Home KARNATAKA ನಿಜವಾಗುತ್ತಾ ಕಣ್ಣು ಕಾಣದ ಅಜ್ಜಿ ನುಡಿದಿರೋ 2019 ರ ಭವಿಷ್ಯ…? ಮುಂದಿನ ವರ್ಷದಲ್ಲಿ ಧರೆಗೆ ಕಾದಿರೋದು...

ನಿಜವಾಗುತ್ತಾ ಕಣ್ಣು ಕಾಣದ ಅಜ್ಜಿ ನುಡಿದಿರೋ 2019 ರ ಭವಿಷ್ಯ…? ಮುಂದಿನ ವರ್ಷದಲ್ಲಿ ಧರೆಗೆ ಕಾದಿರೋದು ಎಂತಹ ಕಂಟಕ.! ಆತಂಕಕ್ಕೆ ಕಾರಣವಾಗಿದೆ ಕಣ್ಣಿಲ್ಲದ ಅಜ್ಜಿ ಹೇಳಿದ್ದ ಜ್ಯೋತಿಷ್ಯ…!

3250
0
SHARE

ಆಕೆ ನಿಗೂಢ ಮಹಿಳೆ. ಹೆಸರು ಬಾಬಾ ವಂಗಾ.. ಜಗತ್ತಿನ ಪ್ರಖ್ಯಾತ ಭವಿಷ್ಯಕಾರ ನಾಷ್ಟ್ರಡಾಮಸ್ ನಂತರದಲ್ಲಿ ಜೋತಿಷ್ಯ ಲೋಕದಲ್ಲಿ ಬಹುವಾಗಿ ಕೇಳಿಬಂದ ಹೆಸರು. 1996ರಲ್ಲೇ  ಈ ಮಹಿಳೆ ಸ್ತನ ಕ್ಯಾನ್ಸರ್ ಗೆ ಬಲಿಯಾಗಿದ್ದರೂ 51ನೇ ಶತಮಾನದವರೆಗೂ ಏನೇನು ಸಂಭವಿಸುತ್ತದೆ ಎಂಬುದನ್ನ ತಿಳಿಸಿದ್ದಾರೆ. ಹಾಗೂ ಅವುಗಳೆಲ್ಲ ಹಾಗೇ ನಿಜವಾಗುತ್ತ ಬಂದಿವೆ ಕೂಡ.. ಹಾಗಾದ್ರೆ 2019ನೇ ಇಸವಿಗೆ ಸಂಬಂಧಿಸಿದಂತೆ ಆಕೆ ಹೇಳಿದ ಭವಿಷ್ಯ ಏನು ಗೊತ್ತಾ? ನಿಜವಾಗಿದೆಯಾ ಈ ಕಣ್ಣು ಕಾಣದ ಮುದುಕಿ ನುಡಿದಿರುವ 2019 ರ ಭವಿಷ್ಯ..? ಇಡೀ ವಿಶ್ವ 2043 ರ ವೇಳೆಗೆ ಭಯೋತ್ಪಾದಕರ ವಶವಾಗಲಿದೆ, 2066ರಲ್ಲಿ ಉಗ್ರಗಾಮಿಗಳು ಸರ್ವನಾಶವಾಗಲಿದ್ದಾರೆ, ಒಬಾಮಾ  ಅಮೆರಿಕದ ಕಟ್ಟಕಡೆಯ ಅಧ್ಯಕ್ಷ ಹಾಗೂ ಅವರ ಅಧಿಕಾರ ಅವಧಿಯ ನಂತರ ಜಗತ್ತಿನ ಅತ್ಯಂತ ಬಲ ಮತ್ತು ಶ್ರೀಮಂತ ರಾಷ್ಟ್ರ ಅಮೆರಿಕ ಅತಂತ್ರವಾಗಲಿದೆ.

