Home District ನಿಖಿಲ್ ಕುಮಾರಸ್ವಾಮಿ ಹಾದಿ ಸುಗಮವಾಗಲೆಂದು CM ಮಾಸ್ಟರ್ ಪ್ಲಾನ್..! ಪುತ್ರ ವ್ಯಾಮೋಹದಿಂದ ಶಿವರಾಮೇಗೌಡರಿಗೆ ಟಿಕೆಟ್…

ನಿಖಿಲ್ ಕುಮಾರಸ್ವಾಮಿ ಹಾದಿ ಸುಗಮವಾಗಲೆಂದು CM ಮಾಸ್ಟರ್ ಪ್ಲಾನ್..! ಪುತ್ರ ವ್ಯಾಮೋಹದಿಂದ ಶಿವರಾಮೇಗೌಡರಿಗೆ ಟಿಕೆಟ್…

1692
0
SHARE

ಜೆಡಿಎಸ್ ಗೂ ಪುತ್ರ ವ್ಯಾಮೋಹಕ್ಕೂ ಎಲ್ಲಿಲ್ಲದ ನಂಟು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ವ್ಯಾಮೋಹವಂತೂ ಎಲ್ಲರಿಗೂ ಗೊತ್ತಿದೆ. ಈಗ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೂ ಅದೇ ಪುತ್ರ ವ್ಯಾಮೋಹದ ನಂಟು ವಂಶಪಾರಂಪರ್ಯವಾಗಿ ಬಂದಿರುವಂತಿದೆ. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಬೇಕು ಎಂಬ ಕಾರಣಕ್ಕೆ ಈಗ ಮಂಡ್ಯದಲ್ಲಿ ನಿವೃತ್ತ ಐಆರ್ ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡರಿಗೆ ಟಿಕೆಟ್ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಿವೃತ್ತ ಐಆರ್ ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡರಿಗೆ ಇದ್ದಕ್ಕಿದ್ದಂತೆ ಟಿಕೆಟ್ ನಿರಾಕರಿಸಿ, ಶಿವರಾಮೆಗೌಡರಿಗೆ ಟಿಕೆಟ್ ಕೊಟ್ಟಿದ್ದರ ಹಿಂದಿನ ಅಸಲಿಯತ್ತು ಈಗ ಬಯಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು 2019ರ ಲೋಕಸಭಾ ಚುನಾವಣೆಯಿಂದ ರಾಜಕೀಯಕ್ಕೆ ಅರ್ರಂಗೇಟಂ ಮಾಡಿಸಲು ಉದ್ದೇಶಿಸಿದ್ದಾರೆ.

ಅದಕ್ಕೆ ಜೆಡಿಎಸ್ ಪ್ರಭಲವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರವೇ ಮಗನ ಪೊಲಿಟಿಕಲ್ ಎಂಟ್ರಿಗೆ ಸೂಕ್ತ ಎಂದು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಈನಿಂದಲೇ ಮಂಡ್ಯ ಕ್ಷೇತ್ರದಲ್ಲಿ ಫಿಲ್ಡ್ ಕ್ಲಿಯರ್ ಮಾಡುವ ಕೆಲಸಕ್ಕೂ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಲಕ್ಷ್ಮಿ ಅಶ್ವಿನ್ ಗೌಡರಿಗೆ ಈಗ ಟಿಕೆಟ್ ನಿರಾಕರಿಸಲಾಗಿದೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಕ್ಸ್ಮಿ ಅಶ್ವಿನ್ ಗೌಡರಿಗೆ ಟಿಕೆಟ್ ಕೊಡುವ ಭರವಸೆ ನೀಡಿ ಸಮಾಧಾನ ಪಡಿಸಲಾಗಿದೆ.

ಇದೇ ವೇಳೆ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಕೂಡ ಲೋಕಸಭಾ ಚುನಾವಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ತಾವು ಪ್ರತಿನಿಧಿಸುವ ಹಾಸನವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡಲು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಈ ಮೊದಲು ಉದ್ದೇಶಿಸಿದ್ದರು. ಆದರೆ, ಯಾವಾಗ ನಿಖಿಲ್ ಕುಮಾರಸ್ವಾಮಿ ಕೂಡ ರಾಜಕೀಯ ಪ್ರವೇಶಕ್ಕೆ ಆಸಕ್ತಿ ತೋರಿಸುತ್ತಿದ್ದಾರೋ, ದೇವೇಗೌಡರು ಹಾಸನ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಲೆ ಹೆಚ್.ಡಿ.ದೇವೇಗೌಡರು ಹಾಸನದಿಂದಲೇ ಮತ್ತೆ ಸ್ಪರ್ಧೆ ಮಾಡಿದ್ರೆ, ಆಗ ಪ್ರಜ್ವಲ್ ರೇವಣ್ಣ ಮೈಸೂರು ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರಂತೆ..

LEAVE A REPLY

Please enter your comment!
Please enter your name here