Home Crime ನಶೆಯಲ್ಲಿದ್ದ ಪತಿಯೆದುರೇ ನಡೆದಿತ್ತು ಆ ಹೆಣ್ಣಿನ ಚಕ್ಕಂದ…!? ಇನಿಯನ ತುಟಿಗೆ ಒತ್ತಿದ ಆ ಮುತ್ತಿಗೂ ಬೆಲೆ...

ನಶೆಯಲ್ಲಿದ್ದ ಪತಿಯೆದುರೇ ನಡೆದಿತ್ತು ಆ ಹೆಣ್ಣಿನ ಚಕ್ಕಂದ…!? ಇನಿಯನ ತುಟಿಗೆ ಒತ್ತಿದ ಆ ಮುತ್ತಿಗೂ ಬೆಲೆ ಕಟ್ಟಿದ್ಲು ಈ ಕಿರಾತಕಿ..!? ಸಿಸಿ ಕ್ಯಾಮರ ಕೊಟ್ಟಿತ್ತು ಆ ಒಂದು ಕ್ಲ್ಯೂ..!!!

1582
0
SHARE

ಕಾಮಾ ತುರಾಣಾಂ ನಾ ಭಯಂ ನಾ ಲಜ್ಜಾ…ಸಂಸ್ಕೃತದಲ್ಲಿ ಇಂತದೊಂದು ವ್ಯಾಖ್ಯಾನ ಇದೆ. ಕಾಮದಿಂದ ಕಣ್ಣು ಮುಚ್ಚಿ ಹೋಗಿದ್ದವರಿಗೆ ಭಯವೂ ಇರಲ್ಲ ಲಜ್ಜೆಯೂ ಇರಲ್ಲ. ನಾವು ಬದುಕುತ್ತಿರೋದು ಸಮಾಜದಲ್ಲಿ, ಅಂತಾ ಲಜ್ಜೆಗೆಟ್ಟ ಕೆಲಸವನ್ನ ಮಾಡಿದ್ರೆ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ಸಂಕೋಚವೂ ಇರಲ್ಲ, ಭಯವಂತೂ ಇರೋದೆ ಇಲ್ಲ ಅನ್ನೋದು ಆ ಮಾತಿನ ಅರ್ಥ. ಅದೇನಿದ್ರೂ ಪ್ರಾಣಿಗಳಿ ಮಾತ್ರ ಅನ್ವಯವಾಗುತ್ತೆ. ಮನುಷ್ಯರಿಗೆ ಅಲ್ಲ. ಹಾಗಂತ ಕಾಮ ಅನ್ನೋದರ ಸಹವಾಸವೇ ಬೇಡ ಅನ್ನೋದಕ್ಕೂ ಆಗಲ್ಲ. ಪ್ರತಿಯೊಬ್ಬರಿಗೂ ಕಾಮ ಅನ್ನೋದು ಇದ್ದೇ ಇರುತ್ತೆ. ಇರಲೇ ಬೇಕು ಕೂಡ…

