Home Crime ನಮ್ಮ ಮೆಟ್ರೋದಲ್ಲಿ ಹೆಚ್ಚಾಯ್ತು ಕುಡುಕರ ಹಾವಳಿ..! ಬಿಎಂಆರ್‌ಸಿಎಲ್‌ಗೆ ಶುರುವಾಗಿದೆ ಹೊಸ ತಲೆನೋವು..!

ನಮ್ಮ ಮೆಟ್ರೋದಲ್ಲಿ ಹೆಚ್ಚಾಯ್ತು ಕುಡುಕರ ಹಾವಳಿ..! ಬಿಎಂಆರ್‌ಸಿಎಲ್‌ಗೆ ಶುರುವಾಗಿದೆ ಹೊಸ ತಲೆನೋವು..!

370
0
SHARE

ನ್ಯೂ ಇಯರ್ ಬರ್ತಿದೆ. ಇನ್ನೈದು ದಿನದಲ್ಲಿ ಕ್ರಿಸ್ಮಸ್ ಇದೇ. ರಾತ್ರಿ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಗೆ ಹೋಗಿ ಪಾರ್ಟಿ ಮಾಡ್ಬೇಕು. ನ್ಯೂ ಇಯಿರ್ ಬರೋದೆ ವರ್ಷಕ್ಕೊಂದು ಸಲ ಡ್ರಿಂಕ್ಸ್ ಮಾಡ್ಲೇ ಬೇಕು. ಫುಲ್ ಟೈಟ್ ಆಗಿ ಎಂಜಾಯ್ ಮಾಡೋದ್ ,ಮುಗ್ದ್ ಮೇಲೆ ನೆಮ್ಮದಿಯಾಗಿ ಮೆಟ್ರೋದಲ್ಲಿ ವಾಪಾಸ್ ಬರೋಣ ಅಂತಾ ಪ್ಲಾನ್ ಮಾಡ್ಕೊಂಡು ನೀವೇನಾದ್ರು ಹೋದ್ರೆ, ಸಿಕ್ಕಾಪಟ್ಟೆ ಕಷ್ಟ ಪಡ್ಬೇಕಾಗತ್ತೆ.

ಅರೇ ನ್ಯೂ ಇಯರ್ ಬಂದೇ ಬಿಡ್ತು, ಪಾರ್ಟಿ ಬೇಗ ಮುಗಿಸ್ಕೊಂಡು, ಗಾಡಿ ಏನಾದ್ರು ಓಡಸ್ಕೊಂಡ್ ಹೋದ್ರೆ ಪೊಲೀಸ್ರ ಹಾವಳಿ ಬೇರೆ . ಇನ್ನು ಆಟೋಲೋ ಟ್ಯಾಕ್ಸಿಲೋ ಹೋಗೋಣ ಅಂದ್ರೆ ಬೇಜಾನ್ ರೇಟ್ ಹೇಳ್ತಾರೆ. ಇವೆಲ್ಲಾ ಯಾಕ್ಬೇಕು ಮೆಟ್ರೋದಲ್ಲಿ ಆರಾಮಾಗ್ ಹೋಗೋಣ ಅನ್ನೋ ಪ್ಲ್ಯಾನ್ ನಿಮ್ಮದಾಗಿದ್ರೆ ಮೊದಲು ಬದಲಾಯಿಸ್ಕೊಳ್ಳಿ.

ಯಾಕಂದ್ರೆ ಲೇಡೀಸ್ ಎಲ್ಲಾ ಕುಡಿದು ಬರೋರಿಗೆ ಮೆಟ್ರೋ ಒಳಗೆ ನೋ ಎಂಟ್ರಿ ಅಂತ ಪಟ್ಟು ಹಿಡ್ದು ಕೂತಿದ್ದಾರೆ. ಇತ್ತೀಚೇಗೆ ಮೆಟ್ರೋದಲ್ಲಿ ಲೇಡಿ ಪ್ಯಾಸೆಂಜರ್‌ಗಳಿಗೆ ಕುಡುಕರು ಬೇಜಾನ್ ಕಾಟ ಕೊಡ್ತಿದ್ದು, ಪದೇ ಪದೇ ಮಹಿಳಾ ಆಯೋಗಕ್ಕೆ ದೂರು ಬರ್ತಿದೆ. ಇದಕ್ಕೆ ಬಿಎಂಆರ್ಸಿಎಲ್ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದಾರೆ.

ಈಗಾಗ್ಲೇ ಟ್ರಿನಿಟಿ ವೃತ್ತದಲ್ಲಾದ ಕ್ರ್ಯಾಕ್ ನಿಂದ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರೋ ಬಿಎಂಆರ್ಸಿಎಲ್ ಗೆ ಇದು ಮತ್ತೊಂದು ತಲೆನೋವು ಅಂದ್ರೆ ತಪ್ಪಾಗದು. ಈ ಹಿಂದೆ ಮಹಿಳೆಯರಿಗೆ ಸಪ್ರೇಟ್ ಬೋಗಿ ನೀಡಿದ್ದೇವೆ. ಡ್ರಿಂಕ್ ಮಾಡಿ ಡ್ರೈವ್ ಮಾಡ್ಬಾರ್ದು ಅನ್ನೋ ಕಾನೂನಿದೆ ಆದ್ರೆ ಡ್ರಿಂಕ್ ಅಂಡ್ ಟ್ರಾವೆಲ್ಗೆ ಕಡಿವಾಣ ಹಾಕೋಕೆ ಸಾಧ್ಯನ ಎಂದು ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ಹೇಳಿದ್ದಾರೆ.

ಇಷ್ಟು ದಿನ ಡ್ರಿಂಕ್ ಅಂಡ್ ಡ್ರೈವ್ ನಿಂದ ಬೇಜಾನ್ ಇರಿಟೇಟ್ ಆಗಿದ್ದ ಕುಡುಕರಿಗೆ ಮೆಟ್ರೋದ ಬಾಗಿಲು ಮುಚ್ಚುತ್ತಾ ಅನ್ನೋ ಭಯ ಶುರುವಾಗಿದೆ. ಅಲ್ಲದೇ ನ್ಯೂಇಯರ್ ಗೆ ಸ್ಮಾರ್ಟ್ ಪ್ಲ್ಯಾನ್ ಮಾಡಿದ್ದ ಪಾರ್ಟಿ ಪ್ರಿಯರ ಪ್ಲ್ಯಾನು ಉಲ್ಟಾ ಹೊಡ್ದಿದೆ.

LEAVE A REPLY

Please enter your comment!
Please enter your name here