ಇದು ಬಲ್ಗೇರಿಯಾದ ಪ್ರವಾದಿ ಅಂಧ ವೃದ್ಧೆ ಬಾಬಾ ವಂಗಾ ನುಡಿದಿರುವ ಆತಂಕಕಾರಿ ಭವಿಷ್ಯವಾಣಿ.ಈ ವಯೋವೃದ್ಧೆ ನುಡಿದಿರುವ ಭವಿಷ್ಯ ಈವರೆಗೆ ಯಾವುದೂ ಸುಳ್ಳಾಗಿಲ್ಲ. ತಾವು ಸಾಯುವುದಕ್ಕೂ ಮುನ್ನ ಅವರು ಪ್ರಪಂಚದ ಆಗುಹೋಗುಗಳು ಮತ್ತು ಆತಂಕಕಾರಿ ಸಂಗತಿಗಳ ಬಗ್ಗೆ ನಿಖರ ಮಾಹಿತಿ ನೀಡಿರುವುದು ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿದೆ. 1996ರಲ್ಲಿ 85ನೇ ವಯಸ್ಸಿನ ಬಾಬಾ ವಂಗಾ ನಿಧಾನರಾದರು. ಅವರು ಸಾಯುವುದಕ್ಕೂ ಮುನ್ನ ಅನೇಕ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದು , ಜಗದ್ವಿಖ್ಯಾತ ಜ್ಯೋತಿಷಿ ನಾಸ್ಟ್ರೊಡೊಮಸ್ ಅವರ ಭವಿಷ್ಯವಾಣಿಯಂತೆ ಇವರ ಮುನ್ಸೂಚನೆಗಳು ನಿಖರವಾಗಿದೆ ಎಂದು ವಿಶ್ಲೇಷಿಸಲಾಗಿದೆ.2004ರಲ್ಲಿ ಏಷ್ಯಾದ ವಿವಿಧ ದೇಶಗಳ ಮೇಲೆ ವಿನಾಶಕಾರಿ ಸುನಾಮಿ ಬಂದೆರಗಲಿದ್ದು, ಸಾವಿರಾರು ಮಂದಿ ದುರಂತ ಸಾವಿಗೀಡಾಗಲಿದ್ದಾರೆ ಎಂದು ಇವರು ಭವಿಷ್ಯ ನುಡಿದಿದ್ದರು.

ಅದೇ ರೀತಿ 9/11ರಂದು ಅಮೆರಿಕದ ಮೇಲೆ ಭಾರೀ ವಿಧ್ವಂಸಕ ದಾಳಿ ನಡೆಯಲಿದೆ ಎಂದು ಮುನ್ಸೂಚನೆ ನೀಡಿದ್ದರು. ಈ ಭವಿಷ್ಯಗಳು ಅಕ್ಷರಶಃ ನಿಜವಾಗಿದೆ.  ಅದೇ ರೀತಿ ಅಮೆರಿಕದ 44ನೇ ಅಧ್ಯಕ್ಷರಾಗಿ ಆಫ್ರಿಕಾ ಮೂಲದ ಅಮೆರಿಕನ್ ವ್ಯಕ್ತಿ ಚುನಾಯಿತರಾಗಲಿದ್ದಾರೆ ಮತ್ತು ಅವರು ಎರಡು ಅವಧಿಗಳ ಕಾಲ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ವಂಗಾ ನುಡಿದಿದ್ದರು.ಇಷ್ಟೇ ಅಲ್ಲದೇ ಈ ನಿಗೂಢ ಮಹಿಳೆ ಬಾಬಾ ವಂಗಾ 2019ರ ಭೀಕರ ಭವಿಷ್ಯದ ಬಗ್ಗೆ ಇನ್ನೂ ಹತ್ತು ಹಲಾರು ವಿಚಾರಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಳು.ಅವಳ ಭವಿಷ್ಯದ ಪ್ರಕಾರ ಇಡೀ ವರ್ಷ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸುತ್ತವೆ. ಆರ್ಥಿಕ ಸಂಕಷ್ಟಗಳು ಭಾರೀ ದೊಡ್ಡ ಪ್ರಮಾಣದಲ್ಲಿ ಎದುರಾಗುತ್ತವೆ. ಇನ್ನು ಪ್ರಪಂಚದ ಅತಿ ದೊಡ್ಡ ಶಕ್ತಿ ಎಂದು ಪರಿಗಣಿಸುವ ಎರಡು ದೇಶಗಳ ನಾಯಕರ ಜೀವಕ್ಕೆ ಅಪಾಯವಿದೆ. ಬಾಬಾ ವಂಗಾ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ರ ರಕ್ಷಣೆಗೆ ಇರುವ ತಂಡವೇ ವರ್ಷದ 12 ತಿಂಗಳ ಒಳಗಾಗಿ ಅವರನ್ನು ಕೊಲ್ಲಲು ಯತ್ನಿಸುತ್ತದಂತೆ.

