Home Cinema “ನನ್ನ ತಂಟೆಗೆ ಬಂದ್ರೆ ಐರಾವತ ಆದ್ರೂ ಅಡ್ಡಡ್ಡ ಮಲಗಿಸ್ತೀನಿ” ಎಂದು ಬರೆದಿದ್ದ ಡೈಲಾಗ್..!? ಅಂಬಿಗೋಸ್ಕರ ಒಂದಾಗುತ್ತಾರಾ...

“ನನ್ನ ತಂಟೆಗೆ ಬಂದ್ರೆ ಐರಾವತ ಆದ್ರೂ ಅಡ್ಡಡ್ಡ ಮಲಗಿಸ್ತೀನಿ” ಎಂದು ಬರೆದಿದ್ದ ಡೈಲಾಗ್..!? ಅಂಬಿಗೋಸ್ಕರ ಒಂದಾಗುತ್ತಾರಾ ? ಕುಚಿಕು ಫ್ರೆಂಡ್ಸ್..!?

4528
0
SHARE

ಸುದೀಪ್ ಅವರ ಸ್ನೇಹ ನೋಡಿದ್ರೆ ವಿಷ್ಣು ಅಂಬಿ ಸ್ನೇಹವನ್ನ ನೆನಪಿಸುವಂತೆ ಇತ್ತು . ಇಬ್ಬರು ಒಟ್ಟಿಗೆ ಒಂದೇ ಸ್ಟೇಜ್ ನಲ್ಲಿ ಕುಣಿದಿದ್ದಾರೆ ಒಂದೇ ತಟ್ಟೆಯಲ್ಲಿ ಊಟ ಮಾಡುವಂತ ಸ್ನೇಹ ಅದಾಗಿತ್ತು . ಇವರನ್ನ ಚಿತ್ರರಂಗದ ಬದ್ದ ವೈರಿಗಳು ಅಂತ ಮೊದಲಿನಿಂದ ಬಿಂಬಿಸಲಾಗಿತ್ತು .

ಆದ್ರೆ ಇವರ ನಡುವೆ ಯಾವ ವೈರತ್ವವು ಇರಲಿಲ್ಲ ಹಾಗಂತ ಗಟ್ಟಿಯಾದ ಸ್ನೇಹವು ಇರಲಿಲ್ಲ . ಆದ್ರೆ ಇವರಿಬ್ಬರು ಅದ್ ಹೇಗೆ ಕ್ಲೋಸ್ ಫ್ರಂಡ್ ಆದರು ಅನ್ನೋದು ಎಲ್ಲರಿಗೂ ಶಾಕ್ ಆಗಿತ್ತು.ಒಂದು ಟೈಮ್ ನಲ್ಲಿ ಇಬ್ಬರಿಗೂ ಹೆಜ್ಜೆ ಹೆಜ್ಜೆಗೂ ಅವಮಾನಗಳು, ನೋವುಗಳು ಜಾಗ ಮಾಡಿಕೊಂಡವು. ಇದೇ ಸಮಯಕ್ಕೆ ಸರಿಯಾಗಿ ದರ್ಶನ್ ಕೌಟುಂಬಿಕ ಕಲಹದ ಕಾರಣಕ್ಕೆ ಜೈಲುವಾಸ ಮುಗಿಸಿ ಬಂದಿದ್ದರು. ಹೀಗೆ ಇಬ್ಬರೂ ನೋವುಂಡವರು, ತಮ್ಮ ವಿರುದ್ಧವಿರುವ ಕೆಲವು ಕಾಣದ ಕೈಗಳನ್ನು ಎದುರಿಸಲೋಸುಗ ಕುಚುಕುಗಳಾಗಿ ಮಾರ್ಪಟ್ಟರೇ ವಿನಃ ಇಬ್ಬರ ಮಧ್ಯೆ ಗಾಡ ಸ್ನೇಹವೇ ಇತ್ತು ಅದು ಕಾಲ ಕಳೆದಂತೆ ಹೆಚ್ಚಾಗುತ್ತಾ ಬಂತು.

ಯಾರದೋ ಕೈವಶದಲ್ಲಿದ್ದ ಚಿತ್ರರಂಗದಲ್ಲಿ ಸುದೀಪ್ ಮತ್ತು ದರ್ಶನ್ ಹೊಸಗಾಳಿ ಬೀಸುವಂತೆ ಮಾಡಿದವರು.ಯಾರ ಮಾತಿಗೂ ಸೊಪ್ಪು ಹಾಕದೆ ಎತ್ತರವೇರಿ ನಿಂತವರು ಇವರು. ಈ ಕಾರಣಕ್ಕೋ ಏನೋ, ಇವರಿಬ್ಬರನ್ನೂ ವಿವಾದಗಳು ಇಲ್ಲಿವರೆಗೂ ಬಿಡಲೇ ಇಲ್ಲ. ಇದರಲ್ಲಿ ದರ್ಶನ್ ತನಗೆ ಸಂಬಂಧಿತ ವಿಷಯಗಳಿಗೆ ಮತ್ತು ತಾನು ಆಡಿದ ಮಾತುಳಿಂದಾದ ವಿವಾದಗಳಿಗೆ ಮಾತ್ರ ಜವಾಬ್ದಾರಿಯನ್ನು ಹೊರುವಂತಾದರೆ, ಸುದೀಪ್ ಮಾತ್ರ ತನ್ನದು ಮತ್ತು ತನ್ನದಲ್ಲದ ಬೇರೆ ಬೇರೆ ಕಾರಣಗಳಿಗೆ ವಿವಾದದ ಕೇಂದ್ರಬಿಂದು ಆಗುತ್ತಲೇ ಹೋದರು”

