥಳದಲ್ಲೇ ಕುಣಿದು ಕುಪ್ಪಳಿಸಿದ ತ್ರಿಷಾ..!? ಏಕೆ..? ಸ್ಟೋರಿ ಓದಿ…

1523
0
SHARE

ತ್ರಿಶಾ ಕೃಷ್ಣ …. ದಕ್ಷಿಣ ಭಾರತದ ಸ್ಟಾರ್ ನಟಿ. ತನ್ನ ಅಭಿನಯದಿಂದ ಚೆಂದದ ನಗುವಿನಿಂದ ಮನಸೆಳೆಯೋ ಕಾಲಿವುಡ್ ನ ಈ ವಯ್ಯಾರಿ ಈಗ ಖುಷಿಯ ನಶೆಯಲ್ಲಿ,  ಅಲೆಯಲ್ಲಿ ತೇಲ್ತಿದ್ದಾರೆ. .ಸ್ವರ್ಗವೇ ಧರೆಗಿಳಿದ ಖುಷಿಯಲ್ಲಿದ್ದಾರೆ.. ಸಾರ್ಥಕತೆಯ ನಿಟ್ಟುಸಿರು ಬಿಡ್ತಿದ್ದಾರೆ..ತ್ರಿಶಾ ಅದೃಷ್ಟ ಖುಲಾಯಿಸಿದೆ..ಬಹು ವರ್ಷಗಳ ಕನಸು ಈಡೇರಿದೆ…

ಅರೆ , ಅಂತಹದ್ದೇನಪ್ಪಾ ಅಂತೀರಾ.. ಈ ಸಂತಸದ ರುವಾರಿ ಸೂಪರ್ ಸ್ಟಾರ್ ತಲೈವಾ ಕಾಲಿವುಡ್ ಬ್ಯುಟಿ ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಅಭಿನಯಿಸುತ್ತಿದ್ದಾರೆ. ಅಂತಹದ್ದೊಂದು ಸುವರ್ಣಾಕಾಶ ತ್ರಿಶಾಗೆ ಒಲಿದು ಬಂದಿದೆ.. ಇದು ತ್ರಿಶಾ ಖುಷಿಯನ್ನು, ಅವ್ರನ್ನ ಪ್ರೀತಿಸೋ ಅಭಿಮಾನಿ ಬಳಗವನ್ನ ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿದೆ.

ಎಲ್ಲಾ ನಟಿಯರಿಗೂ ತಮ್ಮ ಜೀವಮಾನದಲ್ಲಿ ಸೂಪರ್ ಸ್ಟಾರ್ ರಜನೀ ಕಾಂತ್ ಜೊತೆ ಒಮ್ಮೆಯಾದ್ರು ತೆರೆ ಹಂಚಿಕೊಳ್ಳಬೇಕು ಎಂಬ ಆಸೆ ಇರುತ್ತೆ.. ಒಂದು ಪುಟ್ಟ ರೋಲ್ ಸಿಕ್ಕಿದ್ರೆ ಸಾಕು ಅನ್ನೋ ಕಲಾವಿದರು ಇದ್ದಾರೆ…ಆ ಲಿಸ್ಟ್ ನಲ್ಲಿ ಈ ಕಾಲಿವುಡ್ ಬೆಡಗಿ ತ್ರಿಶಾ ಕೂಡ ಒಬ್ಬರು.. ಈ ಸಂತಸವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರೋ ತ್ರಿಶಾ `ನನ್ನ ಜೀವನ ಸಾರ್ಥಕವಾಯಿತು` ಎಂದು ಹೇಳಿಕೊಂಡಿದ್ದಾರೆ..ಕುಣಿದು ಕುಪ್ಪಳಿಸಿದ್ದಾರೆ…

