Home Cinema ನಿಖಿಲ್ ಕುಮಾರಸ್ವಾಮಿಯ ಮದುವೆ ಬಗ್ಗೆ ಗುಸು ಗುಸು ನಿಜಾನಾ..?! ಏನಂತಾರೆ ನಮ್ಮ ಸಿ.ಎಂ ಮತ್ತು H.D.ದೇವೇಗೌಡರು...

ನಿಖಿಲ್ ಕುಮಾರಸ್ವಾಮಿಯ ಮದುವೆ ಬಗ್ಗೆ ಗುಸು ಗುಸು ನಿಜಾನಾ..?! ಏನಂತಾರೆ ನಮ್ಮ ಸಿ.ಎಂ ಮತ್ತು H.D.ದೇವೇಗೌಡರು ನಿಖಿ ಮದುವೆ ವಿಚಾರಕ್ಕೆ..?!

2557
0
SHARE

ಪುತ್ರ ನಿಖಿಲ್ ಮದುವೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ ಆಂಧ್ರಕ್ಕೆ ತೆರಳಿದ್ದರೆಂಬ ಸುದ್ದಿ ಬೆಳಗಿನಿಂದ ಹರಿದಾಡಿತು..ಆಂಧ್ರದ ಉದ್ಯಮಿ ಕೋಟೇಶ್ವರ್ ರಾವ್ ಪುತ್ರಿಯ ಜೊತೆ ನಿಖಿಲ್ ವಿವಾಹವಾಗಲಿದ್ದು ಮಾತುಕತೆ ಹೋಗಿದ್ದಾರೆಂದೆಲ್ಲ ಹೇಳಲಾಯಿತು..ಆದ್ರೆ ಹಾಗೇನಿಲ್ಲ, ದೇವರ ದರ್ಶನಕ್ಕೆ ಬಂದಿರೋದಾಗಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿ ಮದುವೆ ಮಾತುಕತೆ ವಿಚಾರವನ್ನು ನಿರಾಕರಿಸಿದರು..

ಬೆಳಿಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿದ್ದೇ ತಡ ಬೆಂಗಳೂರಿನಲ್ಲಿ ಸಿಎಂ ಪುತ್ರನ ಕಲ್ಯಾಣದ ಬಗ್ಗೆ ಗುಸು ಗುಸು ಆರಂಭವಾಯಿತು..ಸಿಎಂ ಆಪ್ತವಲಯದಲ್ಲೇ ಈ ವಿಚಾರ ಚರ್ಚೆಯಾಯ್ತು..ಅದು ನಿಧಾನವಾಗಿ ಸುದ್ದಿಮನೆಗಳಿಗೆ ತಲಪಿದ್ದೇ ತಡ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ ಮಾತುಕತೆಗಾಗಿಯೇ ಆಂಧ್ರಕ್ಕೆ ಹೋಗಿದ್ದಾರೆಂಬ ಸುದ್ದಿ ಸದ್ದು ಮಾಡಿತು..

ಜಾಗ್ವಾರ್, ಕುರುಕ್ಷೇತ್ರ, ಈಗ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಾಯಕ ನಟನಾಗಿ ಬಣ್ಣದ ಬದುಕಿನಲ್ಲಿ ಬ್ಯುಸಿ ಆಗಿರುವ ನಿಖಿಲ್ ಕುಮಾರ್, ವಿವಾಹ ನಿಶ್ಚಿತಾರ್ಥ ಪೂರ್ವ ಮಾತುಕತೆಗೆ ಕುಮಾರಸ್ವಾಮಿ ಆಂಧ್ರ ಪ್ರವಾಸ ಕೈಗೊಂಡಿದ್ದಾರೆಂದು ಹೇಳಲಾಯಿತು..ಆಂಧ್ರಪ್ರದೇಶದ ಉದ್ಯಮಿ ಕೋಟೇಶ್ವರ್ ರಾವ್ ಅವರೊಂದಿಗೆ ಬೀಗತನ ಮಾಡಿಕೊಳ್ಳಲು ಸಿಎಂ ಹೋಗಿದ್ದಾರೆಂದು ಅವರ ಆಪ್ತವಲಯದಲ್ಲೇ ಚರ್ಚೆ ಆಯ್ತು..

