Home Cinema “ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಚಂದನ್ ಶೆಟ್ಟಿ ಎಂದು...

“ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಚಂದನ್ ಶೆಟ್ಟಿ ಎಂದು ನಾನು ಬಯಸುತ್ತೇನೆ. ನಿನ್ನ ಪ್ರೀತಿಯ ನಿವೇದಿತಾ ಗೌಡ”, ಏನಿದು ಹೊಸ ಕಹಾನಿ..!?

607
0
SHARE

ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಗೆ ಮರೆಯಲಾಗದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಒಲವಿನ ಊಡುಗೊರೆ ಸಿಕ್ಕ ಖುಷಿಯಲ್ಲಿ ಚಂದನ್ ಶೆಟ್ಟಿ ಸಕತ್ ಎಕ್ಸಾಯಟ್ ಆಗಿದಾರಂತೆ. ಈ ಗಿಫ್ಟ್ ಕೊಟ್ಟ ಚಂದನದ ಗೊಂಬೆಯ ಕಥೆ ಬಹಳನೇ ಇಂಟ್ರೆಸ್ಟಿಂಗ್.

ಬಿಗ್‌ಬಾಸ್ ಮನೆ ಕೇವಲ ಒಂದು ಮನೆಯಲ್ಲ, ಕಾಂಟ್ರವರ್ಸಿಗಳ ದೊಡ್ಡ ಜಗತ್ತು ಅಂತ ಕೆಲವರು ಹೇಳ್ತಾರೆ. ಈ ಮಾತಿಗೆ ಆಗಾಗ ಒಳ್ಳೆ ಪುಷ್ಟಿನೂ ಸಿಗುತ್ತೆ. ಸ್ಪರ್ಧಿಗಳ ಮಧ್ಯೆ ಹೇಗೆ ಜಗಳಗಳು ಕ್ರಿಯೆಟ್ ಆಗ್ತಾವೊ ಹಾಗೆಯೇ ಎರಡು ಮನಸ್ಸುಗಳ ನಡುವೆ ಪ್ರೀತಿ ಹುಟ್ಟಿಕೊಳ್ಳೊಕು ತುಂಬಾ ಟೈಮ್ ಬೇಕಾಗಲ್ಲ. ಬರೀ ದ್ವೇಷ,ಅಸೂಯೆ ಹಾಗೂ ಕಾಂಪಿಟೇಶನ್‌ಗಳ ಅಡ್ಡ ಎನಿಸಿಕೊಂಡಿರುವ ಬಿಗ್‌ಬಾಸ್ ಮನೆ ಈಗ ಒಂದು ನಿಜವಾದ ಫ್ರೆಂಡ್‌ಶಿಪ್‌ಗೂ ಸಾಕ್ಷಿಯಾಗಿದೆ.

ಈ ಫ್ರೆಂಡ್‌ಶಿಪ್ ಮನೆಯಿಂದ ಹೊರಬಂದಮೇಲೂ ಗಟ್ಟಿಯಾಗಿ ಮನಸ್ಸಿನಲ್ಲಿ ನೆಲೆಯೂರಿದೆ. ಇದು ಎರಡು ಸ್ವಚ್ಛ ಮನಸ್ಸುಗಳ ಕುಚ್ ಕುಚ್ ಕಥೆ.ಬಿಗ್‌ಬಾಸ್ ಸೀಸನ್ ಫೈವ್ ಚಾಲ್ತಿಯಲ್ಲಿ ಇದ್ದದ್ದೇ ಚಂದನ್‌ಶೆಟ್ಟಿ ಹಾಗೂ ನಿವೇದಿತಾ ಗೌಡ ಬಾಂಧವ್ಯದಿಂದ. ಇವರಿಬ್ಬರು ಮನೆಯಲ್ಲಿ ಇದ್ದಷ್ಟು ದಿನ ಮನೆಯ ಕಳೆಯೇ ಬೇರೆ ಇತ್ತು ಬಿಡಿ. ಇದು ಸ್ಪರ್ಧೆಯನ್ನ ಸೈಡಿಗಿಟ್ಟು ಹುಟ್ಟಿಕೊಂಡ ಸ್ನೇಹ. ಚಂದನ್ ಬೇಸರದಲ್ಲಿದ್ದಾಗ ನಿವೇದಿತಾ ಸಮಾಧಾನ ಮಾಡ್ತಿದ್ರು.

