Home District “ನಮ್ದಿರ‍್ಲಿ ಶೋಭಕ್ಕನಾ ಸರಿಯಾಗ್ ನೋಡ್ಕೊಳಿ ಯಡಿಯೂರಪ್ಪನವರೇ”-H.D.ರೇವಣ್ಣ, ಆಪರೇಷನ್ ಪದವನ್ನು ಹುಟ್ಟುಹಾಕಿದ್ದೇ ಯಡಿಯೂರಪ್ಪ- ಸಿದ್ದರಾಮಯ್ಯ

“ನಮ್ದಿರ‍್ಲಿ ಶೋಭಕ್ಕನಾ ಸರಿಯಾಗ್ ನೋಡ್ಕೊಳಿ ಯಡಿಯೂರಪ್ಪನವರೇ”-H.D.ರೇವಣ್ಣ, ಆಪರೇಷನ್ ಪದವನ್ನು ಹುಟ್ಟುಹಾಕಿದ್ದೇ ಯಡಿಯೂರಪ್ಪ- ಸಿದ್ದರಾಮಯ್ಯ

2973
0
SHARE

ಬಿಜೆಪಿಯವರು ಏನೇ ಪ್ರಯತ್ನ ಮಾಡಿದ್ರೂ, ರಾಜ್ಯ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಅಂತ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಇನ್ನಷ್ಟು ದಿನ ಐಷಾರಾಮಿ ಹೋಟೆಲ್ ನಲ್ಲಿದ್ದು ರಾಜಕೀಯ ಮಾಡಲಿ ಎಂದು ಗೇಲಿ ಮಾಡಿದರು.

ಯಡಿಯೂರಪ್ಪ ಅವರಿಗೆ ಬದ್ಧತೆ ಇದ್ದರೆ ಕೇಂದ್ರದಿಂದ ಅನುದಾನ ತರುವ ಮೂಲಕ ರಾಜ್ಯದ ಹಿತಕಾಯುವ ಕೆಲಸ ಮಾಡಲಿ. ಅದನ್ನು ಬಿಟ್ಟು ಈ ರೀತಿಯ ರಾಜಕೀಯ ಮಾಡಿದ್ರೆ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅವರಿಗೆ ಮಾನ ಮರ್ಯಾದೆ ಇದ್ರೆ ಕಡತ ತೆಗೆದು ನೋಡಲಿ. ದೇವೇಗೌಡರು, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು ಎಷ್ಟು ಬಾರಿ ಕೇಂದ್ರಕ್ಕೆ ಹೋಗಿ ಮನವಿ ಮಾಡಿದ್ದೇವೆ ಎಂಬುದನ್ನು ನೋಡಲಿ.

ಹೋಟೆಲ್ ನಲ್ಲಿ ಕೂತು ಮಜಾ ಮಾಡೋದಲ್ಲ ಎಂದು ಕಾಲೆಳೆದರು. ಬಿಜೆಪಿ ಆಪರೇಷನ್ ಕಮಲಕ್ಕೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ಆಪರೇಷನ್ ಎಂಬ ಪದವನ್ನು ಹುಟ್ಟುಹಾಕಿದ್ದೇ ಯಡಿಯೂರಪ್ಪನವರು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ರೋಗ ಇದ್ದ ಹಾಗೆ, ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ,

ಬಿಜೆಪಿಯವರದ್ದು ಅಸಹ್ಯ ರಾಜಕಾರಣವಾಗಿದೆ. ನಮ್ಮ ಪಕ್ಷದವರು ಯಾರೂ ಬಿಜೆಪಿಗೆ ಹೋಗಲ್ಲ. ನಾವು ಯಾರಿಗೂ ಮಂತ್ರಿಗಿರಿ ನೀಡುವ ಭರವಸೆ ನೀಡಿಲ್ಲ, ಸದ್ಯಕ್ಕೆ ಮಂತ್ರಿ ಮಂಡಲದಲ್ಲಿ ಬದಲಾವಣೆ ಮಾಡೋದಿಲ್ಲ ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಲ್ಲಾ ಶಾಸಕರು ಹಾಜರಾಗುತ್ತಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here