ಬಾಬಾ ವಂಗಾರ ಭವಿಷ್ಯಕ್ಕೆ ಸಂಭಂಧಿಸಿದಂತೆ ಫಿಡೆಲ್ ಕ್ಯಾಸ್ಟ್ರೊ ನೀಡಿದ ಸಲಹೆ ಪಾಲಿಸುತ್ತಿರುವ ಪುಟಿನ್ ತನ್ನ ಮೇಲೆ ನಾಲ್ಕು ಹತ್ಯಾಯತ್ನಗಳು ನಡೆದಿವೆ ಎಂದು ಸ್ವತಃ ಪುಟಿನ್ ಮಾಹಿತಿ ಬಯಲು ಮಾಡಿದ್ದರು. ಕಾವಲಿಗಾಗಿ ಸದಾ ಇರುವ ಶಸ್ತ್ರಸಜ್ಜಿತ ತಂಡದಿಂದ ಇಂಥ ಪ್ರಯತ್ನ ವಿಫಲವಾಗಿದೆ. ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೊ ಮೇಲೆ ಐವತ್ತಕ್ಕೂ ಹೆಚ್ಚು ಬಾರಿ ಹತ್ಯಾ ಯತ್ನಗಳು ನಡೆದಿದ್ದವು. ಅಂಥದ್ದರಿಂದ ತಪ್ಪಿಸಿಕೊಂಡಿದ್ದ ಕ್ಯಾಸ್ಟ್ರೊ ಅವರು, ದಾಳಿಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಪುಟಿನ್ ಗೆ ಸಲಹೆ ನೀಡಿದ್ದರಂತೆ. “ಅವರು ನನಗೆ ಹೇಳಿದ್ದರು. ‘ನಾನಿನ್ನೂ ಬದುಕಿದ್ದೇನೆ ಏಕೆ ಗೊತ್ತಾ..?’ ನಾನು ಕೇಳಿದೆ ಏಕೆ…? ‘ಏಕೆಂದರೆ ನನ್ನ ರಕ್ಷಣೆ ವಿಚಾರದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುತ್ತೀನಿ’ ಎಂಬುದಾಗಿ ತಿಳಿಸಿದ್ದರು” ಎಂದು ಪುಟಿನ್ ಹೇಳಿಕೊಂಡಿದ್ದಾರೆ.

ಇದಲ್ಲದೇ ಡೊನಾಲ್ಡ್ ಟ್ರಂಪ್ ಗೆ ನಿಗೂಢವಾದ ಕಾಯಿಲೆ ಕಾಣಿಸಿಕೊಳ್ಳುತ್ತದೆ ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಗೂಢವಾದ ಕಾಯಿಲೆಯಿಂದ ಬಳಲುತ್ತಾರೆ. ಕಿವಿ ಕೇಳಿಸದಿರುವುದು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಎದುರಿಸುತ್ತಾರೆ ಎಂದು ವಂಗಾ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕ್ಯೂಬಾ ಹಾಗೂ ಚೀನಾದಲ್ಲಿರುವ ಅಮೆರಿಕದ ಅಧಿಕಾರಿಗಳಿಗೆ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಅಂಥ ಅನುಭವಗಳಾಗಿವೆ. ಅಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪತ್ತೆ ಹಚ್ಚಲಾಗದಂಥ ಕಾಯಿಲೆಗಳು ಬರುತ್ತವೆ. ಅದರಿಂದ ಅವರ ಜೀವಕ್ಕೆ ಅಪಾಯ ಇದೆ ಅಂತ ಅಲ್ಲವೆ? ಇದು ಬಾಬಾ ವಂಗಾ ಹೇಳಿದ ಭವಿಷ್ಯ.