ಇಬ್ಬರೂ ಜೊತೆಯಾದ ಮೇಲೆ ಬಂದ ಸುದೀಪರ ಮೊದಲ ಸಿನಿಮಾ ‘ಬಚ್ಚನ್’. ಆ ಸಿನಿಮಾ ಸುದೀಪರ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಅದ್ಭುತವಾದ ಓಪನಿಂಗ್ ಪಡೆದುಕೊಂಡುಬಿಟ್ಟಿತು. ಇದೊಂದೇ ಕಾರಣವಿಟ್ಟುಕೊಂಡು, ವಿರೋಧಿಗಳು ಸುದೀಪ್ ವಿರುದ್ದ ಮತ್ತೆ ಕತ್ತಿ ಜಳಪಿಸಿಬಿಟ್ಟರು. ನಿನ್ನ ಸ್ನೇಹ ಸಿಕ್ಕ ಕಾರಣಕ್ಕೆ, ನಿನ್ನ ಅಭಿಮಾನಿಗಳು ಸಿನಿಮಾ ನೋಡಿದ ಕಾರಣಕ್ಕೆ ಸುದೀಪ್ ಗೆ ಅಷ್ಟು ದೊಡ್ಡ ಓಪನಿಂಗ್ ಸಿಕ್ಕಿದೆ. ಇನ್ನಾದರೂ ಸುದೀಪ್ ಗೆಳೆತನ ಬಿಟ್ಟುಬಿಡು ಅಂತ ದರ್ಶನ್ ಅವರ ಖಾಸಾ ದೋಸ್ತುಗಳು, ಸಂಬಂಧಿಕರು ದರ್ಶನ್ ಮೇಲೆ ಒತ್ತಡವೇರಲಾರಂಭಿಸಿದರು’ಕುಚುಕು ಹ್ಯಾಂಗೋವರ್ ನಲ್ಲಿದ್ದ ದರ್ಶನ್ ಇಂತಹ ಮಾತುಗಳಿಗೆ ಸೊಪ್ಪು ಹಾಕಲಿಲ್ಲ.

ಅಲ್ಲಿಂದ ಸುದೀಪ್ ಸಹ ತನ್ನ ನಟನೆಯ ಚಿತ್ರಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಕೊಂಡುಬಿಟ್ಟರು. ಆಟೋಗ್ರಾಫ್, ಶಾಂತಿನಿವಾಸ, ಸ್ವಾತಿಮುತ್ತು ತರಹದ ಚಿತ್ರಗಳತ್ತ ವಿಶೇಷ ಒಲವಿದ್ದಂತಹ ಸುದೀಪ್ ಅನಿವಾರ್ಯ ಕಾರಣಗಳಿಂದ ಕಮರ್ಷಿಯಲ್ ಸಿನಿಮಾಗಳತ್ತ ಮುಖಮಾಡಿಬಿಟ್ಟರು.ಬಹುತೇಕ ಕ್ಲಾಸ್ ಪ್ರೇಕ್ಷಕರನ್ನು ಹೊಂದಿದ್ದ ಸುದೀಪ್ ಮಾಸ್ ಪ್ರೇಕ್ಷಕರತ್ತ ಗಮನ ಹರಿಸಿದರು ಎಂಬಲ್ಲಿಗೆ ಅವರ ಸಿನಿ ಜೀವನದ ಎರಡನೇ ಮಹತ್ವದ ಅಧ್ಯಾಯ ಶುರುವಾಗುತ್ತದೆ. ಆ ಅಧ್ಯಾಯದ ಮೊದಲ ಸಿನಿಮಾ ‘ಮಾಣಿಕ್ಯ’. ಆ ಸಿನಿಮಾ ಎಕ್ಟ್ಟ್ರಾಡಿನರಿ ಓಪನಿಂಗ್ ಪಡೆದುಕೊಳ್ಳುತ್ತದೆ. ಅದಕ್ಕೂ ದರ್ಶನ್ ಅಭಿಮಾನಿಗಳೇ ಕಾರಣ ಎನ್ನಲಾಗುತ್ತದೆ. ಸಹಜವಾಗಿಯೇ ಸುದೀಪ್ ಅವರಿಗೆ ಬೇಸರವಾದರೂ ಎಲ್ಲೂ ಸಹ ದರ್ಶನ್ ಅವರನ್ನು ಬಿಟ್ಟುಕೊಟ್ಟು ಮಾತನಾಡಲೇ ಇಲ್ಲ.