ಆದ್ರೆ ಆ ಕಾಮ ಅನ್ನೋದು ಒಂದು ಇತಿಮಿತಿಯಲ್ಲಿರಬೇಕು. ಮಿತಿ ಮೀರಿದಾಗ ಆ ಕಾಮ ಅನ್ನೋದು ಬದುಕನ್ನೇ ಸುಟ್ಟು ಬಿಡುತ್ತೆ. ಸೋ.. ಅಂತಹದೊಂದು ಘಟನೆ ವಾಣಿಜ್ಯ ನಗರಿ ನಮ್ಮ ಹುಬ್ಬಳ್ಳಿಯಲ್ಲಿ ನಡೆದೋಗಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದ ಪೊಲೀಸರಿಗೆ ಅಲ್ಲಿ ಕೊಲೆಯಾಗಿದ್ದ ವ್ಯಕ್ತಿ ಯಾರೂ ಏನೂ ಎತ್ತ ಅಂತ ಯಾವುದೂ ಗೊತ್ತಿರಲಿಲ್ಲ. ಸ್ಥಳದಲ್ಲಿ ಹಂತಕರ ಬಗ್ಗೆ ಯಾವ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಜೊತೆಗೆ ಕಳೆದ ರಾತ್ರಿ ಜೋರಾಗಿ ಮಳೆ ಬೇರೆ ಸುರಿದ ಕಾರಣಕ್ಕೆ ಡಾಗ್ ಸ್ಕ್ವ್ಯಾಡ್ ಅಥವ ಎಫ್ ಎಸ್ ಎಲ್ ತಂಡವನ್ನ ಕರೆಸೋದು ಬಹುಶಃ ವ್ಯರ್ಥ ಅಂತ ಜಮೀನಿನ ರೈತನೊಬ್ಬನ ಸ್ಟೇಟ್ ತೆಗೆದುಕೊಂಡು ಅಪರಿಚಿತ ವ್ಯಕ್ತಿಯ ಕೊಲೆ ಅಂತ ಕೇಸ್ ದಾಖಲಿಸಿಕೊಂಡಿದ್ರು…

ಅಷ್ಟೇ ಅಲ್ಲ.. ಡೆಡ್ಬಾಡಿಯ ಫೊಟೋ ತೆಗೆದು ಪತ್ರಿಕಾ ಪ್ರಕಟಣೆಯನ್ನೂ ಪೊಲೀಸರು ಹೊರಡಿಸಿದ್ದರು. ಆಗ್ಲೇ ನೋಡಿ ಮೂರು ದಿನಗಳ ನಂತರ ಗೊತ್ತಾಗಿತ್ತು.. ಕೊಲೆಯಾದ ವ್ಯಕ್ತಿ ಮೊಹಮದ್ ರಫಿಕ್ ಅಲಿಯಾಸ್ ಅಲ್ಲಾಭಕ್ಷ್ ಅಂತ.ಮೂಲತಃ ಧಾರವಾಡದ ಅಮ್ಮನಬಾವಿಯ ನಿವಾಸಿಯಾಗಿರೋ ಮೊಹಮದ್ ರಫಿಕ್ , ಸಂಸಾರ ಸಮೇತ ಹುಬ್ಬಳ್ಳಿಯ ತೊರವಿಹಕ್ಕಲ ಬಡಾವಣೆಯಲ್ಲಿ ವಾಸವಿದ್ದ. ಯಾವಾಗ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಕೊಲೆಯಾದ ವ್ಯಕ್ತಿ ಫೋಟೋ ಹಾಕಿದ್ರೋ ಅದನ್ನ ಕಂಡ ರಫಿಕ್ ಹೆಂಡತಿ ಶಬಾನಾ ಆಯಟ್ಟಿ, ಕೂಡಲೇ ನವನಗರ ಠಾಣೆಗೆ ಓಡಿ ಬಂದು, ಆತ ನನ್ನ ಗಂಡಾ ಸಾರ್…

