Home Cinema ನಿನ್ನಂಥ ದುರ್ಯೋಧನ ಇನ್ನೊಬ್ಬನಿಲ್ಲ..ದರ್ಶನ್‌ಗೆ ಹೀಗಂದವ್ರ್ಯಾರು..? ಭಕ್ತಗಣ ಹಾಕುತ್ತಿದೆ ಕೇಕೆ.. ನೋಡಿ ಕುರುಕ್ಷೇತ್ರ ಹಾಡಿನ ತೇರು..!

ನಿನ್ನಂಥ ದುರ್ಯೋಧನ ಇನ್ನೊಬ್ಬನಿಲ್ಲ..ದರ್ಶನ್‌ಗೆ ಹೀಗಂದವ್ರ್ಯಾರು..? ಭಕ್ತಗಣ ಹಾಕುತ್ತಿದೆ ಕೇಕೆ.. ನೋಡಿ ಕುರುಕ್ಷೇತ್ರ ಹಾಡಿನ ತೇರು..!

2968
0
SHARE

ನಮ್ಮ ಸ್ಯಾಂಡಲ್‌ವುಡ್‌ನ ಸ್ಪೆಷಲ್ ವ್ಯಕ್ತಿಯೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನ ಹಾಡಿಹೊಗಳಿಬಿಟ್ಟಿದ್ದಾರೆ. ಯಾರೋ ಸಾಮಾನ್ಯರು ದಾಸನನ್ನ ಹೊಗಳಿ ಅಟ್ಟಕ್ಕೇರಿಸಿದ್ರೆ ಇಷ್ಟೆಲ್ಲಾ ಸುದ್ಧಿಯಾಗ್ತಿರಲಿಲ್ಲ. ಸಾರಥಿಯ ಈ ಸಂಭ್ರಮಕ್ಕೆ ಕಾರಣವಾದ ವ್ಯಕ್ತಿ ಯಾರು ಅಂತ ಗೊತ್ತಾದ್ರೆ ಒಂದು ಕ್ಷಣ ನೀವು ಆರ್ಶ್ಚರ್ಯ ಪಡ್ತಿರಾ..

ಇವರು ಬೇರ‍್ಯಾರು ಅಲ್ಲ, ದರ್ಶನ್‌ಗೆ ಬಹಳ ಹತ್ತಿರವಾಗಿರುವ ಹಾಗೂ ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್.ಕುರುಕ್ಷೇತ್ರದಲ್ಲಿ ರವಿಚಂದ್ರನ್ ಶ್ರೀ ಕೃಷ್ಣ ಪರಮಾತ್ಮನ ಪಾತ್ರಕ್ಕೆ ಜೀವ ತುಂಬಿರೋ ವಿಚಾರ ಎಲ್ಲರಿಗೂ ಗೊತ್ತೇಇದೆ. ಆದರೆ ಈ ಕೃಷ್ಣನಿಗೆ ದುರ್ಯೋಧನ ಕೂಡ ಇಷ್ಟವಾಗ್ತಾನೆ ಅಂದ್ರೆ ನಂಬಲೇಬೇಕು.

