Home District ನಿಖಿಲ್ ಬೆಂಬಲಿಗರು ಹಾಗೂ ಸುಮಲತಾ ಬೆಂಬಲಿಗರ ನಡುವೆ ಕ್ರಮ ಸಂಖ್ಯೆ ಹಾಗು ನಾಮಪತ್ರದ ಗೊಂದಲದ ವಾರ್..!...

ನಿಖಿಲ್ ಬೆಂಬಲಿಗರು ಹಾಗೂ ಸುಮಲತಾ ಬೆಂಬಲಿಗರ ನಡುವೆ ಕ್ರಮ ಸಂಖ್ಯೆ ಹಾಗು ನಾಮಪತ್ರದ ಗೊಂದಲದ ವಾರ್..! ನಿಖಿಲ್ ನಾಮಪತ್ರ ಕಾನೂನು ಬದ್ಧವಾಗಿಲ್ಲ.! ಸುಮಲತಾ ಪರ ಏಜೆಂಟ್ ತಕರಾರು.!

2464
0
SHARE

ಮಂಡ್ಯದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಕಾನೂನು ಬದ್ಧ.ಒಂದೆಡೆ ಮಂಡ್ಯದಲ್ಲಿ ಚುನಾವಣಾ ಭರಾಟೆ ಜೋರಾಗಿದ್ದರೆ ಮತ್ತೊಂದೆಡೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವ್ರ ನಾಮಪತ್ರದ ಬಗ್ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಕಡೆಯವ್ರು ತಕರಾರು ತೆಗೆದಿದ್ದಾರೆ.

ಜೊತೆಗೆ ಸುಮಲತಾ ಅನ್ನುವ ಮೂರು ಮಂದಿಯ ಜೊತೆಗೆ ನನ್ನ ಹೆಸ್ರನ್ನ ಬೇಕೆಂದೇ ಸೇರಿಸಲಾಗಿದೆ ಎಂದು ಸುಮಲತಾ ಅಂಬರೀಷ್ ಆಕ್ಷೇಪವೆತ್ತಿದ್ದು, ಇವತ್ತು ಸ್ವತ: ರಾಜ್ಯ ಚುನಾವಣಾಧಿಕಾರಿಗಳೇ ಮಂಡ್ಯಕ್ಕೆ ಭೇಟಿ ಕೊಟ್ಟಿದ್ರು.ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಕಾನೂನು ಬದ್ಧವಾಗಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಏಜೆಂಟ್ ಮದನ್ ತಕರಾರು ತೆಗೆದಿದ್ದಾರೆ.

ಮುಖ್ಯಮಂತ್ರಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಕುಮಾರಸ್ವಾಮಿ ಅವರೇ ಜಿಲ್ಲಾಧಿಕಾರಿಯನ್ನು ಮನೆಗೆ ಕರೆಯಿಸಿಕೊಂಡು ಖುದ್ದು ಅವರೇ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಗಂಭೀರ ಆರೋಪ ಮಾಡುತ್ತಿದ್ದಂತೆ ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಖುದ್ದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ಸತತ ಎರಡು ತಾಸುಗಳ ಕಾಲ ಸಭೆ ನಡೆಸಿದರು.

ನಾಮಪತ್ರ ಪರಿಶೀಲನೆ ನಡೆಸಿದ ಬಳಿಕ ಆರೋಪ ಮಾಡಿದ್ರೆ ಕೋರ್ಟ್ ನಲ್ಲಿ ಪರಿಶೀಲನೆ ನಡೆಸಬೇಕು. ಆದ್ರೆ ಆಡಳಿತಾತ್ಮಕವಾಗಿ ಅಡಚಣೆಯಾದ್ರೆ ನಾವು ಪ್ರಶ್ನಿಸಬಹುದು. ನಾಮಪತ್ರ ಕುರಿತು ಏನೇ ಗೊಂದಲವಾದ್ರೂ ಅದನ್ನ ಪ್ರಶ್ನಿಸೋಕೆ ಆಗಲಲ್. ನ್ಯಾಯಾಲಯದ ಮುಖಂತರವೇ ಪ್ರಶ್ನಿಸಬೇಕೆಂದು ಸುಮಾ ಬೆಂಬಲಿಗರಿಗೆ ಸ್ಪಷ್ಟವಾಗಿ ತಿಳಿಸಿದ್ರು.ನಿಖಿಲ್ ನಾಮಪತ್ರ ಕಾನೂನು ಬದ್ಧವಾಗಿಲ್ಲ ಎಂದು ತಗಾದೆ ತೆಗೆದಿದ್ದ ಸುಮಲತಾ ಇದೀಗ ತಮಗೆ ನೀಡಿರುವ ಕ್ರಮ ಸಂಖ್ಯೆ ಬಗ್ಗೆಯೂ ಚಕಾರ ತೆಗೆದಿದ್ದಾರೆ.

ನನ್ನ ಇನಿಷಿಯಲ್ ಎ.ಸುಮಲತಾ. ಜೆಡಿಎಸ್ ಅಭ್ಯಥಿಗಾದ್ರೆ ಕ್ರಮ ಸಂಖ್ಯೆ ಒಂದು ನೀಡ್ತಾರೆ. ಆದರೆ ನನಗೆ 20ನೇ ಕ್ರಮ ಸಂಖ್ಯೆ  ನೀಡಲಾಗಿದೆ. ನನ್ನ ಹೆಸರಿನ ಮೇಲೆ ಮತ್ತು ಕೆಳಗೆ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನಾಕಿದ್ದು, ಇದಕ್ಕೆ ಭಾನುವಾರ ಸುದ್ದಿಗೋಷ್ಟಿಯಲ್ಲಿ ಉತ್ತರಿಸುವೆ ಎಂದ್ರು.ಚುನಾವಣಾ ಕಾವಿನ ನಡುವೆ ನಿಖಿಲ್ ಬೆಂಬಲಿಗರು ಹಾಗೂ ಸುಮಲತಾ ಬೆಂಬಲಿಗರ ನಡುವೆ ಕ್ರಮ ಸಂಖ್ಯೆ ಹಾಗು ನಾಮಪತ್ರದ ಗೊಂದಲದ ವಾರ್ ಜೋರಾಗಿಯೇ ನಡೆಯುತ್ತಿದೆ. ಇದನ್ನ ತಡೆಯಲು ಸ್ವತ: ರಾಜ್ಯ ಚುನಾವಣಾಧಿಕಾರಿಗಳೇ ಬರಬೇಕಾಯ್ತು.

LEAVE A REPLY

Please enter your comment!
Please enter your name here