ರಿಶಬ್ ಪಂತ್ ಅವರು ತಮ್ಮ ಗೆಳತಿ ಇಶಾ ನೇಗಿ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಅವರ ಅಭಿಮಾನಿಗಳೊಂದಿಗೆ ಅವರ ವೈಯಕ್ತಿಕ ಜೀವನದ ಭಾಗವನ್ನು ಹಂಚಿಕೊಂಡರು.
ರಿಶಬ್ ಪಂತ್ ಈ ಫೋಟೋ ಅಪ್ಲೋಡ್ ಮಾಡಿ ಈ ಪೋಸ್ಟ್ ಗೆ “ನಾನು ನಿನ್ನನ್ನು ಸಂತೋಷ ಪಡಿಸುತ್ತೇನೆ,ಯಾಕೆಂದರೆ ನೀನೆ ನನ್ನ ಸಂತೋಷಕ್ಕೆ ಕಾರಣ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇತ್ತೀಚಿಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ವಿಕೆಟ್ ಹಿಂದೆ ಆಸ್ಟ್ರೇಲಿಯಾ ಟೆಸ್ಟ್ ಮಾದರಿಯ ಕ್ಯಾಪ್ಟನ್ ಕಾಲೆಳೆದು ಅಭಿಮಾನಿಗಳನ್ನು ರಂಜಿಸಿದ್ದ 21 ವರ್ಷದ ಕೀಪರ್ ರಿಷಬ್ ಪಂತ್ ಈಗ ತನ್ನ ಗೆಳತಿಯನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಇಶಾ ಕೂಡ ತನ್ನ Instagram ನಲ್ಲಿ ಅದೇ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು “ನನ್ನ ಮನುಷ್ಯ, ನನ್ನ ಆತ್ಮೀಯ, ನನ್ನ ಅತ್ಯುತ್ತಮ ಸ್ನೇಹಿತ, ನನ್ನ ಜೀವನದ ಪ್ರೀತಿ.” ಎಂದು ಬರೆದುಕೊಂಡಿದ್ದಾರೆ.