ದರ್ಶನ್ ಅವರನ್ನು ಎಲ್ಲರೂ ಖಳನಾಯಕನ ತರ ನೋಡುತ್ತಿದ್ದ ಸಂದರ್ಭದಲ್ಲಿ, “ಎಲ್ಲರೂ ತಪ್ಪು ಮಾಡುತ್ತಾರೆ, ಆದರೆ ಕೆಲವರು ಮಾತ್ರ ಸಿಕ್ಕಿಬೀಳುತ್ತಾರೆ ಅಷ್ಟೆ” ಎಂದು ಖಡಕ್ಕಾಗಿ ಉತ್ತರಿಸಿ ದರ್ಶನ್ ಅವರ ಪರವಾಗಿ ಅವರು ನಿಂತಿದ್ದರು. ನಂತರ ತಾನೂ ಒಬ್ಬ ಸೂಪರ್ ಸ್ಟಾರ್ ಆಗಿದ್ದರೂ ಸಹ ನನ್ನ ಗೆಳೆಯ ದರ್ಶನ್ ಕನ್ನಡ ಚಿತ್ರರಂಗದ ಸದ್ಯದ ನಂ.1 ಎಂದು ಟ್ವೀಟ್ ಮಾಡಿ ಹೃದಯ ವೈಶಾಲ್ಯತೆ ಮೆರೆಯುತ್ತಾರೆ. ಅಷ್ಟ್ಯಾಕೆ  ಸುದೀಪ್ ಅವರಿಗೆ “ಎಂಟರ್ ಟೈನರ್ ಆಫ್ ದಿ ಡಿಕೇಡ್” ಅಂತ ಪ್ರಶಸ್ತಿ ಕೊಟ್ಟರೆ, ಅದನ್ನು ಸ್ವೀಕರಿಸುವಾಗ “ಈ ಪ್ರಶಸ್ತಿಯನ್ನು ನಾನು ದರ್ಶನ್ ಮತ್ತು ಪುನೀತ್” ಪರವಾಗಿ ಪಡೆಯುತ್ತೇನೆ ಅಂತ ನೆನಪಿಸಿಕೊಳ್ಳುತ್ತಾರೆ”

”ಮತ್ತೊಂದು ಆಸಕ್ತಿಕರ ವಿಷಯವೇನೆಂದರೆ ಇವರ ‘ರನ್ನ’ ಸಿನಿಮಾದಲ್ಲಿ ಸಂಭಾಷಣೆಕಾರರು ಒಂದು ಡೈಲಾಗ್ ಬರೆದಿದ್ದರಂತೆ “ನನ್ನ ತಂಟೆಗೆ ಬಂದ್ರೆ ಐರಾವತ ಆದ್ರೂ ಅಡ್ಡಡ್ಡ ಮಲಗಿಸ್ತೀನಿ ಅಂತ” ಶೂಟಿಂಗ್ ಕೂಡ ಮುಗಿದು ಹೋಗಿತ್ತಂತೆ. ಆದ್ರೆ ಅಷ್ಟೊತ್ತಿಗೆ ದರ್ಶನ್ ಅವರ ಐರಾವತ ಸಿನಿಮಾ ಅನೌನ್ಸ್ ಆದ ಸುದ್ದಿ ತಿಳಿದ ಸುದೀಪ್ ಕೂಡಲೇ ಆ ಡೈಲಾಗ್ ಅನ್ನು ತೆಗೆಸುವುದರ ಜೊತೆಗೆ ಆ ಭಾಗವನ್ನು ಹೊಸದಾಗಿ ಶೂಟ್ ಮಾಡಿಸಿದರಂತೆ!! ಇಷ್ಟೆಲ್ಲವನ್ನ  ಮನದಾಳದಲ್ಲಿ ಪ್ರೀತಿ ಇಲ್ಲದಿದ್ದರೆ ತೋರಲಾದೀತೆ.

ರಾಜ್ ಕುಟುಂಬದ ವಿರುದ್ಧ ದರ್ಶನ್ ರನ್ನು ಎತ್ತಿಕಟ್ಟುತ್ತಿರೋದು ಸುದೀಪೇ ಅಂತ ಹುಯಿಲೆಬ್ಬಿಸಿಬಿಟ್ಟರು. ಅಲ್ಲಿಗೆ ದರ್ಶನ್ ಗೆ ಇದ್ದ ಖಳನಾಯಕನ ಇಮೇಜ್ ಸುದೀಪ್ ಗೆ ವರ್ಗಾಯಿಸಲ್ಪಟ್ಟಿತ್ತು. ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸುದೀಪ್ ತನ್ನದಲ್ಲದ ತಪ್ಪಿಗೆ ತಾನು ವಿಲನ್ ಆಗುತ್ತಿರುವುದನ್ನು ಕಂಡು ಬೇಸತ್ತು ಹೋಗಿದ್ದರು.ಸುದೀಪ್ ಮತ್ತು ದರ್ಶನ್ ಇಬ್ಬರೂ ನೇರ ನಡೆ ನುಡಿಯವರು. ಅನಿಸಿದ್ದನ್ನು ಪರಿಣಾಮಗಳ ಬಗ್ಗೆ ಚಿಂತಿಸದೆ ಹೇಳಿಬಿಡಬಲ್ಲಷ್ಟು ಹುಂಬರು ಕೂಡ. ಇಂತಹ ಮನೋಭಾವದ ಇಬ್ಬರು ಜೊತೆಯಾದಾಗಲೇ ಈ ಸ್ನೇಹ ತುಂಬಾ ದಿನ ಬಾಳಿಕೆ ಬರುವುದಿಲ್ಲವೆಂಬ ಅಂದಾಜಿತ್ತು. ಆ ಅಂದಾಜಿಗೆ ಆವತ್ತು ನಿಜ ಆಗಿತ್ತು . ದರ್ಶನ್ ಒಂದು ಟ್ವೀಟ್ ಮಾಡೇ ಬಿಟ್ಟರು . ಆ ಟ್ವೀಟ್ ನಲ್ಲಿ ಸುದೀಪ್ ಹಾಗು ದರ್ಶನ್ ಸ್ನೇಹ ಕೊನೆಯಾಗಿದ್ದರ ಬಗ್ಗೆ ಬರೆದು ಕೊಂಡಿದ್ದರು ದರ್ಶನ್.