ಕೋಟೇಶ್ವರ್ ರಾವ್ ಯಾರೆಂದು ತಡಕಾಡಿ ಅವರ ಬಗ್ಗೆಯು ವರದಿಗಳು ಪ್ರಸಾರವಾದವು..ಬಳಿಕ ಕೋಟೇಶ್ವರ್ ರಾವ್ ಪುತ್ರಿ ಸಹಜ ಫೋಟೋ ಕೂಡ ಹರಿದಾಡಿತು..ಇವರೇ ಮುಂದೆ ನಿಖಿಲ್ ಕುಮಾರ್ ಅವರನ್ನು ವಿವಾಹವಾಗಲಿದ್ದಾರೆಂಬ ಗುಲ್ಲು ಹಬ್ಬಿತ್ತು..ಕುಮಾರಸ್ವಾಮಿ ದಂಪತಿ ಆಂಧ್ರಕ್ಕೆ ಹೋಗಿದ್ದಂತೂ ನಿಜ, ಅಲ್ಲಿ ದೇವಸ್ಥಾನದಲ್ಲಿ ಮಾತುಕತೆ ಫಿಕ್ಸ್ ಆಗಿದ್ದೂ ಸತ್ಯ ಅಂತ ಆಪ್ತವಲಯದ ಮೂಲಗಳೇ ಹೇಳಿದ್ದರಿಂದ ಮತ್ತಷ್ಟು ವರದಿಗಳು ಒಂದಾದ ಮೇಲೊಂದರಂತೆ ಪ್ರಸಾರವಾದವು..

ಸಿಎಂ ಪುತ್ರನ ಮದುವೆಗೆ ತಯಾರಿ ನಡೆಸಲಾಗುತ್ತಿದೆ ಅಂದ್ರೆ ಅದು ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ..ಹೀಗಾಗಿ ದೇವೇಗೌಡರನ್ನೇ ಒಂದು ಮಾತು ಕೇಳಿದರಾಯ್ತು ಅಂತ ಕೇಳಿದ್ರೆ ಅವರು ಮದುವೆ ವಿಚಾರವನ್ನು ತಳ್ಳಿಹಾಕಲಿಲ್ಲ..ಅದು ವೈಯಕ್ತಿಕ ವಿಚಾರ, ಆದ್ರೆ ಮದುವೆ ಮಾಡಿಸೋಣ ಬಿಡಿ ಅಂತ ನಸುನಕ್ಕು ಮತ್ತಷ್ಟು ಕುತೂಹಲ ಹೆಚ್ಚಿಸಿದರು..

ಅತ್ತ ಆಂಧ್ರದಲ್ಲಿ ಕುಮಾರಸ್ವಾಮಿ ದಂಪತಿ ಕನಕ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾಯಿತು..ಅಲ್ಲಿ ಕೋಟೇಶ್ವರ್ ರಾವ್ ಜೊತೆ ಕುಮಾರಸ್ವಾಮಿ ದಂಪತಿ ಮಾತುಕತೆ ನಡೆಸಿದರು ಅಂತ ಮತ್ತೆ ಸಿಎಂ ಆಪ್ತ ವಲಯದಲ್ಲೇ ಚರ್ಚೆ ಆಯ್ತು..ಕೆಲವೇ ದಿನಗಳಲ್ಲಿ ದೇವೇಗೌಡರ ಫ್ಯಾಮಿಲಿ ಸದಸ್ಯರೆಲ್ಲ ಹೋಗಿ ಮದುವೆ ದಿನಾಂಕ ಫಿಕ್ಸ್ ಮಾಡುತ್ತಾರಂತೆ, ಡಿಸೆಂಬರ್ ಒಳಗಾಗಿ ಸಿಎಂ ಪುತ್ರನ ಕಲ್ಯಾಣ ನಿಶ್ಚಿತ ಅಂತ ಹೇಳಲಾಯಿತು..

ಆದ್ರೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ಕುಮಾರಸ್ವಾಮಿ, ಅಂತದ್ದೇನೂ ಇಲ್ಲ, ದೇವರ ದರ್ಶನಕ್ಕೆ ಬಂದಿದ್ದೆ ಅಂತ ಸ್ಪಷ್ಟೀಕರಣ ನೀಡಿ ಬೆಳಗಿನಿಂದ ನಡೆದ ಗುಸು ಗುಸು ಮಾತಿಗೆ ತೆರೆ ಎಳೆದರು..
ಈ ನಡುವೆ ಆಂಧ್ರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ,ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದರು..ಉಭಯ ನಾಯಕರು ಕೆಲ ಕಾಲ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು..ಬಳಿಕ ಕುಮಾರಸ್ವಾಮಿ ದಂಪತಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು..

LEAVE A REPLY

Please enter your comment!
Please enter your name here