Home Cinema ನಾಳೆ ಬೆಳ್ಳಿ ಪರದೆ ಮೇಲೆ ಸಿನಿಮಾಗಳ ಕಾದಾಟ..! ಮಾರ್ಕೆಟ್ ಉಳಿಸಿಕೊಳ್ಳಲು ಸ್ಟಾರ್‌ಗಳ ಹೋರಾಟ..! ಯಶ್,ಶಾರುಕ್,ಧನುಷ್ ಅಭಿಮಾನಿಗಳಿಗೆ...

ನಾಳೆ ಬೆಳ್ಳಿ ಪರದೆ ಮೇಲೆ ಸಿನಿಮಾಗಳ ಕಾದಾಟ..! ಮಾರ್ಕೆಟ್ ಉಳಿಸಿಕೊಳ್ಳಲು ಸ್ಟಾರ್‌ಗಳ ಹೋರಾಟ..! ಯಶ್,ಶಾರುಕ್,ಧನುಷ್ ಅಭಿಮಾನಿಗಳಿಗೆ ಹಬ್ಬದೂಟ..!

597
0
SHARE

ನಾಳೆ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಭೂಕಂಪವೇ ಸೃಷ್ಟಿಯಾಗಲಿದೆ. ಇದು ಪ್ರೇಕ್ಷಕರ ಇಷ್ಟುದಿನಗಳ ವೈಟಿಂಗ್‌ಗೆ ತೆರೆ ಎಳೆಯುವ ಸುಸಮಯ. ಯಾವ ಚಿತ್ರ ಗೆಲ್ಲುತ್ತೆ ? ಯಾವ ಚಿತ್ರ ಸೋತುಸುಣ್ಣವಾಗಿ ಮನೆಗೆ ಹೋಗುತ್ತೆ ಎನ್ನುವ ಲೆಕ್ಕಚಾರದಲ್ಲಿ ಚಿತ್ರವಿರ್ಮಶಕರು ಹಾಗೂ ಪ್ರೇಕ್ಷಕರು ಸಂಪೂರ್ಣವಾಗಿ ಮುಳುಗಿಹೋಗಿದಾರೆ.ಅಬ್ಬಬ್ಬಾ ! ನಾಳೆ ನಿಜಕ್ಕೂ ಸಿನಿಮಾರಂಗದ ದೊಡ್ಡ ಅಗ್ನಿಪರೀಕ್ಷೆ ಕಣ್ರೀ. ಈ ಪರೀಕ್ಷೆಯಲ್ಲಿ ಯಾರು ಪಾಸ್ ಯಾರು ಫೇಲ್ ಅನ್ನೋ ರಿಸಲ್ಟ್ ಮೇಲೆ ಸ್ಟಾರ್ ನಟರುಗಳ ಭವಿಷ್ಯ ನಿಂತಿದೆ.

ನಾಳೆ ದೊಡ್ಡ ಬ್ಯಾನರ್‌ಗಳ ಬರೊಬ್ಬರಿ ೯ ಸಿನಿಮಾಗಳು ರಿಲೀಸ್ ಆಗ್ತಿವೆ ಅಂದ್ರೆ ಎಲ್ರೂ ನಂಬಲೇಬೇಕು. ನಾಳೆ ಥಿಯೆಟರ್‌ಗೆ ಹೋಗಿ ಮೊದಲು ಯಾವ ಸಿನಿಮಾ ನೋಡಬೇಕು ಎನ್ನುವ ಕನ್‌ಫ್ಯೂಷನ್ ಮಾತ್ರ ಅಭಿಮಾನಿ ದೇವರುಗಳಿಗೆ.ಬಹುನಿರೀಕ್ಷಿತ ’ಕೆಜಿಎಫ್’ ನಾಳೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತೆ. ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಆಕ್ಷನ್ ಪ್ರಿಯರಿಗೆ ತಮ್ಮ ಸಿನಿಮಾದ ಟ್ರೈಲರ್ ಮೂಲಕ ತಮ್ಮ ಕೆಲಸ ಏನು ಅಂತ ಪ್ರೂವ್ ಮಾಡಿದಾರೆ.

