Home District ನಾಲೆಗಳಿಗೆ ನೀರು ಹರಿಸುವಂತೆ ಅಹೋರಾತ್ರಿ ಪ್ರತಿಭಟನೆ…! KRS ಅಣೆಕಟ್ಟೆಗೆ ಮುತ್ತಿಗೆ ಹಾಕಿದ ರೈತರ ಬಂಧನ..!

ನಾಲೆಗಳಿಗೆ ನೀರು ಹರಿಸುವಂತೆ ಅಹೋರಾತ್ರಿ ಪ್ರತಿಭಟನೆ…! KRS ಅಣೆಕಟ್ಟೆಗೆ ಮುತ್ತಿಗೆ ಹಾಕಿದ ರೈತರ ಬಂಧನ..!

912
0
SHARE

ಮಂಡ್ಯ ಜಿಲ್ಲೆ ರೈತರು ನಾಲೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿದ್ರು, ಸರ್ಕಾರ ಮಾತ್ರ ನಾಲೆಗಳಿಗೆ ಇನ್ನೂ ನೀರು ಹರಿಸಿಲ್ಲ. ಕಳೆದೊಂದು ವಾರದಿಂದ ಆಹೋ ರಾತ್ರಿ ಪ್ರತಿಭಟನೆ ನಡೆಸಿದ್ರು ಫಲ ನೀಡಲಿಲ್ಲ. ಹೀಗಾಗಿ ಹೋರಾಟಗಾರರು ಕೆಆರ್ ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಪ್ರತಿಭಟನೆಕಾರರನ್ನ ಬಂಧಿಸಿದ್ರು. ರೈತ ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಅಲ್ಲದೇ ಸಿಎಂ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದ್ರು.

ಕಳೆದೊಂದು ವಾರದಿಂದ ಮಂಡ್ಯದ ಕಾವೇರಿ ಭವನದ ಎದುರು ಜಿಲ್ಲೆಯ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಆಹೋರಾತ್ರಿ ಪ್ರತಿಭಟನೆ ನಡೆಸಿದ್ರು. ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ರೈತರು ಅಹೋ ರಾತ್ರಿ ಧರಣಿಯಲ್ಲಿ ಭಾಗಿಯಾಗಿದ್ರು. ನೀರನ್ನ ನಂಬಿ ಬೆಳೆ ಬೆಳೆದಿರುವ ಜಿಲ್ಲೆಯ ಅನ್ನದಾತರು ಸಂಕಷ್ಟ ದಲ್ಲಿದ್ದು, ನೀರು ಒದಗಿಸಿಕೊಡುವಂತೆ ಆಗ್ರಹಿಸಿದ್ರು. ಆದರೆ ಅಣೆಕಟ್ಟೆಯಲ್ಲಿ ಆರು ಟಿಎಂಸಿ ನೀರಿದೆ, ನಾಲೆಗೆ ನೀರು ಬಿಟ್ರೆ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ನೀರು ಬಿಡಲು ಸರ್ಕಾರ ನಿರಾಕರಿಸಿತು. ಇದರಿಂದ ಆಕ್ರೋಶಗೊಂಡ ರೈತರು ನೀರು ಬಿಡಲೇಬೇಕೆಂದು ಆಗ್ರಹಿಸಿ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಬೈಕ್ ರ್ಯಾಲಿ ಮೂಲಕ KRSಗೆ ಆಗಮಿಸಿದ್ರು.

ಇದೇ ವೇಳೆ ಮಾತನಾಡಿದ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ನಿರ್ವಹಣಾ ಮಂಡಳಿ ನೀರು ಬಳಸಿಕೊಳ್ಳಬೇಡಿ ಎಂದು ಹೇಳಿಲ್ಲ. ಸಿಎಂ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ರು.KRS ಮುತ್ತಿಗೆ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರು ಅರ್ಧ ಗಂಟೆ ಗಡುವು ಕೊಟ್ರು. ಆದ್ರೆ ಸರ್ಕಾರದಿಂದ ಆದೇಶ ಬಾರದ ಕಾರಣ ನೀರು ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ರು. ಆಗ ಪ್ರತಿಭಟನಕಾರರು ಅಣೆಕಟ್ಟೆಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಪ್ರತಿಭಟನೆಕಾರರು ವಶಕ್ಕೆ ಪಡೆದ್ರು. ಪ್ರತಿಭಟನೆಕಾರರು ಸರ್ಕಾರದ ವಿರದ್ಧ ಘೋಷಣೆ ಕೂಗಿದ್ರು.

ಒಟ್ಟಾರೆ ಕಳೆದೊಂದು ವಾರದಿಂದ ಪ್ರತಿಭಟನೆ ಮಾಡಿದ ರೈತರಿಗೆ ಫಲ ಸಿಗಲಿಲ್ಲ. ಕುಡಿಯುವ ನೀರಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಮುಂದೆ ಸಮರ್ಪಕವಾಗಿ ಮುಂಗಾರು ಮಳೆ ಬಂದರೆ ರೈತರ ಬೆಳೆಗಳಿಗೆ ನೀರು ಸಿಗಲಿದೆ. ಇಲ್ಲದಿದ್ರೆ ಬೆಳೆಗಾರ ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾನೆ.

LEAVE A REPLY

Please enter your comment!
Please enter your name here