Home Cinema ನಿಖಿಲ್ ರನ್ನ ಹೊಗಳುವ ಭರದಲ್ಲಿ ದರ್ಶನ್ ಗೆ ಟಾಂಗ್ ಕೊಟ್ಟು ನಿರ್ಮಾಪಕ ಮುನಿರತ್ನ ಹಾಕಿದ್ರಾ ಚಾಲೆಂಜಿಂಗ್...

ನಿಖಿಲ್ ರನ್ನ ಹೊಗಳುವ ಭರದಲ್ಲಿ ದರ್ಶನ್ ಗೆ ಟಾಂಗ್ ಕೊಟ್ಟು ನಿರ್ಮಾಪಕ ಮುನಿರತ್ನ ಹಾಕಿದ್ರಾ ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್? ಕುರುಕ್ಷೇತ್ರದ ಕಣದಲ್ಲಿ ನಡೀತಿದ್ದ ಮುಸುಕಿನ ಗುದ್ದಾಟ ಆಯ್ತು ಬಹಿರಂಗ!

1025
0
SHARE

ಇಷ್ಟು ದಿನ ಯಾವುದು ಜಸ್ಟ್ ರೂಮರ್ ಅನ್ನಿಸಕೊಂಡಿತ್ತೋ, ಗಾಸಿಪ್ ಕಾಲಂಗಳಲ್ಲಿ ಮಾತ್ರ ಜಾಗ ಪಡೆದಿತ್ತೋ ಅದೀಗ ನಿಜವಾಗಿ ಹೋಗಿದೆ. ಕುರುಕ್ಷೇತ್ರ ಸಿನಿಮಾ ನಿರ್ಮಾಪಕ ಮುನಿರತ್ನ ನಿಖಿಲ್ ಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ದರ್ಶನ್ ರನ್ನ ಮೂಲೆಗುಂಪು ಮಾಡ್ತಿದಾರೆ ಅನ್ನೋದು ಗುಲ್ಲಾಗಿತ್ತು. ಅದು ನಿಜ ಅನ್ನೋದಕ್ಕೀಗ ಸಾಕ್ಷಿ ಸಿಕ್ಕಿದೆ. ಸಾಕ್ಷಾತ್ ಮುನಿರತ್ನ ದರ್ಶನ್ ಮೇಲಿನ ಮುನಿಸನ್ನ ಹೊರಹಾಕಿದಾರೆ., ಅದು ಕೂಡ ಬಹಿರಂಗ ವೇದಿಕೆಯಲ್ಲಿ.ಅಷ್ಟಕ್ಕೂ ಮುನಿರತ್ನ,, ಕುರುಕ್ಷೇತ್ರದಲ್ಲಿ ನಡೀತಾ ಇರೋ ಕೋಲ್ಡ್ ವಾರ್ ನ ಕಥೆಯನ್ನ ಬಹಿರಂಗ ಪಡಿಸಿದ್ದು ಸೀತಾರಾಮ ಕಲ್ಯಾಣ ಸಿನಿಮಾದ ಟೀಸರ್ ಲಾಂಚ್ ವೇದಿಕೆಯಲ್ಲಿ.