ದರ್ಶನ್ ಏನೋ ಸ್ನೇಹ ಮುರಿದುಕೊಳ್ಳುವ ಬಗ್ಗೆ ಟ್ವೀಟ್ ಮಾಡಿ ಬಿಟ್ಟರು . ಆದ್ರೆ ಆ ಟ್ವೀಟ್ ಅವರೇ ಮಾಡಿದ್ದಾರಾ ಅನ್ನೋ ಅನುಮಾನ ಕೂಡ ಶುರು ಆಯಿತು . ಆಮೇಲೆ ದರ್ಶನ್ ಎಲ್ಲವನ್ನ ಕ್ಲಿಯರ್ ಮಾಡಿ ಬಿಟ್ಟರು . ಆ ಟ್ವೀಟ್ ಆದ ಮೇಲೆ ಗಜ -ಗೂಳಿ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅನ್ನೋದು ಸತ್ಯ ಆದ್ರೆ ಸುದೀಪ್ ಮನಸಿನಲ್ಲಿ ಇನ್ನು ದಚ್ಚು ಬಗ್ಗೆ ಅದೇ ಆತ್ಮೀಯತೆ ಇದೆ.ಕಿಚ್ಚನ ಮನಸಿನಲ್ಲಿ ದರ್ಶನ್ ಬಗ್ಗೆ ಯಾವ ಕೆಟ್ಟ ಅಭಿಪ್ರಾಯ ಕೂಡ ಇಲ್ಲ . ಆ ಘಟನೆ ಆದಮೇಲೂ ಸುದೀಪ್ ಅಹಂ ಬಿಟ್ಟು ಹಲವು ಬಾರಿ ದಚ್ಚು ಸ್ನೇಹ ಬಯಸಿದ್ದು ನಾವು ಮರೆಯೋಹಾಗಿಲ್ಲ .ಆದ್ರೆ ದರ್ಶನ್ ಮಾತ್ರ ಸುದೀಪ್ ಮಾಡುವ ಯಾವ ಟ್ವೀಟ್ ಗೆ ಉತ್ತರ ಕೊಡುತ್ತಿಲ್ಲ . ಸ್ನೇಹ ಮುರಿದು ಬಿದ್ದ ಮೇಲೆ ಕಿಚ್ಚ ದರ್ಶನ್ ಹುಟ್ಟು ಹಬ್ಬಕ್ಕೆ ಟ್ವೀಟ್ ಮಾಡಿದ್ರು ಆದ್ರೆ ದರ್ಶನ್ ಏನು ಉತ್ತರ ಕೊಡದೆ ಸುಮ್ಮನೆ ಇದ್ರು.

ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತ ದರ್ಶನ್ ನಾನು ಯಾರ ಸಹಾಯ ಪಡೆದುಕೊಂಡು ಮುಂದೆ ಬಂದಿಲ್ಲ ನನಗೆ ಸಹಾಯ ಮಾಡಿದ್ದಾರೆ ಅಂತ ಹೇಳೋ ರೈಟ್ಸ್ ನಾನ್ ಯಾರಿಗೂ ಕೊಟ್ಟಿಲ್ಲ ಅನ್ನೋ ಮಾತುಗಳನ್ನ ಆಡಿ ಬಿಟ್ಟರು . ಈ ಮಾತುಗಳು ನೇರವಾಗಿ ಸುದೀಪ್ ಗೆ ಅನ್ನೋದು ಎಲ್ಲರಿಗೂ ಗೊತ್ತು . ಇವರಿಬ್ಬರ ಸ್ನೇಹ ಹಾಳಾಗಿದ್ದು ಆ ವಿಚಾರಕ್ಕೆ ಅಲ್ವೇ.ಈ ಮಾತುಗಳನ್ನೆಲ್ಲ ಕೇಳಿಸಿಕೊಂಡ ಕಿಚ್ಚ ಇನ್ನು ಮುಂದೆ ದರ್ಶನ್ ಬಗ್ಗೆ ಯಾವುದೇ ಟ್ವೀಟ್ ಮಾಡಲ್ಲ ಅಂದುಕೊಂಡು ಇವರಿಬ್ಬರ ಸ್ನೇಹ ಮುರಿದು ಹೋಯ್ತು ಅಂದುಕೊಂಡವರೇ ಹೆಚ್ಚು . ಆದ್ರೆ ಮತ್ತೆ ಸುದೀಪ್ ದರ್ಶನ್ ಬಗ್ಗೆ ಮಾತನಾಡಿದ್ರು ಆದರು ಕೂಡಾ ದಚ್ಚು ಮನಸ್ಸು ಬದಲಾಗಲೇ ಇಲ್ಲ.

