Home Crime ನಮ್ಮ ಜನಕ್ಕೆ ಎಷ್ಟೇ ಬುದ್ಧಿ ಹೇಳಿದ್ರೂ ಕೇಳಲ್ಲ..!! ಇನ್ಮುಂದೇ ಆದ್ರೂ ಈ ಸ್ಟೋರಿ ನೋಡಿ ಎಚ್ಚರಗೊಳ್ಳಿ..!?...

ನಮ್ಮ ಜನಕ್ಕೆ ಎಷ್ಟೇ ಬುದ್ಧಿ ಹೇಳಿದ್ರೂ ಕೇಳಲ್ಲ..!! ಇನ್ಮುಂದೇ ಆದ್ರೂ ಈ ಸ್ಟೋರಿ ನೋಡಿ ಎಚ್ಚರಗೊಳ್ಳಿ..!? EPC ವಿನಿಮಯ ಕಂಪನಿಯಿಂದ 3000 ಕೋಟಿ ನಾಮ..!

267
0
SHARE

ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆ ವಂಚಕರ ಬಲೆಗೆ ಕೇವಲ ಬೆಂಗಳೂರಿಗರು ಮಾತ್ರ ಸಿಕ್ಕಿ ಬಿದ್ದಿಲ್ಲ. ದೇಶದ ಮೂಲೆ ಮೂಲೆಯ ಜನರು ಕೂಡ ಆ ವಂಚಕರನ್ನ ನಂಬಿ ಕೋಟಿ ಕೋಟಿ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ…

ಬೆಂಗಳೂರಿನಲ್ಲಿ ಬೆಳಕಿಗೆ ಬಂತು ಬಹುಕೋಟಿ ವಂಚನೆ ಕೇಸ್.ಇಪಿಸಿ ವಿನಿಮಯ ಸಂಸ್ಥೆಯಿಂದ 3 ಸಾವಿರ ಕೋಟಿ ನಾಮ.ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ವಂಚನೆ ಮಾಡುವವರ ಪಟ್ಟಿ ಬೆಳೆಯುತ್ತಲೇ ಇದೆ. ಕಳೆದ ಮೂರು ತಿಂಗಳುಗಳಿಂದೀಚೆಗೆ ಒಂದರ ಮೇಲೊಂದರಂತೆ ಬ್ಲೇಡ್ ಕಂಪನಿಗಳು ಜನರಿಗೆ ವಂಚಿಸೋ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆಂಬಿಡೆಂಟ್, ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪನಿಗಳು ಮಾಡಿರೋ ವಂಚನೆ ಪ್ರಕರಣಗಳ ಬೆನ್ನಲ್ಲೆ ಮತ್ತೊಂದು ಬಹುಕೋಟಿ ವಂಚನೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಆ ವಂಚನೆ ಸಂಸ್ಥೆಯೇ ಇಪಿಸಿ ಎಕ್ಸ್ ಚೇಂಜ್ ಅಂಡ್ ಎಸ್.ಆರ್. ಬ್ಲೂ ಚಿಫ್…

ಕಳೆದ 7 ತಿಂಗಳ ಹಿಂದೆಯಷ್ಟೇ ಹೆಚ್.ಎಸ್.ಆರ್. ಲೇಔಟ್ 1ನೇ ಸೆಕ್ಟರ್ ನಲ್ಲಿ ಓಪನ್ ಆಗಿದ್ದ ಈ ಸಿಪಿಸಿ ಎಕ್ಸ್ ಚೇಂಜ್ ಕಂಪನಿಯ ಮೊದಲ ಹೆಸ್ರು ಸಿಪಿಸಿ ವಾಲೆಟ್. ಸುಲಭವಾಗಿ ದುಡ್ ಮಾಡೋದಕ್ಕೆ ಸರ್ಚ್ ಮಾಡ್ತಿದ್ದವ್ರಿಗೆ ಯೂಟ್ಯೂಬ್ ನಲ್ಲಿ ಈ ಇಸಿಪಿ ಸಂಸ್ಥೆಯ ಪರಿಚಯವಾಗಿತ್ತು. ಅವ್ರನ್ನ ಕಾಂಟೆಕ್ಟ್ ಮಾಡಿದವ್ರಿಗೆ ಮಾತಿನಲ್ಲಿಯೇ ಮರುಳು ಮಾಡ್ತಿತ್ತು. ನೀವು ಕಂಪನಿಯ ಸದಸ್ಯತ್ವ ಪಡೆದ್ರೆ, ಪ್ರತಿದಿನ 1 ಸಾವಿರ ರೂಪಾಯಿ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಬಂದು ಬೀಳುತ್ತೆ ಅಂತ ಆಸೆ ಹುಟ್ಟಿಸಿತು…

ಕಂಪನಿಯ ಮಾತು ಕೇಳಿದ ಸಾವಿರಾರು ಮಂದಿ ಅದು ಸೂಚಿಸಿದ ಬ್ಯಾಂಕ್ ಗಳ ಖಾತೆಗೆ ಹಣ ಠೇವಣಿ ಇಟ್ರು. ಆರಂಭದಲ್ಲಿ ನಾಲ್ಕೈದು ದಿನ ಹಣ ಹಾಕಿದ ಸಂಸ್ಥೆ ನಂತರ ಕೈ ಎತ್ತಿದೆ. ಇನ್ನು, ದುಡ್ಡು ಇವತ್ತು ಬರುತ್ತೆ,ನಾಳೆ ಬರುತ್ತೆ ಎಂದು ಕಾದು ಕುಳಿತಿದ್ದ ಹೂಡಿಕೆದಾರರಿಗೆ ಶಾಕ್ ಕಾದಿತ್ತು.ಕಂಪನಿ ಬಾಗಿಲಿಗೆ ಬೀಗ ಜಡಿದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಕಣ್ಮರೆಯಾಗಿದ್ದಾನೆ…

ಅಜ್ಞಾತ ಸ್ಥಳದಿಂದ ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳುವ ಚಂದ್ರಶೇಖರ್ ನಿಮ್ಮ ದುಡ್ಡು ಕೊಡುತ್ತೇನೆ. ಮೂರ್ನಾಲ್ಕು ತಿಂಗಳು ತಡೆದುಕೊಳ್ಳಿ ಎಂದು ಪುಂಗುತ್ತಿದ್ದಾನೆ. ಆದ್ರೆ, ಜನರು ಮಾತ್ರ ನಮಗೆ ಲಾಭಾನು ಬೇಡ. ನಾವ್ ಕೊಟ್ಟಿರೋ ದುಡ್ ನಮಗೆ ಕೊಡಪ್ಪ ಅಂತಿದ್ದಾರೆ…

LEAVE A REPLY

Please enter your comment!
Please enter your name here