ಏನಾಯ್ತು, ಯಾರು ಕೊಂದವ್ರು ಅಂತ ಗೋಳಾಡಿದ್ದಳು. ಏನು ಎತ್ತ ಅಂತ ವಿಚಾರಿಸಿದಾಗ.. ಮೂರು ದಿನಗಳ ಹಿಂದೆ ನನ್ನ ಗಂಡ ನನ್ನ ಜೊತೆ ಕುಡಿಯೋದಕ್ಕೆ ಕಾಸು ಕೊಟ್ಟಿಲ್ಲ ಅಂತ ಜಗಳ ಮಾಡ್ಕೊಂಡು ಹೋಗಿದ್ದ. ಯಾವಾಗಲೂ ಇದ್ದಿದ್ದೇ ಗೋಳು, ಎಲ್ಲೋಗ್ತಾರೆ ಬಿಡು ಬರ್ತಾರೆ ಅಂತ ಸುಮ್ಮಾನಾಗಿದ್ದ. ಆದ್ರೀಗ ನನ್ನ ಗಂಡನ ಹೆಣ ನೋಡೋವಂತಾ ಪರಿಸ್ಥಿತಿ ಬಂತೂ ಅಂತ ಗೋಳಾಡಿದ್ದಳು ಶಬಾನಾ.ಆಯ್ತು ಸಮಾಧಾನ ಮಾಡ್ಕೊಮ್ಮಾ ಅಂತ ಹೇಳಿದ ಪೊಲೀಸರು ಶಬಾನಾಳಿಂದ ಒಂದು ಕಂಪ್ಲೇಂಟ್ ಬರೆಸಿಕೊಂಡು ತನಿಖೆ ಮುಂದುವರೆಸಿದರು. ಆಗ ಪೊಲೀಸರ ಕಿವಿಗೆ ಒಂದಷ್ಟು ಮಾಹಿತಿ ಬಿದ್ದಿತ್ತು. ಸಾರ್.. ಮೊಹಮದ್ ರಫಿಕ್ನ ಹೆಂಡ್ತಿಯನ್ನೇ ಒಂಚೂರು ಜೋರಾಗಿ ವಿಚಾರಿಸಿ ಸಾರ್…

ನಿಮಗೆ ಏನಾದ್ರೂ ಕ್ಲೂ ಸಿಗಬಹುದು ಅಂತ ತೊರವಿಹಕ್ಕಲ ಬಡಾವಣೆಯ ಮಂದಿಯೇ ಹೇಳಿದ್ದರು. ಪೊಲೀಸರಿಗೆ ಅಷ್ಟು ಸಾಕಲ್ವಾ.. ಸೋ.. ಶಬಾನಾಳನ್ನ ಕರೆಸಿ ವಿಚಾರಿಸಿದಾಗ ಗೊತ್ತಾಯ್ತು ಮೊಹಮದ್ ರಫಿಕ್ ನನ್ನ ಕೊಂದಿದ್ದು ಮತ್ತ್ಯಾರೂ ಅಲ್ಲಾ ಅವನ ಹೆಂಡತಿ ಶಬಾಳಾನೇ ಅಂತ. ಆಕೆಯನ್ನ ಮತ್ತಷ್ಟು ವಿಚಾರಿಸಿದಾಗ ಕೊಲೆ ಮಾಡೋದಕ್ಕೆ ಕೈ ಜೋಡಿಸಿದ್ದ ಮತ್ತೊಬ್ಬ ಆರೋಪಿಯೂ ಖಾಕಿ ಖೆಡ್ಡಾಗೇ ಬಿದ್ದೋಗಿದ್ದ.ಶಬಾನಾ ಜೊತೆಗೆ ಬಾಷಾ ಸಾಬ್ ಅನ್ನೋವನನ್ನ ಪೊಲೀಸ್ರು ಎಳ್ಕೊಂಡೋಗಿ ಜೈಲಿಗಾಕಿಬಿಟ್ರು. ಮೊದ ಮೊದಲು ನಮಗೇನೂ ಗೊತ್ತೇ ಇಲ್ಲ ಅಂತ ಡವ್ ಮಾಡ್ತಿದ್ದವರಿಗೆ ಪೊಲೀಸರು ಇಗೋ ನೋಡ್ರಿ ಅಂತ ಆ ಸಾಕ್ಷ್ಯ ತೋರಿಸಿದಾಗ ಹ್ಯಾಪ್ಮೋರೆ ಹಾಕೊಂಡು ತೆಪ್ಪಗಾಗಿದ್ರು. ಆರೋಪಿಗಳನ್ನ ಹಿಡ್ಕೊಂಡಿದ್ದು ಆ ಒಂದು ಸಿಸಿ ಕ್ಯಾಮರಾ…