ಯುರೋಪಿಯನ್ ಒಕ್ಕೂಟದಲ್ಲಿ ಆರ್ಥಿಕ ಕುಸಿತ ಯುರೋಪಿಯನ್ ಒಕ್ಕೂಟದಲ್ಲಿ ಆರ್ಥಿಕ ಕುಸಿತ ಕಾಣಿಸಿಕೊಳ್ಳಲಿದೆ ಎಂಬ ಬಗ್ಗೆ ಆಕೆ ಭವಿಷ್ಯ ನುಡಿದಿದ್ದಾರೆ. ರಷ್ಯಾ ದೇಶದಲ್ಲಿ ಆಕಾಶಕಾಯವೊಂದು ಭಾರೀ ಅನಾಹುತ ಸೃಷ್ಟಿಸಲಿದೆಯಂತೆ. ಬೆನು ಆಕಾಶಕಾಯದಿಂದ ಬಾಹ್ಯಾಕಾಶ ದೂಳು ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಸಂಗ್ರಹ ಮಾಡಿತ್ತು ನಾಸಾ. ಅದರ ಪ್ರಕಾರ, ಆ ಆಕಾಶಕಾಯದಿಂದ ಸದ್ಯಕ್ಕೆ ಭೂಮಿಗೆ ಯಾವುದೇ ಅಪಾಯವಿಲ್ಲ. ಆದರೆ ಬಾಬಾ ವಂಗಾ ನುಡಿದ ಭವಿಷ್ಯದ ಪ್ರಕಾರ 2019ರಲ್ಲಿ ರಷ್ಯಾದಲ್ಲಿ ಆಕಾಶಕಾಯವೊಂದು ಅನಾಹುತ ಸೃಷ್ಟಿಸಲಿದೆ. ಒಟ್ಟಿನಲ್ಲಿ ಅದೇನು ಕಾದಿದೆಯೋ ಏನೋ..?

ಜಗತ್ತಿನಲ್ಲಿ ಮುಂದೆ ಏನೆಲ್ಲ ನಡೆಯುತ್ತೆ, ಏನೆಲ್ಲ ನಡೆಯಲ್ಲ ಅಂತ ಸಾಕಷ್ಟು ಜನ ಭವಿಷ್ಯವನ್ನು ನುಡಿದಿದ್ದಾರೆ. ಅಂತವರ ಎಷ್ಟೋ ಮಾತುಗಳು ಸತ್ಯವಾಗಿವೆ. ಎಷ್ಟೋ ಮಾತುಗಳು ಸುಳ್ಳಾಗಿವೆ. ಆದರೆ ಇಂತ ಭವಿಷ್ಯವಾಣಿ ನುಡಿದು ನಿಜವಾಗಿಸಿದವರ ಸಾಲಿನಲ್ಲಿ ಸೇರುತ್ತಾಳೆ ಈ ಅಂ? ಅಜ್ಜಿ. ಈ ಅಜ್ಜಿ ಹೇಳಿದ ಮಾತೆಲ್ಲ ನಿಜವಾಗುತ್ತ ಹೋಗಿವೆ. ಈಕೆ ಜಗತ್ತಿನ ಹಲವು ಸಂಗತಿಗಳ ಬಗ್ಗೆ ಭವಿಷ್ಯ ನುಡಿದಿದ್ದಾಳೆ. ಅದರಲ್ಲೂ ಪ್ರಳಯದ ಬಗ್ಗೆ, ರಾಜಕೀಯ ಬಗ್ಗೆ, ಸಾವು ನೋವುಗಳ ಬಗ್ಗೆ, ಯುದ್ಧಗಳ ಬಗ್ಗೆ ನುಡಿದ ಭವಿಷ್ಯವಾಣಿ ನಿಜವಾಗಿವೆ.