ದರ್ಶನ್ ಹಾಗು ಸುದೀಪ್ ಕೇಳೋದು ರೆಬಲ್ ಸ್ಟಾರ್ ಅಂಬರೀಷ್ ಅವರ ಮಾತು . ಅಂಬಿ ಹೇಳಿದ ಮಾತು ದರ್ಶನ ಹಾಗು ಸುದೀಪ್ ಮೀರುತ್ತಿರಲಿಲ್ಲ . ಹಾಗಾಗಿ ಸುದೀಪ್ ಹಾಗು ದರ್ಶನ್ ಆಪ್ತರು ಅಂಬಿಯ ಬಳಿ ನೀವಾದ್ರೂ ಬುದ್ದಿ ಹೇಳಿ ಅಂತ ಹೇಳಿಕೊಂಡಿದ್ದರು ಅನ್ನೋ ಮಾತುಗಳು ಕೇಳಿಬಂದಿದ್ದವು . ಅಂಬಿ ಕರೆದು ಅವರದ್ದೇ ಸ್ಟೈಲ್ ನಲ್ಲಿ ಹೇಳಿದ್ರೆ ಮತ್ತೆ ಈ ಜಮಾನದ ಕುಚಿಕು ಗಳ ಆರ್ಭಟ ನೋಡಬಹುದಾಗಿತ್ತು.ಅಂಬಿ ಮಾತ್ರ ಹಾಗೆ ಮಾಡಲಿಲ್ಲ . ಅವರಿಬ್ಬರ ಸ್ನೇಹದ ಮುರಿದು ಬಿದ್ದಿರು ವಿಚಾರ ತಿಳಿದು ಅವರಿಬ್ಬರು ಚಿಕ್ಕವರಲ್ಲ ಇಬ್ಬರಿಗು ಬುದ್ಧಿಯಿದೆ ಅವರ ಬುದ್ದಿ ಹೇಗೆ ತಿಳಿಯತ್ತೋ ಹಾಗೆ ಮಾಡಲಿ . ಸ್ಕೂಲ್ ಮಕ್ಕಳು ಅಲ್ಲ ಅವರು ಅಂದಿದ್ದರು ಅಂಬಿ . ಹಾಗಾಗಿ ಇವರಿಬ್ಬರು ಮತ್ತೆ ಒಟ್ಟಾಗಿ ಕಾಣಿಸ್ಕೊಂಡಿಲ್ಲ.

ಸ್ವಲ್ಪ ದಿನ ಆದಮೇಲೆ ಇವರಿಬ್ಬರು ಸರಿ ಹೋಗಬಹುದು ಅನ್ನೋ ಉದ್ದೇಶದಿಂದ ಅಂಬಿ ಎಂಟ್ರಿ ಆಗಿರಲಿಲ್ಲ . ಆದ್ರೆ ಮೂರು ವರ್ಷಗಳು ಕಳೆದರು ಇವರಿಬ್ಬರು ಸರಿಹೋಗಲಿಲ್ಲ ಸ್ನೇಹ ಮತ್ತೆ ಚಿಗರೊದಿಲ್ಲ ಅನ್ನೋ ಪರಿಸ್ಥಿತಿಗೆ ಬಂದಾಗ ಒಂದು ಮಾಸ್ಟರ್ ಪ್ಲಾನ್ ಮಾಡಿಕೊಂಡು ಎಂಟ್ರಿ ಕೊಟ್ಟೆ ಬಿಟ್ಟರು ರೆಬಲ್ ಸ್ಟಾರ್.ಏನು ಆ ಮಾಸ್ಟರ್ ಪ್ಲಾನ್ ಅಂದ್ರೆ ಅಂಬಿ ಹೀರೊ ಆಗಿ ನಟಿಸಿ ಸುದೀಪ್ ನಿರ್ಮಾಣ ಮಾಡಿದ್ದ ಅಂಬಿ ನಿಂಗ್ ವಯಸ್ಸಾಯಿತೋ ಚಿತ್ರದ ಆಡಿಯೋ ಬಿಡುಗಡೆಗೆ ದರ್ಶನ್ ಅವರನ್ನ ಕರೀತಾರೆ . ಆ ಚಿತ್ರದಲ್ಲಿ ಸುದೀಪ್ ಇದ್ದಾರೆ ಅಂತ ಗೊತ್ತಿದ್ರು ದರ್ಶನ್ ಬರೋಕೆ ರೆಡಿ ಆಗ್ತಾರೆ ಆಗ ಅಭಿಮಾನಿಗಳಿಗೆ ಸಕತ್ ಖುಷಿಯಾಗಿದ್ದು ಮಾತ್ರ ಸುಳ್ಳಲ್ಲ.

