Home Cinema ನಿಖಿಲ್ ಕುಮಾರಸ್ವಾಮಿ ಅಬ್ಬರದ ಸ್ಪೀಡ್‌ಗೆ ಒಂದೇ ದಿನದಲ್ಲಿ ದಾಖಲೆಗಳು ಉಡೀಸ್.!! ಯುವರಾಜನ ಕ್ರೇಸ್‌ಗೆ ಸ್ಯಾಂಡಲ್‌ವುಡ್ ನಿಬ್ಬೆರಗು..!!

ನಿಖಿಲ್ ಕುಮಾರಸ್ವಾಮಿ ಅಬ್ಬರದ ಸ್ಪೀಡ್‌ಗೆ ಒಂದೇ ದಿನದಲ್ಲಿ ದಾಖಲೆಗಳು ಉಡೀಸ್.!! ಯುವರಾಜನ ಕ್ರೇಸ್‌ಗೆ ಸ್ಯಾಂಡಲ್‌ವುಡ್ ನಿಬ್ಬೆರಗು..!!

942
0
SHARE

ನಿಖಿಲ್ ಕುಮಾರ್ ಸ್ವಾಮಿ ಸೀತಾ ರಾಮ ಕಲ್ಯಾಣ ಚಿತ್ರದ ಟೀಸರ್ ರಿಲೀಸ್ ಆಗಿದ್ದೇ ಆಗಿದ್ದು, ಯುವರಾಜ ನಿಖಿಲ್ ಕುಮಾರ್ ಹವಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜೋರಾಗಿದೆ. ಯುವರಾಜನ ಕ್ರೇಜ್ ಬಲು ಜೋರಾಗಿದೆ.ನಿಖಿಲ್ ಕುಮಾರ್ ಅಭಿನಯದ ಸೀತಾ ರಾಮ ಕಲ್ಯಾಣ ಚಿತ್ರದ ಟೀಸರ್ ಸಿಕ್ಕಪಟ್ಟೆ ಸೌಂಡ್ ಮಾಡ್ತಿದೆ..

ಮಸ್ತ್ ಮಾಸ್ ಎಲಿಮೆಂಟ್ ನೊಂದಿಗೆ ಬಂದಿರೋ ಟೀಸರ್ ಬಿಡುಗಡೆಯಾದ ಕೆಲ ಗಂಟೆಗಳಲ್ಲೆ ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿತ್ತು..ಇದೀಗ ಕ್ರೇಜ್ ಹೆಚ್ಚಾಗಿದ್ದು, ಟೀಸರ್ ತುಣುಕನ್ನ ಮುಗಿ ಬಿದ್ದು ನೋಡ್ತಿದ್ದಾರೆ ಸಿನಿ ಪ್ರಿಯರು..ವೀವ್ಸ್ ಸುಮಾರು ಮೂರು ಮಿಲಿಯನ್ ದಾಟಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ.ನಿಖಿಲ್ ಕುಮಾರ್ ಹವಾ ಹೇಗಿದೆ ಅಂದ್ರೆ ಇಷ್ಟು ದಿನ ಯೂಟ್ಯೂಬ್ ನಲ್ಲಿ ಅಬ್ಬರಿಸುತ್ತಿದ್ದ ವಿಲನ್ ಗಳ ಭರಾಟೆಯನ್ನು ಸೈಡಿಗೆ ಹಾಕಿದೆ..

ಸ್ಯಾಂಡಲ್ವುಡ್ ದಿಗ್ಗಜರಾದ, ಹ್ಯಾಟ್ರಿಕ್ ಹೀರೋ ಶಿವಣ್ಣ, ಕಿಚ್ಚ ಸುದೀಪ ಅವರನ್ನೇ ಹಿಂದಿಕ್ಕಿದ್ದು ವಿಶೇಷ..ದಿ ವಿಲನ್ ಗಳು ಒಂದು ವಾರದಲ್ಲಿ ಮಾಡಿದ ದಾಖಲೆಗಳನ್ನು ಯುವರಾಜನ ಸಿನಿಮಾ ಟೀಸರ್ ಒಂದೇ ದಿನದಲ್ಲಿ ಉಡೀಸ್ ಮಾಡಿದೆ. ಶಿವಣ್ಣನಿಗೆಂದೇ ಮಾಡಲಾದ ವಿಲನ್ ಚಿತ್ರದ ಟಿಕ್ ಟಿಕ್ ಹಾಡು ಜುಲೈ ೨೪ಕ್ಕೆ ರಿಲೀಸ್ ಆಗಿತ್ತು. ಈಗ ಈ ಹಾಡಿನ ವೀವ್ಸ್ ಸಂಖ್ಯೆ ೨೬ಲಕ್ಷ…. ಆದ್ರೆ ಸೀತಾ ರಾಮ ಕಲ್ಯಾಣ ಟೀಸರ್ ೩೨ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡು ವಿಲನ್ ಹಿಂದಿಕ್ಕಿದೆ..

