Home Crime ನಾಪತ್ತೆಯಾಗಿದ್ದ ಜನಾರ್ಧನ ರೆಡ್ಡಿ ವಿಡಿಯೋದಲ್ಲಿ ಪ್ರತ್ಯಕ್ಷ..! ಜನಾರ್ಧನ್ ರೆಡ್ಡಿಗೆ ಪ್ರಶ್ನೆಗಳ ಸುರಿಮಳೆ..?! “ಇಷ್ಟು ದಿನ ಎಲ್ಲಿದ್ರಿ”..???

ನಾಪತ್ತೆಯಾಗಿದ್ದ ಜನಾರ್ಧನ ರೆಡ್ಡಿ ವಿಡಿಯೋದಲ್ಲಿ ಪ್ರತ್ಯಕ್ಷ..! ಜನಾರ್ಧನ್ ರೆಡ್ಡಿಗೆ ಪ್ರಶ್ನೆಗಳ ಸುರಿಮಳೆ..?! “ಇಷ್ಟು ದಿನ ಎಲ್ಲಿದ್ರಿ”..???

768
0
SHARE

ಆ್ಯಂಬಿಡೆಂಟ್ ಕಂಪನಿ ಜೊತೆಗಿನ ಡೀಲ್ ಪ್ರಕರಣ ಸಂಬಂಧ ನಾಪತ್ತೆಯಾಗಿದ್ದ ಡೀಲ್ ಮಾಸ್ಟರ್ ಜನಾರ್ದನ ರೆಡ್ಡಿ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಿಸಿಬಿ ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾಗಿದ್ದ ಬಳ್ಳಾರಿ ಗಣಿಧಣಿ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಲಾಯರ್ ಕಾರಿನಲ್ಲಿ ಸಿಸಿಬಿ ಕಚೇರಿಗೆ ಜನಾರ್ಧನ್ ರೆಡ್ಡಿ ಆಗಮಿಸಿದ್ರು.

ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ತದ ತಂಡದಿಂದ ಜನಾರ್ದನ ರೆಡ್ಡಿ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಕಚೇರಿಯಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಗಿರೀಶ್ ಕೂಡ ಉಪಸ್ಥಿತರಿದ್ದಾರೆ. ಇನ್ನು ಆ್ಯಂಬಿಡೆಂಟ್ ಕಂಪನಿ ಜೊತೆಗೆ ರೆಡ್ಡಿ ನಡೆಸಿರುವ ಡೀಲ್ ಪ್ರಕರಣ ಸಂಬಂಧ ಫೋಟೋಗಳು, ವಿಡಿಯೋ ಸಾಕ್ಷಿಗಳನ್ನಿಟ್ಟುಕೊಂಡು ಜನಾರ್ಧನ ರೆಡ್ಡಿಯ ವಿಚಾರಣೆ ನಡೆಸುತ್ತಿದ್ದಾರೆ.

ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್‌ರನ್ನು ಕರೆದುಕೊಂಡು ತಾಜ್ ವೆಸ್ಟ್‌ಎಂಡ್ ಹೊಟೇಲ್‌ನಲ್ಲಿ ಪಂಚನಾಮೆ ನಡೆಸಲಾಗಿತ್ತು. ಈ ವೇಳೆ ಫರೀದ್ ಜನಾರ್ದನ ರೆಡ್ಡಿ ಹೆಸರನ್ನು ಬಾಯ್ಬಿಟ್ಟಿದ್ರು. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜನಾರ್ದನ ರೆಡ್ಡಿಗೆ ತನಿಖಾ ತಂಡ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ರೆಡ್ಡಿ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಳ್ಳಲಾಗಿದೆ. ಇನ್ನು ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರಾಗುವುದಕ್ಕೂ ಮುಂಚೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ರು. ಅದರಲ್ಲಿ ನಾನು ಯಾವುದೇ ತಪ್ಪೂ ಮಾಡಿಲ್ಲ, ಹಾಗೆಯೇ ನಾನು ಎಲ್ಲೂ ಓಡಿಹೋಗಿರಲಿಲ್ಲ. ಬೆಂಗಳೂರಿನಲ್ಲೇ ಇದ್ದೆ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸಿ ನೀಡಿದ್ರು.

ಆ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ರು. ಇದೇ ವೇಳೆ ಜನಾರ್ದನ ರೆಡ್ಡಿ ವಕೀಲ ಮಾತನಾಡಿ ಆ್ಯಂಬಿಡೆಂಟ್ ಕಂಪನಿ ಪ್ರಕರಣಕ್ಕೂ ಜನಾರ್ದನ ರೆಡ್ಡಿಯವರಿಗೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ಆ್ಯಂಬಿಡೆಂಟ್ ಕಂಪನಿ ಪ್ರಕರಣದಲ್ಲಿ ರೆಡ್ಡಿ ಹೆಸರನ್ನು ಉಲ್ಲೇಖಿಸಲಾಗಿದೆ. ಸಿಸಿಬಿ ಅಧಿಕಾರಿಗಳು ಭಾನುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ರು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗುತ್ತೇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here