ಆ ಖುಷಿ ಜಾಸ್ತಿ ದಿನ ಉಳಿಯಲಿಲ್ಲ ಯಾಕಂದ್ರೆ ಅಂಬಿ ಅನಾರೋಗ್ಯ ನಿಮಿತ್ತ ಆ ಚಿತ್ರದ ಆಡಿಯೋ ಬಿಡುಗಡೆಯಾಗಲಿಲ್ಲ ಅದ್ದೂರಿ ಕಾರ್ಯಕ್ರಮ ಮಾಡದೆ ಸಿಂಪಲ್ ಆಗಿ ಯು ಟ್ಯೂಬ್ ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ರು .ಅಲ್ಲಿಗೆ ಕಿಚ್ಚ -ದಚ್ಚು ಇಬ್ಬರನ್ನ ಮತ್ತೆ ಒಂದೇ ವೇದಿಕೆ ಮೇಲೆ ನೋಡ್ತಿವಿ ಅನ್ನೋ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ.ಈಗ ಇವರಿಬ್ಬರನ್ನ ಕರೆದು ಬುದ್ದಿ ಹೇಳೋಕೆ ಅಂಬಿ ಇಲ್ಲ . ಅಂಬಿ ಕೈ ಹಾಕಿದ ಎಲ್ಲ ಕೆಲಸಗಳು ಹಾಗು ವಿವಾದಗಳು ಬಗೆಹರಿದಿವೆ ಆದ್ರೆ ಈ ವಿಚಾರ ಮಾತ್ರ ಈಡೇರಲಿಲ್ಲ . ಇವರಿಬ್ಬರನ್ನ ಒಂದು ಮಾಡದೆ ಅಂಬಿ ಇಹಲೋಕ ತ್ಯೆಜಿಸಿಯಾಗಿದೆ.

ದರ್ಶನ್ ಕಾರು ಅಪಘಾತ  ವಿಷಯ ತಿಳಿದ ತಕ್ಷಣವೇ ಟ್ವೀಟ್ ಮಾಡಿದ ಕಿಚ್ಚ ಸುದೀಪ್ ತನ್ನ ನೆಚ್ಚಿನ ಗೆಳೆಯನಿಗೆ ಧೈರ್ಯ ತುಂಬಿದ್ದರು . ನೀನು ಆರೋಗ್ಯವಾಗಿರುವೆ ಎಂದು ತಿಳಿದು ತುಂಬಾ ಸಂತೋಷವಾಗಿದೆ, ಚೇತರಿಸಿಕೊಳ್ಳಲೆಂದು ಶುಭ ಹಾರೈಸುತ್ತೇನೆ, ಬೇಗನೆ ಗುಣಮುಖನಾಗಿ ಬಾ ಗೆಳೆಯ ಎಂದು ತಮ್ಮ ಸ್ನೇಹಕ್ಕೆ ಸಿಹಿಮಾತನ್ನು ಹೇಳಿದ್ದರು . ಏನೇ ಇರಲಿ ಸುದೀಪ್ ಮಾಡಿರುವ ಟ್ವೀಟ್ ನಿಂದ ಅಭಿಮಾನಿಗಳು ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ ಮತ್ತು ತಮ್ಮ ನೆಚ್ಚಿನ ನಟರಿಬ್ಬರು ಪರಸ್ಪರ ಅನ್ಯೋನ್ಯತಾ ಭಾವದಿಂದ ಇರುವುದನ್ನು ನೋಡಿ ಎಲ್ಲರಿಗು ಸಂತಸವಾಗಿದೆ ಆದ್ರೆ ಆ ಟ್ವೀಟ್ ಗು ದಚ್ಚು ಉತ್ತರ ನೀಡಲಿಲ್ಲ.ದಚ್ಚು ಹಾಗು ಕಿಚ್ಚನ ಅಭಿಮಾನಿಗಳಿಗೆ ಇದ್ದ ಆಸೆ ಏನು ಅಂದ್ರೆ ಅಂಬರೀಷ್ ಇವರಿಬ್ಬರಿಗೂ ಬುದ್ದಿ ಹೇಳಿ ಒಂದು ಮಾಡ್ತಾರೆ ಅನ್ನೋದು ಆದ್ರೆ ಅದು ಆಗುವ ಮುನ್ನವೇ ಅಂಬಿ ಈ ಲೋಕ ಬಿಟ್ಟು ಹೊರಟು ಹೋದ್ರು . ಆಗ ಅಭಿಮಾನಿಗಳು ಇಬ್ಬರು ಪರಸ್ಪರ ಭೇಟಿಯಾಗಿ ಒಬ್ಬರಿಗೊಬ್ಬರು ಸಮಾಧಾನ ಮಾಡುತ್ತಾರೆ ಅನ್ಕೊಂಡಿದ್ರು.  ಯಾಕಂದ್ರೆ ಅಂಬಿ ದರ್ಶನ ಹಾಗು ಸುದೀಪ್ ಇಬ್ಬರಿಗೂ ಆಪ್ತರು . ಅಂಬಿ ನಿಧನ ಇಬ್ಬರಿಗೂ ಸಮಾನ ದುಃಖವನ್ನ ತಂದಿದೆ.

