Home Cinema ನಿಖಿಲ್ “ಸೀತಾರಾಮ ಕಲ್ಯಾಣ” ಚಿತ್ರದ ಟೀಸರ್ ಅಬ್ಬರಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್..?! ಟ್ರೆಂಡ್ ಕಿಂಗ್...

ನಿಖಿಲ್ “ಸೀತಾರಾಮ ಕಲ್ಯಾಣ” ಚಿತ್ರದ ಟೀಸರ್ ಅಬ್ಬರಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್..?! ಟ್ರೆಂಡ್ ಕಿಂಗ್ ಆದ ನಿಖಿಲ್ ಕುಮಾರಸ್ವಾಮಿ…

2129
0
SHARE

ಸೀತಾ ರಾಮ ಕಲ್ಯಾಣ.. ಯುವರಾಜ ನಿಖಿಲ್ ಕುಮಾರ್ ಅಭಿನಯದ ಚಿತ್ರ..ಜಾಗ್ವಾರ್ ಮೂಲಕ ಅದ್ದೂರಿಯಾಗಿ ಸಿನಿ ದುನಿಯಾಗೆ ಎಂಟ್ರಿ ಕೊಟ್ಟ ನಿಖಿಲ್ ಕುರುಕ್ಷೇತ್ರದಲ್ಲಿ ಅಭಿಮನ್ಯು ಆಗಿ ಬಣ್ಣ ಹಚ್ಚಿ ಇದೀಗ ಮಾಸ್ ಆಗಿ ಎಂಟ್ರಿ  ಕೊಟ್ಟಿರುವ  ಚಿತ್ರವೇ ಸೀತಾ ರಾಮ ಕಲ್ಯಾಣ..ನಿನ್ನೆ ರಾಮನಗರದಲ್ಲಿ ಅದ್ದೂರಿಯಾಗಿ  ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಲಾಂಚ್ ಮಾಡಲಾಯ್ತು…

ಅದ್ದೂರಿ ಕಾರ್ಯಕ್ರಮಕ್ಕೆ ನಿಖಿಲ್ ತಂದೆ ಎಂಡ್  ರಾಜ್ಯದ  ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ, ನಿರ್ಮಾಪಕ ಮುನಿರತ್ನ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ರು.. ಇನ್ನು ಪಕ್ಕಾ ಮಾಸ್ ಎಲಿಮೆಂಟ್ ಇರುವ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂ ಟ್ಯೂಬ್ ನಲ್ಲಿ  ಅತಿ ಹೆಚ್ಚು ವೀವ್ಸ್ ನೊಂದಿಗೆ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ..ಸಖತ್ ವೈರಲ್ ಆಗಿದೆ…

ಮಾಸ್ ಎಂಡ್ ರಿಚ್ ಆಗಿ ಮೂಡಿ ಬಂದಿರುವ ಟೀಸರ್ ನಲ್ಲಿ  ಯುವರಾಜ ನಿಖಿಲ್ ಆಕ್ಷನ್ ಜಲಕ್  ಗೆ ಎಲ್ಲರು ಫಿಧಾ ಆಗಿದ್ದು, ಮಾಸ್ ಲುಕ್  ನಲ್ಲಿ ಎಂಟ್ರಿ ಕೊಟ್ಟಿರುವ ನಿಖಿಲ್  ನೋಡಿ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ… ಮಗನ ಪರ್ಫಾಮೆನ್ಸ್ ನೋಡಿ ಹೆಚ್ಡಿಕೆ ಕೂಡ ಖುಷಿ ಪಟ್ಟಿದ್ದಾರೆ…ಮೆಚ್ಚಿಕೊಂಡಿದ್ಧಾರೆ.ಅಂಜನೀಪುತ್ರದ ನಂತರ ಎ. ಹರ್ಷ ನಿರ್ದೆಶನ ಮಾಡುತ್ತಿರುವ ಮತ್ತೊಂದು ಫ್ಯಾಮಿಲಿ ಎಂಟಟೈನ್ ಮೆಂಟ್ ಎಂಡ್ ಮಾಸ್ ಎಲಿಮೆಂಟ್ ಹೊಂದಿರುವ ಚಿತ್ರ ಇದು..

ಇನ್ನು ಸೀತೆಯಾಗಿ ಇಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ.. ಸದ್ಯ ಟೀಸರ್ ಐದು ಲಕ್ಕ್ಕೂ ಹೆಚ್ಚು ವೀವ್ಸ್ ನೊಂದಿಗೆ ಟ್ರೆಂಡಿಂಗ್ ನಲ್ಲಿದ್ದು ನಿಖಿಲ್ ಇಮೇಜ್ ಗೆ ಸಖತ್ ಹೈಪ್ ನೀಡಿದೆ.ಬಟ್, ಟೀಸರ್ ರಿಲೀಸ್ ಆಗುತ್ತಿದಂತೆ ಗಾಂಧೀನಗರದಲ್ಲಿ ನಿರ್ದೆಶಕ ಹರ್ಷ ಮೇಲೆ ಅಸಮಾಧಾನ ಪಟ್ಟುಕೊಂಡಿದ್ದಾರೆ…ಎಸ್,, ಈ ಅಸಮಾಧಾನಕ್ಕೆ ಕಾರಣ ರಿಲೀಸ್  ಆಗಿರುವ ಚಿತ್ರದ ಟೀಸರ್ ತುಣುಕು..ಹೌದು..

