Home District ನಿಖಿಲ್‌ಗೆ ಮತಹಾಕದ ಜನರ ವಿರುದ್ಧ ಡಿ.ಸಿ.ತಮ್ಮಣ್ಣ ಗುಡುಗು..! ಈಗ ಮೆಡಗಾರಿಕೆ ಮಾಡಲು ಬರ್ತೀರಾ ಆಗ ಎಲ್ಲೋಗಿತ್ತು..!?

ನಿಖಿಲ್‌ಗೆ ಮತಹಾಕದ ಜನರ ವಿರುದ್ಧ ಡಿ.ಸಿ.ತಮ್ಮಣ್ಣ ಗುಡುಗು..! ಈಗ ಮೆಡಗಾರಿಕೆ ಮಾಡಲು ಬರ್ತೀರಾ ಆಗ ಎಲ್ಲೋಗಿತ್ತು..!?

691
0
SHARE

ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲಿನ ಬಳಿಕ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನಾಲಿಗೆ ಸ್ಥಿಮಿತ ಕಳೆದುಕೊಂಡ‌ಂತೆ ಮಾತನಾಡ್ತಿದಾರೆ. ನಿನ್ನೆ ಮದ್ದೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆಗೆ ತೆರಳಿದ್ರು ಈ ವೇಳೆ ಅಲ್ಲಿನ ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ್ರೆ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ವೋಟು ಅವರಿಗೆ ಹಾಕಿ ಈಗ ಅಭಿವೃದ್ಧಿ ಬಗ್ಗೆ ಮಾತ್ರ ನನ್ನ ಬಂದು ಕೇಳ್ತಿದೀರಾ? ಈಗ ಮೆಡಗಾರಿಕೆ ಮಾಡಲು ಬರ್ತೀರಾ ಆಗ ಎಲ್ಲೋಗಿತ್ತು ಇದೆಲ್ಲಾ ಅಂತ ಕಿಡಿ ಕಾರಿದ್ದಾರೆ.

ನಿಮ್ಮ ಜೋಡೆತ್ತುಗಳು ಬರ್ತವೆ ಅವರ ಹತ್ತಿರ ನಿಮ್ಮ ಸಮಸ್ಯೆಗಳನ್ನು ಹೇಳ್ಕೊಳ್ಳಿ ಅಂತ ದರ್ಶನ್ ಮತ್ತು ಯಶ್‌ಗೆ ಟಾಂಗ್ ಕೊಟ್ಟಿದ್ದಾರೆ. ನಾನು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದೀನಿ, ನೀವು ಅದನ್ನ ನೆನೆಸಿಕೊಂಡ್ರಾ..? ಈಗ ಅಭಿವೃದ್ಧಿಗಾಗಿ ಮಾತ್ರ ನಾನು ನೆನಪಾದ್ನಾ ಅಂತ ನಿಖಿಲ್‌ಗೆ ಮತಹಾಕದ ಜನರ ವಿರುದ್ಧ ಡಿ.ಸಿ.ತಮ್ಮಣ್ಣ ಗುಡುಗಿದ್ದಾರೆ.

ಇನ್ನು ವೋಟು ಹಾಕದ ಜನರಿಗೆ ಸಾರಿಗೆ ಡಿ.ಸಿ.ತಮ್ಮಣ್ಣ ಆವಾಜ್ ಹಾಕಿದ್ದಕ್ಕೆ ತಮ್ಮಣ್ಣ ವರ್ತನೆಗೆ ಸಂಸದೆ ಸುಮಲತಾ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಸಿ.ತಮ್ಮಣ್ಣ ಜನರ ವಿರುದ್ಧ ಈ ರೀತಿ ಮಾತನಾಡದೋದು ತಪ್ಪು ಎಲೆಕ್ಷನ್‌ನಲ್ಲಿ ಈ ರೀತಿ ಮಾತನಾಡಿದ್ದರಿಂದಲೇ ಜನರು ಅವರಿಗೆ ತಕ್ಕ ಪಾಠ ಕಲಿಸಿರೋದು ತಮ್ಮಣ್ಣ ಸಚಿವ ಸ್ಥಾನದಲ್ಲಿದ್ದರೆ ಯಾವುದಕ್ಕೂ ಶೋಭೆ ತರಲ್ಲ ಜನರ ಕೆಲಸ ಮಾಡಲ್ಲ ಅಂದ್ರೆ ಅವರು ರಾಜನಾಮೆ ಕೊಡಲಿ ಎಂದು ಸುಮಲತಾ ಅಂಬರೀಷ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here