ಕಾಮಕ್ಕೆ ಕಣ್ಣಿಲ್ಲ ಅನ್ನೋದು ಮಾತ್ರವಲ್ಲಾ ಮೈ ಮೇಲೆ ಪ್ರಜ್ಞೆಯೂ ಇರಲ್ಲ ಅನ್ನೋದನ್ನ ಅದೆಷ್ಟೋ ಪ್ರಕರಣಗಳಲ್ಲಿ ನಾವು ನೋಡ್ತಾನೆ ಇರ್ತೇವೆ. ಅಷ್ಟು ವರ್ಷ ಸಂಸಾರ ಮಾಡಿದ್ದ ಗಂಡ, ಅಥವ ಹೆಂಡ್ತಿಗೆ ಅನೈತಿಕ ಸಂಬಂಧದ ಸುಖ ಸಿಕ್ಕಿದ್ಮೇಲೆ ಆ ಸಂಸರಾದ ಕಥೆ ಮೂರಾಬಟ್ಟೆ ಆಗೋಗುತ್ತೆ. ಇಲ್ಲವೇ ಅನಾಹುತವೊಂದಕ್ಕೆ ಕಾರಣವಾಗೋಗುತ್ತೆ. ಇಲ್ಲೂ ಕೂಡ ಮೊಹಮದ್ ರಫಿಕ್ ಹಾಗೂ ಶಬಾನಾಳ ಸಂಸಾರವೂ ಕೂಡ ಹಾದಿ ತಪ್ಪಿತ್ತು. ಆ ಹಾದಿ ತಪ್ಪೋದಕ್ಕೆ ಕಾರಣವಾದವಳೇ ಈ ಶಬಾನಾ.ಅನೈತಿಕ ಸಂಬಂಧಕ್ಕೆ ಜೋತುಬಿದ್ದು ಈ ಮಾನಗೆಟ್ಟ ಬಾಷಾ ಸಾಬ್ ಹಾಗೂ ಶಬಾನಾ ಆಕೆಯ ಗಂಡನ ಹೆಣ ಕೆಡವಿದ್ದು ಅಂತ ಗೊತ್ತಾಗಿದೆ…

ಈ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ.. ಗಂಡ ಹೆಂಡ್ತಿ ಸಂಸಾರದಲ್ಲಿ ಮತ್ತೊಬ್ಬ ಎಂಟ್ರಿಕೊಟ್ಟಿದ್ದೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಮೊಹಮದ್ ರಫಿಕ್ ಹಾಗೂ ಶಬಾಳಿಗೆ ಸುಮಾರು 15 ವರ್ಷಗಳಿಗೂ ಹಿಂದೆ ನಿಖಾ ಆಗಿತ್ತು. ಹುಡುಗಿ ನೋಡೋದಕ್ಕೆ ಚೆನ್ನಾಗಿದ್ದಾಳೆ, ನನ್ನ ಮುಸುಡಿಗೆ ಅಂತಾ ಲಡಿಕಿ ಸಿಕ್ಕಿದ್ದೇ ದೊಡ್ಡದು ಅಂತ ರಫಿಕ್ ಹಿರಿಹಿರಿ ಹಿಗ್ಗಿದ್ದ. ಮನೆಮಂದಿ, ಹಿರಿಯರೆಲ್ಲಾ ಕೂಡಿ ಮದ್ವೆ ಮಾಡಿದ್ರು. ಮದ್ವೆ ಆದ ಹೊಸರದಲ್ಲಿ ಹನಿಮೂನು , ಟೂರು ಟ್ರಿಪ್ಪು ಅಂತ ಹೆಂಡ್ತಿಯನ್ನ ಕೆರ್ಕೊಂಡು ಊರೂರು ಸುತ್ತಾಡ್ತಿದ್ದ ರಫಿಕ್. ಮದ್ವೆಯಾಗಿ ಮಕ್ಕಳೂ ಆದ್ವು. ಆದ್ರೆ.. ಮೊದ ಮೊದಲು ನೈಂಟಿ ಎಣ್ಣೆ ಹೊಡೀತಿದ್ದ ಮೊಹಮದ್ ರಫಿಕ್, ಬರಬರುತ್ತಾ ಆಫ್ ಬಾಟಲ್ ಹೊಡೆಯೋ ದೊಡ್ಡ ಕುಡುಕ ಆಗ್ಬಿಟ್ಟ. ಆದ್ರೂ ಸಹ.. ಕೆಲಸ ಮಾಡೋದನ್ನ ಮಾತ್ರ ಬಿಡದೆ, ಕೂಲಿನಾಲಿ ಮಾಡಿ ಹೆಂಡ್ತಿ ಮಕ್ಕಳನ್ನ ಸಾಕ್ತಿದ್ದ…