ಇದು ಕೇವಲ ಟೀಸರ್ ಬಿಡುಗಡೆಯಾದ ಒಂದೇ ಒಂದು ದಿನದಲ್ಲಿ ಅನ್ನೋದು ಇಲ್ಲಿ ಗಮನಿಸಿಬೇಕಾದ ಸಂಗತಿ.ಇಲ್ಲಿಗೆ ಮುಗಿಯಲಿಲ್ಲ ಯುವರಾಜ ಅಬ್ಬರ ಇದೇ ಕ್ರೇಜ್ ಮುಂದುವರೆದ್ರೆ ವಿಲನ್ ಚಿತ್ರದ ಐ ಆಮ್ ವಿಲನ್ ಸಾಂಗ್ ರೆಕಾರ್ಡ್ ಕೂಡ ಸೈಡಿಗೆ ಹಾಕೋದು ಗ್ಯಾರಂಟಿ..ಯಾಕಂದ್ರೆ ಐ ಆಮ್ ವಿಲನ್ ಬರೋಬ್ಬರಿ ೪೧ ಲಕ್ಕ ವೀಕ್ಷಣೆ ಪಡೆದುಕೊಂಡಿದೆ..

ಈಗಾಗಲೇ ನಿಖಿಲ್ ಅಭಿನಯದ ಸೀತಾ ರಾಮ ಕಲ್ಯಾಣ ಟೀಸರ್ ಇದ್ರ ಸಮೀಪದಲ್ಲಿದ್ದು.ಈ ಅಬ್ಬರ ಹೀಗೆ ಇದ್ರೆ ಪ್ರೇಮ್ ವಿಲನ್ ಗಳಿಗಾಗಿ ಮಾಡಿದ ಎರಡು ಹಾಡುಗಳ ರೆಕಾರ್ಡ್ ಉಡೀಸ್ ಆಗಲಿದೆ.ನಿಖಿಲ್ ಇದೇ ಮೊದಲೇನಲ್ಲ ಯೂ ಟ್ಯೂ ಬ್ ನಲ್ಲಿ ಟ್ರೆಂಡ್ ಸೃಷ್ಠಿಸಿದ್ದು, ಈ ಮೊದಲು ಕುರುಕ್ಷೇತ್ರದ ಅಭಿಮನ್ಯು ಟೀಸರ್ ಬಿಡುಗಡೆಯಾದಾಗಲೂ ಹೀಗೆ ಘರ್ಜನೆ ಮಾಡಿತ್ತು..

ದರ್ಶನ್ ಟೀಸರ್ ರನ್ನೇ ಮೀರಿಸಿ ಮೂವತ್ತು ಲಕ್ಷ ವೀವ್ಸ್ ಪಡೆದುಕೊಂಡು ಟ್ರೆಡಿಂಗ್ ನಲ್ಲಿದ್ದ.ಇದೀಗ ಸೀತಾ ರಾಮ ಕಲ್ಯಾಣ ಟೀಸರ್ ಮೂಲಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಯುವರಾಜನ ಅಬ್ಬರ ಜೋರಾಗಿದ್ದು, ಈಗ ಹೋಗ್ತಿರೋ ವೇಗ ನೋಡಿದ್ರೆ ಇನ್ಯಾವ ರೆಕಾರ್ಡ್ ಗಳು ಮಟ್ಯಾಶ್ ಆಗಲಿದ್ಯೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here