Home Latest ನಿತ್ಯಾನಂದನಿಂದ ಹೊಸ ‘ಕೈಲಾಸ’ ರಾಷ್ಟ್ರ ನಿರ್ಮಾಣ! ಕೈಲಾಸದ ಪಾಸ್ ಪೋರ್ಟ್ ರೆಡಿ! ಕೈಲಾಸ ಹೊಸ ದೇಶಕ್ಕೆ...

ನಿತ್ಯಾನಂದನಿಂದ ಹೊಸ ‘ಕೈಲಾಸ’ ರಾಷ್ಟ್ರ ನಿರ್ಮಾಣ! ಕೈಲಾಸದ ಪಾಸ್ ಪೋರ್ಟ್ ರೆಡಿ! ಕೈಲಾಸ ಹೊಸ ದೇಶಕ್ಕೆ ಪ್ರಧಾನಿ ನೇಮಕ!

1891
0
SHARE

ನಿತ್ಯಾನಂದ ಕೈಲಾಸವಾಸಿಯಾಗಿದ್ದಾನೆ… ಶಿವನ ಪಾದ ಸೇರಿದ್ದಾನೆ ಅಂದ್ಕೋಬೇಡಿ… ಕೈಲಾಸ ಅನ್ನೋ ಪ್ರತ್ಯೇಕ ರಾಷ್ಟ್ರ ಕಟ್ಟಿಕೊಂಡುಬಿಟ್ಟಿದ್ದಾನೆ. ಲ್ಯಾಟಿನ್ ಅಮೆರಿಕ ಎಂದು ಕರೆಯಲಾಗುವ ದಕ್ಷಿಣ ಅಮೆರಿಕಾದ ಈಕ್ವೆಡಾರ್ ದೇಶದ ಬಳಿ ಇಡೀ ದ್ವೀಪವೊಂದನ್ನೇ ಖರೀದಿಸಿಬಿಟ್ಟಿದ್ದಾನೆ ನಿತ್ಯಾನಂದ. ವಿಶ್ವದ ಭೂಪಟದಲ್ಲಿ ನೋಡಿದ್ರೆ, ಅಮೆರಿಕ ದೇಶದ ಕೆಳಭಾಗದಲ್ಲಿ ಬರುತ್ತೆ ನಿತ್ಯಾನಂದನ ಹೊಸ ದೇಶ.

ಸ್ವಯಂ ಘೋಷಿತ ದೇವ ಮಾನವನೆಂದೇ ಹೇಳಿಕೊಳ್ಳುವ ಅತ್ಯಾಚಾರದ ಆರೋಪಿಯಾಗಿರುವ ನಿತ್ಯಾನಂದ, ಆಶ್ರಮಗಳ ನಂತರ ಈಗ ತನ್ನದೇ ಆದ ದೇಶ ಕಟ್ಟಲು ಮುಂದಾಗಿದ್ದಾನೆ. ಈಕ್ವೆಡಾರ್ ಎಂಬಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿ ಮಾಡಿದ್ದು, ಇದು ನನ್ನದೇ ದೇಶ ಎಂದು ಹೇಳಿಕೊಳ್ಳುತ್ತಿದ್ದಾನೆ. ಈ ದೇಶಕ್ಕಾಗಿ ಧ್ವಜ, ಲಾಂಛನ, ಪ್ರತ್ಯೇಕ ಪಾಸ್ ಪೋರ್ಟ್ ನ್ನು ಸಿದ್ದಪಡಿಸಿಕೊಂಡಿದ್ದಾನೆ. ಅಲ್ಲದೇ ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದಾನೆ..ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ.

ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರಿಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್ಸೈಸಟ್ನ ಲ್ಲಿ ಬರೆದುಕೊಂಡಿದ್ದಾನೆ.ಕೈಲಾಸದ ಪಾಸ್ಪೋವರ್ಟಿನ ಎರಡು ಮಾದರಿಗಳು ಅಂತಿಮವಾಗಿದ್ದು, ಒಂದು ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ. ನಿತ್ಯಾನಂದ ಸಚಿವ ಸಂಪುಟವನ್ನು ಸಹ ರಚಿಸಿದ್ದು, ಮಾ ಎಂಬ ಹೆಸರಿನವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾನೆ.

ಅಲ್ಲದೆ ಈ ದೇಶದಲ್ಲಿ ನಿತ್ಯಾನಂದ ಪ್ರತಿ ದಿನ ಸಚಿವ ಸಂಪುಟ ಸಭೆ ನಡೆಸುತ್ತಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಕೈಲಾಸದ ಕಾನೂನು ತಂಡ ಈ ಜಾಗವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಣೆ ಮಾಡಲು ವಿಶ್ವಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯಲ್ಲಿ ಭಾರತದಲ್ಲಿ ನನಗೆ ಬೆದರಿಕೆ ಇದೆ. ಹೀಗಾಗಿ ಇಲ್ಲಿ ನೆಲೆಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ.. ನಿತ್ಯಾನಂದ ಹೊಸ ದೇಶವನ್ನೇ ಕಟ್ಟಿಕೊಂಡುಬಿಟ್ಟಿದ್ದಾನೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯಾನಂದನ ಹೊಸ ದೇಶವಾದ ಕೈಲಾಸ ಭಾರೀ ಸದ್ದು ಮಾಡ್ತಿದೆ.

LEAVE A REPLY

Please enter your comment!
Please enter your name here