Home Elections 2018 ನರೇಂದ್ರಬಾಬು ಒಬ್ಬ ಮನೆ ಮುರುಕು….ಮನೆ ಹಾಳು ಮಾಡುವವನು..ಒಬ್ಬ ಗೋಮುಖ ವ್ಯಾಘ್ರ ಎಂದು BBMP ಮಾಜಿ ಸದಸ್ಯ...

ನರೇಂದ್ರಬಾಬು ಒಬ್ಬ ಮನೆ ಮುರುಕು….ಮನೆ ಹಾಳು ಮಾಡುವವನು..ಒಬ್ಬ ಗೋಮುಖ ವ್ಯಾಘ್ರ ಎಂದು BBMP ಮಾಜಿ ಸದಸ್ಯ ನಾಗರಾಜ್ ಆಕ್ರೋಶ…

507
0
SHARE

ಮಹಾಲಕ್ಷ್ಮಿ ಲೇಔಟ್ ನಲ್ಲಿ ನೆ.ಲ ನರೇಂದ್ರಬಾಬುಗೆ ಟಿಕೇಟ್ ಕೊಟ್ಟಿದ್ರಿಂದ ಹೊತ್ತಿಕೊಂಡಿರುವ ಬಂಡಾಯದ ಬೆಂಕಿ ಮತ್ತಷ್ಟು ತೀವ್ರವಾಗಿದೆ. ಟಿಕೇಟ್ ಗಾಗಿ ಕುಸ್ತಿ ಮಾಡಿ ಸುಸ್ತಾದ ಮಾಜಿ ಉಪಮೇಯರ್ ಹರೀಶ್ , ಕಾರ್ಪೋರೇಟರ್ ನಾಗರಾಜ್ ಕಮಲಕ್ಕೆ ಕೈ ಮುಗಿದು ಪ್ರಾಥಮಿಕ ಸದಸತ್ವತ್ಕೆ ರಿಸೈನ್ ಮಾಡಿ ಹೊರಬಂದಿದ್ದಾರೆ…

ಕೇವಲ ಹರೀಶ್ ಮಾತ್ರವಲ್ಲ ಇಡೀ ಮಹಾಲಕ್ಷ್ಮಿ ಲೇಔಟ್ ನ ಬಿಜೆಪಿ ಮಂಡಳವೇ ರಿಸೈನ್ ಮಾಡಿದ್ದು ಈಗ ಬಿಜೆಪಿ ಕ್ಷೇತ್ರದಲ್ಲಿ ಪದಾಧಿಕಾರಿಗಳು ಇಲ್ದಂಗೆ ಆಗಿದೆ….ಇಷ್ಟು ದಿನ ನೆಲ ನರೇಂದ್ರಬಾಬು ಕಾಂಗ್ರೆಸ್ ನಲ್ಲಿದ್ದು ಬಿಜೆಪಿಯನ್ನಾ ಮುಗಿಸುತ್ತಾ ಬಂದಿದ್ರು…

ಈಗ ಬಿಜೆಪಿಗೆ ಜಿಗಿದು ಪಕ್ಷವನ್ನೇ ನಿರ್ನಾಮ ಮಾಡ್ತಿದ್ದಾರೆ. ನರೇಂದ್ರಬಾಬು ಒಬ್ಬ ಮನೆ ಮುರುಕು….ಮನೆ ಹಾಳು ಮಾಡುವವನು..ಒಬ್ಬ ಗೋಮುಖ ವ್ಯಾಘ್ರ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪುಟ್ ಪಾತ್ ನಲ್ಲಿ ಲಾಟ್ರಿ ಹೊಡಿತ್ತಿದ್ದ ನೆಲ ನರೇಂದ್ರಬಾಬು ಮಕ್ಕಳಿಗೆ ಫೀಜ್ ಕಟ್ಬೇಕು ಅಂತಾ ನನ್ನ ಮನೆ ಬಾಗಿಲಿಗೆ ಬಂದಿದ್ದ…

ಬಾಗಿಲಲ್ಲಿ ನಿಂತು ಭಿಕ್ಷೆ ಬೇಡುವ ನೆಲ ನರೇಂದ್ರಬಾಬು ಬೆನ್ನಿಗೆ ಚೂರಿ ಹಾಕಿದ್ದಾರೆ…ಅವರನ್ನಾ ಸೋಲಿಸಿ ಬೀದಿ ಪಾಲು ಮಾಡೋದೆ ನನ್ನ ಗುರಿ ಅಂತಾ ನಾಗರಾಜ್ ಶಪಥ ಮಾಡಿದ್ದಾರೆ…

LEAVE A REPLY

Please enter your comment!
Please enter your name here