ಹಾಗೇ ನಿವೇದಿತಾ ಕಣ್ಣಿರಿಟಾಗ ಚಂದನ್ ಕರ್ಚಿಫು ಕೊಡ್‌ತಿದ್ರು. ಇವರಿಬ್ಬರದು ದಿನಗಟ್ಟಲೇ ಮಾತನಾಡಿದ್ರೂ ಮುಗಿಯದ ಕಥೆ, ಹರಟೆ. ಗುಸುಗುಸು,ಪಿಸುಪಿಸು. ಈ ಸಮಯದಲ್ಲಿ ಏನಪ್ಪ ಇದು ಹೊಸ ಲವ್ ಸ್ಟೋರಿನಾ ಅಂತ ವೀಕ್ಷಕರು ಮಾತನಾಡಿಕೊಂಡಿದ್ದು ಸುಳ್ಳಲ್ಲ.ದಿನದಿಂದ ದಿನಕ್ಕೆ ಚಂದನ್ ಹಾಗೂ ನಿವೇದಿತಾ ಕನೆಕ್ಷನ್ ಬೆಳಿತಾನೇ ಹೋಯ್ತು. ಒಮ್ಮೊಮ್ಮೆ ಮನೆಯಲ್ಲಿ ಯಾರ ಮಾತಿಗೂ ಕೇರ್ ಮಾಡದ ನಿವೇದಿತಾ ಗೌಡ ಚಂದನ್ ಅಡ್‌ವೈಸ್‌ಗಳಿಗೆ ಮಾತ್ರ ಕಿವಿ ಕೊಡ್ತಿದ್ರು.

ಫೈನಲ್‌ವರೆಗೂ ನನಗೆ ನೀನು, ನಿನಗೆ ನಾನು ಎನ್ನುವ ಸ್ವೀಟ್ ಬಾಂಡಿಂಗ್ ಜೊತೆ ಬಿಗ್‌ಬಾಸ್ ಜರ್ನಿ ಮುಗಿಸಿದ್ರು. ಚಂದನ್ ಶೆಟ್ಟಿ ಬಿಗ್‌ಬಾಸ್ ಸೀಸನ್ ಫೈವ್ ವಿನ್ ಆದಾಗ ತಾನೇ ಗೆದ್ದಂತೆ ಖುಷಿ ಪಟ್ಟಿದ್ದು ಇದೇ ಗೊಂಬೆ ನಿವೇದಿತಾ. ಆಗಲೇ ನಿವೇದಿತಾ ಮನಸ್ಸಿನಲ್ಲಿ ಚಂದನ್ ಮೇಲೆ ಎಷ್ಟು ಪ್ರೀತಿಯಿದೆ ಅಂತ ಜಗತ್ತಿಗೆ ಗೊತ್ತಾಯ್ತು. ಬಿಗ್‌ಬಾಸ್ ಮುಗಿದ ಮೇಲೂ ಈ ಮಧುರ ಸ್ನೇಹ ಆಚೆ ಕಂಟಿನ್ಯೂ ಆದಾಗ ಇದು ಸ್ನೇಹನಾ ಅಥವಾ ಪ್ರೀತಿನಾ ಎನ್ನುವ ಕ್ವಚ್ಚೆನ್ ಮಾರ್ಕ್ ಜನರ ತಲೆಗಳಲ್ಲಿ ಬಿದ್ದುಬಿಡ್ತು.

ಈಗ ಈ ಫ್ರೆಂಡ್‌ಶಿಪ್‌ಗೆ ಹೊಸ ಟರ್ನ್ ಸಿಕ್ಕಿದೆ. ನಿವೇದಿತಾ ತಮ್ಮ ಪ್ರೀತಿಯ ಗೆಳೆಯನಿಗೆ ವಿಶೇಷ ಊಡುಗೊರೆಯೊಂದನ್ನ ಕೊಟ್ಟಿದಾರೆ. ಚಂದನ್‌ಗೆ ಸ್ಪೆಷಲ್ ಕಾಫಿ ಮಗ್ ಕೊಟ್ಟು ,ಅದರ ಮೇಲೆ ಸ್ವೀಟ್ ಮೆಸೆಜ್ ಬರೆದಿದ್ದಾರೆ. ನಾನು ನಿನ್ನ ತುಂಬಾ ಮಿಸ್ ಮಾಡ್ಕೊತೀನಿ. ನೀನು ನನ್ನ ಪಕ್ಕದಲ್ಲೇ ಇರ್‌ಬೇಕಿತ್ತು ಅನಿಸುತ್ತೆ. ನಿನ್ನ ಪ್ರೀತಿಯ ನಿವಿ ಎಂದು ತಮ್ಮ ಮನಸ್ಸಿನಲ್ಲಿದ್ದ ಎಮೊಷನಲ್ ಸಂದೇಶವನ್ನ ಕಾಫಿ ಮಗ್ ಮೇಲೆ ಬಿಚ್ಚಿಟ್ಟಿದಾರೆ. ಚಂದನ್ ಕೂಡ ಸುಮ್ಮನಿರಲಾಗದೇ ತಮ್ಮ ಇನ್‌ಟ್ರಾಗ್ರಾಮ್‌ನಲ್ಲಿ ಈ ಕಥೆಯನ್ನ ಬರೆದುಕೊಂಡಿದ್ದಾರೆ.

