Home District “ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ , ಲೋಕಸಭಾ ಚುನಾವಣೆಗೆ ಸಮಸ್ಯೆ ಮತ್ತೆ ಸ್ಟಾರ್ಟ್”...

“ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ , ಲೋಕಸಭಾ ಚುನಾವಣೆಗೆ ಸಮಸ್ಯೆ ಮತ್ತೆ ಸ್ಟಾರ್ಟ್” ಸಂಚಲನ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ…

421
0
SHARE

ಬೆಳಗಾವಿಯಲ್ಲಿ ಕೈ ನಾಯಕರ ಮುನಿಸು ಮುಂದುವರೆದಿದ್ದು , ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆ ಇಂದು ನಡೆದಿದ್ದು ಸಭೆಗೆ ಸತೀಶ್ ಜಾರಕಿಹೊಳೆ ಹಾಜರಾಗಿದ್ದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಗೈರಾಗಿದ್ದಾರೆ…

ಈ ಅವಧಿಯಲ್ಲಿ ಸಚಿವ ಸ್ಥಾನ ಸಿಗುವ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ , ಲೋಕಸಭಾ ಚುನಾವಣೆಗೆ ಸಮಸ್ಯೆ ಮತ್ತೆ ಸ್ಟಾರ್ಟ್ ಆಗಲಿದೆ. ಆದರೆ ಸಮಸ್ಯೆ ಇತ್ಯರ್ಥ ಪಡಿಸಲು ಪಕ್ಷದ ವರಿಷ್ಠರಿದ್ದಾರೆ…

ವೇಳೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಿರ್ಧಾರ ಕೈಗೊಳ್ಳಲು ನಾವು ಸ್ವತಂತ್ರರು ಅದು ನಮ್ಮ ಹಕ್ಕು ಎಂದಿದ್ದಾರೆ ಇನ್ನು ಕೆಲವು ಬಿಜೆಪಿ ಮುಖಂಡರು ಜಾರಕಿಹೊಳಿಯವರನ್ನು ಸಂಪರ್ಕ ಮಾಡಿದ್ದಾರೆಂಬ ವಿಚಾರಕ್ಕೆ ನಮ್ಮನ್ನು ಇದುವರೆಗೆ ಬಿಜೆಪಿಯವರು ಯಾರೂ ಸಂಪರ್ಕ ಮಾಡಿಲ್ಲ. ಅದು ನಮಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ…

ಬೆಳಗಾವಿ ಕೈ ನಾಯಕರಲ್ಲಿ ಮುನಿಸು ಮುಂದುವರಿದಿದೆ.. ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಗೈರಾಗಿದ್ದಾರೆ.. ಆದರೆ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಜರಾಗಿದ್ರು.. ಯಮಕನಮರ್ಡಿ ಕ್ಷೇತ್ರದ ಭೂತ್ ಮಟ್ಟದ ಅಧ್ಯಕ್ಷರ ಸಭೆ…

ಕಾಂಗ್ರೆಸ್ ಮುಖಂಡ ಮಾಣಿಕಂ ಠಾಕೂರ್ ನೇತೃತ್ವದಲ್ಲಿ ನಡೆದಿದೆ.. ಲೋಕಸಭಾ ಚುನಾವಣಾ ಪೂರ್ವ ಸಭೆಯಾಗಿದ್ದರಿಂದ ಮಹಿಳಾ ಘಟಕದ ಅಧ್ಯಕ್ಷರಾಗಿ ಭಾಗವಹಿಸಬೇಕಿತ್ತು. ಆದ್ರೆ, ಇಲ್ಲೂ ತಮ್ಮ ಮುನಿಸನ್ನ ಕೈ ನಾಯಕರು ಮುಂದುವರಿಸಿದ್ದಾರೆ…

LEAVE A REPLY

Please enter your comment!
Please enter your name here