ಕೆಲ ವರ್ಷಗಳಿಂದ ತನ್ನದೇ ಏರಿಯಾದ ಬಾರ್ ಬೆಂಡಿಗ್ ಮೇಸ್ತ್ರಿ ಬಾಷಾಸಾಬ್ ನ ಕೈಕೆಳಗೆ ಕೆಲಸಕ್ಕೆ ಹೋಗ್ತಿದ್ದ.  ಕೆಲಸಕ್ಕೆ ಕರೆಯೋದಕ್ಕೆ ಬಂದಾಗಲೆಲ್ಲಾ ರಿಫಿಕ್ ನ ಮನೆಗೆ ಬರ್ತಿದ್ದ ಮೇಸ್ತ್ರಿ ಬಾಷಾಸಾಬ್, ಆ ಮನೆಯ ಪರಿಸ್ಥಿತಿಯನ್ನೇ ಬಂಡವಾಳ ಮಾಡ್ಕೊಂಡು ಶಬಾನಾಳ ಮೇಲೆ ಕಣ್ಣಾಕಿದ್ದ. ಮೊದಲೇ ಕುಡುಕ ಗಂಡ, ಅದರಲ್ಲೂ ಅವನು ದುಡಿಯೋ ಕಾಸು ಅವನಿಗೇ ಸಾಕಾಗಲ್ಲಾ, ಅದರ ಜೊತೆಗೆ ಸಂಸಾರ ಸುಖ ಕೂಡ ಅಷ್ಟಕ್ಕಷ್ಟೇ ಅನ್ನೋ ಕೊರಗಲ್ಲಿದ್ದ ಶಬಾನಾ, ಮೇಸ್ತ್ರಿ ಬಾಷಾಸಾಬ್ ನ ತೆಕ್ಕೆಗೆ ವಾಲೋದಕ್ಕೆ ಹೆಚ್ಚು ಸಮಯ ಬೇಕಾಗಿರ್ಲಿಲ್ಲ. ಸೋ.. ಕುಡುಕ ಗಂಡನನ್ನ ಸೈಡ್ ಲೈನ್ ಮಾಡಿ ಈ ಹೆಣ್ಣು ಮೇಸ್ತ್ರಿ ಜೊತೆ ಡಿಂಗ್ ಡಾಂಗ್ ಶುರುವಿಟ್ಟುಕೊಂಡಿದ್ಳು…