ದರ್ಶನ್ ಬರುವ ಮುನ್ನವೇ ಸುದೀಪ್ ಅಂಬಿ ಅಂತಿಮ ದರ್ಶನ ಪದ್ದುಕೊಂಡು ಕಣ್ಣೀರು ಹಾಕಿ ಹೋದರು . ಸ್ವೀಡನ್ ನಲ್ಲಿದ್ದ ದರ್ಶನ್ ಅಂಬಿಯನ್ನ ನೋಡಲು ಬಂದು ಕೊನೆಯ ವರೆಗೂ ಇದ್ರೂ ಆದ್ರೆ ಅಂತ್ಯ ಕ್ರಿಯೆಯಲ್ಲಿ ಸುದೀಪ್ ಕಾಣಸಿಕೊಂಡಿರಲಿಲ್ಲ . ಅದಕ್ಕೆ ಕಾರಣ ಏನು ಅಂದ್ರೆ ಸುದೀಪ್ ಅವರ ಸಂಪ್ರದಾಯದ ಕೆಲ ಕಟ್ಟುಪಾಡುಗಳು ಅನ್ನೋದು ಈಗ ತಿಳಿದು ಬಂದಿದೆ.ಇನ್ನು ಇಬ್ಬರು ಸ್ಟಾರ್ ನಟರ ಮಧ್ಯ ವೈಮನಸ್ಸು ಉಂಟಾದ್ರೆ ಅವರಿಬ್ಬರ ಅಭಿಮಾನಿಗಳು ಜಗಳ ಆಡೋದೇ ಹೆಚ್ಚು . ಆದ್ರೆ ಸುದೀಪ್ -ದರ್ಶನ್ ಅಭಿಮಾನಿಗಳು ಮಾತ್ರ ಹೇಗಾದ್ರು ಮಾಡಿ ಇವರಿಬ್ಬರನ್ನ ಒಂದು ಮಾಡಬೇಕು ಅಂತ ಪಣ ತೊಟ್ಟಿದ್ದಾರೆ . ಅಂಬಿ ಇಲ್ಲ ಅಂದ್ರೆ ಇವರಿಬ್ಬರು ಒಂದಾಗೋದಿಲ್ಲ ಅನ್ನೋದನ್ನ ಅಭಿಮಾನಿಗಳು ಅರಿತಿದ್ದಾರೆ . ಹಾಗಾಗಿಯೇ ಅಭಿಮಾನಿಗಳು ಹೊಸ ಟ್ರೆಂಡ್ ಮಾಡೋಕೆ ಶುರುವಿಟ್ಟುಕೊಂಡಿದ್ದಾರೆ.

ದರ್ಶನ್ ಹಾಗು ಸುದೀಪ್ ಅಭಿಮಾನಿಗಳು ಈಗ ಟ್ವೀಟರ್ ನಲ್ಲಿ ಅಭಿಯಾನ ಶುರುಮಾಡಿಕೊಂಡಿದ್ದಾರೆ . ಅದು ಏನು ಅಂದ್ರೆ ಇವರಿಬ್ಬರು ಮತ್ತೆ ಒಂದಾಗಬೇಕು ಅನ್ನೋ ಟ್ವೀಟ್ ನ ಶೇರ್ ಮಾಡೋಕೆ ಶುರುಮಾಡಿದ್ದಾರೆ . ಯಾಕಂದ್ರೆ ಕಿಚ್ಚ ಹಾಗು ದಚ್ಚು ಇಬ್ಬರು ಟ್ವೀಟರ್ ನಲ್ಲಿ ಆಕ್ಟಿವ್ ಆಗಿದ್ದಾರೆ ಅದಕ್ಕೆ ಈ ರೀತಿಯಾಗಿ ತಮ್ಮ ಮನವಿಯನ್ನ ಅಭಿಮಾನಿಗಳು ಇವರಿಬ್ಬರಿಗೂ ತಮ್ಮ ಮನವಿ ತಲಪುವರೆಗೂ ಬಿಡೋದು ಬೇಡ ಅಂತ ಪಣ ತೊಟ್ಟಿದ್ದಾರೆ.ಇನ್ನು ಸುದೀಪ್ ಹಾಗು ದರ್ಶನ್ ಅವರನ್ನ ಈ ಜಮಾನದ ವಿಷ್ಣು ಅಂಬಿ ಅಂತ ಅಭಿಮಾನಿಗಳು ಸ್ವೀಕರಿಸಿದ್ದಾರೆ . ದರ್ಶನ್ ಅವರಲ್ಲಿ ಅಂಬಿಯನ್ನ ಅಭಿಮಾನಿಗಳು ಕಾಣುತಿದ್ದಾರೆ ದರ್ಶನ್ ಅವರ ಸ್ವಭಾವ ಕೂಡಾ ಅಂಬಿಯ ಸ್ವಭಾವಕ್ಕೆ ಹೋಲಿಕೆಯಾಗುತ್ತದೆ . ಅಂಬಿ ಮನೆಯವರು ಕೂಡಾ ದರ್ಶನ್ ಅವರನ್ನ ದೊಡ್ಡ ಮಗ ಅಂದುಕೊಂಡಿದ್ದಾರೆ . ದರ್ಶನ್ ಕೂಡಾ ಅಂಬಿಯನ್ನ ಅಪ್ಪಾಜಿ ಅಂತ ಕರೀತಾ ಇದ್ರು.