ರಾಮನಗರದಲ್ಲಿ ಅದ್ಧೂರಿಯಾದ ವೇದಿಕೆಯಲ್ಲಿ ಸೀತಾರಾಮ ಕಲ್ಯಾಣ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದು ಹೇಳಿ ಕೇಳಿ ಮುಖ್ಯಮಂತ್ರಿಗಳ ಸ್ವಕ್ಷೇತ್ರ. ಮುಖ್ಯಮಂತ್ರಿಗಳ ಮಗನ ಸಿನಿಮಾ ಟೀಸರ್ ಬಿಡುಗಡೆ ಅಂದ್ರೆ ಕೇಳಬೇಕಾ.. ಲಕ್ಷಾಂತರ ಜನ ಜಮಾಯಿಸಿದ್ರು.ವೇದಿಕೆ ಮೇಲೆ ಸಿ.ಎಂ ಕುಮಾರಸ್ವಾಮಿಯವರೂ ಇದ್ರು. ಟೀಸರ್ ಲಾಂಚ್ ಗೆ ಅತೀಥಿಯಾಗಿ ಬಂದಿದ್ದ ಮುನಿರತ್ನ, ಪಕ್ಕದಲ್ಲಿದ್ದ ಸಿ.ಎಂ ನೋಡಿಯೋ.. ಇಲ್ಲಾ ಜನಸಾಗರವನ್ನ ನೋಡಿಯೋ ಎಕ್ಸೈಟ್ ಆಗಿ ಭಾಷಣ ಮಾಡೋದಕ್ಕೆ ಶುರುಮಾಡಿದ್ರು. ನಿರಂತರವಾಗಿ 10 ನಿಮಿಷ ಮಾತನಾಡಿದ ಮುನಿ, ನಿಖಿಲ್ ರನ್ನ ಹೊಗಳಿ ಅಟ್ಟಕೇರಿಸಿದ್ರು.

ಮುನಿರತ್ನ ಸೀತಾರಾಮ ಕಲ್ಯಾಣ ಸಿನಿಮಾ ವೇದಿಕೆಯಲ್ಲಿ ಕುರುಕ್ಷೇತ್ರದ ಬಗ್ಗೆ ಇಷ್ಟೊಂದ್ಯಾಕೆ ಮಾತನಾಡ್ತಿದಾರೆ ಅನ್ನೋ ಪ್ರಶ್ನೆ ಜನರನ್ನ ಕಾಡ್ತಾನೆ ಇತ್ತು. ಜೊತೆಗೆ ಪದೇ ಪದೇ ಅಭಿಮನ್ಯು ಪಾತ್ರ ದೊಡ್ಡದು. ಅದ್ಭುತವಾದದ್ದು ಅಂತ ಹೇಳ್ತಾ ಇದ್ದ, ಮುನಿ ಮಾತು ಕೇಳಿ ಹಾಗಾದ್ರೆ ದರ್ಶನ್ ಏನು ಈ ಸಿನಿಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟಾ ಅನ್ನೋ ಪ್ರಶ್ನೆನೂ ಮೂಡ್ತಾ ಇತ್ತು. ಅದರ ನಡುವೆಯೇ ಮುನಿರತ್ನ ನಿಖಿಲ್ ನನ್ನ ಹೊಗಳೋ ಭರದಲ್ಲಿ ದರ್ಶನ್ ಗೆ ಟಾಂಗ್ ಬೇರೆ ಕೊಟ್ರು.ಯೆಸ್ ನಿಖಿಲ್ ನಿರ್ಮಾಪರ ಒಳಿತನ್ನ ಬಯಸೋ ನಟ ಅಂತ ಒತ್ತಿ ಒತ್ತಿ ಹೇಳಿದ ಮುನಿರತ್ನ, ಒಳಿತನ್ನ ಬಯಸದೇ ಇರುವವರೂ ಇದ್ದಾರೆ ಅಂತಲೂ ಹೇಳಿದ್ರು.