ಮಹಾಭಾರತದ ಕಥೆಯಲ್ಲಿ ಕೃಷ್ಣನ ವಿರುದ್ಧ ಯುದ್ಧದ ಸಂಚನ್ನ ರೂಪಿಸುವ ದುರ್ಯೋಧನ ರವಿಚಂದ್ರನ್‌ಗೆ ತುಂಬಾ ಫೇವರಿಟ್ ಅಂತೆ. ಅದರಲ್ಲೂ ದರ್ಶನ್ ದುರ್ಯೋಧನನಾಗಿ ಪೈಸಾವಸೂಲ್ ಎಂಟರ್‌ಟೈನ್‌ಮೆಂಟ್ ಕೊಟ್ಟಿದ್ದಾರೆ ಅನ್ನೋದು ರವಿಚಂದ್ರನ್ ಸ್ವೀಟ್ ಓಪಿನಿಯನ್.ಅಸಲಿಗೆ ದುರ್ಯೋಧನನ ಪಾತ್ರವನ್ನ ದರ್ಶನ್ ಬಿಟ್ಟರೆ ಬೇರೆ ಯಾವ ಸ್ಯಾಂಡಲ್‌ವುಡ್ ಕಲಾವಿದನೂ ಮಾಡೋಕೆ ಚಾನ್ಸೇ ಇಲ್ಲ ಎನ್ನುವ ಈ ಕನಸುಗಾರ, ದುರ್ಯೋಧನನ ಪಾತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರೇ ಫಿಟ್ ಅಂತಾನೂ ಹೇಳಲು ಮರೆಯೋಲ್ಲ. ಇತ್ತೀಚೆಗೆ ನಡೆದ ಕುರುಕ್ಷೇತ್ರ ಸಿನಿಮಾದ ಅದ್ದೂರಿ ಆಡಿಯೋ ಲಾಂಚ್ ಕ್ರೇಜಿಸ್ಟಾರ್ ಮನದಾಳದ ಮಾತುಗಳಿಗೆ ಸಾಕ್ಷಿಯಾಗಿದೆ. ದುರ್ಯೋಧನನ ಖದರ್‌ಗೆ ದರ್ಶನ್ ಮಾತ್ರ ಸಾಟಿ. ಅವರನ್ನ ಬಿಟ್ಟು ಬೇರೆ ಯಾರಾದರೂ ಮಾಡಿದ್ರೆ ಮಜಾ ಇರ‍್ತಿರ್‌ಲಿಲ್ಲ ಅಂತ ದಾಸನ ಗುಣಗಾನ ಮಾಡಿದ್ದಾರೆ ರವಿಚಂದ್ರನ್.

ರವಿಚಂದ್ರನ್ ಈ ರೀತಿಯಲ್ಲಿ ಓಪನ್ನಾಗಿ ಮೆಚ್ಚುಗೆ ವ್ಯಕ್ತಪಡಿಸೋಕೂ ಕಾರಣಗಳಿವೆ. ರವಿಚಂದ್ರನ್ ಸಿನಿಮಾ ಒಪ್ಪಿಕೊಳ್ಳೊಕು ಮುಂಚೆಯೇ ದರ್ಶನ್‌ರನ್ನ ನೋಡಿ ದುರ್ಯೋಧನನ ಪಾತ್ರಕ್ಕೆ ಇವರೇ ಮಾಸ್ಟರ್‌ಪೀಸ್ ಅಂತ ಮನಸ್ಸಿನಲ್ಲೇ ಡಿಸೈಡ್ ಮಾಡಿದ್ರಂತೆ. ಹಾಗೆಯೇ ದರ್ಶನ್‌ರ ದೇಹಸಿರಿ ಕೂಡ ದುರ್ಯೋಧನನ ಕ್ಯಾರೆಕ್ಟರ್‌ಗೆ ಹೇಳಿಮಾಡಿಸಿದ ಹಾಗಿದೆ. ಒನ್ಲಿ ದರ್ಶನ್ ವಾಸ್ ಸ್ಯೂಟೆಬಲ್ ಫಾರ್ ದುರ್ಯೋಧನ ಕ್ಯಾರೆಕ್ಟರ್ ಅಂತ ಫೈನಾಲಿ ಪ್ರೂವ್ ಆಗಿಹೋಗಿದೆ.

ಇನ್ನು ದಕ್ಷಿಣ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿರೋ ಕುರುಕ್ಷೇತ್ರದ ಆಡಿಯೋ ಜ್ಯುಕ್ ಬಾಕ್ಸ್ ಔಟ್ ಆಗಿದೆ. ಪೌರಣಿಕ ಹಿನ್ನಲೆಯ ಹಾಡುಗಳು ಕೇಳುಗರ ಮನಸ್ಸುಗಳಿಗೆ ಸಕತ್ತಾಗೆ ಮುದಕೊಡ್ತಿದೆ. ಸಾಹೋ ರೆ ಸಾಹೋ ಹಾಡಿನಿಂದ ಹಿಡಿದು ಈಗಷ್ಟೇ ಬಿಡುಗಡೆಯಾಗಿರುವ ಉತ್ತರೆ ಉತ್ತರೆ ಹಾಡಿನವರೆಗೂ ಎಲ್ಲೂ ಸಂಗೀತಪ್ರಿಯರಿಗೆ ಮೋಸವಾಗಿಲ್ಲ.

