Home Crime “ನನ್ನ ಸಾವಿಗೆ ಯಶೋಧ ಆಗಲಿ ಆಕೆಯ ಮಗಳಾಗಲಿ ಕಾರಣ ಅಲ್ಲ”..! ಹೀಗೆ ಹೇಳಿ ಆಟೋ ಚಾಲಕ...

“ನನ್ನ ಸಾವಿಗೆ ಯಶೋಧ ಆಗಲಿ ಆಕೆಯ ಮಗಳಾಗಲಿ ಕಾರಣ ಅಲ್ಲ”..! ಹೀಗೆ ಹೇಳಿ ಆಟೋ ಚಾಲಕ ಮೊಬೈಲ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ..!?

1541
0
SHARE

ಮನುಷ್ಯ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಂಡರೆ ಎಷ್ಟರ ಮಟ್ಟಿಗೆ ಖಿನ್ನತೆಗೆ ಒಳಗಾಗುತ್ತಾನೆ ಎಂದರೆ, ಕೊನೆಗೆ ತನ್ನ ಪ್ರಾಣವನ್ನೆ ಬಿಟ್ಟಿದ್ದಾನೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂದ್ರೆ ಯಶವಂತಪುರದಲ್ಲಿ ನಡೆದ ಘಟನೆ.

ಸಾಲದ ಶೂಲಕ್ಕೆ ಸಿಲುಕಿದ್ದ ಆಟೋ ಡ್ರೈವರ್ ಪ್ರೀತಿಸುತ್ತಿದ್ದ ಮಹಿಳೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಸೆಲ್ಪಿ ವೀಡಿಯೊ ಮಾಡಿ ಇಹಲೋಕ ತ್ಯಜಿಸಿದ್ದಾನೆ.
ಈ ವಿಡಿಯೋವನ್ನ ಒಮ್ಮೆ ನೋಡಿ..ಇಲ್ಲಿ ಆಟೋ ಡ್ರೈವರ್ ನನ್ನ ಸಾವಿಗೆ ನಾನೇ ಕಾರಣ..ನನ್ನ ಸಾವಿಗೆ ಬೇರಾರು ಕಾರಣ ಅಲ್ಲ..ನನ್ನದೊಂದು ಆಟೋ ಇದೆ.

ಅದನ್ನ ಮಾರಿ ಹಣ ಕೊಡಿ ಅಂತಿದ್ದಾನೆ. ಅಷ್ಟಕ್ಕೂ ಈ ವಿಡಿಯೋ ಮಾಡಿದ ವ್ಯಕ್ತಿಯ ಹೆಸರು ವೆಂಕಟೇಶ್. ಈತ ಸುಬೇದಾರ್ ಪಾಳ್ಯದಲ್ಲಿ ಇಂದು ಮಂಜಾನೆ 7 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಈತನ ಸಾವಿಗೆ ಕಾರಣ ಸಾಲ.ಆತ್ಮಹತ್ಯೆ ಮಾಡಿಕೊಂಡ ವೆಂಕಟೇಶ್ ವಿಡಿಯೋದಲ್ಲಿ ಯಶೋಧ ಎಂಬುವರ ಹೆಸರು ಹೇಳಿದ್ದಾನೆ…

ನನ್ನ ಸಾವಿಗೆ ಯಶೋಧ ಆಗಲಿ ಆಕೆಯ ಮಗಳಾಗಲಿ ಕಾರಣ ಅಲ್ಲ..ನನ್ನ ಸಾವಿಗೆ ನಾನೆ ಕಾರಣ..ನಾನು ಯಶೋಧ ಬಳಿಯೂ ಸಾಲ ಮಾಡಿಕೊಂಡಿದ್ದೇನೆ..ನನ್ನ ಆಟೋ ಮಾರಿ ಬಂದ ಹಣವನ್ನ ಯಶೋದಾಗೆ ನೀಡಿ..ಮುಂದಿನ ಜನ್ಮ ಇದ್ರೆ ಯಶೋದಾಳೆ ನನ್ನ ಹೆಂಡತಿಯಾಗಿ ಬರಲಿ ಎಂದು ಹೇಳಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ.ಯಶೋಧ ಎಂಬ ಮಹಿಳೆಯು ಗಂಡನಿಗೆ ಡೈವೋರ್ಸ್ ನೀಡಿ ಸುಬೇದಾರ್ ಪಾಳ್ಯದಲ್ಲಿ ವಾಸವಾಗಿದ್ದಾರೆ.

ಪರಿಚಯವಾದ ಬಳಿಕ ವೆಂಕಟೇಶ ಯಶೋಧ ಮನೆಯಲ್ಲಿ ವಾಸವಿಲ್ಲ. ಈಕೆ ಬಳಿಯಿಂದಲೂ ಸಾಲ ಪಡೆದಿದ್ದ. ಇದೇ ವಿಚಾರಕ್ಕೆ ನಿನ್ನೆ ರಾತ್ರಿ ವೆಂಕಟೇಶ್‌ಗೆ ಯಶೋಧಾ ತರಾಟೆಗೆ ತೆಗೆದುಕೊಂಡಿದ್ದಾರೆ.ಸಾವಿಗೆ ಶರಣಾದ ವೆಂಕಟೇಶ್ ಪರಿಸ್ಥಿತಿ ನೆನೆದುಕೊಂಡರೆ ಎಂತವರಿಗೂ ಒಂದು ಕ್ಷಣ ಮರುಕ ಉಂಟಾಗುತ್ತದೆ, ಏನೆ ಆಗಲಿ ಸಾಲ ಮಾಡಿ ಸಾವಿಗೆ ಶರಣಾಗುವ ಬದಲು ಹಾಸಿಗೆ ಇದ್ದಷ್ಟೆ ಕಾಲು ಚಾಚುವುದು ಒಳ್ಳೆಯದು ಎನಿಸುತ್ತೆ.

LEAVE A REPLY

Please enter your comment!
Please enter your name here