ಹಾಗಾದ್ರೆ ನಿರ್ಮಾಪಕರ ಒಳಿತು ಬಯಸದೇ ಇರೋ ಆ ನಟ ಯಾರು.. ಅಷ್ಟಕ್ಕೂ ನಿಖಿಲ್ ಬಿಟ್ರೆ ಕುರುಕ್ಷೇತ್ರದ ನಾಯಕ ಅವರೇ ತಾನೇ. ಮುನಿ ಈ ಮಾತನ್ನ ಹೇಳಿದ್ದು ಇನ್ಯಾರಿಗೆ.. ಮುನಿ`ರತ್ನರಿಂದ ನಿಖಿಲ್ ನ ಹೊಗಳೋ ಕಾರ್ಯಕ್ರಮ, ಉಳಿದವರನ್ನ ತೆಗಳೋ ಕಾರ್ಯಕ್ರಮ ಇಷ್ಟಕ್ಕೆ ಮುಗೀಲಿಲ್ಲ. ಪಕ್ಕದಲ್ಲಿದ್ದ ಸಿ.ಎಂ ಕುಮಾರಸ್ವಾಮಿಯವರನ್ನ ಮೆಚ್ಚಿಸೋ ಜಿದ್ದಿಗೆ ಬಿದ್ದಿದ್ದ ಮುನಿರತ್ನ ಸಾಕ್ಷಾತ್ ನಿಖಿಲ್ ಗೆ ವಾಕರಿಕೆ ಬರುವಷ್ಟು ಅವರನ್ನ ಹೊಗಳಿದ್ರು.ಮುನಿರತ್ನ ಪ್ರಕಾರ ನಿಖಿಲ್ ಕರ್ನಾಟಕದಲ್ಲೇ ಅದ್ಭುತ ನಟರಾಗ್ತಾರಂತೆ.

ದುರಂತ ಅಂದ್ರೆ ಇಷ್ಟೆಲ್ಲಾ ಹೊಗಳಿದ ಮುನಿರತ್ನ, ಸೀತಾರಾಮ ಕಲ್ಯಾಣ ಸಿನಿಮಾ ಬಗ್ಗೆ ಒಂದು ಮಾತೂ ಹೇಳಲಿಲ್ಲ. ಬರೀ ತಮ್ಮ ಕುರುಕ್ಷೇತ್ರದ ಬಗ್ಗೆ ಮಾತನಾಡಿದ ಮುನಿರತ್ನ, ನಿಖಿಲ್ ಹೊಗಳೋದಕ್ಕೆ ದರ್ಶನ್ ನ ತೆಗಳೋದಕ್ಕೆ ಸಮಯ ವ್ಯಯಿಸಿದ್ರು.ಅಸಲಿಗೆ ಕುರುಕ್ಷೇತ್ರ ಸಿನಿಮಾ ಚುನಾವಣೆಗೂ ಮುನ್ನವೇ ತೆರೆಗ ಬರಬೇಕಿತ್ತು,. ಹೈದ್ರಾಬಾದ್ ನಲ್ಲಿ ಚಿತ್ರೀಕರಣ ನಡೀತಾ ಇದ್ದ ಸಮಯದಲ್ಲಿ ದರ್ಶನ್ ಕೂಡ ಚಿತ್ರದ ಬಗ್ಗೆ ಭಾರಿ ಉತ್ಸಾಹದಿಂದ ಮಾತನಾಡಿದ್ರು. ಆದ್ರೆ ಯಾವಾಗ ಅಭಿಮನ್ಯು ಪಾತ್ರಕ್ಕೆ ನಿಖಿಲ್ ನ ಕರೆತಂದು ಇನ್ನಿಲ್ಲದ ಬಿಲ್ಡ್ ಅಪ್ ಕೊಡೋದಕ್ಕೆ ಶುರುಮಾಡಿದ್ರೋ ಅಲ್ಲಿಂದ ನಿಜವಾದ ಕುರುಕ್ಷೇತ್ರ ಶುರುವಾಗಿ ಹೋಯ್ತು.