ಮೈಥಾಲಾಜಿಕಲ್ ಸಬ್ಜೆಕ್ಟ್‌ನಲ್ಲಿ ಹಾಡುಗಳು ಪ್ರಮುಖಪಾತ್ರವಹಿಸೋ ಕಾರಣ ಪ್ರತಿಯೊಂದು ಹಾಡು ಶ್ರೀಮಂತಿಕೆಯಿಂದ ಕೂಡಿಬೇಕು ಎನ್ನುವ ರೇಸ್‌ಗೆ ಬಿದ್ದಂತಿದೆ ಈ ಕುರುಕ್ಷೇತ್ರ ಟೀಮ್.ದಿನೆದಿನೇ ಕುರುಕ್ಷೇತ್ರದ ಹವಾ ಜೋರಾಗಿದ್ದು, ನಿರೀಕ್ಷೆಗಳು ಮುಗಿಲುಮುಟ್ತಿವೆ. ಆಗಸ್ಟ್.೯ರಂದು ವಿಶ್ವದಾದ್ಯಂತ ರಿಲೀಸ್ ಆಗ್ತಿರೋ ಕುರುಕ್ಷೇತ್ರ ಸಿನಿಮಾದ ವೆಲ್‌ಕಮ್‌ಗೆ ದಿನಗಣನೆ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನ ದುರ್ಯೋಧನನ ಅವತಾರದಲ್ಲಿ ನೋಡಿ ಕಣ್ತುಂಬಿಕೊಳ್ಳೊಕೆ ಡಿ ಬಳಗವೂ ಸಕತ್ ಎಕ್ಸಯಟ್ ಆಗಿದೆ. ಇದು ರವಿಚಂದ್ರನ್ ಅಭಿನಯದ ಮೊದಲ ಪೌರಣಿಕ ಚಿತ್ರ ಎಂಬ ಹೆಗ್ಗಳಿಕೆಯೂ ಸಿನಿಮಾದ ಪ್ರಚಾರಕಾರ್ಯದಲ್ಲಿ ಜಾಗ ಸಂಪಾದಿಸಿಬಿಟ್ಟಿದೆ. ಕೃಷ್ಣ ಹಾಗೂ ದುರ್ಯೋಧನ ಸೀನ್‌ಗಳು ಹೇಗಿರುತ್ತೆ ಎನ್ನುವ ಕ್ಯುರ‍್ಯಸಿಟಿಯೂ ಬಹಳ ದೊಡ್ಡದಾಗಿ ಕ್ರಿಯೆಟ್ ಆಗಿದೆ.

ಹೇಳಿಕೇಳಿ ಕ್ರೇಜಿಸ್ಟಾರ್ ರವಿಚಂದ್ರನ್ ಯಾರನ್ನೂ ಹೊಗಳಲ್ಲ, ಇವರಿಷ್ಟು ಮನಬಿಚ್ಚಿ ಖುಷಿಯಾಗಿ ಮಾತನಾಡಿದ್ದಾರೆ ಅಂದ್ರೆ ದುರ್ಯೋನನ ನಿಜವಾದ ಅಬ್ಬರ ಹೇಗಿರುತ್ತೆ ಅಂತ ನೀವೆ ಅಂದಾಜಿಸಬಹುದು. ಒಟ್ಟಿನಲ್ಲಿ ಬಿಡುಗಡೆಗೆ ಮುಂಚೆಯೇ ದುರ್ಯೋಧನ ಒಬ್ಬ ಸ್ಪೆಷಲ್ ಅಭಿಮಾನಿಯನ್ನ ಗಳಿಸಿದ್ದಾನೆ ಅನ್ನೋಂದತೂ ನೂರಕ್ಕೆ ನೂರಾರಷ್ಟು ನಿಜ.

LEAVE A REPLY

Please enter your comment!
Please enter your name here