ಕಾಲಿವುಡ್ ನ ಭರವಸೆಯ ನಿರ್ದೆಶಕ ಕಾರ್ತಿಕ್ ಸುಬ್ಬರಾಜು ನಿರ್ದೆಶನ ಮಾಡ್ತಿರುವ ಬಿಗ್ ಬಿಗ್ ಬಜೆಟ್ ಚಿತ್ರ ದಾಗಿದ್ದು, ರಜನೀಕಾಂತ್ ಗೆ ಇದೇ ಮೊದಲು ಆಕ್ಷನ್ ಕಟ್ ಹೇಳ್ತಿದ್ದಾರೆ ಕಾರ್ತಿಕ್ ಸುಬ್ಬರಾಜು..  ಚಿತ್ರದಲ್ಲಿ ವಿಜಯ ಸೇತುಪತಿ, ನವಾಜುದ್ದೀನ್ ಸಿದ್ದಿಕಿ, ಬಾಬಿ ಸಿಂಹ, ಸಿಮ್ರಾನ್, ಸನತ್ ರೆಡ್ಡಿ, ಮುನೀಶ್ ಕಾಂತ್ ಸೇರಿದಂತೆ ದೊಡ್ಡ ತಾರಾ ಬಳಗ ಚಿತ್ರದಲ್ಲಿದೆ..ಇದೀಗ ತ್ರಿಶಾ  ತಲೈವಾ ಚಿತ್ರಕ್ಕೆ ಆಯ್ಕೆಯಾಗಿದ್ದು, ತ್ರಿಶಾ ಚಿತ್ರತಂಡ ಸೇರಿದನ್ನು ಅಧೀಕೃತವಾಗಿ ಘೋಷಣೆ ಮಾಡಿದೆ ಸನ್ ಪಿಕ್ಚರ್ಸ್.

ಆದ್ರೆ, ಯಾವ ರೋಲ್ ನಲ್ಲಿ  ಕಾಣಸಿಗಲಿದ್ದಾರೆ ಎನ್ನೋದನ್ನ ಚಿತ್ರತಂಡ ಖಚಿತ ಪಡಿಸಿಲ್ಲ. ಇನ್ನು ಅನಿರುದ್ ಸಂಗೀತ ನಿರ್ದೆಶನ ಚಿತ್ರಕ್ಕಿದೆಕಿದ್ದು, ಸನ್ ಪಿಕ್ಚರ್ಸ್ ಈ  ಚಿತ್ರವನ್ನ ನಿರ್ಮಾಣ ಮಾಡುತ್ತಿದೆ., .. ಈಗಾಗಲೇ ಈ ಚಿತ್ರದ  ಮೇಲೆ ಸಿಕ್ಕಾಪಟ್ಟೆ  ಕ್ರೇಜ್ ಕ್ರಿಯೇಟ್ ಆಗಿದೆ. ಸದ್ಯ ರಜನೀ ಅಭಿನಯದ 2.0 ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಈಗ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ತಲೈವಾ ಕಾಣಿಸಿಕೊಳ್ತಿದ್ಧಾರೆ..

ಇನ್ನ ರಜನೀಕಾಂತ್ ಯಾವ ಪಾತ್ರದಲ್ಲಿ ಬಣ್ಣಹಚ್ಚುತಿದ್ದಾರೆ, ಚಿತ್ರಕ್ಕೆ ಯಾವ ಟೈಟಲ್ ಇಡಲಾಗುತ್ತೆ ಇದೆಲ್ಲದರ ಬಗ್ಗೆ ಸದ್ಯದಲ್ಲೇ ಅಪ್ ಡೇಡ್ ಸಿಗಬೇಕಿದೆ..ಸಾಧ್ಯವಾದ್ರೆ ಇದೇ ವರ್ಷಾಂತ್ಯಕ್ಕೆ ಚಿತ್ರದ ಶೂಟಿಂಗ್ ಆರಂಭಿಸುವ  ಫ್ಲ್ಯಾನ್ ಮಾಡಿಕೊಂಡಿದ್ದಾರೆ ನಿರ್ದೆಶಕ ಕಾರ್ತಿಕ್ ಸುಬ್ಬರಾಜು..ಅದೇನೇ ಇರ್ಲಿ,,ತ್ರಿಶಾಗಂತು ಬಂಪರ್ ಬಹುಮಾನ ಸಿಕ್ಕಷ್ಟೇ ಖುಶಿಯಾಗಿದ್ದು,ಕನಸು ನನಸಾದ ಖುಷಿಯ ನಶೆಯಲ್ಲಿ ತೇಲಾಡ್ತಿದ್ದಾರೆ ತ್ರಿಶಾ ಕೃಷ್ಣ..

LEAVE A REPLY

Please enter your comment!
Please enter your name here