ಆದ್ರೆ ಎಷ್ಟು ದಿನ ಅಂತ ಅವರ ರಹಸ್ಯ ಸರಸ ಸಲ್ಲಾಪ ಸಾಗುತ್ತೆ ಹೇಳಿ. ಒಂದು ದಿನ ರೆಡ್ ಹ್ಯಾಂಡಾಗಿ ಗಂಡನ ಕೈಗೆ ಸಿಕ್ಕಿಬಿದಿದ್ದಳು ಹಾದಿ ತಪ್ಪಿದ ಹೆಂಡ್ತಿ. ಆಗಿಂದ ಗಂಡ ಹೆಂಡ್ತಿ ನಡುವೆ ಜಗಳ ಮಾಮೂಲಾಗಿತ್ತು. ಆದ್ರೂ ಕೂಡ ಈ ಮೊಹಮದ್ ರಫೀಕ್ ಗೆ ಕುಡಿಯೋದೆ ಬಿಸ್ನೆಸ್ಸು. ಅದನ್ನೇ ಬಂಡವಾಳ ಮಾಡ್ಕೊಂಡ ಶಬನಾ ಹಾಗೂ ಬಾಷಾಸಾಬ್ , ಇವನಿದ್ರೆ ನಮ್ಮ ಆಟಕ್ಕೆ ಯಾವತ್ತೂ ಅಡ್ಡಿನೇ ಅಂತ ಡಿಸೈಡ್ ಮಾಡಿ ಕೊಲೆಗೆ ಸ್ಕೆಚ್ ಹಾಕಿಬಿಟ್ಟಿದ್ರು.ಅವೊತ್ತು ಹತ್ತನೇ ತಾರೀಕು ಆರು ಗಂಟೆ ಸುಮಾರಿಗೆ ಮೊಹಮದ್ ರಫಿಕ್ ಗೆ ಅವನದೇ ಮನೆಯಲ್ಲಿ ಕಂಠಪೂರ್ತಿ ಕುಡಿಸಿ, ಹೊಸ ಬಟ್ಟೆ ತೊಡಿಸಿದ್ದ ಶಬಾನಾ ಹಾಗೂ ಮೇಸ್ತ್ರಿ ಬಾಷಾಸಾಬ್ ಅವನನ್ನ ಸ್ಕೂಟರ್ ಹತ್ತಿಸಿಕೊಂಡು ಎಲ್ಲಿಗೋ ಹೋಗ್ಬೇಕು ಬಾ ಅಂತ ಕರ್ಕೊಂಡು ಹೋಗಿದ್ರು…

ಹೀಗಿ ಮೂವರೂ ಸ್ಕೂಟರಲ್ಲಿ ಹೋಗೋದು ಹೋಟೆಲ್ ಒಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮುಂದೆ ಅದೇ ಸಿಸಿ ಕ್ಯಾಮರಾ ಹಂತಕರ ಸುಳಿವು ಕೊಟ್ಟಿತ್ತು. ಹೀಗೆ ಕರ್ಕೊಂಡು ಹೋದವರೇ.. ಮಾರಡಗಿಯ ತೋಟವೊಂದರಲ್ಲಿ ಕೊಡಲಿಯಿಂದ ಕಡಿದು ಹಾಕಿ ಕೊಲೆ ಮಾಡಿಬಿಟ್ಟಿದ್ರು.ಹೀಗೆ ಗಂಡ ಹೆಣ ಬೀಳಿಸಿ ಪ್ರಿಯಕರನೊಂದಿಗೆ ಮನೆಗೆ ಬಂದಿದ್ದ ಶಬನಾ.. ಏನೂ ಗೊತ್ತಿಲ್ಲದವಳಂತೆ ಸೈಲೆಂಟಾಗಿದ್ದಳು. ಅಷ್ಟೇ ಅಲ್ಲ.. ನನ್ನ ಗಂಡ ಎಂದಿನಂತೆ ನನ್ನ ಜೊತೆ ಜಗಳ ಮಾಡ್ಕೊಂಡು ಹೋಗಿದ್ದಾನೆ. ಮೂರು ದಿನ ಆಯ್ತು ಅವನ ಸುಳಿವೇ ಇಲ್ಲ ಅಂತ ಡವ್ ಮಾಡ್ತಿದ್ದಳು. ಆದ್ರೆ.. ಏನೇ ಡ್ರಾಮಾ ಮಾಡಿದ್ರೂ ಶಬಾನಾ ಹಾಗೂ ಬಾಷಾಸಾಬ್ ಪೊಲೀಸರ ಕೈಗೆ ಸಿಕ್ಕಿಬೇಳಲೇಬೇಕಾಯ್ತು…

LEAVE A REPLY

Please enter your comment!
Please enter your name here