ಕನ್ನಡದ ಹಿರಿಮೆಯನ್ನ ಇನ್ನೊಂದು ಲೆವಲ್‌ಗೆ ತೆಗೆದುಕೊಂಡು ಹೋಗಬೇಕು ಎನ್ನುವ ಚಿತ್ರತಂಡದ ಪ್ರಯತ್ನ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೊದಕ್ಕೆ ನಾಳೆ ಉತ್ತರ ಸಿಗಲಿದೆ.ಇನ್ನು ಬಾಲಿವುಡ್ ಕಾ ಬಾದ್‌ಷಾ ಶಾರುಕ್‌ನ ಬಹುನಿರೀಕ್ಷಿತ ಚಿತ್ರ ’ಜೀರೋ’ ಆಟ ನಾಳೆ ಶುರುವಾಗುತ್ತೆ. ಕಿಂಗ್ ಖಾನ್ ಸಿನಿಮಾ ಮುಂದೆ ಯಾವ ಚಿತ್ರ ಬಂದ್ರೂ ಅದರ ಕಥೆ ಗೋವಿಂದ ಅನ್ನೋದು ಶಾರುಕ್ ಅಭಿಮಾನಿಗಳ ವಾದ. ಅದ್ರಲ್ಲೂ, ಬಾಲಿವುಡ್‌ನ ವಿರ್ಮಶಕರು ’ಜೀರೋ’ ಸಿನಿಮಾ ನೋಡಿ ಹಾರ್ಟ್ ಬ್ರೇಕಿಂಗ್ ಅನ್ನೋ ಕಮೆಂಟ್ ಮಾಡಿದಾರೆ.

ಇದು ಶಾರುಕ್ ಸಿನಿಜೀವನದ ಒಂದು ಮಾಸ್ಟರ್ ವರ್ಕ್ ಎನ್ನುವ ಹೆಗ್ಗಳಿಕೆ ಬಿ ಟೌನ್ ಗಲ್ಲಿಗಳಲ್ಲಿ ಸೃಷ್ಟಿಯಾಗಿಬಿಟ್ಟಿದೆ.ತಮಿಳಿನ ನಟ ರಜನಿ ಅಳಿಯ ಧನುಷ್ ತುಂಬಾ ದಿನಗಳ ಗ್ಯಾಪ್ ತೆಗೆದುಕೊಂಡು ಈಗ ’ಮಾರಿ ೨ ’ ಸಿನಿಮಾ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದಾರೆ. ಧನುಷ್ ಈ ಸಿನಿಮಾದ ಮೂಲಕ ಆಕ್ಷನ್ ಹಾಗೂ ಕಾಮಿಡಿ ಎಲಿಮೆಂಟ್‌ಗಳನ್ನ ಬ್ಲೆಂಡ್ ಮಾಡಿ ಮನರಂಜನೆಯ ಮೃಷ್ಟಾನ್ನವನ್ನೇ ಬಡಿಸಲು ರೆಡಿಯಾಗಿದ್ದಾರೆ. ವಿಶೇಷವೆಂದ್ರೆ, ಮಾರಿ ೨ ಸಿನಿಮಾಗೆ ಸ್ವತಃ ಧನುಷ್ ಬಂಡವಾಳ ಹೂಡಿದ್ದು, ಸಿನಿಮಾದ ರಿಚ್‌ನೆಸ್‌ನಲ್ಲಿ ಯಾವುದೇ ಕಾಪ್ಮ್ರಮೈಸ್ ಮಾಡಿಕೊಂಡಿಲ್ಲವಂತೆ.

ಮಾರಿ ೨ ಸಿನಿಮಾ ಕೆಜಿಎಫ್ ಹಾಗೂ ಜೀರೋ ಚಿತ್ರಗಳಿಗೆ ಟಕ್ಕರ್ ಕೊಡೊದ್ರಲ್ಲಿ ಯಾವ ಡೌಟು ಇಲ್ಲ ಅನ್ನೋದು ಧನುಷ್ ಅಭಿಮಾನಿಗಳ ಒಂದು ಗತ್ತು.ಇಷ್ಟೆಲ್ಲ ಸಾಲದು ಅಂತ ಈ ಸಿನಿಮಾ ರೇಸ್‌ನಲ್ಲಿ ಅಂತರಿಕ್ಷಂ, ಯಾತ್ರಾ ಹಾಗೂ ಸೀತಾಕತ್ತಿ ಚಿತ್ರಗಳು ನಾಗಾಲೋಟಕ್ಕೆ ತಯಾರಾಗಿವೆ. ಇನ್ನು ನಾಳೆ ರೀಲಿಸ್ ಆಗ್ತಿರೋ ಹೊಸಬರ ಚಿತ್ರಗಳ ಗತಿಯಂತೂ ಆ ದೇವರೇ ಬಲ್ಲ ಅಂತಿದೆ ಗಾಂಧಿನಗರ.

LEAVE A REPLY

Please enter your comment!
Please enter your name here