ಹಾಗೆ ಅಂಬಿಯ ಅಂತ್ಯಕ್ರಿಯೆಯಲ್ಲಿ ದರ್ಶನ್ ನಡೆದುಕೊಂಡ ರೀತಿ ನೋಡಿದ್ರೆ ಅಂಬಿಯ ದೊಡ್ಡ ಮಗ ಅಂತ ಹೇಳಬಹುದು . ಸುಮಲತಾ ಕೂಡಾ ದರ್ಶನ್ ಅವರನ್ನ ಅಂಬಿಯ ಮಗ ಅಂತ ಟ್ವೀಟ್ ಮಾಡಿದ್ದಾರೆ.ಇನ್ನು ವಿಷ್ಣು ಅವರ ಉತ್ತರಧಿಕಾರಿಯಾಗಿ ಸುದೀಪ್ ಅವರನ್ನ ಜನ ನೋಡುತ್ತಿದ್ದಾರೆ . ಸುದೀಪ್ ವಿಷ್ಣು ಥರ ಸ್ವಭಾವನ್ನ ಹೋಲುತ್ತಾರೆ ಹಾಗೆ ಸುದೀಪ್ ಕೂಡಾ ವಿಷ್ಣುವರ್ಧನ್ ಅವರ ಅಭಿಮಾನಿ . ವಿಷ್ಣು ಸ್ಮಾರಕ ವಿಚಾರದಲ್ಲಿ ಸುದೀಪ್ ಸಾಕಷ್ಟು ಮುತುವರ್ಜಿ ವಹಿಸಿಕೊಂಡಿದ್ದಾರೆ . ಹಾಗಾಗಿ ಸುದೀಪ್ ಅವರನ್ನ ವಿಷ್ಣು ಅವರ ದತ್ತು ಪುತ್ರ ಅಂತ ಹೇಳಬಹುದು .ಇವರಿಬ್ಬರು ಒಂದೇ ವೇದಿಕೆಯಲ್ಲಿ ಯಾವಾಗ ಕುಚಿಕು ಕುಚಿಕು ಅಂತ ಡಾನ್ಸ್ ಮಾಡಿದ್ರೋ ಆಗಿನಿಂದ ಅಭಿಮಾನಿಗಳು ಇವರಿಬ್ಬರನ್ನ ಈ ಜಮಾನದ ದಿಗ್ಗಜರು ಅನ್ನೋಕೆ ಶುರುಮಾಡಿದ್ರು . ಅದೇ ವೇದಿಕೆಯಲ್ಲಿ ದರ್ಶನ್ ಸುದೀಪ್ ಗೆ ನನ್ನ ಕುಚಿಕು ಅಂತ ಹೇಳಿದ್ರು .

ಅಂಬಿಯ ಹನ್ನೊಂದನೇ ದಿನದ ಕಾರ್ಯಕ್ಕೆ ಇವರಿಬ್ಬರು ಒಟ್ಟಿಗೆ ಕಾಣಿಸ್ಕೊಳ್ಳುತ್ತಾರೆ ಅನ್ನೋ ನಂಬಿಕೆಯಲ್ಲಿ ಅಭಿಮಾನಿಗಳು ಇದ್ದಾರೆ . ಇವರಿಬ್ಬರು ತಮ್ಮ ವೈಮನಸನ್ನ ಮರೆತು ಅಂಬಿಯ ಆಸೆಯಂತೆ ಮೊದಲಿನ ಹಾಗೆ ಒಂದಾಗಿ ಕುಚಿಕು ಗೆಳೆಯರ ಥರ ಇರಬೇಕಾಗಿದೆ.ಸುದೀಪ್ ಮನದಲ್ಲಿ ದರ್ಶನ್ ಮತ್ತೆ ನನ್ನ ಸ್ನೇಹಿತನಾಗಬೇಕು ಅನ್ನೋದು ಇದ್ದೆ ಇದೆ . ಆದರೆ ದರ್ಶನ್ ಮಾತ್ರ ದೊಡ್ಡ ಮನಸ್ಸು ಮಾಡಬೇಕು ಸುದೀಪ್ ಆಡಿದ ಮಾತುಗಳನ್ನ ಸೀರಿಯಸ್ ಆಗಿ ತೊಗೊಳೋದನ್ನ ಬಿಡಬೇಕು . ನನ್ನ ಕುಚಿಕು ತಾನೇ ಅಂದಿದ್ದು ಅಂತ ದರ್ಶನ್ ಸುಮ್ಮನಾಗಿ ಮತ್ತೆ ಒಂದಾದ್ರೆ ಅವರ ಅಭಿಮಾನಿಗಳಿಗೆ ಖುಷಿಯಾಗುತ್ತದೆ . ಈ ಅಪೂರ್ವ ಸಂಗಮಕ್ಕೆ ಕರುನಾಡು ಜಾತಕ ಪಕ್ಷಿ ಹಾಗೆ ಕಾಯುತ್ತಿದೆ.

LEAVE A REPLY

Please enter your comment!
Please enter your name here