ಇಂದಿಗೂ ನಿಜವಾಗುತ್ತಿವೆ. ಅವಳು ಹೇಳಿದಂತೆಯೇ ನಡೆಯುತ್ತಿವೆ. ಇಷ್ಟಕ್ಕೂ 2018 ರಲ್ಲಿ ಅವಳು ಹೇಳಿದ ಆ ಭವಿಷ್ಯವಾಣಿಗಳಾದರೂ ಏನು..? ಮತ್ತು ಹೀಗೆ ಈಕೆ ಹೇಳಿದ್ದೆಲ್ಲವೂ ನಿಜವಾಗಿದ್ದವಾ.. ಕಣ್ಣು ಇಲ್ಲದಿದ್ದರೂ ಜಗತ್ತಿನ ಭವಿಷ್ಯ ನೋಡುವ ಒಳಗಣ್ಣು ಇದ್ದ ಅಜ್ಜಿ ಬಲ್ಗೇರಿಯಾ ಮೂಲದ ಬಾಬಾ ವಂಗಾ 2018ರಲ್ಲಿ ಸಂಭವಿಸುವ ಎರಡು ಪ್ರಮುಖ ಘಟನಾವಳಿಗಳ ಬಗ್ಗೆ ತಾವು ಬರೆದಿರುವ ಭವಿಷ್ಯದಲ್ಲಿ ನಮೂದಿಸಿದ್ದಾರೆ. ಭಾರಿ ಬಿರುಗಾಳಿ ಕಾರಣದಿಂದಾಗಿ ಕಣ್ಣು ಕಳೆದುಕೊಂಡ ಬಲ್ಗೇರಿಯಾದ ಬಾಬಾ ವಂಗಾ ಆ ನಂತರ ಜನರ ಭವಿಷ್ಯ ಕಾಣಲು ಪ್ರಾರಂಭಿಸಿದರು. 1966 ರಲ್ಲಿ  ಮರಣ ಹೊಂದಿದ ಬಾಬಾ ವಂಗಾ ಅವರು 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಬದಲಾವಣೆಗಳ ಬಗ್ಗೆ ಭವಿಷ್ಯವಾಣಿಯನ್ನು ದಾಖಲು ಮಾಡಿ ಹೋಗಿದ್ದಾರೆ.