ಆಸ್ ಎ ಡೈರೆಕ್ಟರ್, ಕೋರಿಯೋಗ್ರಾಫರ್ ಹರ್ಷ ವೆರಿ ಟ್ಯಾಲೆಂಟೆಡ್ ಅನ್ನೋದು ಇಡೀ ಚಂದನವನಕ್ಕೇ ಗೊತ್ತು..ಪುನೀತ್ ಅಭಿನಯದ ಅಂಜನೀಪುತ್ರ ನೋಡಿದ ಮೇಲೆ ಹರ್ಷ ತಲೆ ಕಾಲಿಯಾಗಿದೆ ಅನ್ನೋ ಮಾತು ಗಾಂದೀನಗರ ಗಲ್ಲಿ ಗಲ್ಲಿಯೂ ಓಡಾಡಿತ್ತು.. ಇದೀಗ ಸೀತಾರಾಮ ಕಲ್ಯಾಣ ಟೀಸರ್ ನೋಡಿದ ಬಳಿಕ  ಮತ್ತದೇ ಮಾತುಗಳು ಕೇಳಿ ಬರ್ತಿದೆ..ಈ ಅಪಾದನೆಗೆ ಎಡೆಮಾಡಿಕೊಟ್ಟಿದ್ದೂ ಮತ್ತದೇ ಸೀತಾ ರಾಮ ಕಲ್ಯಾಣ ಟೀಸರ್..

ಎಸ್ ಟೀಸರ್ ನಲ್ಲಿ ಭರಪೂರವಾಗಿ ಆಕ್ಷನ್ ಸೀನ್ ಗಳನ್ನ ಹರ್ಷ ಕಟ್ಟಿಕೊಟ್ಟಿದ್ರು ಸಹ ಟೀಸರ್ ನೋಡಿದ ಎಂತವರಿಗೂ ಇದು ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್  ಅಭಿನಯದ ಸರೈನುಡು ಹಾಗು ರೇಸುಗುರ್ರಂ ಟ್ರೈಲರ್ ಹಾಹು ಸಿನಿಮಾದಿಂದ ನೀಟ್ ಆಗಿ ಭಟ್ಟಿ ಇಳಿಸಿದ್ದು ಅಂತ ಗೊತ್ತಾಗದೆ ಇರದು….ಇದೇ ಅಪವಾದವೇ ಟೀಸರ್ ಕಣ್ತುಂಬಿ ಕೊಂಡ ನಿಖಿಲ್ ಅಭಿಮಾನಿಗಳ ತೀವ್ರ ಬೇಸರಕ್ಕೆ ಕಾರಣವಾಗಿದ್ದು, ಹರ್ಷ ಮೇಲಿನ ಕೋಪಕ್ಕು ಕಾರಣವಾಗಿದೆ..

ಅಲ್ದೆ ಹರ್ಷ ತಲೆ ಕಾಲಿಯಾಗಿದೆ ಅನ್ನೋ ಅಪಾದನೆಯನ್ನು ಮಾಡ್ತಿದ್ದಾರೆ.ಹರ್ಷ ಈ ಚಿತ್ರ ಶುರು ಮಾಡಿದಾಗ ಸೀತಾ ರಾಮ ಕಲ್ಯಾಣ ರಿಮೇಕ್ ಅಲ್ಲ  ಸ್ವಮೇಕ್ ಎಂದು ಹೇಳಿಕೊಂಡಿದ್ರು..ಇದೀಗ ಟೀಸರ್ ನೋಡಿದ್ರೆ ಟಾಲಿವುಡ್ ಸಿನಿಮಾಗಳ ಕೆಲ ಸೀನ್ ಗಳನ್ನ ಕದ್ದು ಸೀತಾ ರಾಮರ ಕಲ್ಯಾಣ ಮಾಡಿಸಲು ಹೊರಟಿದ್ದಾರೆ ಅನ್ನೋದು ಕನ್ಫರ್ಮ್ ಆಗಿದೆ…ಬರೀ ಟೀಸರ್ ನಲ್ಲಿ ಮಾತ್ರ ಇಷ್ಟಾ ಇಲ್ಲ ಭರ್ತಿ ಸಿನಿಮಾ  ಅಲ್ಲು ಸಿನಿಮಾಗಳ ಕೃಪೆಯ ಚಿತ್ರ ರಿಲೀಸ್ ಆದ ಮೇಲೆ ಗೊತ್ತಾಗಬೇಕಿದೆ..ಎಂಡ್ ಇದ್ಕೆಲ್ಲ ನಿರ್ದೆಶಕ ಹರ್ಷ ಏನು ಸಮಜಾಯಿಸಿ ನೀಡ್ತಾರೆ ಅಂತಾನೂ ಕಾದು ನೋಡ್ಬೇಕಿದೆ.

LEAVE A REPLY

Please enter your comment!
Please enter your name here