ಇವತ್ತಿಗೂ ಸಿನಿಮಾ ಯಾಕೆ ತೆರೆಗೆ ಬಂದಿಲ್ಲ.. ಇಷ್ಟು ತಡವಾಗಿದ್ದು ಯಾಕೆ ಅಂದ್ರೆ ಅದಕ್ಕೆ ದುರ್ಯೋಧನ-ಅಭಿಮನ್ಯು ನಡುವಿನ ರಿಯಲ್ ಕುರುಕ್ಷೇತ್ರವೇ ಕಾರಣ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಇಷ್ಟು ದಿನ ಇದು ಜಸ್ಟ್ ಗಾಸಿಪ್ ಆಗಿತ್ತು. ಆದ್ರೆ ಈಗ ಸೀತಾರಾಮ ಕಲ್ಯಾಣ ಸಿನಿಮಾ ವೇದಿಕೆಯಲ್ಲಿ ಜಗಜ್ಜಾಹೀರಾಗಿದೆ.ಕುರುಕ್ಷೇತ್ರ ಸಿನಿಮಾ ಪ್ರಾರಂಭವಾದಾಗಲೇ ಇದು ದರ್ಶನ್ 50ನೇ ಸಿನಿಮಾ ಅಂತ ಘೋಷಿಸಲಾಗಿತ್ತು. ದರ್ಶನ್ ಜೊತೆ ಜೊತೆಗೆ ಕುರುಕ್ಷೇತ್ರ ಸಿನಿಮಾದಲ್ಲಿ ತಾರೆಯರ ದಂಡೇ ಇದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನ ಪಾತ್ರ ಮಾಡ್ತಿದ್ರೆ, ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ, ಅಂಬರೀಶ್ ಭೀಷ್ಮನ ಪಾತ್ರದಲ್ಲಿ, ಅರ್ಜುನ್ ಸರ್ಜಾ ಕರ್ಣನ ಪಾತ್ರದಲ್ಲಿ, ನಿಖಿಲ್ ಅಭಿಮನ್ಯು ಪಾತ್ರದಲ್ಲಿ ನಟಿಸ್ತಾ ಇದಾರೆ.ಕುರುಕ್ಷೇತ್ರ ಸಿನಿಮಾ ದುರ್ಯೋಧನನ ದೃಷ್ಟಿಕೋನದಿಂದ ಕುರುಕ್ಷೇತ್ರವನ್ನ ಕಟ್ಟಿಕೊಡಲಿದೆ. ಅಲ್ಲಿಗೆ ದರ್ಶನ್ ದುರ್ಯೋಧನನ ಪಾತ್ರ ಮಾಡ್ತಿದ್ರೂ ಅವರದ್ದು ದುರ್ಯೋಧನನ ಉದಾತ್ತ ಗುಣಗಳನ್ನ ಪ್ರದರ್ಶಿಸಿರೋ ಪಾತ್ರವಾಗಿರುತ್ತೆ ಅಂತ ಎಲ್ಲರೂ ನಂಬಿದ್ರು. ಆದ್ರೆ ಬರ್ತಾ ಬರ್ತಾ ಕಥೆಯೇ ಬೇರೆ ಆಗ್ತಿದೆ.ಮೊದಲು ದರ್ಶನ್ ನಟನೆಯ ಟೀಸರ್ ಬಿಡುಗಡೆ ಮಾಡಲಾಗಿತ್ತು.