ನಿವೇದಿತಾ ಗಿಫ್ಟ್ ಪಡೆದ ಚಂದನ್ ಈ ಗಿಫ್ಟ್ ನನಗೆ ಅಮೂಲ್ಯ. ನಾನು ಕೂಡ ನಿನ್ನನ್ನ ಮಿಸ್ ಮಾಡಿಕೊಂಡೆ ಎಂದು ಟಚಿಂಗ್ ರಿಪ್ಲೇ ಕೊಟ್ಟಿದಾರೆ.ಅಷ್ಟಕ್ಕೂ ಈ ರೀತಿ ಪೋಸ್ಟ್‌ಗಳನ್ನ ಚಂದನ್ ಹಾಕ್ತಿರೋದು ಇದೇ ಮೊದಲೇನಲ್ಲ. ನಿವೇದಿತಾ ಹಾಗೂ ಚಂದನ್ ಫ್ರೆಂಡ್‌ಶಿಪ್‌ಗೆ ಕನ್ನಡಿ ಹಿಡಿಯುವಂತಹ ಪೋಸ್ಟ್‌ಗಳು, ಡಬ್ ಸ್ಮಾಶ್‌ಗಳು ಸುಮಾರಿದೆ. ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಮೇಲೂ ಸ್ಪರ್ಧಿಗಳು ಒಳಗಿದ್ದ ಸ್ಪರ್ಧಿಗಳನ್ನ ಮೀಟ್ ಮಾಡೋದು ಕಡಿಮೆನೇ.

ಆದರೆ ನಿವೇದಿತಾ ಹಾಗೂ ಚಂದನ್ ಈಗಲೂ ತಮ್ಮ ಫ್ರೆಂಡ್ ಶಿಪ್ ಉಳಿಸಿಕೊಂಡಿದ್ದಾರೆ. ನಿವೇದಿತಾ ಬಗೆಗಿನ ಗಾಸಿಪ್‌ಗಳಿಗೆ ಚಂದನ್ ಸ್ಟ್ರೈಟ್ ಫಾವರ್ಡ್ ಆಗಿ ಹೇಳೊದೇನು ಗೊತ್ತಾ? ನಾನು ಹಾಗೂ ನಿವೇದಿತಾ ಇಬ್ಬರು ಜಸ್ಟ್ ಗುಡ್ ಫ್ರೆಂಡ್ಸ್. ಸದ್ಯಕ್ಕೆ ನನಗೆ ಮದುವೆಯಾಗೋ ಯಾವ ಪ್ಲಾನ್ ಕೂಡ ಇಲ್ಲ. ಮ್ಯೂಸಿಕ್ ಬಗ್ಗೆ ಮಾತ್ರ ಗಮನ ಹರಿಸ್ತೀನಿ ಎಂದು ನಯಾವಾಗಿ ಜಾರಿಕೊಂಡಿದ್ದಾರೆ. ಒಟ್ಟಿನಲ್ಲಿ ಬೆಂಕಿ ಇಲ್ಲದೇ ಹೊಗೆಯಾಡುತ್ತಾ ಅನ್ನೊ ಮಾತಿನಂತೆ ಚಂದನ್ ಹಾಗೂ ನಿವೇದಿತಾರ ಕುಚ್‌ಕುಚ್ ಕಹಾನಿಗೆ ಯಾವಾಗ ತೆರೆ ಬೀಳುತ್ತೆ ಅನ್ನೋದೆ ಬಿಗ್ ಸಸ್ಪೆನ್ಸ್.

LEAVE A REPLY

Please enter your comment!
Please enter your name here