ಕಣ್ಣು ಕಾಣದ ಅಜ್ಜಿ ವಂಗಾ ಹೇಳಿದ ಭವಿಷ್ಯ ಸುಳ್ಳಾಗಿದೆ ಸುನಾಮಿ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ ಮುಂತಾದ ಪ್ರಮುಖ ಘಟನಾವಳಿಗಳನ್ನು ಮುಂಚೆಯೇ ಊಹಿಸಿದ್ದ ಬಾಬಾ ವಂಗಾ 2018ರ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳನ್ನು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ.ಶುಕ್ರ ಗ್ರಹದಲ್ಲಿ ಶಕ್ತಿ ಸಂಪನ್ಮೂಲ ಬಾಬಾ ವಂಗಾ ಅವರ ಭವಿಷ್ಯವಾಣಿ ಪ್ರಕಾರ ಜಗತ್ತಿನ ದೊಡ್ಡಣ ಎಂಬ ವಿಶೇಷಣವನ್ನು ಅಮೆರಿಕ ಕಳೆದುಕೊಳ್ಳಲಿದೆ, ದೊಡ್ಡ ದೇಶ ಚೀನಾ ಅಮೆರಿಕವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದಿಕ್ಕಿ ಜಗತ್ತಿನ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಬಾಬಾ ವಂಗಾ ಅವರು ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಶುಕ್ರ ಗ್ರಹದಲ್ಲಿ ಹೊಸ ನೈಸರ್ಗಿಕ ಶಕ್ತಿ ಸಂಪನ್ಮೂಲವೊಂದನ್ನು ವಿಜ್ಞಾನಿಗಳು ಗುರುತಿಸಲಿದ್ದಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಈಕೆ ಸತ್ತು ಈಗಾಗಲೇ 20 ವರ್ಷ ಕಳೆದಿದೆ. ಆದರೆ ಆಕೆ ಹೇಳಿದ್ದ ಮಾತುಗಳೆಲ್ಲ ಒಂದೊಂದೇ ನಿಜವಾಗಿವೆ, ನಿಜವಾಗುತ್ತಲೂ ಇವೆ. ಆದರೆ, ಆ ಅಜ್ಜಿ ಹೇಳಿದ್ದ ಭವಿಷ್ಯವಾಣಿಯೊಂದು ಸುಳ್ಳಾಗಿದೆ. ಆಕೆಯ ಪ್ರಕಾರ, ಬರಾಕ್ ಒಬಾಮಾ ಅಮೆರಿಕದ ಕಟ್ಟಕಡೆಯ ಅಧ್ಯಕ್ಷರಾಗುತ್ತಾರೆ ಅಂತ ನುಡಿದಿದ್ದಳು. ಅದೀಗ ಸುಳ್ಳಾಗಿದ್ದು, ಡೊನಾಲ್ಡ್ ಟ್ರಂಪ್ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಮ್ಮ ತಾಳೆಗರಿ ಜ್ಯೋತಿಷಿಗಳು ಹೇಳಿರುವ ಹಲವಾರು ನುಡಿಗಳು ಸುಳ್ಳಾಗಿಲ್ಲವೆ?

ಅಮೆರಿಕದ ಅವಳಿ ಕಟ್ಟಡದ ಮೇಲಿನ ದಾಳಿ, ಅಮೆರಿಕದ ಅಧ್ಯಕ್ಷರಾಗಿ ಒಬಾಮಾ, ಉಗ್ರ ಸಂಘಟನೆಗಳ ಆರ್ಭಟ, ಸುನಾಮಿ ಬಗ್ಗೆ ಹೇಳಿದ್ದ ಮಾತುಗಳೆಲ್ಲ ನಿಜವಾಗಿದೆ. 2016 ರಲ್ಲಿ ಮುಸ್ಲಿಂ ಉಗ್ರ  ಸಂಘಟನೆಗಳು ಪ್ರಪಂಚವನ್ನೇ ನಲುಗಿಸಲಿವೆ ಎಂಬ ಎಚ್ಚರಿಕೆಯನ್ನು ಅಜ್ಜಿ ನೀಡಿಹೋಗಿದ್ದಳು..ನೋಡಿದ್ರಲ್ಲ ಇಂತಹ ವಿಶಿಷ್ಟ ಶಕ್ತಿ ಹೊಂದಿದ್ದ ಅಜ್ಜಿಯ ಹೆಸರು ಬಾಬಾ ವಂಗಾ ಅಂತ. ಬಲ್ಗೇರಿಯಾ ಮೂಲದ ಈ ಬಾಬಾ ವಂಗಾ ಅನ್ನೋ 85 ವರ್ಷದ ಅಜ್ಜಿ, ಈಗಾಗಲೇ ಹೇಳಿದಂತೆ 1996ರಲ್ಲೇ ಇಹಲೋಕ ಪ್ರಯಾಣವನ್ನು ಮುಗಿಸಿದ್ದಾಳೆ. ಆದರೆ ಆಕೆ ಹೇಳಿದ ಭವಿಷ್ಯಗಳು ಮಾತ್ರ ಇಂದಿಗೂ ಜೀವಂತ.

 

LEAVE A REPLY

Please enter your comment!
Please enter your name here