ಎರಡೂವರೆ ಘಂಟೆ ಸಿನಿಮಾದಲ್ಲಿ ಜಸ್ಟ್ ಅಭಿಮನ್ಯು ಪಾತ್ರಕ್ಕೆ ಅರ್ಧಘಂಟೆ ಕೊಟ್ರೆ ಇನ್ನುಳಿದ ಪಾತ್ರಗಳನ್ನ ಎಲ್ಲಿ ತೋರಿಸ್ತೀರಿ. ಅದ್ರಲ್ಲೂ ಅಭಿಮನ್ಯು ಹೈಲೈಟ್ ಆದ್ರೆ ದುರ್ಯೋಧನ ಪಾತ್ರ ವೀಕ್ ಆಗೋದಿಲ್ವಾ.. ಈ ಎಲ್ಲಾ ಪ್ರಶ್ನೆಗಳು ದರ್ಶನ್ ಫ್ಯಾನ್ಸ್ ನ ಹೈರಾಣಾಗಿಸಿವೆ. ಜಸ್ಟ್ ಫ್ಯಾನ್ಸ್ ಮಾತ್ರವಲ್ಲ.. ದರ್ಶನ್ ಕೂಡ ಒಂದು ಹಂತದಲ್ಲಿ ಮುನಿರತ್ನ ಮೇಲೆ ಮುನಿಸಿಕೊಂಡಿದಾರೆ ಅಂತ ಗಾಂಧಿನಗರದಲ್ಲಿ ಗಾಸಿಪ್ ಹರಿದಾಡ್ತಿದೆ. ಅಭಿಮನ್ಯುವನ್ನ ಹೈಲೈಟ್ ಮಾಡಿ ತಮ್ಮ ಪಾತ್ರವನ್ನ ಕುಂದಿಸ್ತಾ ಇರೋದ್ರಿಂದ ಬೇಸರಿಸಿಕೊಂಡಿರೋ ದರ್ಶನ್, ಇದು ತಮ್ಮ 50ನೇ ಸಿನಿಮಾ ಅಂತ ಘೋಷಿಸಿಕೊಳ್ಳೋದೇ ಬೇಡ ಅಂತ ನಿರ್ಧರಿಸಿದಾರಂತೆ ಅನ್ನೋ ಸುದ್ದಿ ಗಾಂದಿನಗರದಲ್ಲಿ ಹರಿದಾಡ್ತಾನೇ ಇದೆ.

ಅಸಲಿಗೆ ಕುರುಕ್ಷೇತ್ರ ಸಿನಿಮಾಗೆ ದರ್ಶನ್ ಒಪ್ಪಿಗೆ ಕೊಟ್ಟಿದ್ದು ಇದೊಂದು ಪೌರಾಣಿಕ ಚಿತ್ರ ಅನ್ನೋ ಕಾರಣಕ್ಕೆ  ಮತ್ತು ದೊಡ್ಡ ಬಜೆಟ್ ನ ಸಿನಿಮಾವಾದ್ದರಿಂದ ತಮ್ಮ 50ನೇ ಸಿನಿಮಾ ಅಂತ ಅಧಿಕೃತವಾಗಿ ಘೋಷಿಸೋದಕ್ಕೆ ಒಪ್ಪಿಗೆ ಕೊಟ್ಟಿದ್ರು. ಆದ್ರೆ ಹೆಚ್.ಡಿ.ಕುಮಾರಸ್ವಾಮಿಯವರು ಸಿ.ಎಂ ಆದ ಮೇಲೆ ಇದು ಯುವರಾಜ ನಿಖಿಲ್ ಸಿನಿಮಾವಾಗಿ ಬದಲಾಗ್ತಿದೆ ಅನ್ನೋದು ದರ್ಶನ್ ಗೆ ಗೊತ್ತಾಗಿ ಹೋಗಿದೆಯಂತೆ. ಇಲ್ಲಿ ವಾದ – ವಿವಾದ ಮಾಡಿ ಅರ್ಥವಿಲ್ಲ ಅನ್ನೋ ತೀರ್ಮಾನಕ್ಕೆ ಬಂದಿರೋ ದರ್ಶನ್ ಸೈಲೆಂಟಾಗಿ ಇದು ತಮ್ಮ 50ನೇ ಸಿನಿಮಾ ಅಂತ ಪಬ್ಲಿಸಿಟಿ ಮಾಡಬೇಡಿ ಅಂತ ಸೂಚನೆ ಕೊಟ್ಟಿದಾರಂತೆ. ಹೀಗಂತ ಗಾಂಧಿನಗರ  ಗಾಸಿಪ್ ಗಲ್ಲಿಗಳಲ್ಲಿ ಸುದ್ದಿ ಹರಿದಾಡ್ತಿದೆ.

LEAVE A REPLY

Please enter your comment!
Please enter your name here